Asianet Suvarna News Asianet Suvarna News

ಸೊಸೆ ಪ್ರಚೋದನಕಾರಿ ತುಂಡುಡುಗೆ ಹಾಕಿದ್ದಕ್ಕೆ ಸಿಟ್ಟು, ಹಾಟ್ ಸೂಪ್ ಎರಚಿದ ಮಾವ!

ಅತ್ತೆ-ಸೊಸೆಯರ ಜಗಳ ನಡೆಯೋದು ಸಾಮಾನ್ಯ. ಆದ್ರೆ ಇಲ್ಲೊಂದೆಡೆ ಮಾತ್ರ ಮಾವ-ಸೊಸೆ ಮಧ್ಯೆ ಸಿಕ್ಕಾಪಟ್ಟೆ ಜಗಳ ನಡೆದು ಹೋಗಿದೆ. ಅಷ್ಟಕ್ಕೇ ಸಿಟ್ಟಿಗೆದ್ದ ಮಾವ,  ಸೊಸೆಯ ಮೇಲೆ ಹಾಟ್ ಸೂಪ್ ಎರೆಚಿದ್ದಾರೆ. ಅದಕ್ಕೇನು ಕಾರಣ ಅಂತ ಗೊತ್ತಾದ್ರೆ ನೀವು ಅರೆ ಹೀಗೂ ಇದ್ದಾರ ಅಂತ ಗಾಬರಿಯಾಗೋದು ಖಂಡಿತ. 

Father in law spilled hot soup on daughter in law who was dressed in rags Vin
Author
First Published Jun 22, 2023, 9:16 AM IST | Last Updated Jun 22, 2023, 9:16 AM IST

ಹಲವು ಮನೆಗಳಲ್ಲಿ ಅತ್ತೆ-ಸೊಸೆ ಮಧ್ಯೆ ಆಗಿ ಬರಲ್ಲ. ಇಬ್ಬರ ಮಧ್ಯೆ ಏನಾದರೊಂದು ಕಾರಣಕ್ಕೆ ಜಗಳವಾಗ್ತಾನೇ ಇರುತ್ತೆ. ಮಾವ-ಸೊಸೆಗೆ ಆಗಿ ಬರಲ್ಲ ಅನ್ನೋ ಘಟನೆಗಳು ಕಡಿಮೆ. ಆದ್ರೆ ಸೊಸೆ ಹಾಕಿರೋ ಡ್ರೆಸ್ ತುಂಬಾ ಚಿಕ್ಕದಾಗಿದೆ ಎಂದು ಆಕೆಯ ಮಾವ ಮೈ ಮೇಲೆ ಬಿಸಿ ಸೂಪ್ ಎರಚಿದ ಘಟನೆ ಚೀನಾದಲ್ಲಿ ನಡೆದಿದೆ. ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಊಟ ಬಡಿಸಲು ಬಂದಾಗ ಸೊಸೆ ತೊಟ್ಟಿದ್ದ ಡ್ರೆಸ್ ಇಷ್ಟವಾಗದೆ ಮಾವನಿಗೆ ಕೋಪ ಬಂದಿತ್ತು. ಇದರಿಂದ ಸಿಟ್ಟಿಗೆದ್ದು, ಡೈನಿಂಗ್ ಟೇಬಲ್ ನಲ್ಲಿ ಕುಳಿತಿದ್ದ ಯುವತಿಯ ಮೇಲೆ ಬಿಸಿ ಬಿಸಿ ಸೂಪ್ ಸುರಿದಿದ್ದಾರೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಝು ಎಂಬ ಹೆಸರಿನ ಚೀನಾದ ಮಹಿಳೆಯ (Woman) ಮೇಲೆ ದಾಳಿ ನಡೆದಿದೆ. ವರದಿಯ ಪ್ರಕಾರ, ಜೂನ್ 12ರಂದು ಈ ಘಟನೆ ನಡೆದಿದೆ. ಯುವತಿ ಧರಿಸಿದ್ದ ಪ್ಯಾಂಟ್ ತುಂಬಾ ಚಿಕ್ಕದಾಗಿದೆ ಎಂಬುದು ಮಾವನ (Father in law) ದೂರು. ಈ ರೀತಿಯ ಡ್ರೆಸ್ ತನ್ನ ಕುಟುಂಬಕ್ಕೆ (Family) ಹೊಂದುವುದಿಲ್ಲ, ಸ್ಥಳೀಯರ ಮುಂದೆ ತನಗೆ ಅವಮಾನವಾಗುತ್ತದೆ ಎಂದು ಮಾವ ಮಹಿಳೆಯನ್ನು ನಿಂದಿಸಿದ್ದಾನೆ.

