Secunderabad: ಇ-ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 8 ಸಾವು, ಮೇಲಿನ ಮಹಡಿಗಳಿಂದ ಪ್ರಾಣ ಉಳಿಸಿಕೊಳ್ಳಲು ಜಿಗಿದ ಹಲವರು

ಹೈದರಾಬಾದ್‌ ಬಳಿಯ ಸಿಕಂದರಾಬಾದ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 8 ಜನರು ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಧಾನಿ ಮೋದಿ ಸಂತಾಪ ಘೋಷಿಸಿದ್ದು, ಮೃತಪಟ್ಟ ಸಂತ್ರಸ್ಥರ ಸಂಬಂಧಿಕರಿಗೆ ಪರಿಹಾರವನ್ನೂ ಘೋಷಿಸಿದ್ದಾರೆ.  

many people dead several people jumped off to save themselves from fire secunderabad ash

ತೆಲಂಗಾಣದ ಹೈದರಾಬಾದ್‌ ಅವಳಿ ನಗರವಾದ ಸಿಕಂದರಾಬಾದ್‌ನ ಎಲೆಕ್ಟ್ರಿಕ್ ಶೋರೂಮ್‌ನಲ್ಲಿ ಭಾರಿ ಬೆಂಕಿ (Fire) ಕಾಣಿಸಿಕೊಂಡು ಮಹಿಳೆ ಸೇರಿದಂತೆ ಕನಿಷ್ಠ8 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ 10 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಪಾಸ್‌ಪೋರ್ಟ್ ಕಚೇರಿಯ (Passport Office) ಸಮೀಪವಿರುವ ಕಟ್ಟಡದ ಮೇಲಿನ 4 ಮಹಡಿಗಳಲ್ಲಿರುವ ಲಾಡ್ಜ್ (Lodge) ಮತ್ತು ರೆಸ್ಟೋರೆಂಟ್‌ಗೆ (Reastaurant) ಬೆಂಕಿ ವ್ಯಾಪಿಸಿದೆ. ಬೆಂಕಿ ಮತ್ತು ಹೊಗೆ ಹೊರಹೊಮ್ಮುತ್ತಿರುವುದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಹಾಗೂ ಅತಿಥಿಗಳು ಅಗ್ನಿಶಾಮಕ ದಳಕ್ಕೆ (Fire Department) ಈ ಸಂಬಂಧ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳದವರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಸಂಬಂಧ ಪ್ರಧಾನಿ ಮೋದಿ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದು, ಮೃತಪಟ್ಟ ಸಂತ್ರಸ್ಥರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. 

ಪ್ರಾಥಮಿಕ ಮಾಹಿತಿ ಪ್ರಕಾರ ನೆಲಮಹಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು (Electric Scooters) ಚಾರ್ಜ್ ಮಾಡುತ್ತಿದ್ದು, ಇದರಿಂದ ಶಾರ್ಟ್ ಸರ್ಕ್ಯೂಟ್ ಅಥವಾ ಬೆಂಕಿಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 24 ಜನರು ಒಳಗೆ ಸಿಲುಕಿಕೊಂಡಿದ್ದರು, ಈ ಪೈಕಿ 6 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇತರರನ್ನು ರಕ್ಷಿಸಲಾಗಿದೆ ಹಾಗೂ ಹೆಚ್ಚು ಮಂದಿ ಸಾವಿಗೀಡಾದವರು ಇತರ ರಾಜ್ಯಗಳಿಗೆ ಸೇರಿದವರು ಎಂದು ತಿಳಿದುಬಂದಿದೆ.  

