ಮೇ 15ರ ನಂತರ ವಾಟ್ಸಾಪ್ ಅಕೌಂಟ್ ರದ್ದಾಗಲ್ಲ! ಯಾಕೆ ಗೊತ್ತಾ?
ಅಪ್‌ಡೇಟ್ ಪಾಲಿಸಿಗೆ ಒಪ್ಪಿಗೆ ನೀಡದ ವಾಟ್ಸಾಪ್ ಅಕೌಂಟ್‌ಗಳು ಮೇ 15ರ ಗಡುವು ಮೀರಿದ ನಂತರ ಡಿಲಿಟ್ ಆಗಲಿವೆ ಎಂಬ ಸುದ್ದಿ ಇತ್ತು. ಆದರೆ, ವಾಟ್ಸಾಪ್ ಈ ಸುದ್ದಿಗೆ ತಿಲಾಂಜಲಿ ನೀಡಿದ್ದು, ಪ್ರೈವೆಸಿ ಅಪ್‌ಡೇಟ್ ಆಗದಿದ್ದರೂ ಮೇ 15ರ ನಂತರ ಅಕೌಂಟ್ ಡಿಲಿಟ್ ಮಾಡುವುದಿಲ್ಲ ಎಂದು ಹೇಳಿದೆ. ಆದರೆ, ಅಪ್‌ಡೇಟ್ ಮಾಡಿಕೊಳ್ಳುವಂತೆ ಮುಂದಿನ ಕೆಲವು ವಾರಗಳವರೆಗೂ ರಿಮೈಂಡರ್ ಕಳುಹಿಸುವುದಾಗಿ ಹೇಳಿಕೊಂಡಿದೆ.
ಪ್ರೈವೆಸಿ ಪಾಲಿಸಿಗೆ ಒಪ್ಪಿಗೆ ನೀಡದ ವಾಟ್ಸಾಪ್ ಖಾತೆಗಳು ಬಂದ್ ಆಗಲಿವೆ ಎಂಬ ಸುದ್ದಿ ಇತ್ತು. ಆದರೆ, ಸದ್ಯಕ್ಕೆ ಆ ಆತಂಕ ದೂರಾಗಿದೆ. ತನ್ನ ಗ್ರಾಹಕರಿಗೆ ಪ್ರೈವೆಸಿ ಪಾಲಿಸಿಗೆ ಒಪ್ಪಿಗೆ ನೀಡಲು ಮೇ 15 ಗಡುವು ವಿಧಿಸಿದ್ದ ವಾಟ್ಸಾಪ್ ಒಡೆತನದ ಫೇಸ್‌ಬುಕ್, ಇದೀಗ ಗಡುವು ಮೀರಿದರೂ ಯಾವುದೇ ಖಾತೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ವಾಟ್ಸಾಪ್ ವಕ್ತಾರ, ಪ್ರೈವಸಿ ಪಾಲಿಸಿಗೆ ಒಪ್ಪಿಗೆ ನೀಡದ ಯಾವುದೇ ಖಾತೆಗಳನ್ನು ಮೇ 15ರ ನಂತರ ಡಿಲಿಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಶಿಯೋಮಿಯಿಂದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್?
ಪ್ರೈವೆಸಿ ಪಾಲಿಸಿ ಅಪ್‌ಡೇಟ್ ಮಾಡಿಲ್ಲ ಎಂಬ ಕಾರಣಕ್ಕೋ, ಅಥವಾ ಇನ್ನಾವುದೇ ಕಾರಣಕ್ಕೆ ಭಾರತದಲ್ಲಿ ಯಾವುದೇ ಬಳಕೆದಾರರ ವಾಟ್ಸಾಪ್ ಖಾತೆಯನ್ನು ಮೇ 15ರ ನಂತರ ಸ್ಥಗಿತಗೊಳಿಸುವುದಿಲ್ಲ. ಮೇ 15ರ ನಂತರವೂ ಪ್ರೈವೆಸಿ ಪಾಲಿಸಿಯನ್ನು ಅಪ್‌ಡೇಟ್ ಮಾಡಿಕೊಳ್ಳದ ಖಾತೆದಾರರಿಗೆ ನಾವು ಮುಂದಿನ ಕೆಲವು ವಾರಗಳವರೆಗೂ ರಿಮೈಂಡರ್‌ಗಳನ್ನು ಕಳುಹಿಸುತ್ತಲೇ ಇರುತ್ತವೆ ಎಂದು ವಕ್ತಾರರು ತಿಳಿಸಿದ್ದಾರೆ. ಆದರೆ, ಈವರಗೆ ಭಾರತದಲ್ಲಿ ಎಷ್ಟು ಬಳಕೆದಾರರು ಈ ಪ್ರೈವೆಸಿ ಪಾಲಿಸಿಗೆ ಒಪ್ಪಿಗೆ ನೀಡಿದ್ದಾರೆಂಬ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ.
