ಭಾರತ ಮೂಲದ 2 ಇಸ್ರೇಲಿ ಮಹಿಳಾ ಯೋಧರ ಸಾವು
ಹಮಾಸ್ ಉಗ್ರರು ಕಳೆದವಾರ ಇಸ್ರೇಲ್ ಮೇಲೆ ನಡೆಸಿದ ಘೋರ ದಾಳಿಯಲ್ಲಿ ಭಾರತೀಯ ಮೂಲದ ಇಬ್ಬರು ಇಸ್ರೇಲಿ ಮಹಿಳಾ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನ ರಕ್ಷಣಾಪಡೆಯಲ್ಲಿ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಮೊಸೆಸ್ (22) ಮತ್ತು ಗಡಿ ಪೊಲೀಸ್ ಅಧಿಕಾರಿ ಕಿಮ್ ಡೊಕ್ರಕ ಮೃತಪಟ್ಟಿದ್ದಾರೆ.
ಜೆರುಸಲೇಂ: ಹಮಾಸ್ ಉಗ್ರರು ಕಳೆದವಾರ ಇಸ್ರೇಲ್ ಮೇಲೆ ನಡೆಸಿದ ಘೋರ ದಾಳಿಯಲ್ಲಿ ಭಾರತೀಯ ಮೂಲದ ಇಬ್ಬರು ಇಸ್ರೇಲಿ ಮಹಿಳಾ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನ ರಕ್ಷಣಾಪಡೆಯಲ್ಲಿ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಮೊಸೆಸ್ (22) ಮತ್ತು ಗಡಿ ಪೊಲೀಸ್ ಅಧಿಕಾರಿ ಕಿಮ್ ಡೊಕ್ರಕ ಮೃತಪಟ್ಟಿದ್ದಾರೆ. ಇಬ್ಬರೂ ಮೃತರು, 1950- 60ರಲ್ಲಿ ಭಾರತದಿಂದ ಇಸ್ರೇಲಿಗೆ ವಲಸೆ ಹೋದ ಸುಮಾರು 85,000 ಯಹೂದಿಗಳ ಕುಟುಂಬಗಳಲ್ಲಿ ಜನಿಸಿದ್ದು, ಇವರು ಮೂಲ ಭಾರತೀಯರು ಎನ್ನಲಾಗುತ್ತದೆ.
ಜೆರುಸಲೇಂ: ಹಮಾಸ್ ಉಗ್ರರು ಕಳೆದವಾರ ಇಸ್ರೇಲ್ ಮೇಲೆ ನಡೆಸಿದ ಘೋರ ದಾಳಿಯಲ್ಲಿ ಭಾರತೀಯ ಮೂಲದ ಇಬ್ಬರು ಇಸ್ರೇಲಿ ಮಹಿಳಾ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನ ರಕ್ಷಣಾಪಡೆಯಲ್ಲಿ ಕಮಾಂಡರ್ ಆಗಿದ್ದಲೆಫ್ಟಿನೆಂಟ್ ಮೊಸೆಸ್ (22) ಮತ್ತು ಗಡಿ ಪೊಲೀಸ್ ಅಧಿಕಾರಿ ಕಿಮ್ ಡೊಕ್ರಕ ಮೃತಪಟ್ಟಿದ್ದಾರೆ.ಇಬ್ಬರೂ ಮೃತರು, 1950- 60ರಲ್ಲಿ ಭಾರತದಿಂದ ಇಸ್ರೇಲಿಗೆ ವಲಸೆ ಹೋದ ಸುಮಾರು 85,000 ಯಹೂದಿಗಳ ಕುಟುಂಬಗಳಲ್ಲಿ ಜನಿಸಿದ್ದು, ಇವರು ಮೂಲ ಭಾರತೀಯರು ಎನ್ನಲಾಗುತ್ತದೆ.
ಮತ್ತೊಬ್ಬ ಕುಖ್ಯಾತ ಹಮಾಸ್ ಕಮಾಂಡರ್ ಹತ್ಯೆ
ಟೆಲ್ ಅವಿವ್: ಕಳೆದ ವಾರ ತನ್ನ ನೆಲದ ಮೇಲೆ ಏಕಾಏಕಿ ದಾಳಿ ಮಾಡಿದ ಹಮಾಸ್ ಭಯೋತ್ಪಾದಕರ ತಂಡವನ್ನು ಮುನ್ನಡೆಸಿದ್ದ ಮೂರನೇ ಉಗ್ರಗಾಮಿ ನಾಯಕನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಶನಿವಾರವಷ್ಟೇ ಇಬ್ಬರು ಹಮಾಸ್ ಮುಖಂಡರನ್ನು (Hamas terrorists) ಇಸ್ರೇಲ್ ಹತ್ಯೆ ಮಾಡಿತ್ತು. 'ನಾವು ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಕಮಾಂಡರ್ ಬಿಲ್ಲಾಲ್ ಅಲ್-ಖೈದ್ರಾ ಸಾವನ್ನಪ್ಪಿದ್ದಾನೆ.ಈತ ಇಸ್ರೇಲ್ ನಗರವಾದ ಕಿಬ್ಬುಟ್ ನಿರಿಮ್ (Kibbutz Nirim) ಮೇಲಿನ ದಾಳಿಯಲ್ಲಿ ಪ್ರಮುಖನಾಗಿದ್ದ ಎಂದು ಇಸ್ರೇಲ್ ಹೇಳಿದೆ.
