Covid 19 Economy: ಮಹಾಮಾರಿಯಿಂದ 16 ಕೋಟಿ ಜನಕ್ಕೆ ಬಡತನ: ಶ್ರೀಮಂತರ ಆಸ್ತಿ ಏರಿಕೆ!

*ಕೊರೋನಾ ಬಂದ 2 ವರ್ಷದಲ್ಲಿ ಬಡವರ ಬಡತನ ಹೆಚ್ಚಳ, ಶ್ರೀಮಂತರ ಆಸ್ತಿ ಏರಿಕೆ
*ಜಗತ್ತಿನ 99% ಜನರ ಆದಾಯ ಕುಸಿತ: ಅತಿ ಶ್ರೀಮಂತರ ಆಸ್ತಿ ಈ 2 ವರ್ಷದಲ್ಲಿ ಡಬಲ್‌

16 crore more people forced into poverty in two years of pandemic Oxfam report mnj

ನವದೆಹಲಿ/ದಾವೋಸ್‌ (ಜ. 18): ಕೋವಿಡ್‌ ಸಾಂಕ್ರಾಮಿಕ (Covid 19) ಆವರಿಸಿದ 2 ವರ್ಷದ ಅವಧಿಯಲ್ಲಿ ಇಡೀ ಜಗತ್ತಿನ ಶೇ.99ರಷ್ಟುಜನರ ಆದಾಯ ಕುಸಿತ ಕಂಡಿದ್ದರೆ, 16 ಕೋಟಿಗಿಂತ ಹೆಚ್ಚು ಜನರು ಹೊಸತಾಗಿ ಬಡತನದ (Poverty) ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ. ಆದರೆ ಇದೇ ಅವಧಿಯಲ್ಲಿ ವಿಶ್ವದ ಆಗರ್ಭ ಶ್ರೀಮಂತರ ಆಸ್ತಿ ಡಬಲ್‌ ಆಗಿದೆ ಎಂದು ವರದಿಯೊಂದು ಹೇಳಿದೆ. ದಾವೋಸ್‌ ಶೃಂಗ ಸಭೆಯ ಮೊದಲ ದಿನ ಆಕ್ಸ್‌ಫಾಮ್‌ (Oxfam Report)  ಬಿಡುಗಡೆ ಮಾಡಿರುವ ‘ಅಸಮಾನತೆ ಕೊಲ್ಲುತ್ತದೆ’ (Inequality Kills) ವರದಿಯಲ್ಲಿ ಈ ಆಂತಕಕಾರಿ ಅಂಶಗಳಿವೆ. ಸೂಕ್ತ ಆರೋಗ್ಯ ಸೌಕರ್ಯ ಇಲ್ಲದೆ ಸಂಭವಿಸುವ ಸಾವು, ಲಿಂಗ ತಾರತಮ್ಯ ಆಧರಿತ ಹಿಂಸಾಚಾರ, ಹಸಿವು, ಹವಾಮಾನ ಬದಲಾವಣೆಯ ವಿಕೋಪಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಬಡವರ ಬಡತನ ಹೆಚ್ಚಳ, ಶ್ರೀಮಂತರ ಆಸ್ತಿ ಏರಿಕೆ: ಕಳೆದ 2 ವರ್ಷದಲ್ಲಿ ವಿಶ್ವದ ಶೇ.99ರಷ್ಟುಜನರ ಆದಾಯದಲ್ಲಿ ಕುಸಿತವಾಗಿದೆ. ಆದರೆ ಇದೇ ಅವಧಿಯಲ್ಲಿ ಆಗರ್ಭ ಶ್ರೀಮಂತರ ಆಸ್ತಿಯಲ್ಲಿ ನಿತ್ಯ 9000 ಕೋಟಿ ರು.ನಷ್ಟುಹೆಚ್ಚಳವಾಗುವ ಮೂಲಕ ಅವರ ಒಟ್ಟಾರೆ ಆಸ್ತಿಯಲ್ಲಿ 111 ಲಕ್ಷ ಕೋಟಿ ರು.ನಷ್ಟುಹೆಚ್ಚಳವಾಗಿದೆ. ವಿಶ್ವದ ಟಾಪ್‌ 10 ಶ್ರೀಮಂತರು ನಾಳೆಯೇ ತಮ್ಮ ಒಟ್ಟು ಆಸ್ತಿಯಲ್ಲಿ ಶೇ.99.999ರಷ್ಟನ್ನು ಕಳೆದುಕೊಂಡರೂ ಅವರು ವಿಶ್ವದ ಉಳಿದ ಶೇ.99ರಷ್ಟುಜನಸಂಖ್ಯೆಗಿಂತ ಶ್ರೀಮಂತರಾಗಿಯೇ ಇರುತ್ತಾರೆ. ವಿಶ್ವದ 301 ಕೋಟಿ ಕಡುಬಡವರ ಒಟ್ಟು ಆಸ್ತಿಗಿಂತ 6 ಪಟ್ಟು ಹೆಚ್ಚು ಆಸ್ತಿ ಈ ಟಾಪ್‌ 10 ಶ್ರೀಮಂತರ ಬಳಿ ಇದೆ. ಅಸಮಾನತೆಯು ವಿಶ್ವದಲ್ಲಿ ಪ್ರತಿ ದಿನ 21000 ಜನರ ಅಂದರೆ ಪ್ರತಿ 4 ಸೆಕೆಂಡ್‌ಗೆ ಒಬ್ಬರ ಸಾವಿಗೆ ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Multidimensional Poverty Index : ಬಿಹಾರ, ಜಾರ್ಖಂಡ್‌, ಉತ್ತರಪ್ರದೇಶ ದೇಶದ ಅತಿ ಬಡರಾಜ್ಯಗಳು!

