ನವದೆಹಲಿ[ಏ. 01] ಹೆಣ್ಣು ಮಕ್ಕಳ ಮೇಲೆ ಅತ್ಯಚಾರ ನಡೆಯಲು ಕಾರಣಗಳು ಏನು ಎಂಬುದನ್ನು ಚರ್ಚೆ ಮಾಡುವ ವೇದಿಕೆಯೂ  ಇದಲ್ಲ. ಆದರೆ ಶಾರ್ಟ್ ಧರಿಸುವುದು ರೇಪ್ ಗೆ ಕಾರಣವಾಗುತ್ತದೆ ಎಂದು ಹೇಳಿದ್ದ ಮಧ್ಯ ವಯಸ್ಕ ಮಹಿಳೆಯನ್ನು ಹೆಣ್ಣು ಮಕ್ಕಳೇ ತರಾಟೆಗೆ ತೆಗೆದುಕೊಂಡಿದ್ದಾರೆ.

ದೆಹಲಿ ಗುರುಗ್ರಾಮದದಲ್ಲಿ ನಡೆದ ಈ ಘಟನಾವಳಿಯನ್ನು ವಿಡಿಯೋ ಸಮೇತ ಶಿವಾನಿ ಗುಪ್ತಾ ಎನ್ನುವ ಯುವತಿ ಪೋಸ್ಟ್ ಮಾಡಿದ್ದಾಳೆ. ಅಲ್ಲದೇ ಮಹಿಳೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾಳೆ.