ವಿಶ್ವಸಂಸ್ಥೆ(ಜೂ.27): 2019ರ ಅ.31ರಂದು ಬ್ರೆಜಿಲ್‌ನಲ್ಲಿ ಬಡಿದಿದ್ದ 700 ಕಿ.ಮೀ. ದೂರದವರೆಗೆ ಚಾಚಿದ್ದ ಮಿಂಚು ‘ವಿಶ್ವದ ಅತಿ ದೀರ್ಘದೂರದ ಮಿಂಚು’ ಎಂಬ ದಾಖಲೆಗೆ ಪಾತ್ರವಾಗಿದೆ. ಇದನ್ನು ಕರ್ನಾಟಕಕ್ಕೆ ಹೋಲಿಸಿ ಹೇಳುವುದಾದರೆ ಅಂದಾಜು ಬೆಂಗಳೂರಿನಿಂದ ಬೀದರ್‌ವರೆಗಿನ ದೂರದಷ್ಟು. ಈ ಮಿಂಚು ಕಂಡಿದ್ದು ಕೇವಲ 1 ಸೆಕೆಂಡಿನಷ್ಟು.

ಮಳೆಗಾಲದಲ್ಲೂ ಸುಡು ಸುಡು ಬಿಸಿಲು: ಕೈ ಕೊಟ್ಟ ಮುಂಗಾರು, ಕಂಗಾಲಾದ ರೈತರು!

ಈ ಹಿಂದೆ 2007ರ ಜೂನ್‌ನಲ್ಲಿ ಅಮೆರಿಕದ ಓಕ್ಲಾಹಾಮಾದಲ್ಲಿ 321 ಕಿ.ಮೀ. ದೂರದಷ್ಟುಮಿಂಚು ಚಾಚಿತ್ತು. ಇದೇ ವೇಳೆ, 2019ರ ಮಾಚ್‌ರ್‍ 4ರಂದು ಉತ್ತರ ಅರ್ಜೆಂಟೀನಾದಲ್ಲಿ ಅರ್ಜೆಂಟೀನಾದಲ್ಲಿ 16.73 ಸೆಕೆಂಡುಗಳಷ್ಟುಅವಧಿಯವರೆಗೆ ಕಾಣಿಸಿದ ಮಿಂಚು ವಿಶ್ವದ ಅತಿ ‘ದೀರ್ಘಾವಧಿ’ಯ ಮಿಂಚು ಎಂಬ ದಾಖಲೆ ಬರೆದಿದೆ.

ವಿಶ್ವಸಂಸ್ಥೆಯ ‘ವಿಶ್ವ ಹವಾಮಾನ ಸಂಸ್ಥೆ’ಯು ಈ ದಾಖಲೆಯ ಮಿಂಚುಗಳನ್ನು ಗುರುತಿಸಿದೆ. ದಕ್ಷಿಣ ಫ್ರಾನ್ಸ್‌ನಲ್ಲಿ 2012ರ ಆಗಸ್ಟ್‌ನಲ್ಲಿ 7.74 ಸೆಕೆಂಡಿನಷ್ಟುಒಂದೇ ಮಿಂಚು ಕಾಣಿಸಿತ್ತು. ಇದು ಈವರೆಗಿನ ದಾಖಲೆಯಾಗಿತ್ತು.