ಮ್ಯಾಕ್‌ಡೊನಾಲ್ಡ್ ಮಹಿಳಾ ಉದ್ಯೋಗಿಯ ಕೆಣಕಿ ಕಂಗಾಲಾದ ಗ್ರಾಹಕ: ಸರಿಯಾಗಿ ಬಾರಿಸಿದ ಅಕ್ಕಬಾಂಡ್
ಇಲ್ಲೊಂದು ಕಡೆ ಮ್ಯಾಕ್‌ಡೊನಾಲ್ಡ್ ರೆಸ್ಟೋರೆಂಟ್‌ನಲ್ಲಿ ಗ್ರಾಹಕನೋರ್ವ ಮಹಿಳಾ ಉದ್ಯೋಗಿಯ ಮೇಲೆ ಕೈ ಮಾಡಿದ್ದು, ಆಕೆಯಿಂದ ಸರಿಯಾಗಿ ಏಟು ತಿಂದಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಕೆಲವೊಮ್ಮೆ ಆಹಾರ ಮಳಿಗೆಗಳಲ್ಲಿ ವೈಟರ್‌ಗಳ ಮೇಲೆ ಗ್ರಾಹಕ ಸಹಾಯಕ ಸಿಬ್ಬಂದಿ ಮೇಲೆ ಸಿಟ್ಟಿಗೆದ್ದ ಗ್ರಾಹಕರು ಹಲ್ಲೆ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮ್ಯಾಕ್‌ಡೊನಾಲ್ಡ್ ರೆಸ್ಟೋರೆಂಟ್‌ನಲ್ಲಿ ಗ್ರಾಹಕನೋರ್ವ ಮಹಿಳಾ ಉದ್ಯೋಗಿಯ ಮೇಲೆ ಕೈ ಮಾಡಿದ್ದು, ಆಕೆಯಿಂದ ಸರಿಯಾಗಿ ಏಟು ತಿಂದಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಇಂಟರ್‌ನೆಟ್‌ನಲ್ಲಿ ಪ್ರತಿದಿನವೂ ಲಕ್ಷಾಂತರ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಈಗ ಮಹಿಳೆಯೊಬ್ಬಳು ತನ್ನನ್ನು ರಕ್ಷಿಸಿಕೊಳ್ಳಲು ಗ್ರಾಹಕನೊಂದಿಗೆ ಸರಿಯಾಗಿ ಗುದ್ದಾಡಿದ ವೀಡಿಯೋವೊಂದು ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆದರೆ ಇದು ಮ್ಯಾಕ್‌ಡೊನಾಲ್ಡ್ ಆಹಾರ ಮಳಿಗೆ ಎಂದು ವೀಡಿಯೋ ಪೋಸ್ಟ್ ಮಾಡಿದ ಟ್ವಿಟ್ಟರ್ ಪೇಜ್ ಮಾಹಿತಿ ನೀಡಿದೆ.
non aesthetic things(@PicturesFoIder) ಎಂಬ ಪೇಜ್‌ನಿಂದ ಈ 52 ಸೆಕೆಂಡ್‌ಗಳ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ಗ್ರಾಹಕನೋರ್ವ ಆಹಾರ ನೀಡುವ ಕೌಂಟರ್ ಬಳಿ ನಿಂತಿದ್ದರೆ, ಆತನ ಸರಿ ಎದುರಿಗೆ ಮ್ಯಾಕ್‌ಡೊನಾಲ್ಡ್‌ನ ಮಹಿಳಾ ಉದ್ಯೋಗಿಯೊಬ್ಬರು ನಿಂತಿದ್ದಾರೆ. ಅವರ ಮಧ್ಯೆ ಕಿತ್ತಾಟಕ್ಕೆ ಏನು ಕಾರಣವಾಯ್ತು ಎಂಬುದು ಮಾತ್ರ ತಿಳಿದು ಬಂದಿಲ್ಲ, ಒಮ್ಮೆಗೆ ಪುರುಷ ಗ್ರಾಹಕ ಮಹಿಳಾ ಉದ್ಯೋಗಿಯ ಮೇಲೆ ಕೈ ಮಾಡಿದ್ದು, ಆಕೆಯ ಬಟ್ಟೆಯನ್ನು ಎಳೆದಾಡಿದ್ದಾನೆ. ಆದರೆ ಗಟ್ಟಿಗಿತ್ತಿ ಮಹಿಳಾ ಉದ್ಯೋಗಿ ಆತನಿಗೆ ಸರಿಯಾಗಿ ನಾಲ್ಕು ತದುಕಿದ್ದು, ಇವರಿಬ್ಬರ ಕಿತ್ತಾಟ ಬಿಡಿಸುವುದಕ್ಕೆ ಮ್ಯಾಕ್‌ಡೊನಾಲ್ಡ್‌ನ ಇತರ ಗ್ರಾಹಕರು ಓಡಿ ಬಂದಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, 2 