ಬ್ರೆಜಿಲ್‌ನಲ್ಲಿ 61 ಜನರಿದ್ದ ವಿಮಾನ ಪತನ: ಎಲ್ಲರೂ ಸಾವು, ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ
ಬ್ರೆಜಿಲ್‌ನ ಪ್ರಯಾಣಿಕ ವಿಮಾನವೊಂದು ಪತನಗೊಂಡು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 61 ಜನ ಸಾವಿಗೀಡಾಗಿದ್ದಾರೆ. ಬ್ರೆಜಿಲ್‌ನ ಸಾವೋ ಪಾಲೋದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ.
ಬ್ರೆಜಿಲ್‌ನ ಪ್ರಯಾಣಿಕ ವಿಮಾನವೊಂದು ಪತನಗೊಂಡು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 61 ಜನ ಸಾವಿಗೀಡಾಗಿದ್ದಾರೆ. ಬ್ರೆಜಿಲ್‌ನ ಸಾವೋ ಪಾಲೋದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನ ಪ್ರಾದೇಶಿಕ ವಿಮಾನಯಾನ ಸಂಸ್ಥೆ ವೊಯಿಪಾಸ್‌ಗೆ ಸೇರಿದ ವಿಮಾನ ಇದಾಗಿದೆ. ವಿಮಾನ ಪತನಗೊಳ್ಳುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾವೋ ಪಾಲೋದ ವಿನ್ಹೆದೊ ಎಂಬಲ್ಲಿ ಪತನಗೊಂಡ ವಿಮಾನ ಬಳಿಕ ಜನವಸತಿ ಪ್ರದೇಶದಲ್ಲಿ ಕೆಳಗೆ ಬಿದ್ದಿದೆ. ವಿಮಾನ ಪತನಗೊಂಡು ರಭಸಕ್ಕೆ ಸ್ಥಳೀಯ ಕಂಡೋಮಿನಿಯಂ ಸಂಕೀರ್ಣದ ಮೇಲೆ ಬಿದ್ದಿದ್ದು, ಇದರಿಂದ ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದೆ. ಆದರೆ ಈ ಘಟನೆಯಲ್ಲಿ ಕಟ್ಟಡದಲ್ಲಿದ್ದ ಯರಿಗೂ ಹಾನಿಯಾಗಿಲ್ಲ. ಎರಡು ಇಂಜಿನ್‌ಗಳನ್ನು ಹೊಂದಿದ್ದ ಈ ವಿಮಾನ ದಕ್ಷಿಣ ಬ್ರೆಜಿಲ್‌ನ ರಾಜ್ಯವಾದ ಪರನಾದ ಕಸ್ಕವೆಲ್ ನಗರದಿಂದ ಟೇಕಾಫ್ ಆಗಿತ್ತು. ಕಸ್ಕವೆಲ್‌ನಿಂದ ಇದು ಬ್ರೆಜಿಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾವೋ ಪಾಲೋದತ್ತ ಆಗಮಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ನೇಪಾಳದ ವಿಮಾನ ಪತನಕ್ಕೆ ಕಾರಣವಾಯ್ತಾ ಟೇಬಲ್‌ಟಾಪ್ ರನ್‌ವೇ; ಭಾರತದಲ್ಲಿಯೂ ಇವೆ ಇಂತಹ ಏರ್‌ಪೋರ್ಟ್‌ಗಳು!
ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, 61 ಜನರ ಸಾವಿಗೆ ವಿಷಾದ ವ್ಯಕ್ತಪಡಿಸಿದೆ. ವಿಮಾನ 2283ರಲ್ಲಿದ್ದ ಎಲ್ಲಾ 61 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ವಿಮಾನದಲ್ಲಿ ಒಟ್ಟು 57 ಪ್ರಯಾಣಿಕರು ಹಾಗೂ ನಾಲ್ವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು. ಅಲ್ಲದೇ ಘಟನೆ ಬಗ್ಗೆ ತನಿಖೆ ನಡೆಸುವ ತನಿಖಾ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಟೇಕಾಫ್ ಆಗ್ತಿದ್ದಂತೆ ಧರೆಗುರುಳಿದ ಶೌರ್ಯ ಏರ್‌ಲೈನ್ಸ್ ವಿಮಾನ; ಪತನದ ಭಯಾನಕ ವಿಡಿಯೋ ಸೆರೆ