shootout in America: ಅಮೆರಿಕಾದಲ್ಲಿ ಗುಂಡಿನ ದಾಳಿಗೆ ಕೇರಳದ ತರುಣಿ ಬಲಿ

ಅಮೆರಿಕಾದಲ್ಲಿ ಗುಂಡಿನ ದಾಳಿಗಳು ಇತ್ತೀಚೆಗೆ ಸಾಮಾನ್ಯವೆನಿಸಿ ಬಿಟ್ಟಿವೆ.  ಇಲ್ಲಿ ಪ್ರತಿಯೊಬ್ಬರಿಗೂ ಸುಲಭವಾಗಿ ಗನ್‌ ಲೈಸೆನ್ಸ್‌ ಪಡೆಯುವ ಹಕ್ಕು ಇರುವುದರಿಂದ ಮಕ್ಕಳ ಕೈಗೂ ಗನ್‌ ಸಿಗುವಂತಾಗಿದ್ದು,  ಅನಾಹುತಗಳಿಗೆ ಕಾರಣವಾಗುತ್ತಿದೆ.

Kerala teen shot dead in America akb

ನ್ಯೂಯಾರ್ಕ್‌(ಡಿ.1):ನಿದ್ರಿಸುತ್ತಿದ್ದ ವೇಳೆ ಮಹಡಿಯ ಸೀಲಿಂಗ್‌ ಸೀಳಿ ಬಂದ ಗುಂಡೊಂದು ತಗುಲಿ ಕೇರಳ ಮೂಲದ ತರುಣಿಯೊಬ್ಬಳು ಸಾವಿಗೀಡಾದ ಘಟನೆ ಅಮೆರಿಕಾದ ಅಲಾಬಾಮದಲ್ಲಿ ನಡೆದಿದೆ. ಮರಿಮ್‌ ಸುಸಾನ್‌ ಮ್ಯಾಥಿವ್‌( Mariam Susan Mathew) ಸಾವಿಗೀಡಾದ ತರುಣಿ. ಈಕೆ ಕೇರಳದ ತಿರುವಲ್ಲಾ ನಿವಾಸಿ. ನೆರೆಮನೆಯಾತನೇ ಈ ದಾಳಿ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬಾಲಕಿ ತನ್ನ ಮನೆಯಲ್ಲಿ ಮಲಗಿದ್ದಾಗ ಮೇಲಿನ ಮಹಡಿಯನ್ನು ಸೀಳಿ ಬಂದ ಗುಂಡು ಈಕೆಗೆ ತಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.  ಘಟನೆ ಬಗ್ಗೆ ಮಾಂಟ್ಗೊಮೇರಿ(Montgomery) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. 


ನೈಋತ್ಯ ಅಮೆರಿಕಾದ ಮಲಂಕರ ಆರ್ಥೊಡಾಕ್ಸ್ ಚರ್ಚ್‌ನ ಡಯಾಸಿಸ್‌ ಆಗಿರುವ ಫಾದರ್ ಜಾನ್ಸನ್ ಪಪ್ಪಚನ್ ಅವರು, ಮರಿಯಮ್ ಸುಸಾನ್ ಮ್ಯಾಥ್ಯೂ ಅವರು ತಮ್ಮ ಮನೆಯ ಮೇಲಿನ ಮಹಡಿಯಲ್ಲಿ ವಾಸಿಸುವವರ ಬಂದೂಕಿನಿಂದ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮರಿಯಮ್ ಸುಸಾನ್‌ ಮ್ಯಾಥಿವ್‌, ಬೊಬೆನ್‌ ಮ್ಯಾಥಿವ್‌ ಅವರ ಪುತ್ರಿಯಾಗಿದ್ದು, ಇವರು ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿರಣಂ ಮೂಲದ ನಿವಾಸಿ, ಈ ಹಿನ್ನೆಲೆಯಲ್ಲಿ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲು ಕ್ರಮಕೈಗೊಳ್ಳಲಾಗುತ್ತಿದೆ.

