ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಬಸ್‌ನಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ ಆರು ಸರ್ಕಾರಿ ಉದ್ಯೋಗಿಗಳು ಸೇರಿ ಏಳು ಜನ ಮೃತಪಟ್ಟಿದ್ದಾರೆ. ಸರ್ಕಾರಿ ನೌಕರರನ್ನು ಸಾಗಿಸುತ್ತಿದ್ದ ಬಸ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ.
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಬಸ್‌ನಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ ಆರು ಸರ್ಕಾರಿ ಉದ್ಯೋಗಿಗಳು ಸೇರಿ ಏಳು ಜನ ಮೃತಪಟ್ಟಿದ್ದಾರೆ. ಸರ್ಕಾರಿ ನೌಕರರನ್ನು ಸಾಗಿಸುತ್ತಿದ್ದ ಬಸ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಅಫ್ಘಾನಿಸ್ತಾನದ ಉತ್ತರ ಬಾಲ್ಖ್ ಪ್ರಾಂತ್ಯದ ರಾಜಧಾನಿಯಾದ ಮಜರ್-ಇ-ಶರೀಫ್‌ನಲ್ಲಿ ಈ ಅವಘಡ ಸಂಭವಿಸಿದೆ. ಇದೊಂದು ರಸ್ತೆ ಬದಿ ಹುದುಗಿಸಿದ ನೆಲಬಾಂಬು ಆಗಿದ್ದು, ಬಸ್ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಸ್ಫೋಟಗೊಂಡಿದೆ. ಇಂದು ಮುಂಜಾನೆ 7.30 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ಬಸ್ ಹಿರಾಟನ್ ಗಡಿ ಪಟ್ಟಣದ ಪೆಟ್ರೋಲಿಯಂ ನಿರ್ದೇಶನಾಲಯದ ನೌಕರರನ್ನು ಕರೆದೊಯ್ಯುತ್ತಿತ್ತು. ಈ ಅವಘಡದಲ್ಲಿ ಏಳು ಜನ ಮೃತಪಟ್ಟಿದ್ದಾರೆ ಆರಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರ ಮೊಹಮ್ಮದ್ ಆಸಿಫ್ ವಜಿರಿ (Mohammad Asif Waziri) ತಿಳಿಸಿದ್ದಾರೆ. ಈ ಸ್ಫೋಟ ಸಂಭವಿಸಿದ ವೇಳೆ ಈ ಸರ್ಕಾರಿ ನೌಕರರು ಬಸ್‌ನಲ್ಲಿ ತಮ್ಮ ಕಚೇರಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸ್ಫೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ.
Mangauru bomb blast: ಹೋಂ ಸ್ಟೇಯಲ್ಲಿ ಸ್ತ್ರೀಯರ ಜತೆ ತಂಗಿದ್ದ ಶಾರೀಕ್!