Work From Home: ಗರ್ಭಿಣಿಯಾದಳು, ಮಗು ಹೆತ್ತಳು, ಕಚೇರಿಯಲ್ಲಿ ಗೊತ್ತೇ ಇಲ್ಲ!

ಇದು ಅಮೆರಿಕದ ಒಬ್ಬ ಮಹಿಳಾ ಉದ್ಯೋಗಿಯ‌ ನೈಜ ಕತೆ. ನಿಮ್ಮಲ್ಲೂ ಈ ಥರದ ಸಮಸ್ಯೆ ಉಂಟಾಗಿರಬಹುದು.

 

American women shares strange story for having second kid while work from home

ನಾನು ಕೆಲಸ (Job) ಮಾಡುತ್ತಾ ಇದ್ದುದು ಒಂದು ಸಿಟಿ ಏಜೆನ್ಸಿಗೆ. ಅದರಲ್ಲೂ ನನ್ನದು ಕಾಂಟ್ರಾಕ್ಟ್ (Contract) ಆಧಾರಿತ ಕೆಲಸ. ಅದೊಂದು ತಾತ್ಕಾಲಿಕ ಕೆಲಸ. ಯಾವುದೇ ವಿಶೇಷ ಸೌಲಭ್ಯಗಳಾಗಲೀ, ಸಂಬಳ ಸಹಿತ ರಜೆ (Leave) ಗಳೆಲ್ಲಾ ಇರಲಿಲ್ಲ. ನಾಲ್ಕು ವರ್ಷ ಆ ಕಚೇರಿಗಾಗಿ ನಾನು ಕೆಲಸ ಮಾಡಿದರೂ ಕಾಯಂ ಮಾಡಿರಲಿಲ್ಲ. ಮಾಡೋ ಸಾಧ್ಯತೆಯೂ ಇರಲಿಲ್ಲ. ಆದರೆ ಕೆಲಸ ಅನಿವಾರ್ಯ ಆಗಿತ್ತು. ನಾನು ನನ್ನ ಯೋಗ್ಯತೆ ಸಾಬೀತುಪಡಿಸೋಕೆ ತುಂಬಾ ದುಡಿಯಲೇಬೇಕಾಗಿತ್ತು. ನನಗೀಗಾಗಲೇ ಒಬ್ಬ ಮಗನಿದ್ದ. ಅದು ಕಚೇರಿಯಲ್ಲಿ ಗೊತ್ತಿತ್ತು. ಇದೇ ಸಂದರ್ಭದಲ್ಲಿ ನಾನು ಇನ್ನೊಮ್ಮೆ ಗರ್ಭವತಿ (Pregnant) ಯಾದೆ. ತುಂಬಾ ಆನಂದವಾಯಿತು. ಇನ್ನೊಂದು ಮಗುವಂತೂ ನಮಗೆ ಬೇಕೇ ಬೇಕಿತ್ತು. ಬಂಧುಗಳಲ್ಲಿ ಹೇಳಿದರೂ ಕಚೇರಿಯಲ್ಲಿ ಹೇಳಲಿಲ್ಲ. ಹೇಳಬೇಕೇ ಬೇಡವೇ ಎಂಬ ದ್ವಂದ್ವ ಉಂಟಾಗಿತ್ತು. ನಿಧಾನವಾಗಿ ಹೇಳೋಣ ಅಂದುಕೊಳ್ಳುತ್ತಿರುವಾಗಲೇ, ನನಗೆ ಮಹತ್ವದ ಒಂದು ಪ್ರಾಜೆಕ್ಟ್ (Project) ವಹಿಸಿದರು. ನಾನು ಅದನ್ನು ಲೀಡ್ ಮಾಡಬೇಕಿತ್ತು. ಅದೊಂದು ದೊಡ್ಡ ಅವಕಾಶವೇ ಆಗಿತ್ತು. ನಾನು ಒಪ್ಪಿಕೊಂಡೆ.