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. ವೀಡಿಯೋ ನೋಡಿದ ಜನ ಮಹಿಳೆ ಒಳ್ಳೆ ಕೆಲಸವನ್ನೇ ಮಾಡಿದ್ದಾಳೆ. ಆಕೆಯನ್ನು ಆಕೆ ರಕ್ಷಿಸಿಕೊಂಡಿದ್ದಾಳೆ ಎಂದು ಕೊಂಡಾಡಿದ್ದಾರೆ. ಮ್ಯಾಕ್ಡೊನಾಲ್ಡ್‌ನ ತಪ್ಪಾದ ಉದ್ಯೋಗಿ ಮೇಲೆ ಆತ ಕೈ ಮಾಡಿದ್ದಾನೆ ಬಹುಶಃ ಆತ ಇದನ್ನು ನಿರೀಕ್ಷೆಯೂ ಮಾಡಿರಲಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವೇ ಹೊಡೆಯಲು ಶುರು ಮಾಡಿದ ಮೇಲೆ ತನಗೆ ಹೊಡೆಯಬಾರದು ಎಂದು ನೀವು ಹೇಗೆ ಬಯಸುವಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು ಮೊದಲು ಆತನ ಮುಸುಡಿ ಹುಡಿ ಮಾಡಬೇಕಿತ್ತು. ಆಮೇಲೆ ಕೋರ್ಟ್ ಕೇಸ್ ಎಲ್ಲಾ ಎಂದು ಕಾಮೆಂಟ್ ಮಾಡಿದ್ದಾರೆ. ಮ್ಯಾಕ್ ಫ್ಲರಿ ಬಯಸಿದನಿಗೆ ಮ್ಯಾಕ್ ಪ್ಯೂರಿ ಸಿಕ್ಕಿತ್ತು ಎಂದು ಒಬ್ಬರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಆಕೆ ನೀಡಿದ ಒಂದೇ ಒಂದು ಏಟಿಗೆ ಆತನ ತಲೆಯಲ್ಲಿದ್ದ ಟೋಫಿ ಹಾರಿ ಹೋಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆಯ ಗಾತ್ರಕ್ಕೆ ಹೋಲಿಸಿದರೆ ಆಕೆ ಶಕ್ತಿಯುತವಾಗಿಯೇ ಇದ್ದಾಳೆ. ಆದರೆ ಆತ ಮೊದಲಿಗೆ ಆಕೆ ಮೇಲೆ ಕೈ ಮಾಡಿದ್ದೇಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಘಟನೆ ಯಾವಾಗ ನಡೆದಿರುವುದು ಎಂಬ ಬಗ್ಗೆ ವೀಡಿಯೋದಲ್ಲಿ ಸ್ಪಷ್ಟತೆ ಇಲ್ಲ.
ಸಾಮಾನ್ಯವಾಗಿ ಮ್ಯಾಕ್‌ಡೊನಾಲ್ಡ್ ಸೇರಿದಂತೆ ಯಾವುದೇ ಆಹಾರ ಮಳಿಗೆಗಳಲ್ಲಿ ಸಂಸ್ಥೆಯ ನಿಯಮದ ಪ್ರಕಾರ ಗ್ರಾಹಕರು ಏನೇ ಮಾಡಿದರೂ ಅವರಿಗೆ ಎದುರಾಡುವಂತೆ ಇಲ್ಲ, ತಿರುಗಿಸಿ ಬಾರಿಸುವಂತಿಲ್ಲ, ಸಹಿಸಿಕೊಂಡು ಉದ್ಯೋಗಿಗಳೇ ಕ್ಷಮೆ ಕೇಳುತ್ತಾರೆ. ಗ್ರಾಹಕರ ಮೇಲೆ ಹಲ್ಲೆ ಮಾಡಿದರೆ ಉದ್ಯೋಗ ಹೋಗುವುದು ಎಂಬ ಭಯದಿಂದ ಉದ್ಯೋಗಿಗಳು ಗ್ರಾಹಕರು ಬೈದಾಡಿದರೂ ಏನೂ ಮಾತನಾಡದೇ ಸುಮ್ಮನೇ ಇರುತ್ತಾರೆ ಇದೇ ಕಾರಣಕ್ಕೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮ್ಯಾಕ್‌ಡೊನಾಲ್ಡ್ ಮಳಿಗೆಯಲ್ಲಿ ಗ್ರಾಹಕರು ಸಿಬ್ಬಂದಿ ಮೇಲೆ ಕೈ ಮಾಡುವುದು ಹೆಚ್ಚಾಗಿದೆ. ಆದರೆ ಈ ಪ್ರಕರಣದಲ್ಲಿ ಮಹಿಳೆ ಸ್ವಲ್ಪವೂ ಅಂಜದೇ ತನ್ನ ಸುದ್ದಿಗೆ ಬಂದ ಗ್ರಾಹಕನಿಗೆ ಸರಿಯಾಗಿಯೇ ಮಂಗಳಾರತಿ ಮಾಡಿದ್ದು, ಈಕೆಯ ದಿಟ್ಟತನವನ್ನು ನೆಟ್ಟಿಗರು ಮೆಚ್ಚಿದ್ದಾರೆ.