ನಿಮ್ಮಲ್ಲಿ ಕಾರು ಇದೆಯಾ? 14 ಮಾನದಂಡ ಲಿಸ್ಟ್‌ನಲ್ಲಿ ನೀವಿದ್ದರೆ ರದ್ದಾಗಲಿದೆ ಪಡಿತರ ಚೀಟಿ!
ರೇಷನ್ ಕಾರ್ಡ್‌ನಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟಲು ಇದೀಗ ಮಹತ್ವದ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರು, 100 ಸಿಸಿ ಮೇಲ್ಪಟ್ಟ ದಿಚಕ್ರ ವಾಹನ, ತೆರಿಗೆ ಪಾವತಿ ಸೇರಿದಂತೆ 14 ಮಾನದಂಡ ಪಟ್ಟಿಗಳನ್ನು ರೆಡಿ ಮಾಡಲಾಗಿದೆ. ಈ ಲಿಸ್ಟ್‌ನಲ್ಲಿ ನೀವಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಲಿದೆ.
ನವದೆಹಲಿ(ಅ.01) ಭಾರತೀಯ ಪ್ರಜೆಯಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಕೆಲ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದು. ಪಡಿತರ ಚೀಟಿಯಿಂದ ಹಲವು ಸವಲತ್ತು, ಸೌಲಭ್ಯಗಳು ನಾಗರೀಕರಿಗೆ ಸಿಗಲಿದೆ. ಆದರೆ ಅರ್ಹರಲ್ಲದವರೂ ಬಿಪಿಎಲ್ ಕಾರ್ಡ್ ಪಡೆಯಲಾಗಿದೆ. ಈ ಅಕ್ರಮ ತಡೆಗಟ್ಟಲು ಇದೀಗ ಮಹತ್ವದ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಆಹಾರ ಇಲಾಖೆ ಪಡಿತರ ಚೀಟಿಯಲ್ಲಿ ಆಗಿರುವ ಅಕ್ರಮ ಪತ್ತೆ ಹಚ್ಚುತ್ತಿದೆ. ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಪಡಿತರ ಚೀಟಿ ಅನರ್ಹ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಷ್ಟೇ ಅಲ್ಲ ಇದೀಗ ಆಹಾರ ಇಲಾಖೆ 14 ಮಾನದಂಡ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿದ್ದೂ ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದರೆ ಅಂತವರ ರೇಷನ್ ಕಾರ್ಡ್ ರದ್ದಾಗಲಿದೆ.
ಕಾರು, 100 ಸಿಸಿ ಮೇಲ್ಪಟ್ಟ ದಿಚಕ್ರ ವಾಹನ, ತೆರಿಗೆ ಪಾವತಿದಾರರು, 7.5 ಏಕರೆ ಭೂಮಿಗಿಂತ ಮೇಲ್ಪಟ್ಟವರು, ಕಾಲೇಜು ನೌಕರರು, ಗುತ್ತಿಗೆದಾರರು, ಕೈಗಾರಿಕೋದ್ಯಮ, ಉದ್ಯಮ, ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಹೊಂದಿರುವವರ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು ಮಾಡಲಾಗುತ್ತದೆ. ಈ ರೀತಿ 14 ಮಾನದಂಡಗಳನ್ನು ಅಹಾರ ಇಲಾಖೆ ಪಟ್ಟಿ ಮಾಡಿದೆ. ಆಹಾರ ಇಲಾಖೆ ಪಟ್ಟಿ ಮಾಡಿರುವ ಮಾನದಂಡಲ್ಲಿದ್ದೂ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದವರ ಕಾರ್ಡನ್ನು ರದ್ದು ಮಾಡಲಾಗುತ್ತಿದೆ.
ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಢವ ಢವ ..!
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ನೀಡಲಾಗುತ್ತದೆ. ಆದರೆ ಬಡತನ ರೇಖೆಗಿಂತ ಮೇಲ್ಪಟ್ಟವರು ಈ ಕಾರ್ಡ್ ಪಡೆದಿದ್ದಾರೆ. ಈ ಕುರಿತು ಅಹಾರ ಇಲಾಖೆ ಕುಟುಂಬ ತಂತ್ರಾಂಶದ ಮೂಲಕ ಮಾಹಿತಿ ಪಡೆದಿದೆ. ಇ ಆಡಳಿತ ಕೇಂದ್ರದ ಮೂಲಕ ಡೇಟಾ ಸಂಗ್ರಹಿಸಿರುವ ಆಹಾರ ಇಲಾಖೆ ಬರೋಬ್ಬರಿ 22,62,413 ರೇಷನ್ ಕಾರ್ಡ್ ಅನರ್ಹ ಎಂದು ಪಟ್ಟಿ ಮಾಡಿದೆ.
10,97,621 ಬಿಪಿಎಲ್ ಕಾರ್ಡ್ ಹಾಗೂ 10,54,368 ಅಂತ್ಯೋದಯ ಕಾರ್ಡ್‌ಗಳನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಅನ್ನೋದು ಇ ಆಡಳಿಕ ಕೇಂದ್ರದಿಂದ ಪಡೆದಿರುವ ಡೇಟಾದಲ್ಲಿ ಬಹಿರಂಗವಾಗಿದೆ. ಮುಂದಿನ 10 ದಿನಗಳಲ್ಲಿ ಬರೋಬ್ಬರಿ 22 ಲಕ್ಷ ಪಡಿತರ ಚೀಟಿಗಳು ರದ್ದಾಗಲಿದೆ. ಇದರ ಜೊತೆಗೆ ಅಕ್ರಮವಾಗಿ ಪಡೆದಿರುವ ಕಾರ್ಡ್‌ಗಳು ಪತ್ತೆಯಾದರೆ ಈ ಕಾರ್ಡ್ ಕೂಡ ರದ್ದಾಗಲಿದೆ.
ಅಕ್ರಮವಾಗಿ ಪಡೆದಿರುವ ಪಡಿತರ ಚೀಟಿ ರದ್ದುಗೊಳಿಸವು ಪ್ರಕ್ರಿಯೆ ಇಂದು ನಿನ್ನೆಯದಲ್ಲ. ಈ ಕುರಿತು ಹಲವು ಬಾರಿ ಆದೇಶ ನೀಡಲಾಗಿದೆ. ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನ ಮಾಡಲಾಗಿದೆ. ಆದರೆ ಸಂಪೂರ್ಣವಾಗಿ ವ್ಯವಸ್ಥೆಯಲ್ಲಿ ಪಾದರ್ಶಕತೆ ತರಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಹೆಚ್ಚು ಪರಿಣಾಮಕಾರಿಯಾಗಿ ಅಕ್ರಮ ಸರಿಪಡಿಸಲು ಕಾರ್ಯ ಆರಂಭಗೊಂಡಿದೆ.
ಅನರ್ಹರು ಪಡೆದ ಬಿಪಿಎಲ್ ಪಡಿತರ ಕಾರ್ಡ್ ಹಿಂದಿರುಗಿಸಲು ಆ.31 ಕೊನೆಯ ದಿನ: ಚನ್ನಬಸಪ್ಪ ಕೊಡ್ಲಿ