Asianet Suvarna News Asianet Suvarna News

ಶಿಯೋಮಿಯ ದುಬಾರಿ 75 ಇಂಚಿನ ಎಂಐ ಕ್ಯೂಎಲ್ಇಡಿ ಟಿವಿ ಬಿಡುಗಡೆ: ಬೆಲೆ 1,19,999 ರೂ.!

ಬಜೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ ತಯಾರಿಕಾ ಕಂಪನಿ, ಚೀನಾ ಮೂಲದ ಶಿಯೋಮಿ ಟಿವಿಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಶಿಯೋಮಿ ಇದೀಗ ದುಬಾರಿಯಾದ ಟಿವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಟಿವಿಯ ಬೆಲೆ 1,19,999 ರೂಪಾಯಿ. ಈ ಟಿವಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ನೋಡುಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.

Xiaomi launched its Mi QLED TV 75 Ultra-HD HDR Smart Android TV to India
Author
Bengaluru, First Published May 2, 2021, 4:34 PM IST

ಚೀನಾ ಮೂಲದ ಪ್ರಖ್ಯಾತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಈ ಕಂಪನಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೇ ಟಿವಿಗಳನ್ನು ಉತ್ಪಾದಿಸುತ್ತದೆ. ಭಾರತೀಯ ಮಾರುಕಟ್ಟೆಗೆ ಹಲವು ಟಿವಿಗಳನ್ನು ಪರಿಚಯಿಸಿದೆ. ಇದೀಗ ಕಂಪನಿ ಎಂಐ ಕ್ಯೂಎಲ್ಇಡಿ ಟಿವಿ 75 ಅಲ್ಟ್ರಾ ಎಚ್‌ಡಿ ಸ್ಮಾರ್ಟ್‌ ಆಂಡ್ರಾಯ್ಡ್ ಟಿವಿಯನ್ನು ಬಿಡುಗಡೆ ಮಾಡಿದೆ.

ಶಿಯೋಮಿಯಿಂದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್?

ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವ ಈ ಎಂಐ ಕ್ಯೂಎಲ್ಇಡಿ ಟಿವಿ 75 ಅಲ್ಟ್ರಾ-ಎಚ್‌ಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಬೆಲೆ 1,19,999 ರೂಪಾಯಿಯಾಗಿದೆ. ಅಂದರೆ ಈ ಟಿವಿಯು ಪ್ರೀಮಿಯಂ ಟಿವಿಯಾಗಿದೆ. 75 ಇಂಚ್‌ನ  ಕ್ಯೂಎಲ್ಇಡಿ ಟಿವಿ ಅತ್ಯಂತ ಬೃಹತ್ ಹಾಗೂ ದುಬಾರಿ ಟಿವಿಯಾಗಿದೆ. ಶಿಯೋಮಿ ಬಿಡುಗಡೆ ಮಾಡಿರುವ ಆಂಡ್ರಾಯ್ಡ ಟಿವಿಗಳ ಪೈಕಿ ಇದು ಅತ್ಯಂತ ದುಬಾರಿ ಟಿವಿ ಎನಿಸಿಕೊಂಡಿದೆ.

ಈ ಎಂಐ ಕ್ಯೂಎಲ್ಇಡಿ ಟಿವಿ 75 ಅಲ್ಟ್ರಾ ಎಚ್‌ಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯು ಆಂಡ್ರಾಯ್ಡ್ ಟಿವಿ 10 ಆಪರೇಟಿಂಗ್ ಸಾಫ್ಟ್‌ವೇರ್ ಒಳಗೊಂಡಿದ ಮತ್ತು ಆಂಡ್ರಾಯ್ಡ್ ಸ್ಟಾಕ್ ಇಂಟರ್ಫೇಸ್ ಮತ್ತು ಶಿಯೋಮಿಯ ಪ್ಯಾಚ್ ವಾಲ್ ಯೂಸರ್ ಇಂಟರ್ಫೇಸ್‌ ಹೊಂದಿದೆ. ಜೊತೆಗೆ ಡಾಲ್ಬೀ ವಿಷನ್‌ಗೂ ಸಪೋರ್ಟ್ ಮಾಡುತ್ತದೆ. ಈ ಟಿವಿಯು ಶಿಯೋಮಿ ಕಂಪನಿ ಎಂಐ ಕ್ಯೂಎಲ್ಇಡಿ ಟಿವಿ 4ಕೆ ವ್ಯಾಪ್ತಿಯ ಭಾಗವಾಗಿದೆ ಮತ್ತು ಇತ್ತೀಚೆಗಷ್ಟೇ ಈ ಟಿವಿ ಬಿಡುಗಡೆಯ ಬಗ್ಗೆ ಘೋಷಿಸಲಾಗಿತ್ತು.

ಈಗಾಗಲೇ ಹೇಳಿದಂತೆ ಈ ಎಂಐ ಕ್ಯೂಎಲ್ಇಡಿ ಟಿವಿ75 ಅಲ್ಟ್ರಾ ಸ್ಮಾರ್ಟ್‌ ಆಂಡ್ರಾಯ್ಡ್ ಟಿವಿಯ ಬೆಲೆ 1,19,999 ರೂ. ಆಗಿದೆ. ಆದರೆ, ಇದೇ ಸೆಗ್ಮಂಟ್‌ನಲ್ಲಿ ಇತರ ಕಂಪನಿಯ ಟಿವಿಗಳಿಗೆ ಹೋಲಿಸಿದರೆ ಈ ಎಂಐ ಎಲ್ಇಡಿ ಟಿವಿ 75 ಬೆಲೆ ತುಂಬಾನೇ ಕಡಿಮೆಯಾಗಿದೆ. ಆದರೆ, ಕಡಿಮೆ ಬೆಲೆ ಅತ್ಯುತ್ತಮ ಅನುಭವವನ್ನು ಈ ಟಿವಿ ನೀಡುತ್ತದೆ ಎಂದು ಕಂಪನಿ ಹೇಳಿಕೊಡಿದೆ. ಜತೆಗೆ ಇದು ತಂಬಾ ಬೃಹತ್ತಾದ ಟಿವಿಯೂ ಹೌದು.

