ವಾಷಿಂಗ್ಟನ್‌ (ನ.07): ಎರಡನೇ ಹಂತದ ಕೋವಿಡ್‌ ಅಲೆಯಿಂದ ತತ್ತರಿಸಿರುವ ಅಮೆರಿಕದಲ್ಲಿ ಬುಧವಾರ ಒಂದೇ ದಿನ 1.05 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 98 ಲಕ್ಷಕ್ಕೆ ತಲುಪಿದೆ. ಅಂದರೆ ಇನ್ನು 2 ದಿನದಲ್ಲಿ ಸೋಂಕಿತರ ಸಂಖ್ಯೆ 1 ಕೋಟಿ ತಲುಪಲಿದೆ. ಇದು ವಿಶ್ವದ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇ.25ಕ್ಕಿಂತಲೂ ಅಧಿಕ. ವಿಶ್ವದಲ್ಲಿ ಇದೀಗ ಒಟ್ಟಾರೆ 48.57 ಲಕ್ಷ ಸೋಂಕಿತರು ಇದ್ದಾರೆ.

ಈ ನಡುವೆ ಕಳೆದ ಎರಡು ದಿನಗಳಲ್ಲಿ ಸೋಂಕಿನ ಪ್ರಮಾಣ ಶೇ.45ರಷ್ಟುಏರಿಕೆಯಾಗಿದ್ದು, ದೈನಂದಿನ ಸರಾಸರಿ 86,352 ಪ್ರಕರಣಗಳು ದಾಖಲಾಗುತ್ತಿವೆ. ಇದೇ ವೇಳೆ ಮರಣ ಪ್ರಮಾಣವೂ ಶೇ.15ರಷ್ಟುಏರಿದ್ದು, ಸರಾಸರಿ 846 ಸಾವು ದಾಖಲಾಗುತ್ತಿದೆ. ಈವರೆಗೆ ಒಟ್ಟು 2.32 ಲಕ್ಷ ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ.

ಬೆಂಗಳೂರಲ್ಲಿ ಒಂದಂಕಿಗೆ ಇಳಿದ ಸೋಂಕಿತರ ಸಾವಿನ ಸಂಖ್ಯೆ ...

ಇದೇ ವೇಳೆ ಮುಂದಿನ ವರ್ಷ ಜನವರಿ 20ಕ್ಕೆ ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ನಡೆಯಲಿದ್ದು, ಅದಕ್ಕೆ ಇನ್ನೂ 86 ದಿನಗಳು ಬಾಕಿ ಇವೆ. ಈ ಅವಧಿಯಲ್ಲಿ ಅಮೆರಿಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮಂದಿ ಸೋಂಕಿಗೆ ಬಲಿಯಾಗಬಹುದು ಎನ್ನುವ ಅಘಾತಕಾರಿ ಮಾಹಿತಿಯನ್ನು ಅಲ್ಲಿನ ವಿಜ್ಞಾನಿಗಳು ಬಿಚ್ಚಿಟ್ಟಿದ್ದಾರೆ.