Asianet Suvarna News Asianet Suvarna News

ಮುಂಬೈ ದಾಳಿ ಕರಾಳ ದಿನದಂದು ಸ್ಫೋಟಕ್ಕೆ ಸಂಚು?

  • ಮುಂಬೈ ದಾಳಿ ಕರಾಳ ದಿನದಂದು ಸ್ಫೋಟಕ್ಕೆ ಸಂಚು?
  • ನವೆಂಬರ್‌ಗೆ ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಪ್ಲ್ಯಾನ್‌ ಮಾಡಿದ್ದ ಶಾರೀಕ್‌?
On the day of the Mumbai attack, the blast was planned rav
Author
First Published Nov 27, 2022, 7:48 AM IST

ಮಂಗಳೂರು (ನ.27) : ಮುಂಬೈ ದಾಳಿಯ ಕರಾಳ ನೆನಪಿನ ಸಂದರ್ಭದಲ್ಲೇ ರಾಜ್ಯದ ಕರಾವಳಿಯಲ್ಲೂ ವಿಧ್ವಂಸಕ ಕೃತ್ಯ ನಡೆಸಲು ಶಂಕಿತ ಉಗ್ರ ಮಹಮ್ಮದ್‌ ಶಾರೀಕ್‌ ಯೋಜನೆ ರೂಪಿಸಿದ್ದ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಆತ ಬಾಂಬ್‌ ಹೊತ್ತು ಮಂಗಳೂರಿಗೆ ಬರುತ್ತಿದ್ದ ಎನ್ನಲಾಗಿದೆ.

2008ರ ನವೆಂಬರ್‌ 26ರಂದು ಮುಂಬೈ ಮೇಲೆ ಉಗ್ರರಿಂದ ಭಾರೀ ದಾಳಿ ನಡೆದಿತ್ತು. ಈ ದಾಳಿ ಭಾರತೀಯರ ಮನಸ್ಸಿನ ಮೇಲೆ ಮಾಸದ ಗಾಯ ಮಾಡಿತ್ತು. ಶಂಕಿತ ಉಗ್ರ ಶಾರೀಕ್‌ ಕೂಡ ನ.19ರಂದು ಕರಾವಳಿಯಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿ ಆತಂಕ ಸೃಷ್ಟಿಸುವ ಸಂಚು ರೂಪಿಸಿದ್ದ ಎಂದು ಹೇಳಲಾಗುತ್ತಿದೆ. ಆ ಬಳಿಕ ಸರಣಿ ಸ್ಫೋಟ ನಡೆಸುವ ಯೋಜನೆಯೂ ಆತನಿಗಿತ್ತು ಎನ್ನಲಾಗಿದೆ. ಆತ ನೆಲೆಸಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿ ಸಾಕಷ್ಟುಪ್ರಮಾಣದಲ್ಲಿ ಬಾಂಬ್‌ ತಯಾರಿಕಾ ಸಾಮಗ್ರಿ ಸಿಕ್ಕಿರುವುದು ಮತ್ತು ಮೂರು ಕುಕ್ಕರ್‌ ಪತ್ತೆಯಾಗಿರುವುದು ಇದಕ್ಕೆ ಪುಷ್ಟಿನೀಡುತ್ತವೆ.

ಪಾಕ್‌ ಮೂಲದ ಭಾರತದ Most Wanted Terrorist ಅನ್ನು ಕಪ್ಪು ಪಟ್ಟಿಗೆ ಸೇರಿಸುವ ಮನವಿಗೆ ಚೀನಾ ಮತ್ತೆ ನಿರ್ಬಂಧ

ಮುಂಬೈ ದಾಳಿಯ ವೇಳೆ ಉಗ್ರ ಕಸಬ್‌ನ ಹಿಂದುವಿನ ರೀತಿಯಲ್ಲಿ ಕೈಗೆ ದಾರ ಕಟ್ಟಿಕೊಂಡಿದ್ದ. ಅದೇ ರೀತಿ ಯಾರಿಗೂ ಅನುಮಾನ ಬಾರದಂತೆ ಶಾರೀಕ್‌ ಕೂಡ ಕೈಗೆ ಕಪ್ಪು ದಾರ, ಮೈಮೇಲೆ ಕೇಸರಿ ಶಾಲು ಇಟ್ಟುಕೊಂಡಿದ್ದಲ್ಲದೆ, ದಾಖಲೆಗಳಲ್ಲಿ ಹಿಂದೂ ಎಂಬಂತೆ ಬಿಂಬಿಸಿಕೊಂಡಿದ್ದ.

