ಹಮಾಸ್ ವಿರುದ್ದ ದಾಳಿ ತೀವ್ರಗೊಳಿಸಿದ ಬೆನ್ನಲ್ಲೇ ಮತ್ತಿಬ್ಬರು ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ!
ಹಮಾಸ್ ಉಗ್ರರು ಸೆರೆಯಲ್ಲಿಟ್ಟಿರುವ ಇಸ್ರೇಲ್ ಒತ್ತೆಯಾಳುಗಳ ಪೈಕಿ ಮತ್ತಿಬ್ಬರನ್ನು ಬಿಡುಗಡೆ ಮಾಡಿದೆ. ಇದರ ಪರಿಣಾಮ ಇಸ್ರೇಲ್ ತನ್ನ ಭೂಸೇನೆ ದಾಳಿಯನ್ನು ವಿಳಂಬ ಮಾಡಿದೆ.
ಇಸ್ರೇಲ್(ಅ.25) ಹಮಾಸ್ ಉಗ್ರರು ಭೀಕರ ದಾಳಿ ನಡೆಸಿ 200ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಸೆರೆಯಲ್ಲಿಟ್ಟಿದ್ದಾರೆ. ಈ ಒತ್ತೆಯಾಳುಗಳ ಬಿಡುಗಡೆಗಾಗಿ ಇಸ್ರೇಲ್ ಹಮಾಸ್ ಉಗ್ರರ ಮೇಲೆ ಸತತ ದಾಳಿ ಮಾಡುತ್ತಿದೆ. ಇದೀಗ ದಿನದಿಂದ ದಿನಕ್ಕೆ ಗಾಜಾ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಕಾರಣ ಹಮಾಸ್ ತೀವ್ರ ಒತ್ತಡಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ಮತ್ತಿಬ್ಬರು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಇಬ್ಬರು ಹಿರಿಯ ವ್ಯಕ್ತಿಗಳಾಗಿದ್ದ ಕಾರಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಇಬ್ಬರನ್ನೂ ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಒತ್ತೆಯಾಳಾಗಿದ್ದ ಅಮೆರಿಕದ ಇಬ್ಬರು ಪ್ರಜೆಗಳನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ 79 ವರ್ಷದ ನುರಿತ್ ಕೂಪರ್ ಹಾಗೂ 85 ವರ್ಷದ ಯೊಚೆವ್ಡ್ ಲಿಫ್‌ಶೀಟ್ಜ್ ಹಮಾಸ್ ಉಗ್ರರಿಂದ ಮುಕ್ತಿ ಪಡೆದಿದ್ದಾರೆ. ಇಬ್ಬರನ್ನು ಅಕ್ಟೋಬರ್ 7 ರಂದು ಹಮಾಸ್ ಉಗ್ರರ ಕಿಬುಟ್ಜ್‌ನಿಂದ ವಶಕ್ಕ ಪಡೆದು ಗಾಜಾಗೆ ಕರೆದೊಯ್ದಿದ್ದರು.
ಸ್ಮಶಾನವಾಗಿದೆ ಇಸ್ರೇಲಿನ ಕಿಬುತ್ಸ್ ಊರು: ಮಕ್ಕಳ ಹತ್ಯೆ ಇಸ್ರೇಲ್ ಸರ್ಕಾರವನ್ನೇ ಅಣುಕಿಸಿತ್ತಾ..?
