Asianet Suvarna News Asianet Suvarna News

Russia Ukraine Crisis: ಈವರೆಗೂ ಉಕ್ರೇನ್ ದೇಶ ತೊರೆದ 3.68 ಲಕ್ಷ ಜನ!

ಉಕ್ರೇನ್ ಹಾಗೂ ರಷ್ಯಾ ನಡುವಿನ ಭೀಕರ ಯುದ್ಧ

ಈವರೆಗೂ 3.68 ಲಕ್ಷ ಉಕ್ರೇನ್ ಅನ್ನು ತೊರೆದಿದ್ದಾರೆ

ಮಾಹಿತಿ ನೀಡಿದ ವಿಶ್ವಸಂಸ್ಥೆಯ ರೆಫ್ಯುಜಿ ಏಜೆನ್ಸಿ

368000 people had fled Ukraine since Russia invaded on Thursday says UN refugee agency san
Author
Bengaluru, First Published Feb 27, 2022, 6:14 PM IST | Last Updated Feb 28, 2022, 12:04 AM IST

ವಾಷಿಂಗ್ಟನ್ (ಫೆ.27): ರಷ್ಯಾ (Russia) ದೇಶವು ಉಕ್ರೇನ್ ನ (Ukraine) ಮೇಲೆ ಆಕ್ರಮಣ ಮಾಡಿದ ಬಳಿಕ ಈವರೆಗೂ 3.68 ಲಕ್ಷ ಮಂದಿ ದೇಶವನ್ನು ತೊರೆದಿದ್ದಾರೆ (fled Ukraine) ಎಂದು ವಿಶ್ವಸಂಸ್ಥೆ (UN)  ಭಾನುವಾರ ಮಾಹಿತಿ ನೀಡಿದೆ. ಈವರೆಗಿನ ಮಾಹಿತಿಯ ಪ್ರಕಾರ ಒಟ್ಟು 368,000 ಮಂದಿ ಯುದ್ಧಪೀಡಿತ ದೇಶವನ್ನು ಬಿಟ್ಟು ಪಲಾಯನ ಮಾಡಿದ್ದು, ಈ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ ಎಂದು ಯುನೈಟೆಡ್ ನೇಷನ್ಸ್ ಹೈ ಕಮಿಷನ್ ಫಾರ್ ರೆಫ್ಯೂಜೀಸ್ ಅಥವಾ ಯುಎನ್ಎಚ್ ಸಿಆರ್ (UNHCR) ತನ್ನ ಟ್ವೀಟ್ ನಲ್ಲಿ ತಿಳಿಸಿದೆ. ರಾಷ್ಟ್ರೀಯ ಅಧಿಕಾರಿಗಳು ಲಭ್ಯವಿರುವ ಡೇಟಾವನ್ನು ನೀಡಿದ ಬಳಿಕ ಈ ಸಂಖ್ಯೆಯನ್ನು ಅಂದಾಜು ಮಾಡಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ದೇಶ ತೊರೆದ ಹೆಚ್ಚಿನ ಜನರ ಪೈಕಿ ಬಹುತೇಕರು ದೇಶದ ಪಕ್ಕದಲ್ಲಿಯೇ ಇರುವ ಪೋಲೆಂಡ್ ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ತಿಳಿಸಿದೆ. ಗುರುವಾರ ರಷ್ಯಾ ದೇಶವು ಉಕ್ರೇನ್ ನ ಮೇಲೆ ಆಕ್ರಮಣ ಮಾಡಿದ ದಿನದಿಂದ ಅಂದಾಜು 1.56 ಲಕ್ಷ ಮಂದಿ ಪೋಲೆಂಡ್ ದೇಶದ ಗಡಿಯನ್ನು ದಾಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಲೆಂಡ್ ದೇಶದ ಗಡಿ ಕಾವಲು ಪಡೆದ ಶನಿವಾರ ಒಂದೇ ದಿನ ಉಕ್ರೇನ್‌ನಿಂದ ಸುಮಾರು 77,300 ಜನರು ಬಂದಿದ್ದಾರೆ ಎಂದು ತಿಳಿಸಿದೆ. ನಿರಾಶ್ರಿತರು ಕಾರುಗಳಲ್ಲಿ, ತುಂಬಿದ ರೈಲುಗಳಲ್ಲಿ ಮತ್ತು ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಪೋಲೆಂಡ್ ದೇಶದಲ್ಲಿ ಹೋಗಲು ಎಲ್ಲಿಯೂ ವಿಳಾಸವಿಲ್ಲದೇ ಇದ್ದವರು, ಎನ್ ಜಿಓಗಳು ಹಾಗೂ ಸ್ಥಳೀಯ ನಾಗರೀಕರ ಸಹಾವನ್ನು ನಂಬಬಹುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇನ್ನುಳಿದವರು ಮಾಲ್ಡೋವಿಯಾ, ಹಂಗೆರಿ, ಸ್ಲೋವಾಕಿಯಾ ಹಾಗೂ ರೊಮೆನಿಯಾ ದೇಶಗಳಿವೆ ವಲಸೆ ಹೋಗಿದ್ದಾರೆ. 


ಖಾರ್ಕೀವ್ ನಗರದ ಮೇಲೆ ಉಕ್ರೇನ್ ನಿಯಂತ್ರಣ: ದೇಶದ ಎರಡನೇ ಅತಿದೊಡ್ಡ ನಗರದಲ್ಲಿ ರಷ್ಯಾದ ಸೈನಿಕರೊಂದಿಗೆ ಬೀದಿ ಕಾದಾಟದ ನಂತರ ಉಕ್ರೇನಿಯನ್ ಪಡೆಗಳು ಭಾನುವಾರ ಖಾರ್ಕಿವ್‌ನ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿವೆ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾರೆ. "ಖಾರ್ಕಿವ್ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ" ಎಂದು ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ಟೆಲಿಗ್ರಾಮ್‌ನಲ್ಲಿ ಮೂಲಕ ಹೇಳಿದ್ದಾರೆ.

Russia-Ukraine Crisis: ಈವರೆಗೆ 709 ಜನರನ್ನು ಏರ್‌ಲಿಫ್ಟ್ ಮಾಡಿದೆ ಭಾರತ
ಖಾರ್ಕೀವ್ ನಗರದಿಂದ ರಷ್ಯಾದ ಸೇನಾಪಡೆಗಳನ್ನು ನಮ್ಮ ಸೈನಿಕರು ಹೊರಹಾಕುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಸಾರ್ವಭೌಮ ರಾಷ್ಟ್ರದ ಮೇಲೆ ರಷ್ಯಾ ದೇಶದ ಆಕ್ರಮಣದ ಕುರಿತು ಉಕ್ರೇನ್ ದೇಶವು ನೆದರ್ಲೆಂಡ್ ನ ಹೇಗ್ ನಗರದಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದೆ. ರಷ್ಯಾದ ಪಡೆಗಳು ಫಿರಂಗಿ ಮತ್ತು ಕ್ರೂಸ್ ಕ್ಷಿಪಣಿಗಳೊಂದಿಗೆ ಉಕ್ರೇನಿಯನ್ ನಗರಗಳನ್ನು ಮೇಲೆ ದಾಳಿ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. 

Russia Ukraine Crisis: ಉಕ್ರೇನ್‌ನಿಂದ ಭಾರತೀಯರ ರಕ್ಷಣೆ ನಮ್ಮ ಮೊದಲ ಆದ್ಯತೆ: ಪ್ರಧಾನಿ ಮೋದಿ
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಬೆಲಾರಸ್ ನಲ್ಲಿ ಕದಮ ವಿರಾಮ ಸಭೆಯ ಮಾಸ್ಕೋದ ಪ್ರಸ್ತಾಪವನ್ನು ತಿರಸ್ಕರಿಸಿದರು, ಇದು ಉಕ್ರೇನ್ ಮೇಲೆ ಆಕ್ರಮಣ ಮಾಡಲು ರಷ್ಯಾದ ಪಡೆಗಳಿಗೆ ಮತ್ತಷ್ಟು ಅವಕಾಶ ಮಾಡಿಕೊಟ್ಟಿತು. ಉಕ್ರೇನ್ ದೇಶವು, ವಾರ್ಸಾ, ಬ್ರಾಟಿಸ್ಲಾವಾ, ಬುಡಾಪೆಸ್ಟ್, ಇಸ್ತಾನ್‌ಬುಲ್ ಮತ್ತು ಬಾಕುಗಳನ್ನು ಮಾತುಕತೆಗಳಿಗೆ ಸಂಭವನೀಯ ಪರ್ಯಾಯ ಸ್ಥಳಗಳಾಗಿ ಪ್ರಸ್ತಾಪಿಸಿದೆ ಎಂದು ಝೆಲೆನ್ಸ್ಕಿ ಹೇಳಿದರು.  ಬೆಲಾರಸ್ ದೇಶವು, ಉಕ್ರೇನ್ ಮೇಲಿನ ಆಕ್ರಮಣದ ವಿಚಾರದಲ್ಲಿ ರಷ್ಯಾ ದೇಶಕ್ಕೆ ಸಾಥ್ ನೀಡಿದೆ.

ಉಕ್ರೇನ್ ನಿಂದ ಅಂದಾಜು 10 ಲಕ್ಷ ನಿರಾಶ್ರಿತರು ಆಶ್ರಯ ಬೇಡಿ ಯುರೋಪ್ ರಾಷ್ಟ್ರಗಳಿಗೆ ಬರಬಹುದು ಎಂದು ಜರ್ಮನಿ ಹೇಳಿದೆ. ಆ ನಿಟ್ಟಿನಲ್ಲಿ ಉಕ್ರೇನ್ ನ ಗಡಿ ದೇಶಗಳಾದ ಬಲ್ಗೇರಿಯಾ, ರೊಮೆನಿಯಾ, ಹಂಗೆರಿ ದೇಶಗಳಿಗೆ ಸಹಾಯ ಹಸ್ತವನ್ನು ಚಾಚಿದೆ. ಇನ್ನು ಈ ದೇಶಗಳೂ ಕೂಡ ಉಕ್ರೇನ್ ನ ನಿರಾಶ್ರಿತರಿಗೆ ಯಾವುದೇ ನಿಯಮಗಳಿಲ್ಲದೆ ದೇಶಕ್ಕೆ ಬರಲು ಅನುವು ಮಾಡಿಕೊಟ್ಟಿದೆ.

Latest Videos
Follow Us:
Download App:
  • android
  • ios