Asianet Suvarna News Asianet Suvarna News

ಸ್ತನದ ಸಮಸ್ಯೆ ಹೆಣ್ಣಿಗೆ ಕಾಡೋದು ಕಾಮನ್, ಇಗ್ನೋರ್ ಮಾಡೋದು ಬೇಡ

ಹೆಣ್ಣಿನ ಸೌಂದರ್ಯ ಎಲ್ಲರನ್ನು ಸೆಳೆಯುತ್ತದೆ. ಬಹುತೇಕರು ಮನಸ್ಸಿಗಿಂತ ದೇಹ ಸೌಂದರ್ಯಕ್ಕೆ ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಎಲ್ಲರ ಮುಂದೆ ಚಂದ ಕಾಣ್ಬೇಕೆಂಬ ಬಯಕೆ ಮಹಿಳೆಗಿರುತ್ತದೆ. ಆದ್ರೆ ಆಕೆ ದೇಹಕ್ಕೆ ಸಂಬಂಧಿಸಿದ ಕೆಲ ಸಮಸ್ಯೆ ಎದುರಿಸ್ತಿರ್ತಾಳೆ. ಅದನ್ನು ಯಾರ ಬಳಿಯೂ ಹೇಳಿಕೊಳ್ಳೋದಿಲ್ಲ. 
 

Health tips for women
Author
Bangalore, First Published May 31, 2022, 1:44 PM IST

ಹೆಣ್ಣಿನ (Woman) ನ ದೇಹಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳಿವೆ, ಅದರ ಬಗ್ಗೆ ಇಂದಿಗೂ ಬಹಿರಂಗವಾಗಿ ಮಾತನಾಡುವುದಿಲ್ಲ. ಹುಡುಗಿಯರು ತಮ್ಮ ದೇಹ (Body) ಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಚ್ಚರಿ ಅಂದ್ರೆ ಈ ಸಮಸ್ಯೆ ತಮಗೊಬ್ಬರಿಗೆ ಕಾಡ್ತಿದೆ ಎಂದು ಅವರು ಭಾವಿಸ್ತಾರೆ. ಆದ್ರೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ದೇಹದ ಕೆಲ ಸಮಸ್ಯೆಗಳು ನಿಮಗೊಬ್ಬರಿಗೆ ಮಾತ್ರವಲ್ಲ ಅನೇಕರಿಗೆ ಕಾಡ್ತಿರುತ್ತದೆ. ಸಾಮಾನ್ಯವಾಗಿ ಹುಡುಗಿಯರು ಸ್ತನದ ಬಗ್ಗೆ ಹೆಚ್ಚು ಚಿಂತಿತರಾಗಿರ್ತಾರೆ. ಹಾಗಾಗಿಯೇ ಮೇಲುಡುಪುಗಳು, ಟೀ ಶರ್ಟ್‌ಗಳು ಅಥವಾ ಕುರ್ತಿಗಳನ್ನು ಖರೀದಿಸುವ ವೇಳೆ ಸಾಕಷ್ಟು ಆಲೋಚನೆ ಮಾಡ್ತಾರೆ. ಮೇಲುಡುಗೆಯ ವಿನ್ಯಾಸದಿಂದ ಹಿಡಿದು ನೆಕ್ ಕಟ್ ವರೆಗೆ ಅನೇಕ ವಿಷ್ಯಗಳನ್ನು ಗಮನಿಸಿ ಖರೀದಿ ಮಾಡ್ತಾರೆ. ಇದಕ್ಕೆ ಕಾರಣ ಅವರ ಸ್ತನ (Breast) ದ ಆಕಾರ ಹಾಗೂ ಎದೆಯ ಭಾಗ.  ಡ್ರೆಸ್ ಸಡಿಲವಾಗಿದ್ದರೂ ಸಮಸ್ಯೆ, ಬಿಗಿಯಾಗಿದ್ದರೂ ಸಮಸ್ಯೆ ಕಾಡುತ್ತದೆ. ಸ್ತನಕ್ಕೆ ಸಂಬಂಧಿಸಿದಂತೆ ಹುಡುಗಿಯರಲ್ಲಿ ಕೆಲ ಗೊಂದಲವಿದೆ.  

