ರುಚಿ ನೋಡೋ ನೆಪದಲ್ಲಿ ಅರೆಬೆಂದ ಆಹಾರ ತಿನ್ನುವ ಮುನ್ನ ಜೋಪಾನ: ದೇಹದ ಸ್ವಾಧೀನವನ್ನೇ ಕಳೆದುಕೊಂಡ ಮಹಿಳೆ
ಮೀನು ಸಾಂಬಾರು ಮಾಡುತ್ತಿದ್ದ 40 ವರ್ಷದ ಮಹಿಳೆಯೊಬ್ಬರು ಹೀಗೆ ಬೇಯುತ್ತಿರುವಾಗಲೇ ಮೀನಿನ ರುಚಿ ನೋಡಲು ಹೋಗಿ ಆಸ್ಪತ್ರೆ ಸೇರಿದ್ದಾರೆ. ಇನ್ನು ದುರಂತವೆಂದರೆ ಅವರ ಕೈಕಾಲುಗಳು ಕೂಡ ಸ್ವಾಧೀನ ಕಳೆದುಕೊಂಡಿವೆ.
ಅಡುಗೆ ಮಾಡುವ ಹೆಣ್ಣು ಮಕ್ಕಳು ಆಹಾರ ಬೇಯುವ ಮೊದಲೇ ರುಚಿ ನೋಡುವುದಕ್ಕಾಗಿ ಬೇಯುತ್ತಿರುವಾಗಲೇ ಒಂದೊಂದೇ ಫೀಸ್‌ನ್ನು ತೆಗೆದು ರುಚಿ ಸರಿ ಇದೆಯೇ ಉಪ್ಪು ಖಾರ ಸರಿ ಇದೆಯೇ ಎಂದು ನೋಡುತ್ತಾರೆ. ಇದು ಹೆಂಗೆಳೆಯರ ಸಹಜ ಪ್ರಕ್ರಿಯೆ. ಆದರೆ ಹೀಗೆ ಮೀನು ಸಾಂಬಾರು ಮಾಡುತ್ತಿದ್ದ 40 ವರ್ಷದ ಮಹಿಳೆಯೊಬ್ಬರು ಹೀಗೆ ಬೇಯುತ್ತಿರುವಾಗಲೇ ಮೀನಿನ ರುಚಿ ನೋಡಲು ಹೋಗಿ ಆಸ್ಪತ್ರೆ ಸೇರಿದ್ದಾರೆ. ಇನ್ನು ದುರಂತವೆಂದರೆ ಅವರ ಕೈಕಾಲುಗಳು ಕೂಡ ಸ್ವಾಧೀನ ಕಳೆದುಕೊಂಡಿವೆ.
ಕ್ಯಾಲಿಫೋರ್ನಿಯಾದ (California) ಲಾರಾ ಬರಾಜಾಸ್ (Laura Barajas) ಎಂಬುವವರೇ ಹೀಗೆ ಹಸಿಬಿಸಿ ಬೆಂದ ಮೀನು ತಿನ್ನಲು ಹೋಗಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದವರು. ಅವರು ಜುಲೈ ಅಂತ್ಯದಲ್ಲಿ ಸ್ಯಾನ್ ಜೋಸ್‌ನ ಸ್ಥಳೀಯ ಮಾರುಕಟ್ಟೆಯಲ್ಲಿ ಟಿಲಾಪಿಯಾ ಮೀನುಗಳನ್ನು ಖರೀದಿಸಿದ್ದರು. ಮೀನು ಖರೀದಿಸಿ ಮನೆಗೆ ಹೋದವರು ಅದನ್ನು ಅರೆಬರೆ ಬೇಯಿಸಿ ತಿಂದಿದ್ದಾರೆ. ಪರಿಣಾಮ ಅದರಲ್ಲಿದ್ದ ವಿಷಕಾರಿ ಬ್ಯಾಕ್ಟಿರೀಯಾದಿಂದ ಲಾರಾ ಸೋಂಕಿಗೊಳಗಾಗಿದ್ದು, (bacterial infection) ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಕಳೆದ ಎರಡು ತಿಂಗಳುಗಳ ಕಾಲ ಈ ಮೀನಿನ ವಿಷಕಾರಿ ಬ್ಯಾಕ್ಟಿರೀಯಾದಿಂದ ಸೋಂಕಿಗೊಳಗಾದ ಲಾರಾ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದು, ಕೈ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಅಳಿದಿದೆ ಎಂದು ನಂಬಲಾಗಿದ್ದ ಕೈಗಳಿರುವ ಅಪರೂಪದ ಮೀನು ಪತ್ತೆ
40 ವರ್ಷದ ಲಾರಾಗೆ 6 ವರ್ಷದ ಮಗನಿದ್ದಾನೆ. ಮಾರುಕಟ್ಟೆಯಿಂದ ತಾವೇ ಮೀನು ತಂದು ಅದನ್ನು ಅರೆಬರೆ ಬೇಯಿಸಿ ತಿಂದ ಪರಿಣಾಮ ಇವರ ಸ್ಥಿತಿ ಬಹುತೇಕ ಜೀವವೇ ಹೋಗುವಂತೆ ಆಗಿದೆ ಎಂದು ಲಾರಾ ಸ್ನೇಹಿತೆ ಮಾಹಿತಿ ನೀಡಿದ್ದಾರೆ. ಇದು ತುಂಬಾ ಆಘಾತಕಾರಿ ಘಟನೆ ಯಾರಿಗೂ ಈ ರೀತಿ ಆಗಬಾರದು. ಆಕೆ ಬಹುತೇಕ ತನ್ನ ಬದುಕನ್ನು ಕಳೆದುಕೊಂಡಿದ್ದು, ಆಕೆ ಈಗ ಕೃತಕ ಉಸಿರಾಟ ಯಂತ್ರದ ಸಹಾಯದಿಂದ ಉಸಿರಾಡುತ್ತಿದ್ದಾಳೆ ಎಂದು ಲಾರಾ ಸ್ನೇಹಿತೆ ಅನ್ನಾ ಮೆಸ್ಸಿನಾ ಹೇಳಿದ್ದಾರೆ. ವೈದ್ಯಕೀಯವಾಗಿ ಆಕೆಯನ್ನು ಕೋಮಾದಲ್ಲಿ ಇರಿಸಲಾಗಿದೆ. ಈ ಮೀನಿನ ಸೇವನೆಯಿಂದ ಉಂಟಾದ ಸೋಂಕಿನ ನಂತರ ಆಕೆಯ ಬೆರಳುಗಳು, ಪಾದಗಳು, ತುಟಿ, ಸಂಪೂರ್ಣ ಸೋಂಕಿಗೆ ಒಳಗಾಗಿದ್ದು, ಕಪ್ಪು ಬಣ್ಣಕ್ಕೆ ತಿರುಗಿವೆ ಇದರೊಂದಿಗೆ ಆಕೆಯ ಮೂತ್ರಪಿಂಡಗಳು ವೈಫಲ್ಯಕ್ಕೊಳಗಾಗಿವೆ ಎಂದು ಅನ್ನಾ ಹೇಳಿದ್ದಾರೆ.
ವೈಬ್ರಿಯೊ ವಲ್ನಿಫಿಕಸ್ (vibrio vulnificus) ಎಂಬ ಬ್ಯಾಕ್ಟಿರೀಯಾದಿಂದ ಈ ಸೋಂಕು ಉಂಟಾಗಿರಬಹುದು ಎಂದು ವೈದ್ಯರು ಹೇಳುತ್ತಿದ್ದು, ಈ ಬ್ಯಾಕ್ಟೀರಿಯಾದ ಉಂಟಾಗುತ್ತಿರುವವ ಸೋಂಕಿನ ಬಗ್ಗೆ ಇತ್ತೀಚೆಗೆ ಆರೋಗ್ಯ ಕೇಂದ್ರಗಳು ಎಚ್ಚರಿಕೆ ನೀಡಿವೆ. ಪ್ರತಿವರ್ಷ 150 ರಿಂದ 200 ವೈಬ್ರಿಯೊ ವಲ್ನಿಫಿಕಸ್ ಬ್ಯಾಕ್ಟಿರೀಯಾದಿಂದ ಉಂಟಾಗುವ ಸೋಂಕಿನ ಪ್ರಕರಣಗಳು ವರದಿಯಾಗುತ್ತವೆ. ಇಂತಹ ಸೋಂಕಿಗೊಳಗಾದ ಐವರಲ್ಲಿ ಒಬ್ಬರು ಸಾವನ್ನಪ್ಪುತ್ತಾರೆ. ರೋಗ ನಿರೋಧಕ ಶಕ್ತಿ ಹೆಚ್ಚುಳ್ಳವರು ಕೂಡ ಈ ರೋಗಕ್ಕೆ ಬಲಿಯಾಗುತ್ತಾರೆ. ಆಹಾರದಲ್ಲಿ ಈ ಬ್ಯಾಕ್ಟಿರೀಯಾ ದೇಹ ಸೇರುತ್ತದೆ. ಕಲುಷಿತ ನೀರಿನ ಸೇವನೆ ಅಥವಾ ಈ ಬ್ಯಾಕ್ಟಿರೀಯಾ ವಾಸಿಸುವ ನೀರಿನಲ್ಲಿ ಟ್ಯಾಟೂ ಹಾಕಿದ ಅಥವಾ ಗಾಯಗಳಿರುವ ದೇಹದ ಭಾಗವನ್ನು ತೊಳೆಯುವ ಕಾರಣದಿಂದಲೂ ಈ ಬ್ಯಾಕ್ಟಿರೀಯಾ ದೇಹ ಸೇರಬಹುದು ಎಂದು ಈ ಸೋಂಕಿಗೆ ಸಂಬಂಧಿಸಿದ ತಜ್ಞ ವೈದ್ಯ ಡಾ ನತಾಶಾ ( Dr. Natasha Spottiswoode) ಹೇಳಿದ್ದಾರೆ.
ಕಿಚನ್‌ನಲ್ಲಿ ಇಲಿ, ಆಹಾರದಲ್ಲಿ ಜಿರಳೆ; ಬಡೆಮಿಯಾ ಕಬಾಬ್ ರೆಸ್ಟೋರೆಂಟ್‌ಗೆ ಬೀಗ ಜಡಿದ FDA!
ನಿಮ್ಮ ದೇಹದಲ್ಲಿ ಗಾಯಗಳಿದ್ದರೆ ಅದು ಸರಿಯಾಗಿ ವಾಸಿಯಾಗುವ ಮೊದಲು ನೀರಿಗೆ ದೇಹವನ್ನು ಒಡ್ಡಬೇಡಿ, ತಿನ್ನುವ ಆಹಾರದ ಮೇಲೂ ಗಮನವಿರಲಿ ಎಂದು ವೈದ್ಯೆ ನತಾಶ ಜನರಿಗೆ ಸಲಹೆ ನೀಡಿದ್ದಾರೆ. ಇತ್ತ ಗೆಳತಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಅನ್ನಾ ಗೋ ಫಂಡ್ ಮೀ ಪೇಜ್ (GoFundMe page) ಮೊರೆ ಹೋಗಿದ್ದಾರೆ. ಗೋ ಫಂಡ್‌ನಿಂದ ಲಾರಾಗೆ 36 ಸಾವಿರ ಡಾಲರ್ ಹಣ ಸಂಗ್ರಹವಾಗಿದೆ. ಒಂದು ಲಕ್ಷದ 50 ಸಾವಿರ ಡಾಲರ್ ಸಂಗ್ರಹದ ಗುರಿ ಇತ್ತು ಎಂದು ಅನ್ನಾ ಹೇಳಿದ್ದಾರೆ.