ಸಾವರ್ಕರ್‌ ವಿವಾದದ ವೇಳೆಯೇ ಸಂಚು: ರಾಜ್ಯದಲ್ಲಿ ತಲೆದೋರಿದ ಸ್ವಾತಂತ್ರ್ಯವೀರ ಸಾವರ್ಕರ್‌ ವಿವಾದ ಸಂದರ್ಭದಲ್ಲಿ ನಿಷೇಧಿತ ಪಿಎಫ್‌ಐ(ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಸಂಘಟನೆಯ ಮುಖಂಡರನ್ನು ಶಾರೀಕ್‌ ಭೇಟಿ ಮಾಡಿದ್ದ. ಸಾವರ್ಕರ್‌ ವಿವಾದ ಉಂಟಾದಾಗಲೇ ರಾಜ್ಯಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಚರ್ಚೆ ನಡೆಸಿದ್ದ ಎನ್ನುವ ಗಂಭೀರ ಸಂಗತಿ ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ಅದರೆ ಆ ಹೊತ್ತಿಗೆ ಮಾಝ್‌ ಮುನೀರ್‌ ಸೇರಿ ಆತನ ಉಳಿದ ಸಹಚರರು ಜೈಲು ಪಾಲಾದ ಕಾರಣ ಈತನಿಗೆ ದಾಳಿ ನಡೆಸಲು ಸಾಧ್ಯವಾಗಿರಲಿಲ್ಲ. ಟಿಪ್ಪು, ಸಾವರ್ಕರ್‌ ಸೇರಿ ಸಾಕಷ್ಟುವಿವಾದಗಳ ಬಗ್ಗೆ ಆತ ಅತಿಯಾಗಿ ತಲೆಕೆಡಿಸಿಕೊಂಡಿದ್ದ. ಈತನ ಸಹಚರರು ಜೈಲು ಸೇರಿದ್ದರಿಂದ ಕೊನೆ ತಾನೊಬ್ಬನೇ ಏಕಾಂಗಿಯಾಗಿ ವಿಧ್ವಂಸಕ ಕೃತ್ಯ ನಡೆಸಲು ನಿರ್ಧರಿಸಿದ್ದ. ವಿದೇಶದಲ್ಲಿರುವ ತನ್ನ ಸಹಚರರಾದ ಮತೀನ್‌ ಮತ್ತು ಅರಾಫತ್‌ ಅಲಿ ನಿರ್ದೇಶನದಂತೆ ಕುಕ್ಕರ್‌ ಬಾಂಬ್‌ನೊಂದಿಗೆ ಮಂಗಳೂರಿಗೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ.

ಶಾರೀಕ್‌ ಪತ್ತೆಗೆ ಸಮನ್ಸ್‌ ಜಾರಿ

ಮಂಗಳೂರು ಗೋಡೆ ಬರಹ ಕೇಸಿನಲ್ಲಿ ಕೋರ್ಚ್‌ಗೆ ಹಾಜರಾಗದೆ ತಲೆಮರೆಸಿದ್ದ ಶಂಕಿತ ಉಗ್ರ ಶಾರೀಕ್‌ಗೆ ಸಮನ್ಸ್‌ ಜಾರಿಯಾಗಿತ್ತು. ಆದರೆ ಆತ ಷರತ್ತುಬದ್ಧ ಜಾಮೀನು ಉಲ್ಲಂಘಿಸಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಪೊಲೀಸ್‌ ಠಾಣೆಗಳಲ್ಲೂ ತನ್ನ ಹಾಜರಾತಿಯನ್ನು ದೃಢೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು ಕೋರ್ಚ್‌ ಆತನಿಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿತ್ತು. ಆದರೆ ಆತ ಪೊಲೀಸರ ಕೈಗೆ ಸಿಗದಂತೆ ಓಡಾಡುತ್ತಿದ್ದ. ಇದೇ ಕೇಸಲ್ಲಿ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಮಾಸ್ಟರ್‌ ಮೈಂಡ್‌ ಅರಾಫತ್‌ ಅಲಿಗೂ ವಾರೆಂಟ್‌ ಜಾರಿಯಾಗಿತ್ತು. ಆದರೆ ಆತ ಸೌದಿಗೆ ತೆರಳಿದ್ದು, ಜಿಲ್ಲಾ ಕೋರ್ಚ್‌ ಬಂಧನ ವಾರಂಟ್‌ ಹೊರಡಿಸಿತ್ತು. ಇದೀಗ ಅರಾಫತ್‌ ಅಲಿಗೆ ಲುಕ್‌ಔಟ್‌ ನೋಟೀಸ್‌ ಜಾರಿಗೊಳಿಸಲಾಗಿದೆ.