ಇಬ್ಬರು ಹಿರಿಯರನ್ನು ಹಮಾಸ್ ಉಗ್ರರು ರೆಡ್ ಕ್ರಾಸ್ ಸಂಸ್ಥೆಗೆ ಒಪ್ಪಿಸಿದ್ದರು. ಇಸ್ರೇಲ್‌ಗೆ ಹೆಲಿಕಾಪ್ಟರ್ ಮೂಲಕ ತಕ್ಷಣವೇ ಇಬ್ಬರನ್ನು ಟೆಲ್ ಅವೀವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರು ಹಿರಿಯರ ಆರೋಗ್ಯವಾಗಿದ್ದಾರೆ ಎಂದು ಇಸ್ರೇಲ್ ಹೇಳಿದ್ದಾರೆ. ಇದೇ ವೇಳೆ ಹಮಾಸ್ ಉಗ್ರರ ಜೊತೆಗೆ ಕರಾಳ ದಿನಗಳನ್ನು ಮೆಲಕು ಹಾಕಿದ್ದಾರೆ. ಆರಂಭದಲ್ಲಿ ಹಮಾಸ್ ಉಗ್ರರ ಚಿತ್ರಹಿಂಸೆಗೆ ಗುರಿಯಾಗಿದ್ದ ಹಿರಿ ಜೀವಗಳ ಆರೋಗ್ಯ ಕ್ಷೀಣಿಸಿತ್ತು. ಹೀಗಾಗಿ ಹಮಾಸ್ ಉಗ್ರರು ಇಬ್ಬರು ಹರಿಯರಿಗೆ ಹೆಚ್ಚಿನ ಕಿರುಕುಳ ನೀಡಿರಲಿಲ್ಲ. ಮರಳಿ ಬಂದಿರುವುದೇ ಪುರ್ನಜನ್ಮ ಎಂದಿದ್ದಾರೆ.
ಇದುವರೆಗೆ ಹಮಾಸ್ ಉಗ್ರರು ನಾಲ್ವರನ್ನು ಬಿಡುಗಡೆ ಮಾಡಿದ್ದಾರೆ. 200ಕ್ಕೂ ಹೆಚ್ಚು ಇಸ್ರೇಲಿಗರು ಹಮಾಸ್ ಉಗ್ರರ ಸೆರೆಯಲ್ಲಿ ಒತ್ತೆಯಾಳಾಗಿದ್ದಾರೆ. ಇವರನ್ನು ಬಿಡುಗಡೆ ಮಾಡಿ ಸುರಕ್ಷಿತವಾಗಿ ಮನೆಗೆ ಕರೆತರುವುದು ಇಸ್ರೇಲ್ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಹೇಳಿದ್ದಾರೆ. ಇತ್ತ ಇಸ್ರೇಲ್ ಮೇಲಿನ ಭೂಸೇನಾ ದಾಳಿಯನ್ನು ಕೊಂಚ ವಿಳಂಬ ಮಾಡಲಾಗಿದೆ.
ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿರುವ ತನ್ನ ನಾಗರಿಕರನ್ನೇ ತಡೆಯುತ್ತಿರುವ ಹಮಾಸ್
ಗಾಜಾ ಪಟ್ಟಿಯ ದಕ್ಷಿಣ ಭಾಗದಲ್ಲಿ ಇಸ್ರೇಲ್ ವಾಯುದಾಳಿ ತೀವ್ರಗೊಳಿಸಿದ ಬೆನ್ನಲ್ಲೇ ಇತ್ತೀಚೆಗೆ ಅಮೆರಿಕದ ಇಬ್ಬರು ಪ್ರಜೆಗಳನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದರು. ಇಬ್ಬರನ್ನೂ ಇಸ್ರೇಲಿ ರಾಯಭಾರಿಗಳು ಸೇನಾ ನೆಲೆಗೆ ಕರೆದೊಯ್ದು ಕುಟುಂಬ ಸದಸ್ಯರನ್ನು ಭೇಟಿ ಮಾಡಿಸಿದ್ದಾರೆ. ಇಸ್ರೇಲ್‌ನಲ್ಲಿ ರಜೆ ಕಳೆಯಲೆಂದು ಅಮೆರಿಕದ ತಾಯಿ, ಮಗಳು ಆಗಮಿಸಿದ್ದಾಗ ಅವರನ್ನು ಹಮಾಸ್ ಉಗ್ರರು ಅಪಹರಿಸಿದ್ದರು. ಇವರನ್ನೂ ಸೇರಿ ಎಲ್ಲ ಒತ್ತೆಯಾಳುಗಳ ಬಿಡುಗಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಯಾನ ಆರಂಭವಾಗಿತ್ತು.