Asianet Suvarna News Asianet Suvarna News

ಬ್ರಾ, ಪ್ಯಾಂಟಿ ಬಗ್ಗೆ ಅಮಿತಾಬ್ ಬಚ್ಚನ್ ಟ್ವೀಟ್ ವೈರಲ್, ಟ್ರೋಲಾದ ಬಿಗ್‌ ಬಿ

ಮಹಿಳೆಯರ ಒಳ ಉಡುಪುಗಳ ಬಗ್ಗೆ ಬಿಗ್ ಬಿ ಅವರ ಹಳೆಯ ಟ್ವೀಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮಿತಾಬ್ ಬಚ್ಚನ್ ಅವರ ಹಳೆಯ ಟ್ವೀಟ್‌ಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

Amitabh Bachchans old tweet about bra, panties goes Viral, Ask this in KBC says Internet Vin
Author
First Published Jul 27, 2023, 3:57 PM IST | Last Updated Jul 27, 2023, 4:17 PM IST

ಮುಂಬೈ: ಬಾಲಿವುಡ್‌ನ ಬಿಗ್‌ಬಿ ಎಂದು ಕರೆಸಿಕೊಂಡವರು ಅಮಿತಾಬ್‌ ಬಚ್ಚನ್‌. ಕೇವಲ ಸೂಪರ್ ಸ್ಟಾರ್ ಮಾತ್ರವಲ್ಲ ತಮ್ಮ ಸರಳ ವ್ಯಕ್ತಿತ್ವದಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದವರು.  ಅಮಿತಾಬ್ ಬಚ್ಚನ್ ಅತ್ಯಾಸಕ್ತಿಯ ಟ್ವಿಟರ್ ಬಳಕೆದಾರರು. ನಟ ಈಗ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ರೆಡ್ಡಿಟ್ ಬಳಕೆದಾರರು ಮಹಿಳೆಯರ ಒಳ ಉಡುಪುಗಳ ಬಗ್ಗೆ ಬಿಗ್ ಬಿ ಅವರ ಹಳೆಯ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದು, ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಅಮಿತಾಬ್ ಬಚ್ಚನ್ ಅವರ ಹಳೆಯ ಟ್ವೀಟ್‌ಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಅಮಿತಾಬ್ ಬಚ್ಚನ್ ಅವರನ್ನು ಸಿನಿಮಾಗಳನ್ನು (Movie) ಜನ ಎಷ್ಟು ಇಷ್ಟಪಡುತ್ತಾರೋ, ನಿಜ ಜೀವನದಲ್ಲೂ ಅಷ್ಟೇ ಪ್ರೀತಿಯಿಂದ ಆರಾಧಿಸುವವರು ಇದ್ದಾರೆ. ಆದರೆ ಈ ಇಂಟರ್‌ ನೆಟ್‌ ಯುಗದಲ್ಲಿ ಎಂಥಾ ನಟರು (Actor) ಸಹ ಟ್ರೋಲ್ ಆಗುವುದು ತಪ್ಪುವುದಿಲ್ಲ. ಸೆಲಬ್ರಿಟಿಗಳು ಮಾಡಿದ ಸಣ್ಣಪುಟ್ಟ ವಿಚಾರಗಳು ಸಹ ಟ್ರೋಲಿಗರ ಬಾಯಿಗೆ ಆಹಾರವಾಗುತ್ತವೆ. ಹಾಗೆಯೇ ಅಮಿತಾಭ್ ಬಚ್ಚನ್ ಅವರು ಈ ಹಿಂದೆ ಮಾಡಿದ ಟ್ವೀಟ್‌ವೊಂದು ಮತ್ತೆ ವೈರಲ್‌ ಆಗುತ್ತಿದ್ದು, ಇದರಿಂದ ಬಿಗ್‌ ಬಿ ಟ್ರೋಲ್‌ ಆಗಿದ್ದಾರೆ.

