ನೀರಿನಾಳಕ್ಕಿಳಿದು ಪ್ರಪೋಸ್ ಮಾಡಿದ..ಮೇಲೆ ಬರಲಾರದೆ ಸಾವು ಕಂಡ; ಟ್ರೂ ಲವ್ ಸ್ಟೋರಿ
ಅಂಡರ್ ವಾಟರ್ ನಲ್ಲಿ ಗೆಳತಿಗೆ ಪ್ರಪೋಸ್/ ಮೇಲೆ ಬರಲಾಗದೆ ಉಸಿರು ಕಟ್ಟಿ ಪ್ರೇಮಿ ಸಾವು/ ರೆಸಾರ್ಟ್ ಅಂಡರ್ ವಾಟರ್ ನಲ್ಲಿ ಕೊನೆಯಾದ ಲವ್ ಸ್ಟೋರಿ
ತಾಂಜೇನಿಯಾ[ಸೆ. 22] ಮಹಿಳೆಯೊಬ್ಬರು ತಮ್ಮ ಗೆಳಯನಿಗೆ ಹೃದಯಸ್ಪರ್ಶಿ ವಿದಾಯ ಹೇಳಿದ್ದಾರೆ. ತಾಂಜೇನಿಯಾದ ಈ ಕತೆ ನಿಜವಾದ ಪ್ರೀತಿಯ ಉತ್ಕಟತೆಗೆ ಒಂದು ಉದಾಹರಣೆಯಾಗಿ ನಿಲ್ಲುತ್ತದೆ.
ಕೆನೇಶಾ ಅಂಟೋನಿಯೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಅಗಲಿದ ಪ್ರೀತಿಯ ಕತೆ ಹೇಳುತ್ತಿದೆ. ಕೆನೇಶಾ ಪ್ರಿಯತಮ ಸ್ಟೀವನ್ ವೆಬರ್ ಅವರ ಕೊನೆಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ತಾಂಜೇನಿಯಾದ ರೆಸಾರ್ಟ್ ಒಂದರ ಅಂಡರ್ ವಾಟರ್ ರೂಂ ವರೆಗೆ ಬಂದು ಪ್ರಪೋಸ್ ಮಾಡಿದ್ದ ವೆಬರ್ ಕೊನೆಗೆ ನೀರಿನಿಂದ ಮೇಲೆ ಬರಲಾಗದೆ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಒಂದು ಲವ್ ಸ್ಟೋರಿ ಅಂತ್ಯವಾಗಿದೆ.
ಎಂಗೇಜ್ ಮೆಂಟ್ ರಿಂಗ್ ಸಹ ನೀರಿನ ಒಳಗೆ ಈಜುತ್ತ ಪ್ರಿಯತಮೆಗೆ ವೆಬರ್ ಕೊಡಮಾಡಿದ್ದಾನೆ. ಅಂಡರ್ ವಾಟರ್ ನಲ್ಲಿ ಆಕೆಯ ಕೋಣೆ ಎದುರು ಬಂದು ಪ್ರಪೋಸ್ ಮಾಡಿರುವ ಕ್ಷಣಗಳೆಂತೂ ಯಾವ ಸಿನಿಮಾದ ರೋಮ್ಯಾಟಿಂಕ್ ದೃಶ್ಯಗಳಿಗೆ ಕಡಿಮೆ ಇಲ್ಲ.