Asianet Suvarna News Asianet Suvarna News

3 ದಿನ ಅಮೆರಿಕದಲ್ಲಿ ನಾವಿಕ ವಿಶ್ವ ಕನ್ನಡ ಸಮ್ಮೇಳನ

  • ವಿಶ್ವಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ಸತತ 3 ದಿನಗಳ ಕಾಲ ರಂಜಿಸಲು ನಾವಿಕ 6ನೇ ವಿಶ್ವ ಕನ್ನಡ ಸಮಾವೇಶ
  •  ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. ಇಂದಿನಿಂದ 29ರ ವರೆಗೆ ಆನ್‌ಲೈನ್‌ನಲ್ಲಿ ಕಾರ್ಯಕ್ರಮ 
3 days US NAVIKa kannada sammelan   from 27  august 2021 snr
Author
Bengaluru, First Published Aug 27, 2021, 7:52 AM IST

ಫೀನಿಕ್ಸ್‌ (ಅಮೆರಿಕ): ವಿಶ್ವಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ಸತತ 3 ದಿನಗಳ ಕಾಲ ರಂಜಿಸಲು ನಾವಿಕ 6ನೇ ವಿಶ್ವ ಕನ್ನಡ ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. ಇಂದಿನಿಂದ 29ರ ವರೆಗೆ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಅಮೆರಿಕದ ಕರಾವಳಿ ಕಾಲಮಾನ ಸಂಜೆ 6ಕ್ಕೆ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷ ವಲ್ಲೀಶ ಶಾಸ್ತಿ್ರ ಮಾರ್ಗದರ್ಶನದಲ್ಲಿ 200ಕ್ಕೂ ಹೆಚ್ಚು ಸದಸ್ಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ದೇಶಗಳ 80ಕ್ಕೂ ಹೆಚ್ಚು ಕನ್ನಡ ಸಂಘಗಳು, ಸುಮಾರು 175 ಕಲಾವಿದರು, ತಂತ್ರಜ್ಞರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶವು ಕನ್ನಡ ಸಾಹಿತ್ಯ, ಸಂಸ್ಕೃತಿ, ನಾಟಕಗಳು, ಕಲಾಪ್ರದರ್ಶನಗಳು, ಶಾಸ್ತ್ರೀಯ ಮತ್ತು ಫ್ಯೂಷನ್‌ ಸಂಗೀತ, ಕನ್ನಡ ಚಲನಚಿತ್ರ ಗೀತೆಗಳು, ಕಥಾ ಸ್ಪರ್ಧೆ, ಕವನ ಸ್ಪರ್ಧೆಗಳಿಗೆ ಸಾಕ್ಷಿಯಾಗಲಿದೆ.

ನಾವಿಕ ಸಮ್ಮೇಳನಕ್ಕೆ ಸಕಲ ಸಿದ್ಧತೆ, ಸಂಗೀತ, ನೃತ್ಯ, ಹಾಸ್ಯದ ಹೂರಣ!

ಕನ್ನಡದ ಖ್ಯಾತ ಗಾಯಕ ಹೇಮಂತ್‌, ಕ್ಲಾಸಿಕ್‌ ಫ್ಯೂಷನ್‌ ಸಂಗೀತಗಾರ ಮಹೇಶ್‌ ರಾಘವನ್‌, ಪಂಪ ನೃತ್ಯ ಅಕಾಡೆಮಿ ನಿರ್ದೇಶಕಿ ನಿರ್ಮಲಾ ಮಾಧವ್‌ ಮತ್ತು ತಂಡ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಮಾಸ್ಟರ್‌ ರಾಹುಲ್‌ ವೆಲ್ಲಾಲ್‌, ಹಫೀಜ್‌ ಖಾನ್‌ ಮತ್ತು ರಯೀಸ್‌ ಖಾನ್‌ ಕಲಾ ಪ್ರದರ್ಶನಗಳನ್ನು ನೀಡಲಿದ್ದಾರೆ.

ಈಗಾಗಲೇ ನಡೆದಿರುವ ನಾಟಕಗಳು, ಛಾಯಾಗ್ರಹಣ ಸ್ಪರ್ಧೆ, ಕನ್ನಡ ಚಲನಚಿತ್ರ ಗೀತೆಗಳ ಅಂತ್ಯಾಕ್ಷರಿ, ಅಡುಗೆ, ಹಾಡುಗಾರಿಕೆ ಸ್ಪರ್ಧಾ ವಿಜೇತರ ವಿಡಿಯೋ, ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌, ಸುಜಿತ್‌ ಸೋಮಸುಂದರ್‌, ಶಾಂತಾ ರಂಗ ಸ್ವಾಮಿ ಮತ್ತು ಅಮೆರಿಕದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಸಿಂಧು ಶ್ರೀಹರ್ಷ ಅವರ ಸಂದರ್ಶನ ಪ್ರಸಾರವಾಗಲಿದೆ.

ನಾವಿಕ ಸಮಾವೇಶವನ್ನು ವೀಕ್ಷಿಸಲು  https://www.nvks21.com/ ನಲ್ಲಿ ನೋಂದಾಯಿಸಿಕೊಳ್ಳಬಹುದು.

Follow Us:
Download App:
  • android
  • ios