Asianet Suvarna News Asianet Suvarna News

Relationship Tips: ನಾದಿನಿ-ನಿಮ್ಮ ಸಂಬಂಧ ಹೇಗಿದೆ?

ಸ್ನೇಹಿತೆಯರಂತಿರುವ ಅತ್ತಿಗೆ-ನಾದಿನಿಯರೂ ಇರುತ್ತಾರೆ. ಹಾಗೆಯೇ, ಸ್ಪರ್ಧೆಗೆ ಬಿದ್ದ ವೈರಿಗಳಂತೆ ಕಚ್ಚಾಡುವವರೂ ಇದ್ದಾರೆ. ಸುಖಾಸುಮ್ಮನೆ ಭಿನ್ನಾಭಿಪ್ರಾಯ ಸೃಷ್ಟಿಸಿ ಮಜಾ ತೆಗೆದುಕೊಳ್ಳುವವರೂ ಇದ್ದಾರೆ. ನಿಮ್ಮ ಅತ್ತಿಗೆ-ನಾದಿನಿಯರೂ ಹಾಗಿದ್ದರೆ ತಾಳ್ಮೆಗೆಡದೆ ನಿಭಾಯಿಸಿ.
 

How to improve toxic relationship with sister in law
Author
Bangalore, First Published May 30, 2022, 4:37 PM IST

ಅತ್ತೆ (Mother-in-Law) ಮನೆಯವರೊಂದಿಗಿನ ಸಂಬಂಧ ಬಲು ನಾಜೂಕಿನದ್ದು. ಅತ್ತೆ-ಸೊಸೆ ಸಂಬಂಧದಂತೆಯೇ ಅತ್ತಿಗೆ-ನಾದಿನಿಯರ ಜತೆಗಿನ ಸಂಬಂಧವೂ ಹೆಣ್ಣು ಮಕ್ಕಳಿಗೆ  ಮುಖ್ಯವಾಗುತ್ತದೆ. ಅತ್ತೆ ಮನೆಯಲ್ಲಿ ನಿಮ್ಮದೇ ವಾರಗೆಯ ಅಥವಾ ಸ್ವಲ್ಪ ಹಿರಿಯ ಅತ್ತಿಗೆ ಅಥವಾ ನಾದಿನಿ (Sister-in-Law) ಇರಬಹುದು. ಅವರ ಜತೆಗೂ ಚೆನ್ನಾಗಿರಬೇಕು ಎಂದು ಬಯಸುವುದು ಸಹಜ. ಇಲ್ಲವಾದಲ್ಲಿ ಅಡಿಗಡಿಗೆ ಮುಜುಗರ, ಕಿರಿಕಿರಿ (Irritation) ತಪ್ಪಿದ್ದಲ್ಲ. ನೀವು ಎಷ್ಟೇ ಪ್ರಯತ್ನಿಸಿದರೂ ಕೆಲವೊಮ್ಮೆ ಅವರು ನಿಮ್ಮನ್ನು ಇಷ್ಟಪಡದೆ ಹೋಗಬಹುದು. ಅಥವಾ ವಿನಾಕಾರಣ ನಿಮ್ಮಿಂದ ದೂರ ಇರಲು ಯತ್ನಿಸಬಹುದು.
 
ಅತ್ತಿಗೆ-ನಾದಿನಿಯರು ಕೆಲವೊಮ್ಮೆ ಸಾಕಷ್ಟು ಕಿರುಕುಳ ನೀಡಲೂ ಮುಂದಾಗುತ್ತಾರೆ. ವರದಕ್ಷಿಣೆ ಪ್ರಕರಣಗಳಲ್ಲಿ (Dowry Case) ಅದೆಷ್ಟೋ ಬಾರಿ, ಅತ್ತೆ-ಮಾವನ ಜತೆಗೆ ಅವರೂ ಸಹಕಾರ ನೀಡುವುದನ್ನು ನಾವು ಕಾಣುತ್ತೇವೆ. ಅಂತಹ ಪ್ರಕರಣಗಳು ಇಲ್ಲವಾದರೂ ಅವರು ಸಾಕಷ್ಟು ಬಾರಿ ನಿಮ್ಮ ಬಗ್ಗೆ ದೂರಬಹುದು, ಸೂಕ್ತ ಕಾರಣವಿಲ್ಲದೆ ಹೋದರೂ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರದೆ ಇರಬಹುದು. ಅದೇನೇ ಇದ್ದರೂ ಕೆಲವರು ಸಂಬಂಧದಲ್ಲಿ (Relationship) ಹುಳಿ ಹಿಂಡಲು ಯತ್ನಿಸುತ್ತಲೇ ಇರುತ್ತಾರೆ. ವಾರಗೆಯವರಾದರಂತೂ ಈ ವಿಚಾರದಲ್ಲಿ ಭಾರೀ ಎಚ್ಚರಿಕೆ ವಹಿಸಬೇಕಾಗುತ್ತದೆ. 

ನಿಮ್ಮ ಅತ್ತಿಗೆ-ನಾದಿನಿ ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಹೊಂದಿಲ್ಲ, ಸಂಬಂಧವನ್ನು ಹದಗೆಡಿಸಲು ಯತ್ನಿಸುತ್ತಿದ್ದಾರೆ ಎನ್ನುವುದನ್ನು ಕೆಲವು ಸನ್ನಿವೇಶ, ಅವರ ವರ್ತನೆಗಳ ಮೂಲಕ ಅರಿತುಕೊಳ್ಳಬಹುದು. ಅಂತಹ ಕೆಲವು ಅಂಶಗಳ ಬಗ್ಗೆ ತಿಳಿದುಕೊಂಡಿರುವುದು ಉತ್ತಮ.

ಹೆಂಡ್ತಿಗೆ ಮಕ್ಕಳಾಗೋಲ್ಲ ಅಂತ ಅವಳ ತಂಗಿ ಜೊತೆ ಮಲಗ್ತಾನೆ ಗಂಡ

•    ನಿಮ್ಮ ಬಗ್ಗೆ ಇಲ್ಲಸಲ್ಲದ ಗಾಸಿಪ್ (Gossip) ಮಾಡ್ತಾರೆ
ನಿಮ್ಮ ಅತ್ತಿಗೆ ಅಥವಾ ನಾದಿನಿ ನಿಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳುವುದು ನಿಮ್ಮ ಗಮನಕ್ಕೆ ಬಂದಿದೆಯಾ? ಹಾಗಿದ್ದರೆ ಹುಷಾರಾಗಿರಿ. ಅವರು ನಿಮ್ಮ ಅತ್ತೆ-ಮಾವನ ಎದುರು ನಿಮ್ಮ ಬಗ್ಗೆ ಚಾಡಿ ಹೇಳಬಹುದು. ನಿಮ್ಮ ಬಗ್ಗೆ ಅವರಲ್ಲಿ ಕಹಿ ಭಾವನೆ (Bad Feel) ಮೂಡಿಸಬಹುದು. ನೀವು ಅವರೊಂದಿಗೆ ಹಂಚಿಕೊಂಡ ಯಾವುದಾದರೂ ವಿಷಯಗಳ ಬಗ್ಗೆ ಅವರಿಗೆ ಹೇಳಿ ಮುಜುಗರ ಸೃಷ್ಟಿಬಹುದು. ಅಥವಾ ಸೋಷಿಯಲ್ ಮೀಡಿಯಾದ ನಿಮ್ಮ ಆಗುಹೋಗುಗಳನ್ನು ಇಟ್ಟುಕೊಂಡು ಅವಹೇಳನ ಮಾಡಬಹುದು. ಅಂತಹ ನಾದಿನಿ ಅಥವಾ ಅತ್ತಿಗೆ ನಿಮಗೂ ಇದ್ದರೆ ಅವರನ್ನು ಎಷ್ಟು ಬೇಕೋ ಅಷ್ಟಕ್ಕೇ ಇಡಿ. ಅಲ್ಲದೆ, ಈ ಕುರಿತು ನಿಮ್ಮ ಪತಿಗೆ (Husband) ಮಾಹಿತಿ ನೀಡಿ.