ಸ್ತನದ ಗಾತ್ರ (Breast Size) : ಮಹಿಳೆಯ ಎರಡೂ ಸ್ತನ ಗಾತ್ರ ಒಂದೇ ಆಗಿರುವುದಿಲ್ಲ. ಅನೇಕ ಮಹಿಳೆಯರು ತನಗೊಂದೇ ಈ ಸಮಸ್ಯೆ ಎಂದು ಭಾವಿಸ್ತಾರೆ. ಇದನ್ನು ಬೇರೆಯವರ ಮುಂದೆ ಹೇಳಿಕೊಳ್ಳಲು ನಾಚಿಕೊಳ್ತಾರೆ. ಆದ್ರೆ ವೈದ್ಯರ ಪ್ರಕಾರ, ದೇಹದ ಭಾಗಗಳು ಒಂದೇ ಆಗಿರುವ ಯಾವುದೇ ಮಹಿಳೆ ಇಲ್ಲ. ಡಾಕ್ಟರ್ ಕರ್ಟ್ಲಿ ಪಾರ್ಕರ್ ಜೋನ್ಸ್ ಪ್ರಕಾರ, ಸುಮಾರು ಶೇಕಡಾ 90ರಷ್ಟು ಮಹಿಳೆಯರ ಸ್ತನದ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ. ಒಂದು ಸ್ತನದ ಗಾತ್ರದಿಂದ ಇನ್ನೊಂದು ಸ್ತನದ ಗಾತ್ರದ ಮಧ್ಯೆ ಶೇಕಡಾ 10 ರಿಂದ 15 ರಷ್ಟು ವ್ಯತ್ಯಾಸವನ್ನು ನಾವು ಕಾಣ್ಬಹುದು ಎನ್ನುತ್ತಾರೆ ವೈದ್ಯರು.  ಈ ವ್ಯತ್ಯಾಸದಿಂದಾಗಿ, ಬ್ರಾಗಳು ಮತ್ತು ಬಟ್ಟೆಗಳ ಖರೀದಿ ವೇಳೆ ಗೊಂದಲ ಎದುರಾಗುತ್ತದೆ. ಅಂಥಹ ಪರಿಸ್ಥಿತಿಯಲ್ಲಿ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ. 

ಅಳತೆ ಮಾಡಿ : ನಿಮ್ಮ ಸ್ತನದ ಆಕಾರದಲ್ಲಿ ವ್ಯತ್ಯಾಸವಿದೆ ಎಂದಾದ್ರೆ ಟೇಪ್ ಸಹಾಯದಿಂದ ಮನೆಯಲ್ಲಿ ನಿಮ್ಮ ಸ್ತನ ಭಾಗದ ಸಂಪೂರ್ಣ ಅಳತೆಯನ್ನು ತೆಗೆದುಕೊಳ್ಳಿ. ನಿಮಗೆ ಸಂದೇಹವಿದ್ದರೆ, ಒಳ ಉಡುಪು ಹೊಂದಿರುವ ಮಳಿಗೆಗೆ ಹೋಗಿ ಅಲ್ಲಿನ ಮಹಿಳಾ ಸಿಬ್ಬಂದಿ ಸಹಾಯವನ್ನು ನೀವು ಪಡೆಯಬಹುದು. ನಿಮ್ಮ ಸ್ತನದ ಗಾತ್ರ ತಿಳಿದ ಮೇಲೆ ಅದಕ್ಕೆ ತಕ್ಕಂತೆ ಬ್ರಾ ಖರೀದಿ ಮಾಡ್ಬೇಕು. 

ಫಿಟ್ಟಿಂಗ್ ನಲ್ಲಿ ಕಾಡುತ್ತೆ ಸಮಸ್ಯೆ : ಸ್ತನದ ಗಾತ್ರದಲ್ಲಿ ವ್ಯತ್ಯಾಸವಿದೆ ಎಂದಾಗ ಫಿಟ್ಟಿಂಗ್ ನಲ್ಲಿ ಸಮಸ್ಯೆ ಕಾಡುತ್ತದೆ. ಹಾಗೆ ಯಾವ ಗಾತ್ರದ ಬ್ರಾ ಖರೀದಿ ಮಾಡ್ಬೇಕೆಂಬ ಗೊಂದಲ ಮೂಡುತ್ತದೆ. ಯಾವುದೇ ಕಾರಣಕ್ಕೂ ಸಣ್ಣ ಸ್ತನದ ಗಾತ್ರಕ್ಕನುಗುಣವಾಗಿ ಬ್ರಾ ಖರೀದಿ ಮಾಡ್ಬೇಡಿ. ಇದ್ರಿಂದ ಇನ್ನೊಂದು ಸ್ತನದ ಮೇಲೆ ಒತ್ತಡ ಬೀಳುತ್ತದೆ. ಇದ್ರಿಂದ ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತದೆ.  

RELATIONSHIP TIPS: ನಾದಿನಿ-ನಿಮ್ಮ ಸಂಬಂಧ ಹೇಗಿದೆ?

ಬಟ್ಟೆ ಖರೀದಿ ವೇಳೆ ಇರಲಿ ಗಮನ : ಡ್ರೆಸ್ ಖರೀದಿ ಮಾಡುವಾಗ ಅದರ ನೆಕ್ ಬಗ್ಗೆ ಗಮನವಿರಲಿ. ತುಂಆಬಾ ಡೀಪ್ ನೆಕ್ಕಿನ ಡ್ರೆಸ್ ಖರೀದಿ ಮಾಡ್ಬೇಡಿ. ಏಕೆಂದರೆ ಇಂದು ಒಂದು ಬದಿಯಲ್ಲಿ ಸಂಪೂರ್ಣ ಕವರ್ ಆಗುತ್ತದೆ. ಆದ್ರೆ ಇನ್ನೊಂದು ಭಾಗದಲ್ಲಿ ಅಸಹ್ಯ ಕಾಣುತ್ತದೆ. ಒಂದು ವೇಳೆ ಅಂಥ ಬಟ್ಟೆ ಖರೀದಿ ಮಾಡಿದ್ದರೆ ಒಳಗಿನಿಂದ ಡಬಲ್ ಟೇಪ್ ಅಥವಾ ಫ್ಯಾಬ್ರಿಕ್ ಟೇಪ್ನೊಂದಿಗೆ ಚರ್ಮಕ್ಕೆ ಅಂಟಿಸಿಕೊಳ್ಳಿ. ಇದ್ರಿಂದ ಡ್ರೆಸ್ ಅಂದ ಹಾಳಾಗುವುದಿಲ್ಲ.    

ಬೋರ್ ಎಂದರೆ ಬತ್ತಿ ಎಳೆಯೋಲ್ಲ, ಗ್ಲಾಸ್ ಹಿಟ್ಕೊಂಡು ಕೂರೋಲ್ಲ ಗುರು ಹೆಣ್ಮಕ್ಕಳು!

ಇದಲ್ಲದೆ ಫೋಮ್, ಫ್ಯಾಬ್ರಿಕ್ ಹೀಗೆ ಹಲವು ಬಗೆಯ ವಸ್ತುಗಳಿಂದ ತಯಾರಿಸಿದ ಪ್ರತ್ಯೇಕ ಬ್ರಾ ಕಪ್ ಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ನೀವು ಅವುಗಳನ್ನು ಖರೀದಿಸಬಹುದು. ಬ್ರಾ ಧರಿಸಿದ ನಂತರ, ಸ್ತನ ಗಾತ್ರ ಚಿಕ್ಕದಾಗಿರುವ ಬದಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಕಪ್‌ಗಳನ್ನು ಒಳಭಾಗದಲ್ಲಿ ಇರಿಸಬಹುದು.  

 

Health tips for women

Follow Us:
Download App:
  • android
  • ios