166 ಜನರ ಬಲಿಪಡೆದ 2008ರ 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಮಹತ್ವದ ಯಶಸ್ಸು ದೊರಕಿದ್ದು, ಭಾರತಕ್ಕೆ ಈ ಪ್ರಕರಣದಲ್ಲಿ ಬೇಕಾಗಿದ್ದ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವುರ್ ರಾಣಾನನ್ನು (Tahawur Rana) ಗಡೀಪಾರು ಮಾಡಲು ಅಮೆರಿಕದ ಕ್ಯಾಲಿಫೋರ್ನಿಯಾ ಕೋರ್ಟ್ (California court) ಒಪ್ಪಿಗೆ ಸೂಚಿಸಿದೆ.
ನ್ಯೂಯಾರ್ಕ್: 166 ಜನರ ಬಲಿಪಡೆದ 2008ರ 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಮಹತ್ವದ ಯಶಸ್ಸು ದೊರಕಿದ್ದು, ಭಾರತಕ್ಕೆ ಈ ಪ್ರಕರಣದಲ್ಲಿ ಬೇಕಾಗಿದ್ದ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವುರ್ ರಾಣಾನನ್ನು (Tahawur Rana) ಗಡೀಪಾರು ಮಾಡಲು ಅಮೆರಿಕದ ಕ್ಯಾಲಿಫೋರ್ನಿಯಾ ಕೋರ್ಟ್ (California court) ಒಪ್ಪಿಗೆ ಸೂಚಿಸಿದೆ. ಮುಂದಿನ ತಿಂಗಳು ಅಮೆರಿಕಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಳ್ಳುವ ಮೊದಲು ಈ ತೀರ್ಪು ಬಂದಿರುವುದು ಗಮನಾರ್ಹ.
ಈ ಬಗ್ಗೆ ತೀರ್ಪು ನೀಡಿರುವ ಕ್ಯಾಲಿಫೋರ್ನಿಯಾ ಜೊಲ್ಲಾ ಕೋರ್ಟ್ (California Jolla Court) ನ್ಯಾಯಾಧೀಶೆ ಜಾಕ್ವೆಲಿನ್ ಚೂಲ್‌ಜಿಯಾನ್ (Jacqueline Chooljian), ‘ಭಾರತ ಹಾಗೂ ಅಮೆರಿಕ ನಡುವಿನ ಗಡೀಪಾರು ಒಪ್ಪಂದದ ಅನ್ವಯ ರಾಣಾನನ್ನು ಗಡೀಪಾರು ಮಾಡಬೇಕು ಎಂದು ಆದೇಶಿಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ರಾಣಾನ ಪಾತ್ರ ಇರುವ ಬಗ್ಗೆ ನನ್ನ ಮುಂದೆ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವುಗಳಲ್ಲಿನ ಅಂಶಗಳು ಸಮರ್ಪಕವಾಗಿವೆ ಎನ್ನಿಸುತ್ತವೆ. ಹೀಗಾಗಿ ಗಡೀಪಾರು ಕೋರಿಕೆ ಮಾನ್ಯ ಮಾಡುತ್ತೇವೆ’ ಎಂದಿದೆ.
ಪಾಕಿಸ್ತಾನದಲ್ಲೇ ಕುಳಿತು ಪಾಕ್ ವಿರುದ್ಧ ಗುಡುಗಿದ ಜಾವೇದ್ ಅಖ್ತಾರ್; ವಿಡಿಯೋ ವೈರಲ್
ರಾಣಾ ಈಗಾಗಲೇ ಲಾಸ್ ಏಂಜಲೀಸ್ ಫೆಡರಲ್ ಜೈಲಿನಲ್ಲಿ (Los Angeles Federal Jail) ಬಂಧಿಯಾಗಿದ್ದಾನೆ. ಈತನ ಗಡೀಪಾರಿಗೆ ಭಾರತ 2010ರಲ್ಲೇ ಕೋರಿತ್ತು. ಈಗಿನ ಬೈಡೆನ್ ಸರ್ಕಾರ ಭಾರತದ ಕೋರಿಕೆ ಬೆಂಬಲಿಸಿತ್ತು. ತೀರ್ಪಿಗೆ ಹರ್ಷ ವ್ಯಕ್ತಪಡಿಸಿರುವ ಅಮೆರಿಕ ಸರ್ಕಾರ, ‘ಭಯೋತ್ಪಾದನೆಯ ಮೂಲೋತ್ಪಾಟನೆಗೆ ಅಮೆರಿಕ ಸರ್ಕಾರ ಬದ್ಧವಾಗಿದೆ’ ಎಂದಿದೆ.
ರಾಣಾಗೆ ಗಲ್ಲಾಗಲಿ:
ರಾಣಾ ಗಡೀಪಾರು ಆದೇಶ ಸ್ವಾಗತಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Chief Minister Devendra Fadnavis), ‘ರಾಣಾನ ವಿಚಾರಣೆ ಬಳಿಕ 26/11 ಮುಂಬೈ ದಾಳಿಯಲ್ಲಿ (Mumbai terror attack case) ಪಾಕಿಸ್ತಾನದ ಪಾತ್ರ ಇರುವುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ’ ಎಂದಿದ್ದಾರೆ. 26/11 ಕೇಸಿನಲ್ಲಿ ಸರ್ಕಾರದ ಪರ ವಾದಿಸಿದ್ದ ವಕೀಲ ಉಜ್ವಲ್ ನಿಕಂ ಕೂಡ, ‘ಇದು ಭಾರತಕ್ಕೆ ಸಿಕ್ಕ ಯಶ’ ಎಂದಿದ್ದಾರೆ.
ಮುಂಬೆ ದಾಳಿಯ ಸಂತ್ರಸ್ತರು ಪ್ರತಿಕ್ರಿಯಿಸಿ, ‘ರಾಣಾಗೆ ಗಲ್ಲು ಶಿಕ್ಷೆ ಆಗಬೇಕು. ಯಾರೂ ಮತ್ತೆ ಇಂಥ ಕೃತ್ಯ ಎಸಗಬಾರದು ಎಂಬ ಸಂದೇಶವನ್ನು ಶಿಕ್ಷೆಯು ಸಾರಬೇಕು. ಏಕೆಂದರೆ ಇಡೀ ಕೃತ್ಯದ ಹಿಂದೆ ಆತನ ಪಾತ್ರವಿತ್ತು’ ಎಂದು ಆಗ್ರಹಿಸಿದ್ದಾರೆ.
ಮುಂಬೈ ದಾಳಿ ಕರಾಳ ದಿನದಂದು ಸ್ಫೋಟಕ್ಕೆ ಸಂಚು?
ಮುಂಬೈ ದಾಳಿಯಲ್ಲಿ ತಹಾವುರ್ ರಾಣಾ ಪಾತ್ರವೇನು?
ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿಯಾಗಿದ್ದ (Canadian businessman Tahawur Rana)ತಹಾವುರ್ ರಾಣಾ 26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತದ ಕೋರಿಕೆಯ ಮೇರೆಗೆ ಅಮೆರಿಕದಲ್ಲಿ 2008ರಲ್ಲೇ ಬಂಧಿತನಾಗಿದ್ದ. ದಾಳಿಗೆ ಸಂಬಂಧಿಸಿದಂತೆ ಲಷ್ಕರ್ ಎ ತೊಯ್ಬಾ (Lashkar-e-Taiba militants) ಉಗ್ರರ ಜತೆ ಸಂಪರ್ಕ ಹೊಂದಿದ್ದ ಪ್ರಮುಖ ಆರೋಪಿ ಡೇವಿಡ್ ಹೆಡ್ಲಿ ಹಾಗೂ ರಾಣಾ ಬಾಲ್ಯ ಸ್ನೇಹಿತರು. ದಾಳಿಗೆ ಹೆಡ್ಲಿ ಹಾಗೂ ಲಷ್ಕರ್ ಉಗ್ರರು ಸಂಚು ರೂಪಿಸುತ್ತಿದ್ದಾಗ ಹೆಡ್ಲಿಗೆ ರಾಣಾ ರಕ್ಷಣೆ ನೀಡಿದ್ದ. ಹೆಡ್ಲಿ ಎಲ್ಲಿ ಸಭೆ ಮಾಡುತ್ತಿದ್ದಾನೆ? ದಾಳಿಗೆ ಹೇಗೆ ಸಂಚು ರೂಪಿಸುತ್ತಿದ್ದಾನೆ ಎಂಬ ಎಲ್ಲ ಮಾಹಿತಿ ರಾಣಾಗೆ ಗೊತ್ತಿತ್ತು. ಹೀಗಾಗಿ ಭಾರತ ಹಾಗೂ ಅಮೆರಿಕ ಸರ್ಕಾರಗಳು ಈತನೂ ದಾಳಿಯ ಪ್ರಮುಖ ರೂವಾರಿ ಎಂದು ವಾದಿಸಿದ್ದವು.
ಮುಂಬೈ ದಾಳಿ ದಿನಾಂಕವೇ ರಿಯಾಜ್ ಬೈಕ್ ನಂಬರ್, ಕನ್ಹಯ್ಯನ ಕತ್ತು ಕುಯ್ದ ಕತ್ತಿಯನ್ನು ತಾನೇ ತಯಾರಿಸಿದ್ದ!