Nisha Dahiya: ಹತ್ಯೆ ಸುದ್ದಿ ಸುಳ್ಳು, ಸ್ಪಷ್ಟನೆ ನೀಡಿದ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ!


ಇದು ಒಂದು ವಾರದ ಒಳಗೆ ಅಮೆರಿಕಾದ ಮಾಂಟ್ಗೊಮೆರಿ(Montgomery)ಯಲ್ಲಿ ನಡೆದ 2ನೇ ಶೂಟೌಟ್‌ ಪ್ರಕರಣವಾಗಿದೆ. ಕಳೆದ ಗುರುವಾರ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.  ಇದಕ್ಕೂ ಮೊದಲು ಕೇರಳ ಮೂಲದ ಸಜನ್ ಮ್ಯಾಥಿವ್‌(Sajan Mathews) ಎಂಬುವವರನ್ನು 15ವರ್ಷದ ಬಾಲಕ ದರೋಡೆ ಮಾಡುವ ಸಲುವಾಗಿ ಗುಂಡಿಕ್ಕಿ ಹತ್ಯೆ ಮಾಡಿದ್ದ 56 ವರ್ಷದ ಸಜ್ಜನ್‌ ಮ್ಯಾಥಿವ್‌ ಅಲಿಯಾಸ್‌ ಸಜಿ, ಡಲ್ಲಾಸ್‌( Dallas)ನಲ್ಲಿ ಸೌಂದರ್ಯವರ್ಧಕಗಳ ಪೂರೈಕೆ ಮಾಡುವ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಇವರ ಅಂಗಡಿಗೆ ನುಗ್ಗಿದ ದರೋಡೆಕೋರ ಇವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಕೇರಳದ ಕೋಝೆಂಚೇರಿ ಮೂಲದ ಮ್ಯಾಥ್ಯೂಸ್ ಅವರು 2005 ರಲ್ಲಿ ಕುವೈತ್‌ನಿಂದ ಯುಎಸ್‌ಗೆ ವಲಸೆ ಬಂದಿದ್ದರು. ಡಲ್ಲಾಸ್ ಸೆಹಿಯಾನ್ ಮಾರ್ ಥೋಮಾ ಚರ್ಚ್‌ನ ಸದಸ್ಯರಾಗಿದ್ದರು.

ಇದಲ್ಲದೇ ನಿನ್ನೆಯಷ್ಟೇ ಬಾಲಕನೊಬ್ಬ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ಕಾರಣ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಮಿಚಿಗನ್ ಡೆಟ್ರಾಯಿಟ್‌ ಬಳಿಯ ಹೈಸ್ಕೂಲ್‌ನಲ್ಲಿ ನಡೆದಿದೆ. 15 ವರ್ಷದ ಬಾಲಕ ಹೈಸ್ಕೂಲ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ, ಶಿಕ್ಷಕ ಸೇರಿದಂತೆ 8 ಜನರು ಗಾಯಗೊಂಡಿದ್ದು, ಮೂವರು ವಿದ್ಯಾರ್ಥಿಗಳು ಅಸುನೀಗಿದ್ದಾರೆ ಎಂದು ಓಕ್ಲ್ಯಾಂಡ್ ಕೌಂಟಿ ಅಂಡರ್‌ಶೆರಿಫ್ ಮೈಕೆಲ್ ಮೆಕ್‌ಕೇಬ್ ಹೇಳಿದ್ದಾರೆ.

ಗುಂಡಿಟ್ಟು ಮೂವರು ಬಿಜೆಪಿ ನಾಯಕರ ಹತ್ಯೆ, ಸೇನಾಪಡೆ ದೌಡು

ಮಧ್ಯಾಹ್ನ ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ತರಗತಿಗಳು ನಡೆಯುತ್ತಿರುವಾಗ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ 16 ವರ್ಷದ ಬಾಲಕ, 14 ಹಾಗೂ 17 ವರ್ಷದ ಬಾಲಕಿಯರು ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ 8 ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ.

Latest Videos
Follow Us:
Download App:
  • android
  • ios