ನೀವು ಯೂಟ್ಯೂಬ್ ಶಾರ್ಟ್ಸ್ ಮಾಡುತ್ತೀರಾ? ಅ.15ರಿಂದ ಬದಲಾಗುತ್ತಿದೆ ನಿಯಮ!
ಯೂಟ್ಯೂಬ್ ಶಾರ್ಟ್ಸ್ ವಿಡಿಯೋ ಅತ್ಯಂತ ಜನಪ್ರಿಯ. ಇದೀಗ ಶಾರ್ಟ್ಸ್ ವಿಡಿಯೋದ ನಿಯಮಗಳು ಬದಲಾಗುತ್ತಿದೆ. ವೀಕ್ಷಕರು ಹಾಗೂ ಶಾರ್ಟ್ಸ್ ವಿಡಿಯೋ ಮಾಡುವ ಯೂಟ್ಯೂಬರ್ಸ್‌ಗೆ ಹೊಸ ಅಪ್‌ಡೇಟ್ ಜನಪ್ರೀಯತೆ ಜೊತೆಗೆ ಇನ್‌ಕಮ್ ಹೆಚ್ಚಿಸಲಿದೆ.
ನವದೆಹಲಿ(ಅ.6) ಇನ್‌ಸ್ಟಾಗ್ರಾಂ ಹಾಗೂ ಟಿಕ್‌ಟಾಕ್ ರೀಲ್ಸ್‌ಗೆ ಪ್ರತಿಯಾಗಿ ಯೂಟ್ಯೂಬ್ ತಂದಿರುವ ಶಾರ್ಟ್ಸ್ ವಿಡಿಯೋ ಅತ್ಯಂತ ಜನಪ್ರಿಯವಾಗಿದೆ. ಈ ಶಾರ್ಟ್ಸ್ ವಿಡಿಯೋ ನೋಡುತ್ತಾ ಕಾಲಕಳೆಯುವುದೇ ಗೊತ್ತಾಗುವುದಿಲ್ಲ. ಇತ್ತ ಹಲವು ಯೂಟ್ಯೂಬರ್ಸ್ ಶಾರ್ಟ್ಸ್ ವಿಡಿಯೋ ಮೂಲಕ ಅತ್ಯಂತ ಜನಪ್ರಿಯರಾಗಿದ್ದಾರೆ. ಜೊತೆಗೆ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ. ಇದೀಗ ಯೂಟ್ಯೂಬ್ ತನ್ನ ಶಾರ್ಟ್ಸ್ ವಿಡಿಯೋ ಮಾಡುವ ಹಾಗೂ ನೋಡುವ ಮಂದಿಗೆ ಗುಡ್ ನ್ಯೂಸ್ ನೀಡಿದೆ. ಹೊಸ ಅಪ್‌ಡೇಟ್ ಪ್ರಕಾರ ಯೂಟ್ಯೂಬ್ ಶಾರ್ಟ್ಸ್ ವಿಡಿಯೋ ಸಮಯ ಮೀತಿ ಹೆಚ್ಚಿಸಲಾಗಿದೆ. ಕೇವಲ 60 ಸೆಕೆಂಡ್‌ಗಳಿಂದ ಈ ವಿಡಿಯೋ ಮೀತಿಯನ್ನು ಇದೀಗ 3ನಿಮಿಷಕ್ಕೆ ವಿಸ್ತರಿಸಲಾಗಿದೆ.
ಅಕ್ಟೋಬರ್ 15ರಿಂದ ಹೊಸ ಶಾರ್ಟ್ಸ್ ನಿಯಮ ಜಾರಿಯಾಗುತ್ತಿದೆ. ಹೊಸ ಅಪ್‌ಡೇಟ್ ಪ್ರಕಾರ, ಯೂಟ್ಯೂಬ್ ಶಾರ್ಟ್ಸ್ ವಿಡಿಯೋ 60 ಸೆಕೆಂಡ್‌ನಿಂದ ಗರಿಷ್ಠ 3 ನಿಮಿಷದವರೆಗೆ ಮಾಡಬಹುದು. ಇದು ವೀಕ್ಷಕರು ಪ್ರತಿ ವಿಡಿಯೋ ನೋಡುವ ಸಮಯವನ್ನೂ ಹೆಚ್ಚಿಸಲಿದೆ. ಇತ್ತ ಆದಾಯವೂ ಹೆಚ್ಚಾಗಲಿದೆ. ಬಹುದಿನಗಳ ಬೇಡಿಕೆಯನ್ನು ಇದೀಗ ಯೂಟ್ಯೂಬ್ ಸಾಕಾರಗೊಳಿಸಲು ಸಜ್ಜಾಗಿದೆ. ಸ್ಕ್ವಾರ್ ಹಾಗೂ ವರ್ಟಿಕಲ್ ರೇಶಿಯೋ ವಿಡಿಯೋಗಳಿಗೆ ಈ ನಿಯಮ ಅನ್ವಯವಾಗಲಿದೆ.
