ಲೋಚ್ ನೆಸ್ ಮಾನ್ಸ್ಟರ್ ಚಿತ್ರ ಸೆರೆಹಿಡಿಯಲು ೫೫ ವರ್ಷಗಳ ಹಿಂದೆ ಅಳವಡಿಸಿದ್ದ ಕ್ಯಾಮೆರಾ ಪತ್ತೆಯಾಗಿದೆ. ರೋಬೋಟ್ ಜಲಾಂತರ್ಗಾಮಿ ಆಕಸ್ಮಿಕವಾಗಿ ಈ ಕ್ಯಾಮೆರಾವನ್ನು ಪತ್ತೆ ಮಾಡಿದೆ. ಕ್ಯಾಮೆರಾ ಸುಸ್ಥಿತಿಯಲ್ಲಿದ್ದು, ಸಂಶೋಧಕರು ಚಿತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಸ್ಕಾಟಿಷ್ ಜಾನಪದ ಕಥೆಗಳ ಈ ಜೀವಿಯ ನಿಜವಾದ ಅಸ್ತಿತ್ವ ಇನ್ನೂ ಖಚಿತವಾಗಿಲ್ಲ.

ಸಾಮಾನ್ಯವಾಗಿ ಸಂಶೋಧಕರು ಒಂದಲ್ಲಾ ಒಂದು ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ನಿಗೂಢ ಸ್ಥಳಕ್ಕೆ ಹೋಗುವುದು, ಸತ್ಯ ಶೋಧನೆ ಮಾಡುವಂತಹ ಮನಸ್ಥಿತಿ ಉಳ್ಳವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಾಹಸ ಕೃತ್ಯಗಳನ್ನು ಮಾಡಲು ಮುಂದಾಗಿರುತ್ತಾರೆ. ಅದೇ ರೀತಿ ಯುರೋಪಿಯನ್ ಖಂಡದ ಸ್ವಾಟಿಷ್ ಜಾನಪದ ಕಥೆಗಳಲ್ಲಿ ಹೇಳಲಾಗುವ ಸಮುದ್ರದೊಳಗಿನ ಭೂತವನ್ನು ಪತ್ತೆ ಮಾಡುವುದಕ್ಕೆ ಕಥೆಗಳಲ್ಲಿ ಹೇಳಲಾಗುವ ಸಮುದ್ರದ 591 ಅಡಿ ಆಳಡದಲ್ಲಿ 6 ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದ್ದರು. ಆದರೆ, ಕ್ಯಾಮೆರಾ ಅಳವಡಿಕೆ ಮಾಡಿದವರು ಸತ್ತೇ ಹೋಗಿದ್ದಾರೆ. ಇದೀಗ ಮತ್ತೊಬ್ಬ ಸಂಶೋಧಕರು ಈ 6 ಕ್ಯಾಮೆರಾಗಳಲ್ಲಿ ಒಂದು ಕ್ಯಾಮೆರಾವನ್ನು ಪತ್ತೆ ಮಾಡಿದ್ದು, ಅದರಲ್ಲಿನ ದೃಶ್ಯಗಳು ಮೈನವಿರೇಳಿಸುತ್ತವೆ.

ಲೋಚ್ ನೆಸ್ ಮಾನ್ಸ್ಟರ್‌ನ ಫೋಟೋ ತೆಗೆಯಲು 55 ವರ್ಷಗಳ ಹಿಂದೆ ಅಳವಡಿಸಿದ್ದ ನೀರೊಳಗಿನ ಕ್ಯಾಮೆರಾ ಪತ್ತೆಯಾಗಿದೆ. ಬೋಟಿ ಮ್ಯಾಕ್‌ ಬೋಟ್‌ಫೇಸ್ ಎಂಬ ರೋಬೋಟ್ ಜಲಾಂತರ್ಗಾಮಿಯು ಐದು ದಶಕಗಳ ಹಿಂದೆ ಅಳವಡಿಸಿದ್ದ ಈ ಕ್ಯಾಮೆರಾವನ್ನು ಆಕಸ್ಮಿಕವಾಗಿ ಪತ್ತೆಹಚ್ಚಿದೆ. ಈಗಲೂ ಕ್ಯಾಮೆರಾವು ಸುಸ್ಥಿತಿಯಲ್ಲಿದ್ದು, ಅದರಲ್ಲಿ ಏನೆಲ್ಲಾ ಚಿತ್ರಗಳು ಸೆರೆಯಾಗಿವೆ ಎಂಬುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಅದರಲ್ಲಿ ಸಮುದ್ರದೊಳಗೆ ಅಡಗಿರುವ ರಾಕ್ಷಸನ ಫೋಟೋವನ್ನು ಸೆರೆ ಹಿಡಿದಿದೆಯೇ ಎಂದು ಪರಿಶೀಲನೆ ಮಾಡಿದ್ದಾರೆ.