ಭಾರತದ ವಾಟ್ಸಾಪ್ ಬಳಕೆದಾರರ ಪೈಕಿ ಬಹಳಷ್ಟು ಬಳಕೆದಾರರು ಹೊಸ ನಿಯಮಗಳನ್ನು ಒಪ್ಪಿಕೊಂಡಿದ್ದಾರೆ. ಮತ್ತೆ ಕೆಲವರಿಗೆ ಇನ್ನೂ ಈ ಅವಕಾಶ ಸಿಕ್ಕಿಲ್ಲ ಎಂದು ವಕ್ತಾರರು ಹೇಳಿದ್ದಾರೆ. ಆದರೆ, ಎಷ್ಟು ಜನರು ಇಲ್ಲಿಯವರೆಗೆ ಒಪ್ಪಿಕೊಂಡಿದ್ದಾರೆಂಬ ಮಾಹಿತಿಯನ್ನು ಮಾತ್ರ ಕಂಪನಿ ಹೇಳಿಲ್ಲ.
ಈ ವರ್ಷದ ಜನವರಿ ತಿಂಗಳಲ್ಲಿ ಅಪ್ಲಿಕೇಶನ್‌ನಲ್ಲಿನ ಅಧಿಸೂಚನೆಯ ಮೂಲಕ ವಾಟ್ಸಾಪ್ ತನ್ನ ಸೇವಾ ನಿಯಮಗಳು ಮತ್ತು ಸಾರ್ವಜನಿಕ ನೀತಿಯಲ್ಲಿನ ಬದಲಾವಣೆಗಳ ಬಗ್ಗೆ ಬಳಕೆದಾರರಿಗೆ ತಿಳಿಸಿತ್ತು. ವಾಟ್ಸಾಪ್ ಬಳಕೆಯನ್ನು ಮುಂದುವರಿಸಬೇಕಿದ್ದರೆ ಬಳಕೆದಾರರು ಫೆಬ್ರವರಿ 8ರೊಗಳಗೆ ಕಂಪನಿಯೆ ಹೊಸ ನಿಯಮಗಳಿಗೆ ಒಪ್ಪಿಗೆ ನೀಡಬೇಕೆಂದು ಹೇಳಲಾಗಿತ್ತು. ಆದರೆ, ಕಂಪನಿಯ ಈ ಕ್ರಮಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಯಿತು. ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಬಳಸಿಕೊಳ್ಳಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂತು. ಈ ಹಿನ್ನೆಲೆಯಲ್ಲಿ ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಳ್ಳುವುದಿಲ್ಲ ಎಂದು ಕಂಪನಿ ಸ್ಪಷ್ಟಣೆ ನೀಡಿತು. ಜೊತೆಗೆ, ಅಪ್‌ಡೇಟ್ ಮಾಡಲು ನೀಡಿದ್ದ ಗಡುವನ್ನು ಮೇ 15ರವರೆಗೂ ಮುಂದೂಡಿತ್ತು.
ಶಿಯೋಮಿಯ ದುಬಾರಿ 75 ಇಂಚಿನ ಎಂಐ ಕ್ಯೂಎಲ್ಇಡಿ ಟಿವಿ ಬಿಡುಗಡೆ: ಬೆಲೆ 1,19,999 ರೂ.