Bengaluru: ಸೂಪರ್‌ ಮಾರ್ಕೆಟ್‌ಗೆ ಆಕಸ್ಮಿಕ ಬೆಂಕಿ: ಕೋಟ್ಯಾಂತರ ಮೌಲ್ಯದ ವಸ್ತು ನಾಶ

"ಸಿಕಂದರಾಬಾದ್‌ನ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು 6 ಮಂದಿ ಸಾವನ್ನಪ್ಪಿದ್ದಾರೆ. ನೆಲಮಹಡಿಯಲ್ಲಿನ ಎಲೆಕ್ಟ್ರಿಕ್ ಸ್ಕೂಟರ್ ರೀಚಾರ್ಜಿಂಗ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತು, ಹೊಗೆ 1 ಮತ್ತು 2 ನೇ ಮಹಡಿಯಲ್ಲಿ ತಂಗಿದ್ದ ಜನರನ್ನು ಆವರಿಸಿತು. ಕಟ್ಟಡದಿಂದ ಜಿಗಿದ ಉಳಿದ ಜನರನ್ನು ರಕ್ಷಿಸಲಾಯಿತು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಗ್ನಿಶಾಮಕ ವಾಹನಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದವು’’ ಎಂದು ಹೈದರಾಬಾದ್ ಕಮಿಷನರ್ ಸಿವಿ ಆನಂದ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು. ನೆಲ ಮಹಡಿಯಲ್ಲಿರುವ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕಟ್ಟಡದ ಮೇಲಿನ ಮಹಡಿಯಲ್ಲಿರುವ ಲಾಡ್ಜ್‌ಗೆ ದಟ್ಟವಾದ ಹೊಗೆ ಆವರಿಸಿದೆ. ಹಾಗೆ, ಸಾವಿನ ಸಂಖ್ಯೆ ಬಳಿಕ 8 ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದ್ದು, ಇನ್ನಷ್ಉ ಹೆಚ್ಚಾಗುವ ಸೂಚನೆಗಳಿವೆ.

ಘಟನೆ ಬಗ್ಗೆ ಮಾಹಿತಿ ನೀಡಿದ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮಹಮೂದ್ ಅಲಿ, ಇದು ಅತ್ಯಂತ ದುರದೃಷ್ಟಕರ ಘಟನೆ. ಅಗ್ನಿಶಾಮಕ ದಳದ ತಂಡಗಳು ಲಾಡ್ಜ್‌ನಿಂದ ಜನರನ್ನು ರಕ್ಷಿಸಲು ಪ್ರಯತ್ನಿಸಿದವು ಆದರೆ ಭಾರೀ ಹೊಗೆಯಿಂದಾಗಿ ಕೆಲವರು ಸಾವನ್ನಪ್ಪಿದರು. ಕೆಲವರನ್ನು ಲಾಡ್ಜ್‌ನಿಂದ ರಕ್ಷಿಸಲಾಗಿದೆ. ಘಟನೆ ಹೇಗೆ ಸಂಭವಿಸಿತು ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು, ಹೈದರಾಬಾದ್ ಉತ್ತರ ವಲಯದ ಹೆಚ್ಚುವರಿ ಡಿಸಿಪಿ, "ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಶೋರೂಮ್‌ ಮೇಲಿರುವ ಲಾಡ್ಜ್‌ನಲ್ಲಿ ಜನರು ಸಿಲುಕಿಕೊಂಡಿದ್ದಾರೆ. ಪ್ರಸ್ತುತ, ಘಟನೆಯಲ್ಲಿ 5 ಜನರು ಸಾವನ್ನಪ್ಪಿದ್ದಾರೆ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಹೇಳಿದ್ದರು. 

ಬೆಂಗಳೂರಿನ ಶಾಪಿಂಗ್‌ ಮಾರ್ಟ್‌ನಲ್ಲಿ ಅಗ್ನಿ ಅನಾಹುತ: ಧಗಧಗಿಸಿದ ಕೋಟ್ಯಾಂತರ ಮೌಲ್ಯದ ಪೀಠೋಪಕರಣ

ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ
ಅಗ್ನಿ ಅವಘಡದಲ್ಲಿ ಸಾವಿಗೀಡಾದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ರೂ.ಗಳ ಆರ್ಥಿಕ ನೆರವು ಘೋಷಿಸಿದ್ದಾರೆ. ಹಾಗೆ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಈ ಮಧ್ಯೆ, ತೆಲಂಗಾಣದ ಪಶುಸಂಗೋಪನಾ ಸಚಿವ, ಟಿ. ಶ್ರೀನಿವಾಸ್ ಯಾದವ್ ಅವರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

Latest Videos
Follow Us:
Download App:
  • android
  • ios