ಸ್ಕಾಟಿಷ್ ಜಾನಪದ ಕಥೆಗಳಲ್ಲಿ ಹೇಳಲಾಗುವ ಒಂದು ಜೀವಿಯೇ ಲೋಚ್ ನೆಸ್ ಮಾನ್ಸ್ಟರ್ ಅಥವಾ ನೆಸ್ಸಿ. ಇದು ಸ್ಕಾಟಿಷ್ ಹೈಲ್ಯಾಂಡ್ಸ್‌ನಲ್ಲಿರುವ ಲೋಚ್ ನೆಸ್ ಸರೋವರದಲ್ಲಿ ವಾಸಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ಜೀವಿ ನಿಜವಾಗಿಯೂ ಇದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, 1960ರ ದಶಕದಲ್ಲಿ ನೀರಿನಲ್ಲಿ ನೆಸ್ಸಿ ಮಾನ್ಸ್‌ಸ್ಟಾರ್ ಇರುವಿಕೆಯನ್ನು ಪತ್ತೆಹಚ್ಚಲು ರಚಿಸಲಾದ ಲೋಚ್ ನೆಸ್ ಇನ್ವೆಸ್ಟಿಗೇಷನ್ ಬ್ಯೂರೋ, ನೀರಿನಲ್ಲಿ 180 ಮೀಟರ್ (591 ಅಡಿ) ಆಳದಲ್ಲಿ ಕ್ಯಾಮೆರಾವನ್ನು ಇರಿಸಿದೆ ಎಂದು ಭಾವಿಸಲಾಗಿದೆ.

ಇದನ್ನೂ ಓದಿ: ಏನಿದು ಸಿಂಧೂ ನದಿ ಒಪ್ಪಂದ: ಪಾಕ್ ಮೇಲೆ ಬೀರಲಿರುವ ಪರಿಣಾಮವೇನು?

ಕ್ಯಾಮೆರಾದಲ್ಲಿ ನೆಸ್ಸಿಯ ಚಿತ್ರಗಳೇನೂ ಸೆರೆಯಾಗಿಲ್ಲ. ಆದರೆ, ಜಲಾಂತರ್ಗಾಮಿಯ ಎಂಜಿನಿಯರ್‌ಗಳಲ್ಲಿ ಒಬ್ಬರು ಸರೋವರದ ಮಬ್ಬು ನೀರಿನ ಕೆಲವು ಚಿತ್ರಗಳನ್ನು ತೆಗೆದಿದ್ದಾರೆ. 1970ರ ದಶಕದಿಂದಲೂ ಲೋಚ್ ನೆಸ್ ಬಗ್ಗೆ ಸಂಶೋಧನೆ ನಡೆಸುತ್ತಿರುವ ದಿ ಲೋಚ್ ನೆಸ್ ಪ್ರಾಜೆಕ್ಟ್‌ನ ಆಡ್ರಿಯನ್ ಶೈನ್, ಈ ಕ್ಯಾಮೆರಾವನ್ನು ಗುರುತಿಸಲು ಸಹಾಯ ಮಾಡಿದ್ದಾರೆ. ಆಗ ವಿವಿಧ ಸ್ಥಳಗಳಲ್ಲಿ ಇರಿಸಲಾಗಿದ್ದ ಆರು ಕ್ಯಾಮೆರಾಗಳಲ್ಲಿ ಇದು ಒಂದಾಗಿರಬಹುದು ಎಂದು ಅವರು ಹೇಳುತ್ತಾರೆ. ಮೂರು ಕ್ಯಾಮೆರಾಗಳು ಚಂಡಮಾರುತದಲ್ಲಿ ಕಾಣೆಯಾಗಿವೆ ಎಂದೂ ಅವರು ಹೇಳುತ್ತಾರೆ.

ಜಗತ್ತಿನಲ್ಲಿ ಯುರೋಪ್ ಖಂಡದ ಕೆಲವು ದ್ವೀಪ ಪ್ರದೇಶಗಳು, ಅಮೇಜಾನ್ ಕಾಡು, ಮೃತ ಸಮುದ್ರ, ಅಂಟಾರ್ಟಿಕ ಖಂಡದ ಕೆಲವು ಪ್ರದೇಶಗಳು ಸೇರಿದಂತೆ ಕೆಲವು ನಿಗೂಢ ಸ್ಥಳಗಳಲ್ಲಿ ಏನಿವೆ ಎಂಬುದನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದರ ಬಗ್ಗೆ ಅನೇಕ ಸಂಶೋಧಕರು ಈಗಲೂ ತಮ್ಮ ಜೀವ ಪಣಕ್ಕಿಟ್ಟು ಶೋಧ ಕಾರ್ಯ ಮಾಡುತ್ತಿದ್ದು, ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದು ಪರಿಸರ ತನ್ನ ವಿಸ್ಮಯಗಳನ್ನು ಎಂದಿಗೂ ಅಡಗಿಟ್ಟಿಕೊಂಡಿರುತ್ತದೆ ಎಂಬುದರ ಸಂಕೇತಗಳಾಗಿವೆ. ಕೆಲವು ನೈಸರ್ಗಿಕ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡದೇ ಸುಮ್ಮನೇ ಇದ್ದುಬಿಡುವುದೇ ಲೇಸು ಎಂದು ಕೆಲವರು ಹೇಳುತ್ತಾರೆ.

ಇದನ್ನೂ ಓದಿ: ಭಾರತ ದಾಳಿ ಮಾಡಿದ್ರೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆ: ಪಾಕ್ ಸಚಿವೆ ಅಜ್ಮಾ ಬೊಖಾರಿ