ಕೋವಿಡ್‌ ಪ್ಯಾಕೇಜ್‌ ಸಿರಿವಂತರ ಪಾಲು!: ಕೋವಿಡ್‌ ಸಾಂಕ್ರಾಮಿಕದಿಂದ ಕುಸಿದ ಆರ್ಥಿಕತೆಗೆ ಚೇತರಿಕೆ ನೀಡಲು ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಸಾವಿರಾರು ಕೋಟಿಗಳನ್ನು ಆರ್ಥಿಕತೆಗೆ ಸುರಿದವು. ಆದರೆ ಅವು ಪರೋಕ್ಷವಾಗಿ ಷೇರು ಬೆಲೆ ಏರಿಕೆಯ ಮೂಲಕ ಭಾರೀ ಶ್ರೀಮಂತರ ಆಸ್ತಿಯನ್ನು ಮತ್ತಷ್ಟುಹೆಚ್ಚಿಸಲು ನೆರವಾಗಿವೆ. ಸಾಂಕ್ರಾಮಿಕವು ಶ್ರೀಮಂತರ ಪಾಲಿಗೆ ಅತ್ಯಂತ ಸಮೃದ್ಧವಾಗಿತ್ತು. ಈ ಹಿಂದಿನ 14 ವರ್ಷಗಳಲ್ಲಿ ಕಾಣದಷ್ಟುಸಂಪತ್ತಿನ ಏರಿಕೆ ಪ್ರಮಾಣವು ಕಳೆದ 2 ವರ್ಷದಲ್ಲಿ ದಾಖಲಾಗಿದೆ ಎಂದು ಆಕ್ಸ್‌ಫಾಮ್‌ ವರದಿ ಹೇಳಿದೆ.

ಟಾಪ್‌ 10 ಧನಿಕರ ಆಸ್ತಿ: ದೇಶವನ್ನು ಕೋವಿಡ್‌ (COVID-19) ಸಾಂಕ್ರಾಮಿಕ ಆಕ್ರಮಿಸಿಕೊಂಡ 2 ವರ್ಷದಲ್ಲಿ ಭಾರತದಲ್ಲಿ (India) ಬಿಲಿಯನೇರ್‌ಗಳ (Billionaires) ಆಸ್ತಿ ಡಬಲ್‌ ಆಗಿದೆ. ಜೊತೆಗೆ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಶೇ.39ರಷ್ಟುಏರಿಕೆಯಾಗಿ 142ಕ್ಕೆ ತಲುಪಿದೆ. ಭಾರತದ ಟಾಪ್‌ 10 ಶ್ರೀಮಂತರ ಆಸ್ತಿಯಲ್ಲಿ 25 ವರ್ಷಗಳ ಕಾಲ ದೇಶದ ಎಲ್ಲಾ ಮಕ್ಕಳಿಗೆ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು (Free Education) ನೀಡಬಹುದು ಎಂದು ಆಕ್ಸ್‌ಫಾಮ್‌ (Oxfam India) ಬಿಡುಗಡೆ ಮಾಡಿದ ವರದಿ ಹೇಳಿದೆ.

ಇದನ್ನೂ ಓದಿ: Multidimensional Poverty Index: ರಾಜ್ಯದ ಅತಿ ಬಡ ಜಿಲ್ಲೆಗಳ ಪಟ್ಟಿ ಬಿಡುಗಡೆ: ಯಾದಗಿರಿ ಮೊದಲ ಸ್ಥಾನ!

ದಾವೋಸ್‌ ಶೃಂಗದ (Davos Agenda Summit) ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿರುವ ವರದಿ ಅನ್ವಯ, ದೇಶದ 142 ಬಿಲಿಯನೇರ್‌ಗಳು ಒಟ್ಟು 53 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ. ಈ ಪೈಕಿ ಟಾಪ್‌ 98 ಜನರ ಆಸ್ತಿಯು, ದೇಶದ 55.5 ಕೋಟಿ ಕಡು ಬಡವರ ಆಸ್ತಿ (49 ಲಕ್ಷ ಕೋಟಿ ರು.)ಗೆ ಸಮ. ಇನ್ನು 142 ಬಿಲಿಯನೇರ್‌ಗಳ ಪೈಕಿ ಶೇ.10ರಷ್ಟು ಜನರಿಗೆ ಹೆಚ್ಚುವರಿ ಶೇ.1ರಷ್ಟು ತೆರಿಗೆ ವಿಧಿಸಿದರೆ ಅದು ದೇಶಕ್ಕೆ 17.7 ಲಕ್ಷ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಒದಗಿಸಬಲ್ಲದು. ಇನ್ನು 98 ಅತಿ ಶ್ರೀಮಂತರ ಮೇಲೆ ಶೇ.1ರಷ್ಟು ತೆರಿಗೆ ಹಾಕಿದರೆ, ಅದು ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್‌ ಭಾರತ್‌ ಯೋಜನೆಯ (Ayushman Bharat) ಮುಂದಿನ 7 ವರ್ಷಗಳ ಆರ್ಥಿಕ ಅಗತ್ಯವನ್ನು ಪೂರೈಸಬಲ್ಲದು

Latest Videos
Follow Us:
Download App:
  • android
  • ios