Asianet Suvarna News Asianet Suvarna News

ಅಗ್ನಿ ಅವಘಡದ ಭೀತಿ: 71,000 ಕಾರುಗಳನ್ನು ಹಿಂಪಡೆಯಲಿರುವ ಕಿಯಾ

ಆಟೊಮೊಬೈಲ್‌ ಕಂಪನಿ ಕಿಯಾ (kia) ಈಗ ಸುರಕ್ಷತಾ ದೃಷ್ಟಿಯಿಂದ ತನ್ನ ಹಲವು ಹಳೆಯ ಕಾರುಗಳನ್ನು ಹಿಂಪಡೆಯಲು ಮುಂದಾಗಿದೆ. ಕಂಪನಿ ಈಗ ಅಮೆರಿಕದ   71,000 ಹಳೆಯ ಮಾದರಿಯ  ಎಸ್‌ಯುವಿ (SUV) ಗಳನ್ನು ಹಿಂಪಡೆಯುತ್ತಿದೆ.

Kia recalls 71000 SUVs over fire threat
Author
First Published Oct 28, 2022, 10:40 AM IST

ಆಟೊಮೊಬೈಲ್ ಕಂಪನಿ ಕಿಯಾ (kia) ಈಗ ಸುರಕ್ಷತಾ ದೃಷ್ಟಿಯಿಂದ ತನ್ನ ಹಲವು ಹಳೆಯ ಕಾರುಗಳನ್ನು ಹಿಂಪಡೆಯಲು ಮುಂದಾಗಿದೆ. ಕಂಪನಿ ಈಗ ಅಮೆರಿಕದ   71,000 ಹಳೆಯ ಮಾದರಿಯ  ಎಸ್ಯುವಿ (SUV) ಗಳನ್ನು ಹಿಂಪಡೆಯುತ್ತಿದೆ. ಏಕೆಂದರೆ ಅವುಗಳು ಈಗ ಚಾಲನೆಯ ಸ್ಥಿತಿಯಲ್ಲಿದ್ದರೂ,  ಇಲ್ಲದಿದ್ದರೂ ಅಗ್ನಿ ಅವಘಡದ ಭೀತಿ ಎದುರಿಸುತ್ತಿವೆ. 

2008 ಮತ್ತು 2009 ರ ಕಿಯಾ ಸ್ಪೋರ್ಟೇಜ್ (Kia Sportages) ಕಾರುಗಳ ಮಾಲೀಕರು ಎಂಜಿನ್ನ ವೈರಿಂಗ್ನಲ್ಲಿನ ದೋಷವನ್ನು ಸರಿಪಡಿಸುವವರೆಗೆ ಕಾರುಗಳನ್ನು ಮನೆಯಿಂದ ಹೊರಗೆ ನಿಲ್ಲಿಸಬೇಕು ಅಥವಾ ವಾಹನಗಳಿಂದ ದೂರವಿರಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ ಸೂಚನೆ ನೀಡಿದೆ.
ಕಾರಿನ ಅ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂನ ತುಕ್ಕಿಗೆ ಸಂಬಂಧಿಸಿದ ಸಮಸ್ಯೆಗಳ ಕಾರಣದಿಂದ ಕೊರಿಯನ್ ವಾಹನ ತಯಾರಕ ಕಂಪನಿ ಕಿಯಾ ಹಾಗೂ ಮತ್ತು ಅದರ ಮೂಲ ಕಂಪನಿ, ಹ್ಯುಂಡೈ, 2020 ರಿಂದ ಇಲ್ಲಿಯವರೆಗೆ ಸುಮಾರು 1 ಮಿಲಿಯನ್ ವಾಹನಗಳನ್ನು ಹಿಂಪಡೆದಿದೆ. ಕಿಯಾ ಸುರಕ್ಷತಾ ಅಧಿಕಾರಿಗಳು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ನ ಪ್ರಮುಖ ಅಂಶವಾದ ಸ್ಪೋರ್ಟೇಜ್ನ ಹೈಡ್ರಾಲಿಕ್ ಎಲೆಕ್ಟ್ರಾನಿಕ್ ನಿಯಂತ್ರಣ ಘಟಕದಲ್ಲಿ ವೈರಿಂಗ್ನಲ್ಲಿ ತುಕ್ಕು ಹಿಡಿದಿರುವುದನ್ನು ಕಂಡುಹಿಡಿದಿದ್ದರು. ಡಿವೈಸ್ ಸುತ್ತಲೂ ಅಸಮರ್ಪಕ ಸೀಲಿಂಗ್ನಿಂದ ತೇವಾಂಶ ಮೂಡಿದ್ದು, ಇದು ವೈರ್ಗಳ ಕಾರ್ಯಗಳನ್ನು ಸ್ಥಗಿತಗೊಳಿಸುವುದರ ಜೊತೆಗೆ, ಬೆಂಕಿಕಿ ಡಿಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದರು. ಆ ಸಮಯದಲ್ಲಿ, ಕಿಯಾ ಡೀಲರ್ಗಳಿಗೆ ವಾಹನಗಳ ಸವೆತಕ್ಕಾಗಿ ಪರೀಕ್ಷಿಸಲು ಮತ್ತು ಬೆಂಕಿಯ ಅಪಾಯವನ್ನು ತಗ್ಗಿಸಲು ಕೆಲವು ಭಾಗಗಳನ್ನು ಬದಲಾಯಿಸಲು ಸೂಚಿಸಲಾಯಿತು.

ಅದೇ ಗುಂಪಿನ ಸ್ಪೋರ್ಟೇಜ್ಗಳನ್ನು 2016 ರಲ್ಲಿಯೇ ಒಮ್ಮೆ ಹಿಂಪಡೆಯಲಾಗಿತ್ತಾದರೂ, ಇಲ್ಲಿಯವರೆಗೆ ಆ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಸಮಸ್ಯೆ ಕಂಡುಬಂದಿರುವ ವಾಹನಗಳ ಮಾಲೀಕರು ಸಂಪರ್ಕಿಸಲು ಸಂಖ್ಯೆಯೊಂದನ್ನು ನೀಡಿರುವ ಕಂಪನಿ, ಅದನ್ನು ಸಂಪರ್ಕಿಸಿದರೆ ಉಚಿತವಾಗಿ ದುರಸ್ತಿ ಮಾಡಿಕೊಡುವ ಭರವಸೆ ನೀಡಿದೆ.

ಇದನ್ನೂ ಓದಿ: ನವೆಂಬರ್‌ನಲ್ಲಿ ಬಿಡುಗಡೆಯಾಗಲಿವೆ ಈ ಕಾರುಗಳು: ಎಲೆಕ್ಟ್ರಿಕ್, CNG ಮಾದರಿಗೆ ಬೇಡಿಕೆ

ಆದರೆ ನಂತರದ ವರ್ಷಗಳಲ್ಲಿ, ಕಿಯಾ ಮತ್ತು ಹ್ಯುಂಡೈನ ಇತರ ಮಾದರಿಗಳಲ್ಲಿ HECU ದೋಷಗಳನ್ನು ಗುರುತಿಸಲಾಗಿದೆ.
ಈ ಸಮಸ್ಯೆಗಾಗಿ 2020 ರಲ್ಲಿ ಹ್ಯುಂಡೈ (Hyundai) ಮತ್ತು ಕಿಯಾ (kia)  210 ಮಿಲಿಯನ್ ಡಾಲರ್ ಮೊತ್ತದ ದಂಡ ಪಾವತಿಸಿದ್ದರೂ, ಎಂಜಿನ್ ಸಮಸ್ಯೆಗಳಿರುವ ವಾಹನಗಳನ್ನು ಮರುಪಡೆಯಲು ವಿಳಂಬ ಮಾಡುತ್ತಿದೆ.