ನಂತರ ನಿಧಾನವಾಗಿ ವಾಸ್ತವ  ಅರಿವಿಗೆ ಬಂತು. ನಾನೇನೋ ವರ್ಕ್ ಫ್ರಂ ಹೋಮ್ (work from home) ಮಾಡುತ್ತಿದ್ದೆ. ಕಚೇರಿಗೆ ಹೋಗಬೇಕಿರಲಿಲ್ಲ ನಿಜ. ಆದರೆ ಈಗಾಗಲೇ ಇರುವ ಮಗನ ಜತೆ ಕೆಲಸವನ್ನು ಹೇಗೋ ಸಂಭಾಳಿಸುತ್ತಿದ್ದೆ. ಗಂಡ ಕಚೇರಿಗೆ ಹೋಗುತ್ತಿದ್ದ. ನನ್ನ ಕೆಲಸದ ಸಂಸ್ಥೆ ಗರ್ಭಿಣಿ ಉದ್ಯೋಗಿಗಳಿಗೆ ಪೂರಕವಾದ ಮನಸ್ಥಿತಿ ಹೊಂದಿರಲಿಲ್ಲ. ಗರ್ಭಿಣಿಯರು ಸಾಕಷ್ಟು ಚೆನ್ನಾಗಿ ಕೆಲಸ ಮಾಡೋಕೆ ಸಾಧ್ಯವಿಲ್ಲ ಎಂಬ ಕಾರಣ ಕೊಟ್ಟು ಕೆಲವರನ್ನು ತೆಗೆದುಹಾಕಿದ್ದು ನಂಗೆ ಗೊತ್ತಿತ್ತು. ನನಗೆ ಕೆಲಸವನ್ನೂ ಉಳಿಸಿಕೊಳ್ಳಬೇಕಿತ್ತು, ಹಾಗೇ ಮಗುವನ್ನೂ ಉಳಿಸಿಕೊಳ್ಳಬೇಕಿತ್ತು. ಮೇಲಾಗಿ ಈಗತಾನೇ ಮಹತ್ವದ ಪ್ರಾಜೆಕ್ಟ್ ಕೊಟ್ಟಿದ್ದರು. ಅದನ್ನು ಮಾಡಿದರೆ ಕೆಲಸ ಕಾಯಂ ಆಗೋ ಚಾನ್ಸ್ ಇತ್ತು. ಹೀಗಾಗಿ ನಾನು ಪ್ರೆಗ್ನೆಂಟ್ ಆದ ವಿಚಾರ ಮುಚ್ಚಿಟ್ಟೆ. ಹಾಗೇ ಕೆಲಸ ಮುಂದುವರಿಸಿದೆ. ನನ್ನ ಗಂಡನಿಗೆ ಇದು ಅಷ್ಟೇನೂ ಇಷ್ಟವಾಗಲಿಲ್ಲ. ಆಕಸ್ಮಿಕವಾಗಿ ಈ ವಿಚಾರ ಹೊರಬೀಳೋ ಚಾನ್ಸ್ ಇದೆ ಎಂಬುದು ಅವನ ಅಭಿಪ್ರಾಯವಾಗಿತ್ತು.

National girl child day: ಸ್ತ್ರೀ ಎಂದರೆ ಅಷ್ಟೇ ಸಾಕೆ? ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

ಪ್ರೆಗ್ನೆನ್ಸಿಯನ್ನು ಮುಚ್ಚಿಡುವುದು ಅಷ್ಟೇನೂ ಕಷ್ಟವಾಗಲಿಲ್ಲ. ಹೆಚ್ಚಿನ ಕೆಲಸ ಮನೆಯಲ್ಲೇ ಆಗುತ್ತಿತ್ತು ಹಾಗೂ ಮಿಟಿಂಗ್‌ಗಳು ಜೂಮ್‌ನಲ್ಲಿ ಆಗುತ್ತಿದ್ದವು. ಕ್ಯಾಮೆರಾಕ್ಕೆ ನನ್ನ ಉಬ್ಬಿಕೊಂಡ ಹೊಟ್ಟೆ ಕಾಣದಂತೆ ಮ್ಯಾನೇಜ್ ಮಾಡುತ್ತಿದ್ದೆ. ಆದರೆ ಊದಿಕೊಂಡ ಮುಖವನ್ನು ಮುಚ್ಚಿಡಲು ಸಾಧ್ಯವಾಗಲಿಲ್ಲ. ನಾನು ದಪ್ಪ ಆಗುತ್ತಿದ್ದೇನೆ ಎಂದು ಕೆಲವರು ಕೊಲೀಗ್‌ಗಳು ತಿಳಿದರು. ನಾನು ಏನೂ ಹೇಳಲಿಲ್ಲ. ನಂತರ ನನ್ನ ಸೋಶಿಯಲ್ ಮೀಡಿಯಾ (Social media) ದಲ್ಲಿ ಎಲ್ಲಿಯೂ ನಾನು ಪ್ರೆಗ್ನೆಂಟ್ ಎಂಬ ವಿಚಾರ ಹೊರಬೀಳದಂತೆ ಎಚ್ಚರ ವಹಿಸಿದೆ. ಯಾವುದೇ ಫೋಟೊ ಹಾಕಲಿಲ್ಲ. ನನ್ನ ಬಂಧುಗಳು ಹಾಗೂ ಕೊಲೀಗ್‌ಗಳಿಗೆ ನನ್ನ ಅಕೌಂಟ್ ಕಾಣಿಸದಂತೆ ಎಚ್ಚರ ವಹಿಸಿದೆ. ಹೆರಿಗೆ ಹತ್ತಿರ ಆಗುತ್ತಿರುವಂತೆ, 15 ದಿನಗಳ ರಜೆ ತಗೊಂಡೆ. ಫ್ಯಾಮಿಲಿ ಎಮರ್ಜೆನ್ಸಿ ಎಂಬ ಕಾರಣ ನೀಡಿದೆ. 15 ಗಂಟೆಗಳ ನೋವಿನ ಬಳಿಕ ಮುದ್ದಾದ ಗಂಡು ಮಗುವಿಗೆ ಜನನ ನೀಡಿದೆ. ಅದು 6 ಪೌಂಡ್ ತೂಕವಿತ್ತು.