•    ನಿಮ್ಮನ್ನು ನಿಯಂತ್ರಿಸಲು ಯತ್ನಿಸುತ್ತಾರೆ (Try to Control)
ನೀವು ಮಾಡುವ ಎಲ್ಲ ಕೆಲಸದಲ್ಲೂ ಏನಾದರೊಂದು ಕೊಂಕು ಹುಡುಕಬಹುದು. ಅಡುಗೆಯಲ್ಲಿ, ಸ್ವಚ್ಛತೆಯಲ್ಲಿ, ಯಾವುದೇ ಕಾರ್ಯಗಳ ಕುರಿತು ಕಮೆಂಟ್ ಮಾಡಬಹುದು. ಈ ಮೂಲಕ ನಿಮ್ಮನ್ನು ನಿಯಂತ್ರಿಸಲು ಯತ್ನಿಸಬಹುದು. ಎಲ್ಲವನ್ನೂ ತಮ್ಮನ್ನು ಕೇಳಿಯೇ ನಿರ್ಧರಿಸಬೇಕು ಎನ್ನುವ ಧೋರಣೆಯನ್ನೂ ತೋರಬಹುದು. ಅವರ ತಾಯ್ತಂದೆಯರ ಬೇಕುಬೇಡಗಳು ಅವರಿಗೆ ಚೆನ್ನಾಗಿ ಗೊತ್ತಿರುವುದರಿಂದ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಹಾಗೂ ತಾವೇ ಗ್ರೇಟ್ ಎಂದು ತೋರ್ಪಡಿಸಿಕೊಳ್ಳಬಹುದು.

ಹೆಂಡತಿಯ ತಂಗಿಯನ್ನೇ ಪ್ರೇಮದ ಬಲೆಗೆ ಬೀಳಿಸಿದ ಭಾವ

•    ಬೇಕಾಬಿಟ್ಟಿ ಸಲಹೆ (Advice) ನೀಡಬಹುದು
ನಿಮ್ಮನ್ನು ಟೇಕನ್ ಫಾರ್ ಗ್ರಾಂಟೆಡ್ ಥರ (Taken for Granted) ಅವರು ಟ್ರೀಟ್ ಮಾಡಬಹುದು. ಅವರ ಸಮಯಕ್ಕೆ ನೀವು ಸಿಗಲೇಬೇಕು, ಅವರು ಯಾವ ಸಮಯಕ್ಕೆ ಏನು ಹೇಳಿದರೂ ಸೈ ಎನ್ನಬೇಕು ಎಂದು ಬಯಸುತ್ತಾರೆ. ಒಂದೊಮ್ಮೆ ಬೇರೆ ಮನೆಯಲ್ಲಿದ್ದರೂ ಮುನ್ಸೂಚನೆಯನ್ನೇ ಕೊಡದೆ ಮನೆಗೆ ಆಗಮಿಸಬಹುದು. ನಿಮ್ಮ ಪ್ಲಾನ್ ಹಾಳುಮಾಡಬಹುದು. ಅಲ್ಲದೆ, ಹಾಗೆ ಮಾಡು, ಹೀಗೆ ಮಾಡು ಎಂದು ಬೇಕಾಬಿಟ್ಟಿ ಸಲಹೆ ನೀಡುತ್ತ ನಿಮ್ಮ ಸಮಯ ಕೊಲ್ಲಬಹುದು. ನಿಮ್ಮ ಅತ್ತಿಗೆಯೂ ಇಂಥದ್ದೇ ಧೋರಣೆ ಹೊಂದಿದ್ದು, ನಿಮಗೆ ಸಾಕಷ್ಟು ಕಿರಿಕಿರಿ ಮಾಡುತ್ಡತಿದ್ಬದರೆ ತಾಳ್ಮೆಗಡೆದೆ ಅವರನ್ನು ನಿಭಾಯಿಸಬೇಕು. ಪತಿಯ ಸಹಕಾರವನ್ನೂ ಪಡೆದುಕೊಳ್ಳಬೇಕು. ನೀವು ಕೋಪಿಸಿಕೊಂಡರೆ ಇಡೀ ಮನೆಯ ವಾತಾವರಣ ಬದಲಾಗುತ್ತದೆ ಹಾಗೂ ನೀವು ದೋಷಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಹೀಗಾಗಿ, ತಾಳ್ಮೆ  ಇರಲಿ.

Follow Us:
Download App:
  • android
  • ios