Asianet Suvarna News Asianet Suvarna News

China Factory Fire: ಚೀನಾದಲ್ಲಿ ಭೀಕರ ಅಗ್ನಿ ದುರಂತ, 38 ಮಂದಿ ಬಲಿ!

ಚೀನಾದ ಸ್ಥಾವರವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 38 ಮಂದಿ ಸಾವನ್ನಪ್ಪಿರುವ ದಾರುಣ  ಘಟನೆ ನಡೆದಿದೆ.   ಮಧ್ಯ ಚೀನಾದ ಸ್ಥಾವರವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ  38 ಮಂದಿ ಸಾವನ್ನಪ್ಪಿ, ಇಬ್ಬರು ಕಾಣೆಯಾಗಿದ್ದಾರೆ

38 killed, 2 injured after central China plant fire gow
Author
First Published Nov 22, 2022, 5:53 PM IST

ಬೀಜಿಂಗ್ (ನ.22): ಚೀನಾದ ಸ್ಥಾವರವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 38 ಮಂದಿ ಸಾವನ್ನಪ್ಪಿರುವ ದಾರುಣ  ಘಟನೆ ನಡೆದಿದೆ.   ಮಧ್ಯ ಚೀನಾದ ಸ್ಥಾವರವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ  38 ಮಂದಿ ಸಾವನ್ನಪ್ಪಿ, ಇಬ್ಬರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ  ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ. ಸೋಮವಾರ ಮಧ್ಯಾಹ್ನ ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಅನ್ಯಾಂಗ್ ನಗರದ ಸ್ಥಾವರದಲ್ಲಿ ಬೆಂಕಿ ಅವಘಡವಾಗಿದೆ.  ರಕ್ಷಣಾ ಕಾರ್ಯಕ್ಕಾಗಿ 63 ವಾಹನಗಳನ್ನು ಮತ್ತು 240 ಸಿಬ್ಬಂದಿಯನ್ನು ದುರಂತ ನಡೆದ ಸ್ಥಳಕ್ಕೆ ಕಳುಹಿಸಲಾಗಿತ್ತು. ಅಲ್ಲದೆ ಚೀನಾ ತುರ್ತು ಪರಿಸ್ಥಿತಿ ನಿರ್ವಹಣಾ ಸಚಿವಾಲಯವು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಿತ್ತು 

ಸಾರ್ವಜನಿಕ ಭದ್ರತೆ, ತುರ್ತು ಪ್ರತಿಕ್ರಿಯೆ, ಸ್ಥಳೀಯ ಆಡಳಿತ ಮತ್ತು ವಿದ್ಯುತ್ ಸರಬರಾಜು ಘಟಕಗಳು ಈ ಸಮಯದಲ್ಲಿ ತುರ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯವನ್ನು ಕೈಗೊಂಡಿತು, ಸ್ಥಳೀಯ ಕಾಲಮಾನ ರಾತ್ರಿ 11 ಗಂಟೆಯ ಹೊತ್ತಿಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಸತ್ತವರು ಮತ್ತು ಕಾಣೆಯಾದವರ ಜೊತೆಗೆ, ಇಬ್ಬರು ಪ್ರಾಣಾಪಾಯವಿಲ್ಲದೆ ಆಸ್ಪತ್ರೆಯಲ್ಲಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಘಟನೆ ಕುರಿತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆಂಕಿ ಅವಘಡಕ್ಕೆ ಸ್ಪಷ್ಟಕಾರಣ ತಿಳಿದುಬಂದಿಲ್ಲ. ಬೆಂಕಿ ಅವಘಡಕ್ಕೆ ಕಾರಣವಾದ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ "ವಿದ್ಯುತ್ ವೆಲ್ಡಿಂಗ್ನಲ್ಲಿ ಕಾರ್ಮಿಕರು ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ್ದರಿಂದ ಬೆಂಕಿ ಉಂಟಾಯಿತು" ಎಂದು ಕಂಡುಬಂದಿದೆ.  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಘಟನರೆ ನಡೆದ ಕೈಗಾರಿಕಾ ಸ್ಥಳದಲ್ಲಿ ಬೆಂಕಿಯ ದಟ್ಟವಾದ  ಹೊಗೆಯು ಆಕಾಶದೆತ್ತರಕ್ಕೆ ಚಾಚಿಕೊಂಡಿದೆ.

ದುರ್ಬಲ ಸುರಕ್ಷತಾ ಮಾನದಂಡಗಳು ಮತ್ತು ಅವುಗಳನ್ನು ಜಾರಿಗೊಳಿಸಲು ನಿಯೋಜಿಸಲಾದ ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಚೀನಾದಲ್ಲಿ ಕೈಗಾರಿಕಾ ಅಪಘಾತಗಳು ಸಾಮಾನ್ಯವಾಗಿದೆ. ಜೂನ್‌ನಲ್ಲಿ ಶಾಂಘೈನಲ್ಲಿ ರಾಸಾಯನಿಕ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದ.

Secunderabad: ಇ-ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 8 ಸಾವು, ಮೇಲಿನ ಮಹಡಿಗಳಿಂದ ಪ್ರಾಣ ಉಳಿಸಿಕೊಳ್ಳಲು ಜಿಗಿದ ಹಲವರು

ಮಾರ್ಚ್ 2019 ರಲ್ಲಿ, ಶಾಂಘೈನಿಂದ 260 ಕಿಲೋಮೀಟರ್ (161 ಮೈಲುಗಳು) ದೂರದಲ್ಲಿರುವ ಯಾಂಚೆಂಗ್‌ನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟವು 78 ಜನರನ್ನು ಬಲಿ ಪಡೆದಿತ್ತು ಮತ್ತು ಹಲವಾರು ಕಿಲೋಮೀಟರ್ ದೂರದಲ್ಲಿದ್ದ ಮನೆಗಳು ಕೂಡ ಧ್ವಂಸವಾಗಿತ್ತು.

ಅಗ್ನಿ ಅವಘಡದ ಭೀತಿ: 71,000 ಕಾರುಗಳನ್ನು ಹಿಂಪಡೆಯಲಿರುವ ಕಿಯಾ

ನಾಲ್ಕು ವರ್ಷಗಳ ಹಿಂದೆ, ಉತ್ತರ ಟಿಯಾಂಜಿನ್‌ನಲ್ಲಿ ರಾಸಾಯನಿಕ ಗೋದಾಮಿನಲ್ಲಿ ಸಂಭವಿಸಿದ ದೈತ್ಯ ಸ್ಫೋಟವು 165 ಜನರನ್ನು ಕೊಂದಿತು, ಇದು ಚೀನಾದ ಅತ್ಯಂತ ಕೆಟ್ಟ ಕೈಗಾರಿಕಾ ಅಪಘಾತಗಳಲ್ಲಿ ಒಂದಾಗಿದೆ.

 

Follow Us:
Download App:
  • android
  • ios