ವಾಟ್ಸಾಪ್ ಪ್ರಕಾರ, ಪ್ರಮುಖ ಅಪ್‌ಡೇಟ್‌ಗಳು ಅದರ ಸೇವೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮತ್ತು ಅದು ಬಳಕೆದಾರರ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ; ಬಿಸಿನೆಸ್‌ಗೆ ಅನುಕೂಲವಾಗುವಂತೆ ವಾಟ್ಸಾಪ್ ಚಾಟ್‌ಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಫೇಸ್‌ಬುಕ್ ಹೋಸ್ಟ್ ಮಾಡಿದ ಸೇವೆಗಳನ್ನು ಹೇಗೆ ಬಳಸಬಹುದು; ಮತ್ತು ಕಂಪನಿಯ ಉತ್ಪನ್ನಗಳಲ್ಲಿ ಏಕೀಕರಣವನ್ನು ನೀಡಲು ಫೇಸ್‌ಬುಕ್‌ನೊಂದಿಗೆ ವಾಟ್ಸಾಪ್ ಪಾಲುದಾರರು ಹೇಗೆ ಸಂಯೋಜಿಸಬಹುದ ಮಾಹಿತಿಯನ್ನು ಒದಗಿಸುತ್ತದೆ.
ಪ್ರೈವೆಸಿ ಪಾಲಿಸಿ ಅಪ್‌ಡೇಟ್ ಮಾಡುವುದರಿಂದ ಅಥವಾ ಒಪ್ಪಿಕೊಳ್ಳುವುದರಿಂದ ಡೇಟಾವನ್ನು ಫೇಸ್‌ಬುಕ್ ಜತೆ ಷೇರ್ ಮಾಡಿಕೊಳ್ಳಲು ಅನುಮತಿ ನೀಡುವುದಿಲ್ಲ ಎಂದು ವಾಟ್ಸಾಪ್ ಅಭಿಪ್ರಾಪಡುತ್ತಿದೆ. ಇಷ್ಟಾಗಿಯೂ ವಾಟ್ಸಾಪ್ ಪ್ರೈವೆಸಿ ಪಾಲಿಸಿ ಬಗ್ಗೆ ವ್ಯಾಪಕ ವಿರೋಧ ಬಂದ ಹಿನ್ನೆಲೆಯಲ್ಲೇ ಕಂಪನಿ ಫೆಬ್ರವರಿಯಲ್ಲಿ ನೀಡಲಾಗಿದ್ದ ಡೆಡ್‌ಲೈನ್ ಅನ್ನು ಮೇ 15ಕ್ಕೆ ಮುಂದೂಡಿತ್ತು. ಇದೀಗ ಮೇ 15ರ ಡೆಡ್‌ಲೈನ್ ಕೂಡ ಹತ್ತಿರದಲ್ಲೇ ಬಂದಿದೆ.
CoWIN ಮೂಲಕ ಲಸಿಕೆ ಪಡೆಯಲು 4 ಸಂಖ್ಯೆಯ ಸೆಕ್ಯುರಿಟಿ ಕೋಡ್ ಕಡ್ಡಾಯ
ಈ ಅಪ್‌ಡೇಟ್ ಯಾರಿಗಾದರೂ ವೈಯಕ್ತಿಕ ಸಂದೇಶಗಳ ಗೌಪ್ಯತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಭವಿಷ್ಯದಲ್ಲಿ, ಜನರು ಹೊಂದಿರುವ ಹೊಸ ಆಯ್ಕೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವುದು, ವಾಟ್ಸಾಪ್‌ನಲ್ಲಿ ವ್ಯವಹಾರಕ್ಕೆ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ ಎಂದು ವಾಟ್ಸಾಪ್ ವಕ್ತಾರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಪ್ರೈವೆಸಿ ಅಪ್‌ಡೇಟ್‌ಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲ ಮತ್ತು ತಪ್ಪು ಮಾಹಿತಿಯನ್ನುಹೋಗಲಾಡಿಸಲು ಕೆಲವು ತಿಂಗಳಿಂದ ಕೆಲಸ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.