ಬಾಲಿವುಡ್‌ನ ಹಲವಾರು ನಟಿಯರ ಫೇವರೇಟ್ ನ್ಯೂಟ್ರಿಶನಿಸ್ಟ್ ರುಜುತಾ ದಿವೇಕರ್. ತಮ್ಮ ಇನ್ಸ್ಟಾ ಖಾತೆಯಲ್ಲಿ ಆಗಾಗ ಕೆಲವೊಂದು ಆಹಾರ ಟಿಪ್ಸ್ ನೀಡುತ್ತಲೇ ಇರುತ್ತಾರೆ. ಜೊತೆಗೆ ಅವರು ಹೆಲ್ದೀ ಈಟಿಂಗ್, ತೂಕ ನಿಯಂತ್ರಣ ಮುಂತಾದ ವಿಷಯಗಳ ಕುರಿತು ಬರೆದ ಪುಸ್ತಕ ದೇಶಾದ್ಯಂತ ಅವರಿಗೆ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. ಈ ಬಾರಿ ರುಜುತಾ, ಪೀರಿಯಡ್ಸ್‌ನಲ್ಲಿ ಹೊಟ್ಟೆ ನೋವಿನಿಂದ ಬಳಲುವ ಮಹಿಳೆಯರಿಗಾಗಿ ಡಯಟ್ ಟಿಪ್ಸ್ ನೀಡಿದ್ದಾರೆ. ಈ ಪೋಸ್ಟ್ ಯುವತಿಯರ ನೋವನ್ನು ಕಡಿಮೆ ಮಾಡುವಲ್ಲಿ ಬಹಳ ಸಹಾಯಕವಾಗಿದೆ. 

ಪೀರಿಯಡ್ಸ್ ಎಂದರೆ ಹೊಟ್ಟೆನೋವಿನ ಕಾರಣದಿಂದಲೇ ಬಹಳಷ್ಟು ಮಹಿಳೆಯರಿಗೆ ಶತ್ರುವಿನ ಆಗಮನವಾದಂತೆ ಭಾಸವಾಗುತ್ತದೆ. ಕಿಬ್ಬೊಟ್ಟೆ. ಪಕ್ಕೆಗಳು, ತೊಡೆ, ಕಾಲುಗಳು, ಹಿಂಭಾಗ ಎಲ್ಲೆಡೆ ಈ ನೋವು ಹರಡಿ ನಿಂತು ಸತಾಯಿಸಬಹುದು. ಒಬ್ಬೊಬ್ಬರು ಅನುಭವಿಸುವ ನೋವು ಒಂದೊಂದು ಮಟ್ಟಿನದ್ದು. ಸಾಮಾನ್ಯವಾಗಿ ಎರಡರಿಂದ ಮೂರು ದಿನಕ್ಕೆ ನೋವು ಕಡಿಮೆಯಾಗುತ್ತದೆ. ಆದರೆ, ಆ ಎರಡ್ಮೂರು ದಿನಗಳು ಕೂಡಾ ನೋವನ್ನು ಅನುಭವಿಸಿಕೊಂಡು, ಏನೂ ಆಗೇ ಇಲ್ಲವೆನ್ನುವಂತೆ ದೈನಂದಿನ ಕೆಲಸಗಳನ್ನು ಮಾಡುವುದು, ಕಚೇರಿಗೆ ಹೋಗಿ ಬರುವುದು, ವ್ಯಾಯಾಮ ಮಾಡುವುದು ಯಾವುದೂ ಸುಲಭದ ವಿಷಯವಲ್ಲ. 

ಪೇನ್ ಕಿಲ್ಲರ್ ತಿನ್ನೋಣವೆಂದರೆ ಅಡ್ಡ ಪರಿಣಾಮಗಳ ಭಯ, ಹಾಗಾಗಿ ಕೆಲವರು ಹೊಟ್ಟೆ ಮೇಲೆ ಬಿಸಿನೀರಿನ ಬ್ಯಾಗ್ ಇಟ್ಟುಕೊಂಡು, ಮತ್ತೆ ಕೆಲವರು ಅವಕಾಶ ಸಿಕ್ಕರೆ ನಿದ್ರಿಸಿ ನೋವನ್ನು ಮರೆಯಲು ನೋಡುತ್ತಾರೆ. ಎಸ್ಸೆನ್ಷಿಯಲ್ ಆಯಿಲ್ ಬಳಸಿ ಮಸಾಜ್ ಮಾಡುವುದು, ಅತಿಯಾದ ಮಸಾಲೆ ಹೊಂದಿದ ಆಹಾರ ಪದಾರ್ಥಗಳು, ಆಲ್ಕೋಹಾಲ್, ಕೆಫಿನ್, ಉಪ್ಪಾದ ಆಹಾರಗಳ ಸೇವನೆಯಿಂದ ದೂರ ಉಳಿಯುವುದರಿಂದ ಕೂಡಾ ನೋವು ನಿಯಂತ್ರಣಕ್ಕೆ ಬರುತ್ತದೆ. 

ಭಾರತದ ಗಂಡಸರು ಹೆಂಗಸರನ್ನು ದಿಟ್ಟಿಸೋದರಲ್ಲಿ ನಟೋರಿಯಸ್‌!...
 

ಆದರೆ, ಈ ನೋವನ್ನು ಬರುವ ಮುನ್ನವೇ ಬಹಳಷ್ಟು ಮಟ್ಟಿಗೆ ಶಮನ ಮಾಡುವ ತಾಕತ್ತು ನಮ್ಮ ಡಯಟ್‌ಗಿದೆ ಎನ್ನುತ್ತಾರೆ ರುಜುತಾ. ಹಾಗಿದ್ದರೆ, ಪೀರಿಯಡ್ಸ್ ಸಂದರ್ಭದಲ್ಲಿ ಮಹಿಳೆಯರ ಡಯಟ್ ಹೇಗಿರಬೇಕು ನೋಡೋಣ. 

ಪೀರಿಯಡ್ಸ್ ಡಯಟ್
- ಪೀರಿಯಡ್ಸ್ ಆರಂಭವಾಗುವ ವಾರದ ಮುಂಚೆಯಿಂದಲೇ ಪ್ರತಿ ಬೆಳಗ್ಗೆಯನ್ನು ನೀರಿನಲ್ಲಿ ನೆನೆಸಿಟ್ಟ ದ್ರಾಕ್ಷಿ ಹಾಗೂ ಕೇಸರಿ ಸೇವಿಸುವುದರಿಂದ ಆರಂಭಿಸಿ. ಇದಕ್ಕಾಗಿ ರಾತ್ರಿ ಮಲಗುವಾಗಲೇ 8-10 ಒಣದ್ರಾಕ್ಷಿ ಹಾಗೂ 2-3 ಎಸಳು ಕೇಸರಿ ನೀರಿನಲ್ಲಿ ನೆನೆಸಿಡಿ. ದ್ರಾಕ್ಷಿಯಲ್ಲಿ ಫೈಬರ್ ಅಧಿಕವಾಗಿರುವುದರಿಂದ ಅನ್ನು ನೆನೆಸಿಟ್ಟಾಗ ಲ್ಯಾಕ್ಸೇಟಿವ್ ಆಗಿ ಕೆಲಸ ಮಾಡುತ್ತವೆ. ಇದರಿಂದ ಮಲಬದ್ಧತೆಗೆ ಆಸ್ಪದ ನೀಡದೆ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ. ಅಧ್ಯಯನಗಳ ಪ್ರಕಾರ, ಕೇಸರಿ ಕೂಡಾ ಪೀರಿಯಡ್ಸ್ ಆರಂಭಕ್ಕೂ ಮುನ್ನ ಕಾಣಿಸುವ ಕಿರಿಕಿರಿಗಳನ್ನು ತಗ್ಗಿಸುತ್ತದೆ. 

- ಪ್ರತಿ ದಿನ ಸಾಧ್ಯವಾದಷ್ಟು ಬೇಳೆಕಾಳನ್ನು ನಿಮ್ಮ ಅಡುಗೆಗೆ ಸೇರಿಸಲು ಪ್ರಯತ್ನಿಸಿ. ಈ ಬೇಳೆಕಾಳುಗಳನ್ನು ಮೊಳಕೆಯ ರೂಪದಲ್ಲಿ ಸೇವಿಸುವುದು ಹೆಚ್ಚು ಒಳ್ಳೆಯದು. ಅದಾಗ್ಯೂ ಬೇಯಿಸಿದ ರೂಪದಲ್ಲಿ ಸೇವಿಸುವ ಅಭ್ಯಾಸ ಕೂಡಾ ಒಳಿತೇ. ಚನ್ನಾ ದಾಲ್, ರಾಜ್‌ ಮಾ, ತೊಗರಿಬೇಳೆ, ಹೆಸರು ಬೇಳೆ, ಕಡ್ಲೆಬೇಳೆ, ಹೆಸರುಕಾಳು, ಕಡ್ಲೆಕಾಳು ಮುಂತಾದವು ಪ್ರೋಟೀನ್ ಹಾಗೂ ರೆಸಿಸ್ಟೆಂಟ್ ಸ್ಟಾರ್ಚ್‌ಗಳ ಕಣಜ. 

- ಸುವರ್ಣಗೆಡ್ಡೆ, ಗೆಣಸಿನಂಥ ಮಣ್ಣಿನೊಳಗೆ ಬೆಳೆವ ತರಕಾರಿಗಳನ್ನು ವಾರಕ್ಕೆ ಕನಿಷ್ಠ ಎರಡು ಬಾರಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇವು ಪೀರಿಯಡ್ಸ್ ನೋವು ಕಡಿಮೆ ಮಾಡುತ್ತವೆ. ಇವಲ್ಲದೆ, ಕ್ಯಾರೆಟ್, ಬೀಟ್‌ರೂಟ್, ಮೂಲಂಗಿಗಳೂ ಒಳ್ಳೆಯವೇ. 

ಬೆಳಗಿನ ಬ್ರೇಕ್ ಫಾಸ್ಟ್ : ಅಮ್ಮಂದಿರ ನಿತ್ಯದ ಗೋಳು!...

- ವ್ಯಾಯಾಮ ನಿಯಮಿತವಾಗಿರಲಿ. ವಾರಕ್ಕೆ ಕನಿಷ್ಠ 150 ನಿಮಿಷವಾದರೂ ವ್ಯಾಯಾಮಕ್ಕಾಗಿ ಮೀಸಲಿಡಿ. ವ್ಯಾಯಾಮದಿಂದ ರಕ್ತ ಪರಿಚಲನೆ ಹೆಚ್ಚಾಗಿ ಫೀಲ್ ಗುಡ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ನೋವು ಕಡಿಮೆಯಾಗುತ್ತದೆ. 

- ಪ್ರತಿ ರಾತ್ರಿ ಮಲಗುವ ಮುನ್ನ ಕ್ಯಾಲ್ಶಿಯಂ ಮಾತ್ರೆ ಸೇವನೆ ಕಡ್ಡಾಯ ಮಾಡಿಕೊಳ್ಳಿ.