Mumbai attack ಉಗ್ರ ಅಜ್ಮಲ್ ಕಸಬ್ ಪಾಕಿಸ್ತಾನಿ, ಸತ್ಯ ಬಹಿರಂಗ ಪಡಿಸಿದ ಪಾಕ್ ಗೃಹ ಸಚಿವ ಶೇಕ್ ರಶೀದ್!

ಕುಕ್ಕರ್‌ ಬಾಂಬ್‌ ಸ್ಫೋಟದ ಬೆನ್ನಲ್ಲೇ ಝಾಕೀರ್‌ ನಾಯ್‌್ಕ ಟ್ವೀಟ್‌!

ಶಂಕಿತ ಉಗ್ರ ಶಾರೀಕ್‌ ನಿಷೇಧಿತ ಇಸ್ಲಾಮಿಕ್‌ ರಿಸಚ್‌ರ್‍ ¶ೌಂಡೇಷನ್‌ ಮುಖ್ಯಸ್ಥ, ಮಲೇಷ್ಯಾದಲ್ಲಿರುವ ಝಾಕೀರ್‌ ನಾಯ್‌್ಕನ ಇಸ್ಲಾಮಿಕ್‌ ಭಾಷಣಗಳಿಂದ ಪ್ರಭಾವಿತನಾಗಿದ್ದ. ಆತನ ಮೊಬೈಲ್‌ನಲ್ಲೂ ಝಾಕೀರ್‌ ನಾಯ್‌್ಕ ವಿಡಿಯೋಗಳು ಪತ್ತೆಯಾಗಿವೆ. ವಿಶೇಷವೆಂದರೆ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಬೆನ್ನಲ್ಲೇ ‘ಆತ್ಮಾಹುತಿ ಬಾಂಬ…’ ಬಗ್ಗೆ ನಿಷೇಧಿತ ಇಸ್ಲಾಮಿಕ್‌ ರಿಸಚ್‌ರ್‍ ¶ೌಂಡೇಷನ್‌ ಮುಖ್ಯಸ್ಥ ಝಾಕೀರ್‌ ನಾಯ್‌್ಕ ಟ್ವೀಟ್‌ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಮಂಗಳೂರು ಬಾಂಬ್‌ ಸ್ಫೋಟದ ಸುಮಾರು 1.45 ಗಂಟೆ ಬಳಿಕ ಈ ಟ್ವೀಟ್‌ ಮಾಡಲಾಗಿದೆ. ನ.19ರ ಸಂಜೆ 4.29ಕ್ಕೆ ಬಾಂಬ್‌ ಸ್ಫೋಟವಾದರೆ, 6.13ಕ್ಕೆ ‘ಇಸ್ಲಾಂನಲ್ಲಿ ಆತ್ಮಾಹುತಿ ಬಾಂಬ್‌ಗೆ ಅವಕಾಶ ಇದೆಯಾ?’ ಎಂದು ಟ್ವೀಟ್‌ನಲ್ಲಿ ಝಾಕೀರ್‌ ನಾಯ್‌್ಕ ಕೇಳಿದ್ದಾನೆ. ಯೂಟ್ಯೂಬ್‌ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಅದರ ವಿಡಿಯೋ ಲಿಂಕ್‌ನ್ನು ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಝಾಕೀರ್‌ ನಾಯ್‌್ಕ ಪೋಸ್ಟ್‌ ಮಾಡಿದ್ದಾನೆ. ಆದರೆ ಭಾರತದಲ್ಲಿ ಝಾಕೀರ್‌ ನಾಯ್ಕ…ನ ಯೂ ಟ್ಯೂಬ್‌ ಖಾತೆಗೆ ನಿರ್ಬಂಧ ಇದೆ.

Follow Us:
Download App:
  • android
  • ios