ಆತ್ಮ ರಕ್ಷಣೆಯ ಮಿತಿ ಮೀರಿ ಇಸ್ರೇಲ್ ಯುದ್ಧ: ಚೀನಾ
ಬೀಜಿಂಗ್: ತನ್ನ ಮೇಲಿನ ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್, ತನ್ನ ಆತ್ಮರಕ್ಷಣೆಯ ವ್ಯಾಪ್ತಿ ಮೀರಿ ಯುದ್ಧದಲ್ಲಿ ತೊಡಗಿದೆ. ಗಾಜಾದ ಜನರಿಗೆ ಸಾಮೂಹಿಕ ಶಿಕ್ಷೆ ನೀಡುವುದನ್ನು ಇಸ್ರೇಲ್ ನಿಲ್ಲಿಸಬೇಕು ಎಂದು ಚೀನಾ ಸರ್ಕಾರ (Chinese government) ಆಗ್ರಹಿಸಿದೆ. 'ಹಮಾಸ್ ಉಗ್ರರ ಮೇಲೆ ದಾಳಿ ನಡೆಸಲು ಇಸ್ರೇಲ್ ಭೂದಾಳಿಗೆ ಮುಂದಾಗುತ್ತಿರುವಂತೆ ಕಂಡು ಬರುತಿದೆ. ಇಸ್ರೇಲ್ ಅಂತಾರಾಷ್ಟ್ರೀಯ ಸಮುದಾಯದ ಹಾಗೂ ವಿಶ್ವಸಂಸ್ಥೆಯನ್ನು ಆಲಿಸಿ ಗಾಜಾದ ( Gaza strip) ಜನರ ಸಾಮೂಹಿಕ ಶಿಕ್ಷೆ ನಿಲ್ಲಿಸಿ ಮಾತುಕತೆ ನಡೆಸಬೇಕು' ಎಂದಿದೆ.
ಇಸ್ರೇಲಿಂದ ಮತ್ತೆ 471 ಭಾರತೀಯರು ತವರಿಗೆ
ನವದೆಹಲಿ: ಯುದ್ಧಪೀಡಿತ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಆರಂಭಿಸಿರುವ 'ಆಪರೇಷನ್ ಅಜಯ್' (Operation Ajay) ಕಾರ್ಯಾಚರಣೆಯಡಿ ಭಾನುವಾರ 2 ವಿಮಾನಗಳಲ್ಲಿ ಒಟ್ಟು 471 ಜನ ಭಾರತಕ್ಕೆ ಬಂದಿಳಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಗೆತಿಳಿಸಿದ್ದಾರೆ. ಇಸ್ರೇಲ್‌ನಿಂದ ಬಂದ 2 ವಿಮಾನಗಳ ಪೈಕಿ ಒಂದರಲ್ಲಿ 197 ಮಂದಿ ಹಾಗೂ ಮತ್ತೊಂದು ವಿಮಾನದಲ್ಲಿ274 ಮಂದಿ ದೆಹಲಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಈವರೆಗೆ ಇಸ್ರೇಲ್‌ನಿಂದ ಒಟ್ಟು 864 ಜನರನ್ನು ಭಾರತಕ್ಕೆ ಕರೆತರಲಾಗಿದೆ.
ಟೆಲ್ ಅವಿವ್: ಕಳೆದ ವಾರ ತನ್ನ ನೆಲದ ಮೇಲೆ ಏಕಾಏಕಿ ದಾಳಿ ಮಾಡಿದ ಹಮಾಸ್ ಭಯೋತ್ಪಾದಕರ ತಂಡವನ್ನು ಮುನ್ನಡೆಸಿದ್ದ ಮೂರನೇ ಉಗ್ರಗಾಮಿ ನಾಯಕನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಶನಿವಾರವಷ್ಟೇ ಇಬ್ಬರು ಹಮಾಸ್ ಮುಖಂಡರನ್ನು (Hamas terrorists) ಇಸ್ರೇಲ್ ಹತ್ಯೆ ಮಾಡಿತ್ತು. 'ನಾವು ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಕಮಾಂಡರ್ ಬಿಲ್ಲಾಲ್ ಅಲ್-ಖೈದ್ರಾ ಸಾವನ್ನಪ್ಪಿದ್ದಾನೆ.ಈತ ಇಸ್ರೇಲ್ ನಗರವಾದ ಕಿಬ್ಬುಟ್ ನಿರಿಮ್ (Kibbutz Nirim) ಮೇಲಿನ ದಾಳಿಯಲ್ಲಿ ಪ್ರಮುಖನಾಗಿದ್ದ ಎಂದು ಇಸ್ರೇಲ್ ಹೇಳಿದೆ.
ಆತ್ಮರಕ್ಷಣೆಯ ಮಿತಿ ಮೀರಿ ಇಸ್ರೇಲ್ ಯುದ್ಧ: ಚೀನಾ