ಶೋಲೆಯ ಗಬ್ಬರ್‌ಸಿಂಗ್‌ಗೆ ನಿಜ ಜೀವನದಲ್ಲಿ ರಕ್ತ ಕೊಟ್ಟು ಪ್ರಾಣ ಉಳಿಸಿದ್ದ ಅಮಿತಾಬ್‌ ಬಚ್ಚನ್‌

ಟ್ವೀಟ್‌ನಲ್ಲಿ ಇರುವುದೇನು? 
2010ರ ಜೂ.12 ರಂದು ಅಮಿತಾಭ್‌ ಟ್ವಿಟರ್‌ ನಲ್ಲಿ 'ಬ್ರಾ' ಏಕವಚನ ಮತ್ತು 'ಪ್ಯಾಂಟೀಸ್' ಬಹುವಚನ ಯಾಕೆ' ಎಂದು ಅಮಿತಾಬ್‌ ಟ್ವೀಟ್‌ ಮಾಡಿದ್ದರು. ಇದೇ ಟ್ವೀಟ್‌ ಸ್ಕ್ರೀನ್‌ ಶಾಟ್‌ ಆಗಿ ವೈರಲ್‌ ಆಗಿತ್ತು. ಇದೀಗ ಮತ್ತೆ ಈ ಟ್ವೀಟ್‌ ನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಾರಿ ಜನ ನಾನಾ ರೀತಿಯಲ್ಲಿ ಅಮಿತಾಭ್‌ ಅವರನ್ನು ಟ್ರೋಲ್‌ ಮಾಡಿದ್ದಾರೆ. ನೆಟ್ಟಿಗರೊಬ್ಬರು, 'ಇದು ಒಳ್ಳೆಯ ಪ್ರಶ್ನೆ, ಅಮಿತಾಭ್‌ ಅವರು ಇದನ್ನು ಮುಂದಿನ ಕೆಬಿಸಿ ಸೀಸನ್‌ ನಲ್ಲಿ ಕೇಳಿ" ಎಂದು ಟ್ವೀಟ್‌ ಮಾಡಿದ್ದಾರೆ. 'ಈ ಡೌಟ್‌ ಇವತ್ತೇ ಕ್ಲಿಯರ್‌ ಆಗಬೇಕು' ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ. 

ಮತ್ತೊಬ್ಬ ಬಳಕೆದಾರರು, 'ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ' ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ನೇಷನ್ ವಾಂಟ್ಸ್ ಟು ನೋ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಇವರು ನಿಜವಾಗಿಯೂ ಹೀಗೆ ಟ್ವೀಟ್ ಮಾಡಿದ್ದಾರೆಯೇ' ಎಂದು ಪ್ರಶ್ನಿಸಿದ್ದಾರೆ.

ವಿವಾದಕ್ಕೆ ಕಾರಣವಾದ Amitabh Bachchan ಜೊತೆಯ Rani Mukerji ಕಿಸ್ಸಿಂಗ್‌ ಸೀನ್‌!

ನಟನೆಯಿಂದ ಸ್ಪಲ್ಪ ಮಟ್ಟಿಗೆ ದೂರ ಉಳಿದಿರುವ ಅಮಿತಾಬ್‌ ಕೊನೆಯದಾಗಿ ಬೋಮನ್ ಇರಾನಿ, ಅನುಪಮ್ ಖೇರ್ ಮತ್ತು ಪರಿಣಿತಿ ಅವರೊಂದಿಗೆ ಅಮಿತಾಬ್ ಬಚ್ಚನ್  'ಉಂಚೈ' ಚಿತ್ರದಲ್ಲಿ ಕಾಣಿಸಿಕೊಂಡರು. ಚಿತ್ರವು ನವೆಂಬರ್ 11, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಮುಂದೆ, ಅವರು ಚಲನಚಿತ್ರ ನಿರ್ಮಾಪಕ ನಾಗ್ ಅಶ್ವಿನ್ ಅವರ 'ಕಲ್ಕಿ 2898 ADನಲ್ಲಿ ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಕಮಲ್ ಹಾಸನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು 2024 ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios