Asianet Suvarna News Asianet Suvarna News

ಆಫ್ಘನ್‌ನಲ್ಲಿ ಕನ್ನಡಿಗರು ಅತಂತ್ರ: ಕರುನಾಡಿಗೆ ಬರಲು ಪರದಾಟ

*  ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಅತಂತ್ರರಾದ ಕನ್ನಡಿಗರು
*  ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹಲವು ಕನ್ನಡಿಗರು 
*  ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಹರಸಾಹ
 

6 Kannadigas Stranded At Kabul in Afghanistan grg
Author
Bengaluru, First Published Aug 20, 2021, 3:48 PM IST

ಬೆಂಗಳೂರು(ಆ.20): ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆರ್ಭಟ ಒಂದೆಡೆಯಾದರೆ ಅಲ್ಲಿ ಸಿಲುಕಿರುವ ಕನ್ನಡಿರ ಸ್ಥಿತಿ ಅತಂತ್ರವಾಗಿದೆ.  ಹೌದು ಆಫ್ಘಾನಿಸ್ತಾನದಲ್ಲಿ ಆರು ಜನ ಕನ್ನಡಿಗರು ಸಿಲುಕಿದ್ದಾರೆ. 

"

ಇದೀಗ ಅವರನ್ನ ವಾಪಸ್‌ ಭಾರತಕ್ಕೆ ಕರೆತರೋದು ಬಹುದೊಡ್ಡ ಸವಾಲಾಗಿದೆ. ತೀರ್ಥಹಳ್ಳಿಯ ಫಾದರ್‌ ರಾಬರ್ಟ್‌, ಬೆಂಗಳೂರಿನ ಅಶ್ವತಿ, ಮಂಗಳೂರಿನ ವೆನ್ಸೆಂಟ್‌, ಮಾರ್ಥಹಳ್ಳಿಯ ದೇವನಾಥ್‌, ಸಂಡೂರಿನ ತನ್ವೀರ್‌ ಇವರೆಲ್ಲರನ್ನ ರಕ್ಷಿಸೋದಕ್ಕೆ ಹರಸಾಹಸ ಪಡುತ್ತಿದ್ದಾರೆ.

ಉಗ್ರರ ರಣಕೇಕೆ: ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿದ ಆಫ್ಘನ್‌ ಜನ

ಇವರೆಲ್ಲರೂ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಅತಂತ್ರವಾಗಿದ್ದಾರೆ. ಆಫ್ಘನ್‌ನಲ್ಲಿ ಸಿಲುಕಿ ಕರುನಾಡಿಗೆ ಬರಲು ಪಡಬಾರದ ಸಂಕಷ್ಟಗಳನ್ನ ಅನುಭವಿಸುತ್ತಿದ್ದಾರೆ. ಏರ್‌ಪೋರ್ಟ್‌ನಲ್ಲಿ ಹಲವು ಕನ್ನಡಿಗರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 

"

ಇವರೆಲ್ಲರೂ ಕಳೆದ ಮೂರು ದಿನಗಳಿಂದ ಏರ್‌ಪೋರ್ಟ್‌ನ ಹೊರಗಡೆ ಇದ್ದಾರೆ. ಇದೀಗ ಕಾಬೂಲ್‌ ಏರ್‌ಪೋರ್ಟ್‌ಗೆ ಹೋಗೋದಕ್ಕೆ ಪರದಾಡುತ್ತಿದ್ದಾರೆ. ಯಾರನ್ನ ಸಂಪರ್ಕಿಸಬೇಕು ಅನ್ನೋದೆ ಇವರಿಗೆ ಗೊತ್ತಾಗುತ್ತಿಲ್ಲ. ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಹರಸಾಹ ಪಡುತ್ತಿದೆ. 
 

Follow Us:
Download App:
  • android
  • ios