Asianet Suvarna News Asianet Suvarna News

ಲೈಂಗಿಕ ಕಿರುಕುಳದ ವಿರುದ್ಧ ನಿಂತು ಅದನ್ನು ಜಯಿಸೋದು ಹೇಗೆ?

ದೇಶದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ  2022 ರ ವರದಿಯ ಪ್ರಕಾರ, ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು 2020 ರಲ್ಲಿ 3,71,503 ಇತ್ತು. 2022 ರಲ್ಲಿ ಈ ಸಂಖ್ಯೆ 4,45,256ಕ್ಕೆ ಏರಿದೆ. ದಿನೇ ದಿನೇ ದೌರ್ಜನ್ಯ ಹೆಚ್ಚಾಗ್ತಿದ್ದು, ಅದಕ್ಕೆ ಮಹಿಳೆಯರೇ ಪರಿಹಾರ ಕಂಡುಕೊಳ್ಳಬೇಕಿದೆ. 
 

Know Why It Is Important To Address Sexual Harassment Trauma And Overcome It roo
Author
First Published Feb 27, 2024, 3:46 PM IST

ಮಹಿಳೆ ಹಾಗೂ ಹಿಂಸೆ ಇವೆರಡನ್ನು ಒಂದು ನಾಣ್ಯದ ಎರಡು ಮುಖ ಎನ್ನುವಂತೆ ನೋಡುವವರೇ ಹೆಚ್ಚು. ಸಾರ್ವಜನಿಕ ಪ್ರದೇಶದಲ್ಲಿ ಮಾತ್ರವಲ್ಲ ಮನೆಯಲ್ಲಿ, ಆಪ್ತರಿಂದಲೇ ಹೆಣ್ಣು ಶೋಷಣೆಗೆ ಒಳಗಾಗ್ತಾಳೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲಿ ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯವನ್ನು ಧೈರ್ಯವಾಗಿ ಎಲ್ಲರ ಮುಂದೆ ಹೇಳೋದಿಲ್ಲ. ಇದ್ರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗ್ತಿದೆ. ಕಚೇರಿ, ಕಾಲೇಜು, ಶಾಲೆ, ಸಾರ್ವಜನಿಕ ಸ್ಥಳ, ಸಾರಿಗೆ ಅಥವಾ ಆನ್‌ಲೈನ್‌ನಂತಹ ವಿವಿಧ ಸ್ಥಳಗಳಲ್ಲಿ ಮಹಿಳೆ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿದೆ. ಈಗಿನ ದಿನಗಳಲ್ಲಿ ಮಹಿಳೆ ಮಾತ್ರವಲ್ಲ ಪುರುಷ ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗ್ತಿದ್ದಾನೆ.

ಲೈಂಗಿಕ (Sexual) ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ನಡುವಿನ ವ್ಯತ್ಯಾಸವೇನು? : ಮೊದಲು ಇವರೆಡರ ಮಧ್ಯೆ ಇರುವ ವ್ಯತ್ಯಾಸವನ್ನು ಅರಿಯಬೇಕು. ಲೈಂಗಿಕ ಕಿರುಕುಳ (Harassment) ವು ಇಷ್ಟವಿಲ್ಲದ ಮತ್ತು ಸೂಕ್ತವಲ್ಲದ ಲೈಂಗಿಕ ನಡವಳಿಕೆಯಾಗಿದೆ. ಇದು ಮೌಖಿಕ, ದೈಹಿಕ ಮತ್ತು ದೃಶ್ಯ ವಿಧಾನಗಳನ್ನು ಒಳಗೊಂಡಿದೆ. ಇದು ಲೈಂಗಿಕ ಕಾಮೆಂಟ್‌ಗಳು, ಲೈಂಗಿಕ ಅನುಕೂಲಗಳು, ಅಗ್ಗದ ಹಾಸ್ಯಗಳು, ಸನ್ನೆಗಳನ್ನು ಒಳಗೊಂಡಿರುತ್ತದೆ. ಲೈಂಗಿಕ ದೌರ್ಜನ್ಯವು ಒಂದು ರೀತಿಯ ದೈಹಿಕ ಕ್ರಿಯೆಯಾಗಿದೆ. ಇದು ಸಮ್ಮತಿಯಿಲ್ಲದೆ ಲೈಂಗಿಕ ಕ್ರಿಯೆಗಳು ಅಥವಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಅತ್ಯಾಚಾರ, ಕಿರುಕುಳ, ಅನಗತ್ಯ ಸ್ಪರ್ಶ, ಬಲಾತ್ಕಾರ ಇದ್ರಲ್ಲಿ ಬರುತ್ತದೆ. 

12 ಗಂಟೆಕ್ಕಿಂತಲೂ ಹೆಚ್ಚು ಹೊತ್ತು ಬ್ರಾ ಧರಿಸಿದರೆ ಆರೋಗ್ಯಕ್ಕೆ ಕುತ್ತು!

ಮಾನಸಿಕ (Mental) ಆರೋಗ್ಯದ ಮೇಲೆ ಪರಿಣಾಮ : ಈ ಲೈಂಗಿಕ ಕಿರುಕುಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ಇದು ಒಮ್ಮೆ ನಡೆದಿದೆ, ಮುಂದೆ ಆಗೋದಿಲ್ಲವೆಂದು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಅವರ ಅರಿವಿಲ್ಲದೆ ಅವರ ಮನಸ್ಸನ್ನು ಇದು ಹಾಳು ಮಾಡಿರುತ್ತದೆ. ಲೈಂಗಿಕ ಕಿರುಕುಳವು ಆತಂಕ, ಪ್ಯಾನಿಕ್ ಅಟ್ಯಾಕ್, ಖಿನ್ನತೆ ಮತ್ತು ನಂತರದ ಆಘಾತಕಾರಿ ಒತ್ತಡವನ್ನು ಉಂಟುಮಾಡುತ್ತದೆ. ಈ ಜನರಿಗೆ ತಕ್ಷಣ ಮಾನಸಿಕ ಚಿಕಿತ್ಸೆಯ ಅಗತ್ಯವಿರುತ್ತದೆ. ಇಲ್ಲವೆಂದ್ರೆ ಜೀವನದುದ್ದಕ್ಕೂ ಸಮಸ್ಯೆ ಎದುರಿಸಬೇಕಾಗುತ್ತದೆ. 

ಲೈಂಗಿಕ ಕಿರುಕುಳದ ಆಘಾತದಿಂದ ಹೊರಗೆ ಬರೋದು ಹೇಗೆ? : 

ಆಪ್ತರ ಜೊತೆ ಮಾತನಾಡಿ : ಲೈಂಗಿಕ ಕಿರುಕುಳಕ್ಕೆ ಒಳಗಾದ ವ್ಯಕ್ತಿ, ಭಯ ಅಥವಾ ಅವಮಾನದ ಕಾರಣಕ್ಕೆ ಅದನ್ನು ಮುಚ್ಚಿಡುವ ಪ್ರಯತ್ನ ನಡೆಸುತ್ತಾನೆ. ಇದು ತಪ್ಪು. ಏನಾಗಿದೆ ಎಂಬುದನ್ನು ಆಪ್ತರ ಜೊತೆ ಹೇಳಿಕೊಳ್ಳಬೇಕು. ಅವರಿಂದ ಪರಿಹಾರ ಸಿಗದೆ ಹೋದ್ರೂ ಮನಸ್ಸು ಸ್ವಲ್ಪಮಟ್ಟಿಗೆ ಹಗುರಾಗುತ್ತದೆ.

ವಿವಾಹಿತೆಯರು ಸೋಮವಾರ ತಲೆಸ್ನಾನವನ್ನೇಕೆ ಮಾಡಬಾರದು?

ಕೋಪ – ಹತಾಷೆ : ನಿಮ್ಮ ಮೇಲೆ ಲೈಂಗಿಕ ಕಿರುಕುಳ ಆಗ್ತಿದೆ ಎನ್ನುವ ಸಮಯದಲ್ಲಿ ನೀವು ಅದನ್ನು ವಿರೋಧಿಸಬೇಕು. ವ್ಯಕ್ತಿ ಯಾರೇ ಆಗಿರಲಿ ಅವನ ಕೆಲಸವನ್ನು ವಿರೋಧಿಸಬೇಕು. ಒಂದ್ವೇಳೆ ಆ ಕ್ಷಣದಲ್ಲಿ ಸಾಧ್ಯವಿಲ್ಲ ಎಂದಾದ್ರೆ ಮನೆಗೆ ಬಂದ ನಂತ್ರ ಅದನ್ನು ಡೈರಿಯಲ್ಲಿ ಬರೆದಿಡಿ. ನಿಮ್ಮ ಮನಸ್ಸಿನಲ್ಲಿರು ಭಾವನೆಯನ್ನು ಯಾವುದೇ ರೂಪದಲ್ಲಿಯಾದ್ರೂ ಹೊರಗೆ ಹಾಕಿ. ಅದು ಮನಸ್ಸಿನಲ್ಲೇ ಮರವಾಗಲು ಬಿಡಬೇಡಿ. 

ದೂರು ನೀಡಿ (Lodge Complaint) : ನಿಮ್ಮ ಮೇಲೆ ಲೈಂಗಿಕ ಕಿರುಕುಳವಾಗಿದೆ ಎಂದ ಸಂದರ್ಭದಲ್ಲಿ ತಪ್ಪಿತಸ್ಥರ ವಿರುದ್ಧ ದೂರು ನೀಡಿ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ. ನೀವು ನಿಮ್ಮ ಮೇಲಾದ ದೌರ್ಜನ್ಯವನ್ನು ಮುಚ್ಚಿಟ್ಟರೆ ಆ ವ್ಯಕ್ತಿ ಇನ್ನೂ ಅನೇಕ ಮಹಿಳೆಯರಿಗೆ ಕಿರುಕುಳ ನೀಡಬಹುದು. ನಿಮ್ಮಂತೆ ಇನ್ನೊಬ್ಬರು ಆಗ್ಬಾರದು ಅಂದ್ರೆ ತಕ್ಷಣ ಕ್ರಮತೆಗೆದುಕೊಳ್ಳೋದು ಮುಖ್ಯ.

ಮನೋವೈದ್ಯರ ನೆರವು (Take help of Psychologist) : ನಿಮ್ಮ ಮನಸ್ಸು ಯಾವ ಸ್ಥಿತಿಯಲ್ಲಿದೆ ಎನ್ನುವುದರ ಮೇಲೆ ನೀವು ವೈದ್ಯರನ್ನು ಭೇಟಿಯಾಗ್ಬೇಕು. ನಿಮ್ಮೆಲ್ಲ ಪ್ರಯತ್ನ ವಿಫಲವಾಗಿದ್ದರೆ, ಖಿನ್ನತೆ, ಒತ್ತಡ ವಿಪರೀತವಾಗಿದ್ದರೆ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

ಆತ್ಮವಿಶ್ವಾಸ ಮುಖ್ಯ (Be Confident) : ನನ್ನಿಂದ ತಪ್ಪಾಗಿದೆ ಎಂದು ಆಲೋಚನೆ ಮಾಡಬೇಡಿ. ನಿಮ್ಮನ್ನು ನೀವು ಕೀಳಾಗಿ ನೋಡುವ ಬದಲು ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಇದು ಆಘಾತದಿಂದ ಚೇತರಿಸಿಕೊಳ್ಳಲು ನೆರವಾಗುತ್ತದೆ.

Follow Us:
Download App:
  • android
  • ios