ಪ್ರಸಿದ್ಧ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಚಾನೆಲ್ ಹ್ಯಾಕ್, ಎಲ್ಲ ವಿಡಿಯೋ ಡಿಲೀಟ್
ಶಾರ್ಟ್ಸ್ ವಿಡಿಯೋ ಕ್ರಿಯೇಟರ್ಸ್ ವಿಡಿಯೋ ಸಮಯ ಮಿತಿ ಹೆಚ್ಚಿಸುವಂತೆ ಹಲವು ಮನವಿ ಮಾಡಿದ್ದಾರೆ. ಕೇವಲ 60 ಸೆಕೆಂಡ್‌ನಲ್ಲಿ ಸ್ಟೋರಿ ಟೆಲ್ಲಿಂಗ್ ಕಷ್ಟ. ಅತೀ ಕಡಿಮೆ ಅವಧಿಯಲ್ಲಿ ಕಾಮಿಡಿಗಳನ್ನು ಹೊರತುಪಡಿಸಿದರೆ, ಕತೆಗಳನ್ನು ಹೇಳುವುದು ಕಷ್ಟ. ಇದು ಸಮಸ್ಯೆಯಾಗುತ್ತಿದೆ ಎಂದು ಕ್ರಿಯೇಟರ್ಸ್ ಮನವಿ ಮಾಡಿದ್ದರು. ಇತ್ತ ಕೆಲ ಶಾರ್ಟ್ಸ್‌ಗಳು ಸಮಯ ಮಿತಿ ಒಳಗೆ ನೀಡುವ ಕಾರಣದಿಂದ ನೋಡುಗರಿಗೆ ಅರ್ಥವಾಗದೇ ಹೋಗುತ್ತಿತ್ತು. ಈ ಎಲ್ಲಾ ಫೀಡ್‌ಬ್ಯಾಕ್ ಪಡೆದುಕೊಂಡು ಯೂಟ್ಯೂಬ್ ಶಾರ್ಟ್ಸ್ ತಂಡ, ಇದೀಗ 3ನಿಮಿಷಕ್ಕೆ ಏರಿಕೆ ಮಾಡಿದೆ.
ಯೂಟ್ಯೂಬ್ ಶಾರ್ಟ್ಸ್ ವಿಡಿಯೋ ಪೋಸ್ಟ್ ಮಾಡುವುದು ಹೇಗೆ?
ಶಾರ್ಟ್ಸ್ ಒಪನ್ ಮಾಡಿದ ಬಳಿಕ ಕ್ರಿಯೇಟ್ ಬಟನ್ ಟ್ಯಾಪ್ ಮಾಡಿ ವಿಡಿಯೋ ಅಪ್ಲೋಡ್ ಮಾಡಬೇಕು
ವಿಡಿಯೋ ಅಪ್ಲೋಡ್ ಮಾಡಿದ ಬೆನ್ನಲ್ಲೇ ಸ್ಕ್ವಾರ್ ಅಥವಾ ವರ್ಟಿಕಲ್ ರೇಶಿಯೋ ವಿಡಿಯೋ ಆಯ್ಕೆಯನ್ನು ಮಾಡಿಕೊಳ್ಳಬೇಕು
NEXT ಬಟನ್ ಟ್ಯಾಪ್ ಮಾಡಿದರೆ 100 ಪದಗಳ ಒಳಗಿರುವ ಹೆಡ್‌ಲೈನ್ ಸೇರಿದಂತೆ ಡಿಟೇಲ್ ಬರೆಯಿರಿ
ಬಳಿಕ ಇದು ಮಕ್ಕಳ ವಿಡಿಯೋ ಅಥವಾ ಅಲ್ಲವೇ ಅನ್ನೋದನ್ನು ಖಾತ್ರಿಪಡಿಸಿಕೊಳ್ಳಬೇಕು
ಈ ಪ್ರಕ್ರಿಯೆ ಮುಗಿದ ಬಳಿಕ ಪಬ್ಲಿಶ್ ಬಟನ್ ಕ್ಲಿಕ್ ಮಾಡಿದರೆ ವಿಡಿಯೋ ಪೋಸ್ಟ್ ಆಗಲಿದೆ.
ಆಸ್ಪತ್ರೆಗೆ ದಾಖಲಾದ ಧನುಶ್ರೀ; ನಾರ್ತ್ ಇಂಡಿಯನ್ ಮೀಲ್ಸ್ ತಿನ್ಕೊಂಡು ವಿಡಿಯೋ ಮಾಡುತ್ತಿರುವುದಕ್ಕೆ ನೆಟ್ಟಿಗರು ಗರಂ