Women Health: ತಿಂಗಳಿಗೆ ಎರಡು ಬಾರಿ ಪೀರಿಯಡ್ಸ್ ಬಂದರೆ ನಿರ್ಲಕ್ಷಿಸಬೇಡಿ!
ಪೀರಿಯಡ್ಸ್ ಬಗ್ಗೆ ಒಬ್ಬೊಬ್ಬ ಮಹಿಳೆಯದು ಒಂದೊಂದು ಸಮಸ್ಯೆ. ಆದ್ರೆ ವಿಭಾಗ ಇತ್ತೀಚೆಗೆ ತಿಂಗಳಲ್ಲಿ ಎರಡು ಸಲ ಪೀರಿಯಡ್ ಆಯ್ತು. ಕೆಲಸದ ಒತ್ತಡದ ನಡುವೆ ಇದನ್ನು ನಿರ್ಲಕ್ಷ್ಯ ಮಾಡಿದ್ದೇ ಹೀಗಾಯ್ತು ನೋಡಿ..
ಪೀರಿಯಡ್ಸ್ ಅಂದರೆ ಮುಖ ಸೊಟ್ಟ ಮಾಡದ ಮಹಿಳೆಯರು ಕಡಿಮೆ. ಟೀನೇಜಲ್ಲಿ ಪೀರಿಯಡ್ಸ್ ಶುರುವಾದ ಟೈಮಿಂದ ಹಿಡಿದು ಮಧ್ಯ ವಯಸ್ಸು ತಲುಪಿ ಮುಟ್ಟು ನಿಲ್ಲೋತನಕ ಇದು ಕೊಡೋ ಕಾಟ ಒಂದಾ ಎರಡಾ? ಕೆಲವರು ಇದನ್ನೆಲ್ಲ ಮೀರಿ ನಿಲ್ಲುವ ಸ್ಟ್ರಾಂಗ್ ಲೇಡೀಸ್ ಇರ್ತಾರೆ. ಆದರೆ ಅತಿಯಾದ ನೋವಲ್ಲಿ ಒದ್ದಾಡುವ, ಸುಸ್ತು, ತಲೆನೋವಲ್ಲಿ ಬಳಲುವ, ಯಾರ ಬಳಿಯೂ ಹೇಳಲು ಮುಜುಗರ ಪಡುವ ಹೆಣ್ಮಕ್ಕಳು ಸಾಕಷ್ಟಿದ್ದಾರೆ. ಅದರಲ್ಲೂ ಈ ಪೀರಿಯಡ್ಸ್ ಸಾಮಾನ್ಯವಾಗಿ ಆಗುತ್ತಿದ್ದರೇ ಒಂದಿಷ್ಟು ಸಮಸ್ಯೆಗಳು. ಕೆಲವೊಮ್ಮೆ ಒತ್ತಡದಿಂದಲೋ ಜೀನ್‌ನಿಂದಲೋ ಇನ್ನೊಂದಿಷ್ಟು ಕಾಂಪ್ಲಿಕೇಶನ್‌ಗಳಾಗುತ್ತವೆ. ಅದರದ್ದು ಮತ್ತೊಂದು ಬಗೆಯ ಪ್ರಾಬ್ಲೆಮ್.
ವಿಭಾಗೂ ಆಗಿದ್ದು ಹೀಗೆ. ಅವಳು ಖಾಸಗಿ ಕಂಪನಿಯಲ್ಲಿ ಹೆಚ್‌ಆರ್ ಆಗಿ ಕೆಲಸ ಮಾಡುತ್ತಾಳೆ. ಮೂವತ್ತರ ವಯಸ್ಸು. ಮಕ್ಕಳಿಗಾಗಿ ಟ್ರೈ ಮಾಡುತ್ತಿದ್ದರೂ ಗರ್ಭ ನಿಲ್ಲುತ್ತಿರಲಿಲ್ಲ. ಅವಳಿಗೆ ಸಡನ್ನಾಗಿ ಒಂದು ಸಮಸ್ಯೆ ಕಾಣಿಸಿಕೊಂಡಿತು. ತಿಂಗಳಲ್ಲಿ ಒಂದು ಬಾರಿ ಬಂದು ಹೈರಾಣು ಮಾಡುತ್ತಿದ್ದ ಪೀರಿಯಡ್ಸ್ ಹದಿನೈದು ದಿನಕ್ಕೊಮ್ಮೆ ಬರತೊಡಗಿತು. ಅದರಿಂದ ವೀಕ್‌ನೆಸ್ (Weakness), ಸುಸ್ತು (Tiredness), ತಲೆನೋವು (Headhache) ಇತ್ಯಾದಿಗಳೆಲ್ಲ ಕಾಣಿಸಿಕೊಂಡವು. ಆದರೆ ಅವಳು ಕೆರಿಯರ್ ಬಗ್ಗೆ ಬಹಳ ಕಾನ್ಶಿಯಸ್ ಆಗಿದ್ದ ಹೆಣ್ಣುಮಗಳು. ಇಂಥದ್ದಕ್ಕೆಲ್ಲ ಕ್ಯಾರೇ ಮಾಡಲಿಲ್ಲ. ತಿಂಗಳು ತಿಂಗಳು ಈ ಸಮಸ್ಯೆ ಬಂತು, ತಡೆಯಲಾಗದ ಹೊಟ್ಟೆನೋವು, ವಿಪರೀತ ಹೊಟ್ಟೆನೋವು ಇತರ ಸಮಸ್ಯೆಗಳೂ ಹೆಚ್ಚಾದವು. ಇನ್ನು ತನ್ನಿಂದಾಗಲ್ಲ ಅಂತಾದಾಗ ಕೊನೆಗೂ ಡಾಕ್ಟರ್ ಹತ್ತರ ಹೋದರೆ ಅವರು ಆಕೆಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು. ಅವಳಿಗೆ ಫೈಬ್ರಾಯ್ಡ್ ಆಗಿತ್ತು. ಇದರಿಂದ ಅವಳಿಗೆ ಈ ಎಲ್ಲ ಸಮಸ್ಯೆಗಳೂ ಬಂದಿದ್ದವು. ಗರ್ಭ ನಿಲ್ಲದ್ದಕ್ಕೂ ಇದೇ ಕಾರಣವಾಗಿತ್ತು.
ಮನಸಿಂದ ಕೆಟ್ಟ ಯೋಚನೆ ದೂರವಿಡ್ಬೇಕಾ? ಈ ತಂತ್ರ ಅನುಸರಿಸಿ ನೋಡಿ, ಸಕ್ಸಸ್ ಗ್ಯಾರೆಂಟಿ
ಹೀಗೆ ಹದಿನೈದು ದಿನಕ್ಕೊಮ್ಮೆ ರಕ್ತಸ್ರಾವ (Bleeding) ಆಗೋದರ ಬಗ್ಗೆ ನಿರ್ಲಕ್ಷಿಸಬೇಡಿ. ಸ್ತ್ರೀರೋಗ ತಜ್ಞರ ಪ್ರಕಾರ, ಪ್ರತಿ 15 ದಿನಗಳಿಗೊಮ್ಮೆ ಪಿರಿಯಡ್ಸ್ (Periods) ಆಗುವುದು ಕೆಲವು ಗಂಭೀರ ಸ್ಥಿತಿಯ ಸಂಕೇತ. ಆದ್ದರಿಂದ ನೀವು ಅಥವಾ ನಿಮ್ಮ ಪರಿಚಯದವರು ಅಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಏಕೆಂದರೆ ಅದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಡ್ಡಪರಿಣಾಮಗಳು (side effects) ಇರಬಹುದು. 15 ದಿನಗಳಿಗೊಮ್ಮೆ ಪಿರಿಯೆಡ್ಸ್ ಆಗುವುದರಿಂದ ಮಹಿಳೆಯರಲ್ಲಿ ರಕ್ತಹೀನತೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಅವರು ಆಯಾಸ, ತಲೆನೋವು, ದೌರ್ಬಲ್ಯ, ತಲೆತಿರುಗುವಿಕೆ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳನ್ನು (Problem) ಎದುರಿಸಬೇಕಾಗಬಹುದು. ಇದು ಮಹಿಳೆಯರಲ್ಲಿ ಅಂಡೋತ್ಪತ್ತಿ ಮೇಲೂ ಪರಿಣಾಮ ಬೀರಬಹುದು.
ಹಾರ್ಮೋನ್ ಸಮಸ್ಯೆಗಳು, ಪಿಸಿಓಎಸ್ (Pcos), ಪಾಲಿಪ್ಸ್, ಥೈರಾಯ್ಡ್ ಕಾಯಿಲೆ ಮತ್ತು ಗರ್ಭಾಶಯದ ಫೈಬ್ರಾಯ್ಡ್‌ಗಳು (Fibroid ) ಹೀಗೆ ಇದಕ್ಕೆ ಕಾರಣಗಳು ಸಾಕಷ್ಟಿರಬಹುದು.
ಎಲ್ಲೋ ಒಮ್ಮೆ ಹೀಗಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಆದರೆ ಪದೇ ಪದೇ ಹೀಗಾದರೆ ಮಾತ್ರ ಇದನ್ನು ನಿರ್ಲಕ್ಷಿಸಬೇಡಿ. ಸಾಮಾನ್ಯವಾಗಿ ಮೂವತ್ತರ ಒಳಗಿನ ಮಹಿಳೆಯರ ಕಂಡುಬರುವ ಈ ಸಮಸ್ಯೆ ಎಷ್ಟೋ ಸಲ ಮೆನೋಪಾಸ್ ಸಮೀಪಿಸುತ್ತಿರುವ ಮಹಿಳೆಯರಲ್ಲೂ ಕಾಣಬಹುದು. ಮಹಿಳೆ ನಿರಂತರವಾಗಿ ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೆ, ಇದರ ಜೊತೆಗೆ ಇನ್ನೂ ಕೆಲವು ರೋಗಲಕ್ಷಣಗಳು ಕಂಡುಬಂದರೂ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಅಪ್ಪಿ ತಪ್ಪಿಯೂ ಲಿಪ್ ಸ್ಟಿಕ್ ಈ ರೀತಿ ಬಳಕೆ ಮಾಡಲೇಬೇಡಿ
ಕೆಳ ಹೊಟ್ಟೆಯಲ್ಲಿ ನೋವು, ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವ, ರಕ್ತಸ್ರಾವದ ಸಮಯದಲ್ಲಿ ಸ್ಪಾಟ್, ಲೈಂಗಿಕತೆ (Sex) ಸಮಯದಲ್ಲಿ ನೋವು, ಮುಟ್ಟಿನ ಸಮಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ನೋವು, ರಕ್ತಸ್ರಾವದ ಸಮಯದಲ್ಲಿ ಕಪ್ಪು ರಕ್ತಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗುವುದು ಉತ್ತಮ.