ನಟಿ ಅಮೃತಾ ಅಯ್ಯಂಗಾರ್ಗೆ ಇದೇನಾಯ್ತು? ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್
ಸ್ಯಾಂಡಲ್ವುಡ್ ನಟಿ ಅಮೃತಾ ಅಯ್ಯಂಗಾರ್ ಕಣ್ಣಿಗೆ ಏಟಾಗಿರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅವರಿಗೆ ಆದದ್ದೇನು?
2017ರಲ್ಲಿ ಸಿಂಹ ಹಾಕಿದ ಹೆಜ್ಜೆ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅಮೃತ ಅಯ್ಯಂಗಾರ್ ಸದ್ಯ ಐ ಎನ್ನುವ ಮ್ಯೂಸಿಕ್ನ ಪ್ರೊಮೋಷನ್ನಲ್ಲಿ ಬಿಜಿಯಾಗಿದ್ದಾರೆ. ಅನುಷ್ಕಾ ಎಂಬ ಚಿತ್ರದಲ್ಲಿ ನಟಿಸಿದರೂ, ಲವ್ ಮಾಕ್ಟೇಲ್ ಸಿನಿಮಾದಿಂದ ಬ್ರೇಕ್ ಪಡೆದಿರುವ ನಟಿ, ಅದಾದ ಬಳಿಕ ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾರ್ಜುನ, ಬಡವ ರಾಸ್ಕಲ್, ಲವ್ ಮಾಕ್ಟೇಲ್ 2, ಫ್ಯಾಮಿಲಿ ಪ್ಯಾಕ್, ವಿಂಡೋ ಸೀಟ್, ಓ, ಅಬ್ಬಬ್ಬಾ, ಗುರುದೇವ್ ಹೊಯ್ಸಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಐ ಚಿತ್ರದ ಪ್ರಮೋಷನ್ನಲ್ಲಿ ಇರುವ ಸಂದರ್ಭದಲ್ಲಿಯೇ ಕಣ್ಣಿಗೆ ಗಾಯವಾದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳ ಆತಂಕಕ್ಕೆ ಕಾರಣರಾಗಿದ್ದಾರೆ. ಕಣ್ಣುಗಳ ಕೆಳಗೆ ಸಿಕ್ಕಾಪಟ್ಟೆ ಗಾಯವಾಗಿ ರಕ್ತ ಸೋರುತ್ತಿರುವುದನ್ನು ನೋಡಬಹುದು. ಇದನ್ನು ನೋಡಿದವರು ಶಾಕ್ಗೆ ಒಳಗಾಗಿದ್ದು, ನಟಿಗೆ ಏನಾಯ್ತು ಎಂದು ಒಂದೇ ಸಮನೆ ಪ್ರಶ್ನೆ ಮಾಡುತ್ತಿದ್ದಾರೆ.
ಅಸಲಿಗೆ ನಟಿಗೆ ಏನೂ ಅನಾಹುತವಾಗಲಿಲ್ಲ. ಅಂದ್ರೆ ಕಣ್ಣಿಗೆ ಈ ಪರಿ ಗಾಯವಾಗಿರುವ ಹಿಂದೆ ಕಾರಣವೂ ಇದೆ. ಅದೇನೆಂದರೆ, ಮೊದಲೇ ಹೇಳಿದ ಹಾಗೆ ಐ (ಕಣ್ಣು) ಚಲನಚಿತ್ರ. ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಧ್ವನಿ ಎತ್ತುವ ಸಿನಿಮಾ ಇದಾಗಿದ್ದು, ಈ ಚಿತ್ರದ ಹಾಡೊಂದರಲ್ಲಿ ನಟಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಅಮೃತಾ ಜೊತೆ ಮಾಲಾಶ್ರೀ ಅವರನ್ನೂ ನೋಡಬಹುದು. ಅಂದಹಾಗೆ ಈ ಹಾಡು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಸೆಪ್ಟೆಂಬರ್ 26ರಂದು ಬಿಡುಗಡೆಯಾಗಿರುವ ಈ ಹಾಡು ಯೂಟ್ಯೂಬ್‌ನಲ್ಲಿ ಟಾಪ್ 15ನಲ್ಲಿ ಟ್ರೆಂಡಿಂಗ್‌ನಲ್ಲಿರುವುದು ಮಾತ್ರವಲ್ಲದೇ ಇದಾಗಲೇ ಮೂರು ಲಕ್ಷದಷ್ಟು ಜನರು ವೀಕ್ಷಣೆ ಮಾಡಿದ್ದಾರೆ. ಧೈರ್ಯವಂತ ಹೆಣ್ಣು ಮಕ್ಕಳಿಗೆ ಈ ಹಾಡು ಸಮರ್ಪಣೆ ಎಂದು ಆಲ್ ಓಕೆ (All OK) ತಂಡ ಶೀರ್ಷಿಕೆ ಕೊಟ್ಟಿದೆ.
ರಣಬೀರ್ಗಿಂತಲೂ ಮಧ್ಯರಾತ್ರಿ ನನಗೆ ವಿಕ್ಕಿನೇ ಇಷ್ಟ ಎಂದ ತೃಪ್ತಿ ಡಿಮ್ರಿ: ನಟಿ ಕೊಟ್ಟ ಕಾರಣ ಹೀಗಿದೆ ನೋಡಿ!