Padmashri Pappammal: ಪದ್ಮಶ್ರೀ ಪಡೆದ 107 ವರ್ಷದ ಸೆಲೆಬ್ರಿಟಿ ಅಜ್ಜಿ ತಮ್ಮ ಬದುಕಿನ ಕತೆ ಹೇಳಿದಾಗ...

ಹೆರಿಗೆಯ ನಂತರ ಮನೆಗೆ ಮರಳಿದ ಬಳಿಕ, ಮತ್ತೆ ಕೆಲಸ, ಮೀಟಿಂಗ್ (Meeting) ಶುರುವಾದವು. ಮೀಟಿಂಗ್, ಮಗುವಿಗೆ ಎದೆಹಾಲು (Breat feed) ನೀಡುವುದು, ಇಬ್ಬರು ಮಕ್ಕಳಿಗೆ ಊಟ ಕೊಡುವುದು, ಅವರ ಊಟ ಹಾಗೂ ನಿದ್ರೆಯ ಅವಧಿಯ ನಡುವೆ ನನ್ನ ಕೆಲಸವನ್ನು ಬ್ಯಾಲೆನ್ಸ್ ಮಾಡಬೇಕಿತ್ತು. ಮೀಟಿಂಗ್ ಮಧ್ಯದಲ್ಲಿ ಪುಟ್ಟ ಮಗು ಅತ್ತು ನನ್ನ ರಹಸ್ಯವನ್ನು ಹೊರಹಾಕದಂತೆ ಸಂಭಾಳಿಸಬೇಕಿತ್ತು. ಅತ್ತರೂ ಅದು ಪಕ್ಕದ ಮನೆಯವರ ಮಗು ಅಂತ ಸುಳ್ಳು ಹೇಳುತ್ತಿದ್ದೆ.
    
ಎರಡು ತಿಂಗಳಲ್ಲಿ ಪರಿಸ್ಥಿತಿ ಇನ್ನೂ ಜಟಿಲವಾಯಿತು. ಕೋವಿಡ್ (Covid 19) ಬಂತು. ಮಗನಿಗೆ ಮನೆಯಲ್ಲೇ ಆನ್‌ಲೈನ್ (Online class) ಸ್ಕೂಲು ಶುರುವಾಯಿತು. ಗಂಡನೂ ಮನೆಯಿಂದಲೇ ಕೆಲಸ ಮಾಡತೊಡಗಿದೆ. ಕೆಲಸದ ಹೊರೆ ಹೆಚ್ಚಾಯಿತು. ಆದರೆ ಈ ಬಾರಿ ಪುಟ್ಟ ಮಗುವನ್ನು ಸಂಭಾಳಿಸಲು ಗಂಡನೂ ಇದ್ದುದರಿಂದ ಸ್ವಲ್ಪ ಹಗುರವೇ ಆಯಿತು ಎನ್ನಬೇಕು. ಈ ಮಧ್ಯೆ ನನ್ನ ಪ್ರಾಜೆಕ್ಟ್‌ನ ಸೂಪರ್ವೈಸರ್ ಹಾಗೂ ನಾನು ಕ್ಲೋಸ್ ಆದೆವು. ಆಕೆ ತನ್ನ ಎಲ್ಲಾ ಸಂಸಾರದ ಸುಖ ದುಃಖ, ಮಕ್ಕಳ ಗಂಡನ ವಿಷಯ ಎಲ್ಲಾ ಹೇಳುತ್ತಿದ್ದಳು. ಕೆಲವೊಮ್ಮೆ ಆಕೆಯ ಜೊತೆ ಮಾತಾಡುವಾಗ ನನ್ನ ಪುಟ್ಟ ಮಗುವಿನ ವಿಷಯ ಬಾಯಿಯವರೆಗೂ ಬಂದು ಬಿಡುತ್ತಿತ್ತು. ಹೇಳದೇ ಮ್ಯಾನೇಜ್ ಮಾಡುವುದೇ ಕಷ್ಟವಾಯಿತು. ಆಕೆ ಅಷ್ಟೊಂದು ಮುಕ್ತವಾಗಿ ಎಲ್ಲವನ್ನೂ ಹೇಳುವಾಗ ನಾನು ಮಾತ್ರ ಎಲ್ಲ ಮುಚ್ಚಿಡುತ್ತಿದ್ದೇನಲ್ಲ ಅನ್ನಿಸಿ ಪಾಪಪ್ರಜ್ಞೆಯೂ ಕಾಡುತ್ತಿತ್ತು. 

ಒಂದೈದಾರು ತಿಂಗಳು ಹೀಗೇ ನಡೆಯಿತು. ಕಚೇರಿಯಲ್ಲಿ ಯಾರಿಗೂ ಗೊತ್ತಾಗದಂತೆ ಹೇಗೆ ನಿಭಾಯಿಸಿದೆ ಎಂದು ಆಲೋಚಿಸಿದರೆ ಈಗ ಅಚ್ಚರಿ ಆಗುತ್ತದೆ. ನಂತರ ನನ್ನ ಪ್ರಾಜೆಕ್ಟ್ ಕೂಡಾ ಮುಗಿಯಿತು. ಎಣಿಸಿದಂತೇನೂ ಆಗಲಿಲ್ಲ. ನಾನೇ ಕೆಲಸ ಬಿಡಬೇಕಾಯಿತು. ಈಗ ನಾನು ಬೇರೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ನನಗೆ ರಜೆ, ಸಂಬಳ ಸಹಿತ ರಜೆ, ಉತ್ತಮ ವೇತನ, ಎಲ್ಲವೂ ಸಿಕ್ಕಿದೆ. ಈಗ ನನ್ನ ಹಿಂದಿನ ಕಚೇರಿಯಲ್ಲಿ ನನಗೆ ಎರಡನೇ ಮಗುವಾಗಿರುವುದು ಸಹ ಎಲ್ಲರಿಗೂ ಗೊತ್ತಾಗಿರುವಂತಿದೆ. ಆದರೆ ನಾನು ಅಂದು ಯಾರಿಗೂ ತಿಳಿಸದೆ ಮ್ಯಾನೇಜ್ ಮಾಡಿದ ಕಷ್ಟದ ದಿನಗಳನ್ನು ಯೋಚಿಸಿದರೆ ನಗು ಸಹ ಬರುತ್ತದೆ. ನಾನೇಕೆ ಅಷ್ಟೊಂದು ಅಂಜಬೇಕಿತ್ತು? ಅಮೆರಿಕದ ಕಾನೂನು ಗರ್ಭಿಣಿಯರನ್ನು ಕಚೇರಿ ಸ್ಥಳದಲ್ಲಿಯ ತಾರತಮ್ಯಗಳಿಂದ ರಕ್ಷಿಸಲು ಬದ್ಧವಾಗಿದೆ. ಆದರೆ ಕಾರ್ಪೊರೇಟ್ ವಲಯದಲ್ಲಿ ಇಂಥ ತಾರತಮ್ಯ ಸಾಕಷ್ಟು ಇದೆ, ನಡೆಯುತ್ತಿದೆ. ಅದನ್ನು ಮೀರಲು ನನ್ನಂಥವರು ಹೀಗೆ ಕಷ್ಟಪಡಬೇಕಿದೆ. 

ಮುಟ್ಟಿನ ಸ್ರಾವ ಕುಡಿದು ಫೇಷಿಯಲ್ ಮಾಡಿಕೊಳ್ತಾಳಂತೆ... ಇದೇ ಈಕೆಯ ಸೌಂದರ್ಯದ ಗುಟ್ಟು!

 

 

Latest Videos
Follow Us:
Download App:
  • android
  • ios