ಅಳಿದಿದೆ ಎಂದು ನಂಬಲಾಗಿದ್ದ ಕೈಗಳಿರುವ ಅಪರೂಪದ ಮೀನು ಪತ್ತೆ

ಅಳಿದು ಹೋಗಿದೆ ಎಂದು ನಂಬಲಾಗಿದ್ದ ಅಪರೂಪದ ಎರಡು ಕೈಗಳಿರುವ ಮೀನೊಂದು  20 ವರ್ಷಗಳ ನಂತರ ಪತ್ತೆಯಾಗಿದೆ.  ರೆಕ್ಕೆಗಳ ಬದಲಿಗೆ ಕೈಗಳನ್ನು ಹೊಂದಿರುವ ಈ ವಿಲಕ್ಷಣವಾದ ಮೀನು  ಆಸ್ಟ್ರೇಲಿಯಾದ  ಟ್ಯಾಸ್ಮೆನಿಯಾದ (Tasmania) ಪ್ರಿಮ್ರೋಸ್ ಸ್ಯಾಂಡ್ಸ್‌ನಲ್ಲಿರುವ (Primrose Sands) ಕಡಲತೀರದಲ್ಲಿ ಪತ್ತೆಯಾಗಿದೆ.

A rare fish with hands that was believed to be extinct has been found in Primrose Sands Beach Australia akb

ಟ್ಯಾಸ್ಮೆನಿಯಾ: ಅಳಿದು ಹೋಗಿದೆ ಎಂದು ನಂಬಲಾಗಿದ್ದ ಅಪರೂಪದ ಎರಡು ಕೈಗಳಿರುವ ಮೀನೊಂದು  20 ವರ್ಷಗಳ ನಂತರ ಪತ್ತೆಯಾಗಿದೆ.  ರೆಕ್ಕೆಗಳ ಬದಲಿಗೆ ಕೈಗಳನ್ನು ಹೊಂದಿರುವ ಈ ವಿಲಕ್ಷಣವಾದ ಮೀನು  ಆಸ್ಟ್ರೇಲಿಯಾದ  ಟ್ಯಾಸ್ಮೆನಿಯಾದ (Tasmania) ಪ್ರಿಮ್ರೋಸ್ ಸ್ಯಾಂಡ್ಸ್‌ನಲ್ಲಿರುವ (Primrose Sands) ಕಡಲತೀರದಲ್ಲಿ ಪತ್ತೆಯಾಗಿದೆ. ಕೆರ್ರಿ ಯಾರೆ ಎಂಬುವವರು ಪ್ರಿಮ್ರೋಸ್ ಸ್ಯಾಂಡ್ಸ್‌ನಲ್ಲಿರುವ ಕಡಲತೀರದಲ್ಲಿ  ಓಡಾಡುತ್ತಿದ್ದಾಗ ಈ ವಿಲಕ್ಷಣವಾದ ಮೀನನ್ನು ಪತ್ತೆ ಮಾಡಿದ್ದಾರೆ. ಇದನ್ನು ಕೊನೆಯ ಬಾರಿ 20 ವರ್ಷಗಳ ಹಿಂದೆ ನೋಡಲಾಗಿತ್ತು. 

ಈ ವಿಶೇಷ ಮೀನನ್ನು ನೋಡಿದ ಬಗ್ಗೆ ಕೆರ್ರಿ ಯಾರೆ (Kerri Yare) ಎಂಬುವವರು ಪ್ರತಿಕ್ರಿಯಿಸಿದ್ದು, ನಾನು ಗಮನಿಸುವ ಪ್ರತಿ ಜೀವಿಗಳ ಮೇಲೆ ನಾನು ವಿಶೇಷವಾದ ಆಸಕ್ತಿಯನ್ನು ಹೊಂದಿರುತ್ತೇನೆ. ಅದು ಸಣ್ಣ ಪಫರ್ ಫಿಶ್ ಅಥವಾ ಟೋಡ್ ಫಿಶ್‌ನಂತೆ ಕಾಣುತ್ತಿತ್ತು.  ಈ ರೀತಿಯ ಮೀನುಗಳನ್ನು ನಾನು ಹೆಚ್ಚಾಗಿ ನೋಡಿದ್ದೆ. ಆದರೆ ಈ ಮೀನನ್ನು ಹತ್ತಿರದಿಂದ ನೋಡಿದಾಗ ಮರಳಿನ ಪದರದ ಕೆಳಗೆ ಅದಕ್ಕೆ ಸಣ್ಣ ಕೈಗಳಿರುವುದು ಕಾಣಿಸಿತ್ತು. ಇದು ಖಂಡಿತವಾಗಿಯೂ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ. 