ಅಂದಹಾಗೆ, ರಾಮ್ ಅವರ ಈ ಹಾಡಿಗೆ ಸಂಗೀತ, ಪರಿಕಲ್ಪನೆ ಲಿರಿಕ್ಸ್, ನಿರ್ದೇಶನ ಎಲ್ಲವೂ "ಆಲ್ ಓಕೆ" ತಂಡದ್ದು. ಮಾಲಾಶ್ರೀ ಅವರು ವಿಶೇಷ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ನೋಡಿದರೆ ತಿಳಿಯುತ್ತದೆ. ಇದು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿವರಗಳನ್ನು ಒಳಗೊಂಡಿದೆ ಎಂದು. ಈ ಹಾಡಿನ ದೃಶ್ಯದ ಕುರಿತು ಹೇಳುವುದಾದರೆ ನಟಿ ಅಮೃತಾ ಅವರನ್ನು ಕೆಲವು ಕಾಮುಕರ ಓಡಿಸಿಕೊಂಡು ಬಂದು ಅತ್ಯಾಚಾರ ಮಾಡುತ್ತಾರೆ. ಬಳಿಕ ರೇಪಿಸ್ಟ್ಗಳ ವಿರುದ್ಧ ಮಾಲಾಶ್ರೀ ನೆರವಿನಿಂದ ನಟಿ ಸೇಡು ತೀರಿಸಿಕೊಳ್ಳುತ್ತಾರೆ. ಶೂಟ್ ಮಾಡಿ ಕೊಲೆ ಮಾಡುತ್ತಾಳೆ. ಕೊಲೆಯಾದ ಕಾಮುಕರ ಬಗ್ಗೆ ಪೊಲೀಸರು ಪ್ರಶ್ನಿಸುವಾಗ ಅಲ್ಲಿಗೆ ಬರುವ ಮಹಿಳೆಯರು ನಾವೇ ಕೊಂದದ್ದು ಎನ್ನುತ್ತಾರೆ. ಈ ಮೂಲಕ ದೌರ್ಜನ್ಯ ನಡೆದರೆ ಸುಮ್ಮನಿರಬೇಡಿ. ಧ್ವನಿ ಎತ್ತಿ ಎಂಬ ಉತ್ತಮ ಸಂದೇಶವನ್ನು ನೀಡಲಾಗಿದೆ.
ಈ ಹಾಡಿನ ಕುರಿತು ತಿಳಿಸಿರುವ ತಂಡ, ನಮ್ಮ ಹೊಸ ಹಾಡು 'i' ಬಿಡುಗಡೆ ಮಾಡುತ್ತಿದ್ದೇವೆ. ಇದು ನೋವು, ಶಕ್ತಿ ಮತ್ತು ಮರುಜೀವನದ ಕಥೆಯನ್ನು ತುಂಬಿರುವಂಥ ಹಾಡು. ಇದಕ್ಕೆ 'She Will Rise' ಎಂಬ ಶೀರ್ಷಿಕೆ ಕೊಡಲಾಗಿದೆ. ಇದು ಕೇವಲ ಜಾಹೀರಾತು ಎಂದುಕೊಳ್ಳಬೇಡಿ. ಇದೊಂದು ರೀತಿಯಲ್ಲಿ ಪ್ರತಿಜ್ಞೆ. ಧೈರ್ಯದ ಹೆಣ್ಣುಮಕ್ಕಳಿಗೆ ಸಮರ್ಪಿತವಾಗಿದೆ ಈ ಹಾಡು. ನ್ಯಾಯ ಮತ್ತು ಬದಲಾವಣೆಗೆ ಏರುತ್ತಿರುವ ಸ್ವರವಾಗಿದೆ. ಬನ್ನಿ, ಒಟ್ಟಾಗಿ ನಿಲ್ಲೋಣ, ಯಾವುದೇ ಸ್ವರ ಮೌನವಾಗದಂತೆ ನೋಡಿಕೊಳ್ಳೋಣ ಎಂದಿದೆ. ಹಾಡಿಗೆ ನಟಿ ಅಮೃತ ಅಯ್ಯಂಗಾರ್ ಕೂಡ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮ ಸಿನಿಮಾ ನೋಡುತ್ತ ಬೆಳೆದವಳು ನಾನು. ನಿಮ್ಮ ಜತೆ ಹಾಡಿನಲ್ಲಿ ನಟಿಸುವ ಅವಕಾಶ ದೊರಕಿದ್ದು ಅಮೋಘ ಅವಕಾಶ ಎಂದು ಮಾಲಾಶ್ರೀ ಅವರಿಗೆ ನಟಿ ಹೇಳಿದ್ದಾರೆ.
ಸೆಲ್ಫಿಗೆ ಬಂದ ಅಭಿಮಾನಿಯನ್ನು ನಗುನಗುತ್ತಲೇ ದೂರ ಮಾಡಿದ ಶಿಲ್ಪಾ ಶೆಟ್ಟಿ! ಭಲೆ ಹೆಣ್ಣೇ ಎಂದ ನೆಟ್ಟಿಗರು