Asianet Suvarna News Asianet Suvarna News

ಚರ್ಚ್‌ನಲ್ಲಿ ಹೆಂಡತಿ ಮಕ್ಕಳಿಗೆ ಗುಂಡಿಕ್ಕಿ ಪತಿ ಆತ್ಮಹತ್ಯೆ: ಐವರ ದಾರುಣ ಸಾವು

  • ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಚರ್ಚ್‌ನಲ್ಲಿ ದುರಂತ
  • ಹೆಂಡತಿ ಮಕ್ಕಳಿಗೆ ಗುಂಡಿಕ್ಕಿ ಸಾವಿಗೆ ಶರಣಾದ ವ್ಯಕ್ತಿ
  • ಮೂವರು ಮಕ್ಕಳು ಹೆಂಡತಿ ಸೇರಿ ಒಟ್ಟು ಐವರ ಸಾವು
5 family members are dead after an apparent shootout and suicide at a Sacramento church in California akb
Author
Bangalore, First Published Mar 1, 2022, 12:24 PM IST | Last Updated Mar 1, 2022, 1:30 PM IST

ಕ್ಯಾಲಿಫೋರ್ನಿಯಾ(ಮಾ.೧): ತಂದೆಯೋರ್ವ ತನ್ನ ಮೂವರು ಮಕ್ಕಳು ಹಾಗೂ ಹಂಡತಿ ಮೇಲೆ ಗುಂಡಿಕ್ಕಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.ಇಲ್ಲಿನ ಚರ್ಚೊಂದರಲ್ಲಿ ನಡೆದ ತನ್ನದೇ ಕುಟುಂಬದವರ ಕೊಲೆ ಹಾಗೂ ನಂತರ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕ್ಯಾಲಿಫೋರ್ನಿಯಾದ (California) ಸ್ಯಾಕ್ರಮೆಂಟೊ (Sacramento) ಚರ್ಚ್‌ನಲ್ಲಿ ಈ ದುರಂತ ನಡೆದಿದೆ. ದುರಂತದಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ಐದು ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಡೆನ್-ಆರ್ಕೇಡ್ ನೆರೆಹೊರೆಯಲ್ಲಿರುವ ಈ ಚರ್ಚ್‌ಗೆ ಆಗಮಿಸಿದ ತಂದೆಯೋರ್ವ ತನ್ನ ಮೇಲೆ ಗುಂಡು ಹಾರಿಸಿಕೊಳ್ಳುವ ಮುನ್ನ ಅಲ್ಲಿದ್ದ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ತನ್ನ ಮೂವರು ಮಕ್ಕಳ ಮೇಲೆ ಗುಂಡು ಹಾರಿಸಿದ್ದ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ದುರಂತದಲ್ಲಿ ಸತ್ತ ಐದನೇ ವ್ಯಕ್ತಿಯನ್ನು ಶೂಟ್ ಮಾಡಿದ ವ್ಯಕ್ತಿಯ ಪತ್ನಿ ಎಂದು ಗುರುತಿಸಲಾಗಿದೆ ಎಂದು ಸ್ಯಾಕ್ರಮೆಂಟೊ ಮೆಟ್ರೋಪಾಲಿಟನ್ ಫೈರ್ ಡಿಸ್ಟ್ರಿಕ್ಟ್ ಕ್ಯಾಪ್ಟನ್ ಪಾರ್ಕರ್ ವಿಲ್ಬೋರ್ನ್ (Parker Wilbourn) ಸ್ಥಳೀಯ ಮಾಧ್ಯಮ ಸಿಎನ್‌ಎನ್‌ಗೆ ತಿಳಿಸಿದರು.

shootout in America: ಅಮೆರಿಕಾದಲ್ಲಿ ಗುಂಡಿನ ದಾಳಿಗೆ ಕೇರಳದ ತರುಣಿ ಬಲಿ

ಈ ಗುಂಡಿನ ದಾಳಿಯ ಸಮಯದಲ್ಲಿ ಸ್ಯಾಕ್ರಮೆಂಟೊದಲ್ಲಿನ ಚರ್ಚ್‌ನಲ್ಲಿ ಅನೇಕ ಜನರಿದ್ದರು ಆದರೆ ಅವರು ಯಾರೂ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ವಿಲ್ಬೋರ್ನ್ ಹೇಳಿದರು. ಇಲ್ಲಿದ್ದವರಲ್ಲಿ ಹೆಚ್ಚಿನವರು ಉದ್ಯೋಗಿಗಳು ಹಾಗೂ ಘಟನಾ ಸ್ಥಳದಲ್ಲಿ ಬೇರೆ ಯಾರಿಗೂ ವೈದ್ಯಕೀಯ ಸಾರಿಗೆ ಅಗತ್ಯವಿಲ್ಲ ಎಂದು ಅವರು ಹೇಳಿದರು.

Police Firing: ಆಟೋ ಚಾಲಕನ ಅಪಹರಿಸಿ ಕೊಂದವನ ಮೇಲೆ ಗುಂಡಿನ ದಾಳಿ
ಆ ಸಮಯದಲ್ಲಿ ಚರ್ಚ್‌ನಲ್ಲಿ ಬೇರೆನಾದರು ಕಾರ್ಯಕ್ರಮ ನಡೆಯುತ್ತಿತೆ ಎಂಬ ಬಗ್ಗೆ ಮಾಹಿತಿ ಇಲ್ಲ. ಘಟನೆಯ ಬಗ್ಗೆ ಪ್ರಸ್ತುತ ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿ ತನಿಖೆ ನಡೆಸುತ್ತಿದೆ. ಸೋಮವಾರ ಸಂಜೆ ಗುಂಡಿನ ದಾಳಿ ವರದಿಯಾದ ನಂತರ ಆ ಪ್ರದೇಶದಲ್ಲಿ ಹೋಗದಂತೆ ಜನರಿಗೆ ಸೂಚಿಸಿದೆ. ಗವರ್ನರ್ ಗೇವಿನ್ ನ್ಯೂಸಮ್ (Gavin Newsom) ಈ ಗುಂಡಿನ ದಾಳಿಯನ್ನು ಅಮೆರಿಕದಲ್ಲಿ ಬಂದೂಕು ಹಿಂಸೆಯ ಮತ್ತೊಂದು ಪ್ರಜ್ಞಾಶೂನ್ಯ ಕೃತ್ಯ ಎಂದು ಹೇಳಿದ್ದಾರೆ. ನಮ್ಮ ಮನವು ಸಂತ್ರಸ್ತರಿಗೆ, ಅವರ ಕುಟುಂಬಗಳಿಗೆ ಮತ್ತು ಅವರ ಸಮುದಾಯಗಳಿಗೆ ಮಿಡಿಯುತ್ತಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಿಚಿಗನ್‌ನ ಗ್ರಾಮೀಣ ಪ್ರದೇಶದ ಪ್ರೌಢಶಾಲೆಯೊಂದರಲ್ಲಿ (Michigan High School Shooting) ಮಂಗಳವಾರ 15 ವರ್ಷದ ವಿದ್ಯಾರ್ಥಿಯೊಬ್ಬ ಫೈರಿಂಗ್ ನಡೆಸಿದ್ದ. ಈ ಗುಂಡಿನ ದಾಳಿಯಲ್ಲಿ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದರು. ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ (Oxford High School) ಮಧ್ಯಾಹ್ನ ನಡೆದ ದಾಳಿಯಲ್ಲಿ ಶಿಕ್ಷಕ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದರು ಎಂದು ಓಕ್ಲ್ಯಾಂಡ್ ಕೌಂಟಿ ಶೆರಿಫ್ ಕಚೇರಿ ಹೇಳಿಕೆಯಲ್ಲಿ ತಿಳಿಸಿತ್ತು. ಬಳಿಕ ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದರು. ಆರೋಪಿ ವಿದ್ಯಾರ್ಥಿಯಿಂದ ಮಾರಕಾಸ್ತ್ರವನ್ನೂ ವಶಪಡಿಸಿಕೊಳ್ಳಲಾಗಿತ್ತು.

ಆರೋಪಿಯು ಐದು ನಿಮಿಷಗಳಲ್ಲಿ ಅರೆ-ಸ್ವಯಂಚಾಲಿತ ಬಂದೂಕಿನಿಂದ ಸುಮಾರು ಹದಿನೈದರಿಂದ ಇಪ್ಪತ್ತು ಸುತ್ತು ಗುಂಡು ಹಾರಿಸಿದ್ದಾನೆ. ಪರಿಣಾಮ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ .ಮೊದಲ 911 ಕರೆ ಮಾಡಿದ ಐದು ನಿಮಿಷಗಳಲ್ಲಿ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎವೆರಿಟೌನ್ ಫಾರ್ ಗನ್ ಸೇಫ್ಟಿ ಪ್ರಕಾರ, ಇದು  2021ರಲ್ಲಿ ನಡೆದ ಇದುವರೆಗಿನ ಭೀಕರ ಗುಂಡಿನ ದಾಳಿಯಾಗಿದೆ. 

Latest Videos
Follow Us:
Download App:
  • android
  • ios