ಚಂದ್ರಯಾನ, ಸೂರ್ಯಯಾನ ಬಳಿಕ ಸಮುದ್ರಯಾನ: ಮತ್ಸ್ಯದಿಂದ ಆಳ ಸಮುದ್ರದಲ್ಲಿ ಸಂಶೋಧನೆ

ಅಳಿವಿನಂಚಿನಲ್ಲಿರುವ ಪ್ರಭೇಧಗಳಲ್ಲಿ ಒಂದಾಗಿರುವ ಈ ಕೈಗಳೀರುವವ ಮೀನುಗಳು ಈ ತಮ್ಮ ಕೈಗಳನ್ನು ಸಾಗರ ತಳದಲ್ಲಿ ನಡೆದಾಡಲು ಬಳಸುತ್ತವೆಯಂತೆ. ಇತ್ತೀಚೆಗೆ ಇದು ಕಾಣಸಿಗುವುದಕ್ಕೂ ಮೊದಲು ಈ ಮೀನು ಅಳಿದು ಹೋಗಿದೆ ಎಂದೇ ಭಾವಿಸಲಾಗಿತ್ತು. ಕಾಮನ್‌ವೆಲ್ತ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್‌ನ (CSIRO) ಕಾರ್ಲೀ ಡಿವೈನ್ ಎಂಬುವವರು ಇಡೀ ಪ್ರಪಂಚದಾದ್ಯಂತ ಕೇವಲ 2 ಸಾವಿರ ಈ ರೀತಿಯ ಮೀನುಗಳು ಉಳಿದಿವೆ. ಆದರೆ ಕಳೆದ ವಾರ ಇದು ಪತ್ತೆಯಾಗುವುದಕ್ಕೂ ಮೊದಲು ಪ್ರೈಮ್ರೋಸ್ ಸ್ಯಾಂಡ್ಸ್‌ನಲ್ಲಿ ಈ ಮಚ್ಚೆಯುಳ್ಳ ಕೈಮೀನು ಅಳಿದು ಹೋಗಿದೆ ಎಂದೇ ಭಾವಿಸಲಾಗಿತ್ತು.  ಆದರೆ 2005ರಿಂದಲೂ ಇದು ಇದ್ದಿರಬಹುದು ಎಂದು ನಾವು ಭಾವಿಸುತ್ತೇವೆ. ಆದರೆ ಒಂದೇ ಒಂದು ಮೀನು ನಮಗೆ ಕಾಣಲು ಸಿಕ್ಕಿರಲಿಲ್ಲ.

CSIRO ಪ್ರಕಾರ, ಮಚ್ಚೆಯುಳ್ಳ ಈ ಕೈಗಳಿರುವ ಮೀನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್‌ನಿಂದ ತೀವ್ರವಾಗಿ ಅಳಿವಿನಂಚಿನಲ್ಲಿರುವ ಮೀನು ಪ್ರಬೇಧ ಎಂದು ಗುರುತಿಸಲ್ಪಟ್ಟಿತ್ತು.  ಈ ತೀರದಲ್ಲಿ ಮೀನುಗಾರಿಕೆ ಹಾಗೂ ಬೇಟೆಯಿಂದಾಗಿ ಇವುಗಳು ಅಳಿವಿನಂಚಿಗೆ ತಲುಪಿದವು, ಅಲ್ಲದೇ ಅವುಗಳ ಸಣ್ಣಗಾತ್ರ ಒಂಟಿಯಾಗಿರುವ ಸ್ವಭಾವ ಅವುಗಳನ್ನು  ಪತ್ತೆ ಮಾಡುವುದು ಕಷ್ಟವಾಗಿಸಿತ್ತು. 

ಈ ಕೈಗಳಿರುವ ಮೀನು ಅಪರೂಪವಾಗಿದ್ದು, 1990 ರ ದಶಕಕ್ಕೂ  ಮೊದಲು, ಈ ಮಚ್ಚೆಯುಳ್ಳ ಕೈಮೀನುಗಳು ಸುಲಭವಾಗಿ ಕಂಡು ಬರುತ್ತಿದ್ದವು.  ಆದರೆ ಈಗ ಇವುಗಳು ತೀರಾ ಕಡಿಮೆ ಆಗಿದ್ದು, ಸಮುದ್ರದಲ್ಲಿ ಡೈವ್ ಮಾಡುವವರಿಗೆ 60 ನಿಮಿಷದಲ್ಲಿ ಕೇವಲ ಒಂದು ಅಥವಾ ಎರಡು ಮೀನುಗಳನ್ನು ಮಾತ್ರ ಕಾಣಲು ಸಾಧ್ಯ. ಕೆಲವೊಮ್ಮೆ ಅದೂ ಇರುವುದಿಲ್ಲ ಎಂದು ಈ ಮೀನನ್ನು ಸಮುದ್ರದಲ್ಲಿ ನೋಡಿದ   ಕೆರ್ರಿ ಯಾರೆ ಹೇಳುತ್ತಾರೆ.

ಬಂಡೆ ಮೇಲೆ ಜೊತೆಯಾಗಿ ಫೋಸ್ ಕೊಟ್ಟ ಬ್ಲ್ಯಾಕ್ ಪ್ಯಾಂಥರ್, ಚಿರತೆ: ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Latest Videos
Follow Us:
Download App:
  • android
  • ios