ಕೋವಿಡ್ ಲಸಿಕೆ: CoWINನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಏಪ್ರಿಲ್ 27ರಿಂದಲೇ ಈ ಎಂಐ ಕ್ಯೂಎಲ್ಇಡಿ ಟಿವಿ 75 ಅಲ್ಟ್ರಾ ಎಚ್‌ಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಮಾರಾಟ ಆರಂಭವಾಗಿದೆ. ಕಂಪನಿ ಅಧಿಕೃತ ವೆಬ್‌ಸೈಟ್ ಹಾಗೂ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲೂ ಈ ಟಿವಿ ಮಾರಾಟಕ್ಕೆಸಿಗಲಿದೆ. ಕಳೆದ ಡಿಸೆಂಬರ್‌ನಲ್ಲಿ ಶಿಯೋಮಿ ಕಂಪನಿಯ ಎಂಐ ಕ್ಯೂಎಲ್ಇಡಿ ಟಿವಿ 4ಕೆ 55 ಇಂಚಿನ ಟಿವಿಯನ್ನು ಭಾರತೀಯ ಮಾರುಕ್ಟಟೆಗೆ ಬಿಡುಗಡೆ ಮಾಡಿತ್ತು. ಅದರ ಬೆಲೆ 56,999 ರೂ. ಇತ್ತು. ಇದೀಗ ಕಂಪನಿ ಈ ಮಾಡೆಲ್‌ ಮುಂದುವರಿದ ಭಾಗವಾಗಿಯೇ ಈ ಎಂಐ ಕ್ಯೂಎಲ್ಇಡಿ ಟಿವಿ 75 ಅಲ್ಟ್ರಾ ಎಚ್‌ಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೆಸರೇ ಹೇಳುವಂತೆ ಈ ಟಿವಿಯು 75 ಇಂಚಿನ ಟಿವಿಯಾಗಿದೆ. ಕ್ಯೂಎಲ್ಇಡಿ ಸ್ಕ್ರೀನ್ ಹೊಂದಿದೆ. ಡಾಲ್ಬಿ ವಿಷನ್, ಎಚ್‌ಡಿಆರ್10 ಪ್ಲಸ್ ಎಚ್‌ಡಿಆರ್ 10 ಮತ್ತು ಎಚ್‌ಎಲ್‌ಜಿ ಫಾರ್ಮ್ಯಾಟ್‌ಗೆ ಇದು ಸಪೋರ್ಟ್ ಮಾಡುತ್ತದೆ. ಜೊತೆಗೆ ಈ ಟಿವಿಯ ಫುಲ್ ಆರೇ ಲೋಕಲ್ ಡಿಮ್ಮಿಂಗ್ ತಂತ್ರಜ್ಞಾನವನ್ನೂ ಹೊಂದಿದೆ.

ಈ ಎಂಐ ಕ್ಯೂಎಲ್ಇಡಿ ಟಿವಿ75 ಅಲ್ಟ್ರಾ ಸ್ಮಾರ್ಟ್‌ ಆಂಡ್ರಾಯ್ಡ್ ಟಿವಿಯು ಕ್ವಾಡ್ ಕೋರ್ 64 ಬಿಟ್ ಎ55 ಪ್ರೊಸೆರ್ ಮತ್ತು 2 ಜಿಬಿ ರ್ಯಾಮ್, 32 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಈ ಸ್ಟೋರೇಜ್ ಆಪ್‌ಗಳು ಮತ್ತು ಆಪ್ಸ್ ಡೇಟಾಗೆ ಬಳಕೆಯಾಗುತ್ತದೆ. ಇನ್‌ಬಿಲ್ಟ್ ಆಗಿಯೇ ನಿಮಗೆ ಕ್ರೋಮ್‌ಕಾಸ್ಟ್ ದೊರೆಯತ್ತದೆ ಮತ್ತು ರಿಮೋಟ್ ಹಾಗೂ ಹ್ಯಾಂಡ್ಸ್ ಪ್ರೀ ವಾಯ್ಸ್ ಕಂಟ್ರೋಲ್ ಮೂಲಕವೇ ನೀವು ಗೂಗಲ್ ಅಸಿಸ್ಟೆಂಟ್‌ಗೆ ಪ್ರವೇಶ ಪಡೆದುಕೊಳ್ಳಬಹುದು. ಮೈಕ್ರೋಫೋನ್‌ಗಳ ನೆರವಿನಿಂದಲೇ ನೀವು ಟಿವಿಯನ್ನು ಸ್ವಿಚ್ ಆಫ್ ಮತ್ತು ಸ್ವಿಚ್ ಆನ್ ಕೂಡ ಮಾಡಬಹುದು.

ಕೋವಿಡ್ ನಿರ್ವಹಣೆ ಟೀಕೆ: 100ಕ್ಕೂ ಹೆಚ್ಚು ಪೋಸ್ಟ್ ಡಿಲಿಟ್ ಮಾಡಿದ ಟ್ವಿಟರ್, ಫೇಸ್‌ಬುಕ್!

ಈ ಟಿವಿಯ ಹಲವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೀಕ್ಷಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಹೊಂದಿದೆ. ಅತ್ಯುತ್ತಮ ಅನುಭವವನ್ನು ಈ ಟಿವಿ ನೀಡುತ್ತದೆ.

Follow Us:
Download App:
  • android
  • ios