2021 ರಲ್ಲಿ, ಅವರು HECU-ಸಂಬಂಧಿತ ಎಂಜಿನ್ ಬೆಂಕಿಯ ಸಮಸ್ಯೆ ಹಿನ್ನೆಲೆಯಲ್ಲಿ 4,40,000 ವಾಹನಗಳನ್ನು ಹಿಂಪಡೆದುಕೊಂಡರು. ಅದೇವರ್ಷದ ಫೆಬ್ರವರಿಯಲ್ಲಿ, ಅವರು ಇದೇ ರೀತಿಯ ಸಮಸ್ಯೆಗಳ ಮೇಲೆ ಮತ್ತೊಮ್ಮೆ 4,84,000 ವಾಹನಗಳನ್ನು ಹಿಂತೆಗೆದುಕೊಂಡರು. ಸೆಪ್ಟೆಂಬರ್ನಲ್ಲಿ ಕಿಯಾ ಅಧಿಕಾರಿಗಳು 15 ವಾಹನಗಳನ್ನು "ಸಂಭಾವ್ಯ ಉಷ್ಣ ಹಾನಿ" ಅನುಭವಿಸುತ್ತಿರುವುದನ್ನು ಗುರುತಿಸಿದ್ದಾರೆ. 

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರಿನಲ್ಲಿ ಹೊಸ ದಾಖಲೆ ಬರೆದ ಟಾಟಾ, 2,000 ಎಕ್ಸ್‌ಪ್ರೆಸ್ ಟಿ ಆರ್ಡರ್ ಮಾಡಿದ ಪ್ರತಿಷ್ಠಿತ ಕಂಪನಿ!

ಕಿಯಾ ಕಂಪನಿ ಭಾರತದಲ್ಲಿ ಕೂಡ ಉತ್ತಮ ಮಾರುಕಟ್ಟೆ ಹೊಂದಿದೆ. ಮೊದಲು ಬಿಡುಗಡೆಯಾದ ಕಿಯಾ ಸೆಲ್ಟೋಸ್ ಮತ್ತು ಕಿಯಾ ಸೋನೆಟ್ ಎಸ್ಯುವಿ ವಲಯದಲ್ಲಿಯೇ ಹೊಸ ಕ್ರಾಂತಿ ಮೂಡಿಸಿದ್ದವು. ಕೈಗೆಟಕುವ ದರದಲ್ಲಿ ಐಷಾರಾಮಿ ಸೌಲಭ್ಯ ಒದಗಿಸುವ ಕಂಪನಿ ಎಂದು ಜನರು ಈ ಎಸ್ಯುವಿಗಳ ಖರೀದಿಗೆ ಮುಗಿಬಿದ್ದಿದ್ದರು. ನಂತರ ಬಿಡುಗಡೆಯಾದ ಕಿಯಾ ಕಾರ್ನಿವಲ್ ಅಷ್ಟೇನು ಜನಪ್ರಿಯತೆ ಗಳಿಸಲಿಲ್ಲ. ನಂತರ ಬಿಡುಗಡೆಯಾದ ಕಿಯಾ ಕ್ಯಾರೆನ್ಸ್ ಮತ್ತೊಮ್ಮೆ ಭಾರಿ ಜನಪ್ರಿಯತೆ ಗಳಿಸಿತು. ಬಿಡುಗಡೆಯಾದ ಒಂದು ತಿಂಗಳಲ್ಲಿ ದಾಖಲೆಯ ಬುಕಿಂಗ್ಗಳನ್ನು ಪಡೆದುಕೊಂಡಿದೆ. ಈಗ ಕಿಯಾ ಕ್ಯಾರೆನ್ಸ್ ಎಲೆಕ್ಟ್ರಿಕ್ ವಲಯದ ಕಡೆಗೆ ಗಮನ ಹರಿಸಿದ್ದು, ಈ ವರ್ಷ ಹಲವು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. 

Follow Us:
Download App:
  • android
  • ios