ಯುವತಿಯರ ಶಾರ್ಟ್ ಡ್ರೆಸ್ ಕಂಡು ಕೆಂಡಾ ಮಂಡಲವಾದ ಮಹಿಳೆ, ವಿಡಿಯೋ ವೈರಲ್

ಆದರೆ, ಯುವತಿ ತಾನು ಧರಿಸಿದ್ದ ಬಟ್ಟೆಯನ್ನು ಸ್ವಂತ ಹಣದಲ್ಲಿ ಖರೀದಿಸಿದ್ದು, ಅದು ತನ್ನ ವೈಯಕ್ತಿಕ ವಿಚಾರವಾಗಿದ್ದು (Personal matter), ಇದಕ್ಕೆ ಯಾರೂ ಅಡ್ಡಿಪಡಿಸುವುದು ಇಷ್ಟವಿಲ್ಲ ಎಂದು ಮಾವನಿಗೆ ಉತ್ತರಿಸಿದ್ದಾಳೆ. ಸೊಸೆಯ ಉತ್ತರದಿಂದ ಸಿಟ್ಟಿಗೆದ್ದ ಮಾವ ಡೈನಿಂಗ್ ಟೇಬಲ್ ಮೇಲಿದ್ದ ಬಿಸಿಬಿಸಿ ಸೂಪ್‌ನ್ನು (Hot soup) ಬಾಲಕಿಯ ಮೈಮೇಲೆ ಸುರಿದಿದ್ದಾರೆ. ಅಲ್ಲದೇ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ್ದಾರೆ.

ಈ ವೇಳೆ ಮಹಿಳೆ ಜತೆಗಿದ್ದ ಮಗ, ಆಕೆಯ ತಾಯಿಯನ್ನು ರಕ್ಷಿಸುವಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬರುವವರೆಗೂ ಆಕೆಯನ್ನು ಕೊಠಡಿಯಲ್ಲಿಟ್ಟು ಬೀಗ ಹಾಕಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ವಿಷಯವನ್ನು ಹತೋಟಿಗೆ ತಂದಿದ್ದು, ಯಾವ ಬಟ್ಟೆ ತೊಡಬೇಕು ಎಂಬುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರವಾಗಿದ್ದು, ಅಡ್ಡಿಪಡಿಸಬಾರದು ಎಂದು ಮಾವನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಗಲಾಟೆ ಮುಗಿಯಲ್ಲಿಲ್ಲ. ಘಟನೆ ವೇಳೆ ಮನೆಯಲ್ಲಿ ಇಲ್ಲದಿದ್ದ ಪತಿಗೆ ಮಹಿಳೆ ಮಾಹಿತಿ ನೀಡಿದಾಗ ಆತ ಆಕೆಯ ತಂದೆಯ ಪರ ವಹಿಸಿ ಮತ್ತೆ ಅಂತಹ ಬಟ್ಟೆ ಧರಿಸದಂತೆ ಎಚ್ಚರಿಕೆ ನೀಡಿದ್ದಾನೆ. 

ಬ್ಯಾಗ್​ ಒಳಗೆ ಉರ್ಫಿಯೋ, ಉರ್ಫಿ ಒಳಗೆ ಬ್ಯಾಗೊ? ಇನ್ನು ಕಾಯಲು ಸಾಧ್ಯವಿಲ್ಲವೆಂದ ನಟಿ

ವಿಚ್ಛೇದನಕ್ಕೆ ತಯಾರಿ ನಡೆಸುತ್ತಿದ್ದೇನೆ ಎಂದು ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೋದಲ್ಲಿ ಹೇಳಿದ್ದಾಳೆ. ಆಕೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ ದೇಹದ ಮೇಲೆ ತೀವ್ರವಾದ ಸುಟ್ಟ ಗುರುತುಗಳನ್ನು ತೋರಿಸಲಾಗಿದೆ. ಹಲ್ಲೆ ನಡೆಸಿದ ಯುವತಿಯ ಮಾವ ಹಾಗೂ ಪತಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios