ಎಡಿಟ್ ಮಾಡಿದ ವಾಟ್ಸಾಪ್ ಮೇಸೆಜ್ ಮೇಲೆ ಲೇಬಲ್!
*ಹೊಸ ಫೀಚರ್ ಪರಿಚಯಿಸಲಿರುವ ಮೇಸೆಜಿಂಗ್ ಆಪ್ ವಾಟ್ಸಾಪ್
*ನೀವು 15 ನಿಮಿಷ ಅವಧಿಯಲ್ಲಿ ವಾಟ್ಸಾಪ್ ಮೇಸೆಜ್ ಎಡಿಟ್ ಮಾಡಬಹುದು
*ಈ ಹೊಸ ಫೀಚರ್ ಶೀಘ್ರವೇ ಎಲ್ಲ ಬಳಕೆದಾರರಿಗೆ ದೊರೆಯಲಿದೆ
ವಾಟ್ಸಾಪ್ (WhatsApp)ನ ಹೊಸ ಎಡಿಟಿಂಗ್ ಮೇಸೆಜ್ (Editing Messages) ಫೀಚರ್ ಸೇರಿಸಲಿದೆ. ಈ ಬಗ್ಗೆ ಈ ಹಿಂದೆಯೂ ಸಾಕಷ್ಟು ಮಾಹಿತಿಗಳು ಸೋರಿಕೆಯಾಗಿವೆ. ವಾಟ್ಸಾಪ್ ಕೂಡ ಅಧಿಕೃತವಾಗಿಯೇ ಈ ಬಗ್ಗೆ ತಿಳಿಸಿದೆ. ಈ ಹೊಸ ಫೀಚರ್ ಪ್ರಕರಾ, ಈಗಾಗಲೇ ಕಳುಹಿಸಲಾದ ಸಂದೇಶಗಳನ್ನು ಎಡಿಟ್ ಮಾಡಲು ಅದು ಬಳಕೆದಾರರಿಗೆ ಅನುಮತಿಸುತ್ತದೆ. ಹಾಗಾಗಿ, ನೀವು ಕಳುಹಿಸಿದ ಸಂದೇಶವನ್ನು ತಕ್ಷಣವೇ ಎಡಿಟ್ ಮಾಡಿ, ಮತ್ತೆ ಸೆಂಡ್ ಮಾಡಬಹುದು. ಹೀಗೆ ಎಡಿಟ್ ಮಾಡಲಾದ ಸಂದೇಶದ ಜೊತೆಗೆ ಬಳಕೆದಾರರು 'ಎಡಿಟ್ ಮಾಡಲಾಗಿದೆ' ಎಂಬ ಲೇಬಲ್ ಅನ್ನು ನೋಡುತ್ತಾರೆ. ಅಂದರೆ, ನೀವು ಕಳುಹಿಸಿದ ಸಂದೇಶವನ್ನು ಮತ್ತೆ ಎಡಿಟ್ ಮಾಡಿ ಕಳುಹಿಸಲಾಗಿದೆ ಎಂಬ ಸಂಗತಿ ಬಳಕೆದಾರರಿಗೆ ಗೊತ್ತಾಗಲಿದೆ ಎಂಬ ಸಂಗತಿಯು ಈಗ ಹೊರ ಬಿದ್ದಿದೆ. ಫೇಸ್‌ಬುಕ್ ಒಡೆತನ ಹೊಂದಿರುವ ಮೆಟಾ ಕಂಪನಿಯೇ ವಾಟ್ಸಾಪ್ ಮಾಲೀಕ ಕಂಪನಿಯಾಗಿದ್ದು, ಬಳಕೆದಾರರ ಅನುಭವವನ್ನು ಹೆಚ್ಚಿಸಲು ಕಂಪನಿಯು ಆಗಾಗ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಆ ಮೂಲಕ ಬಳೆಕದಾರರ ಅಗತ್ಯಗಳನ್ನು ಪೂರೈಸುತ್ತಿದೆ. ಜತೆಗೇ ತನ್ನ ಸೇವಾ ಉತ್ಕೃಷ್ಟತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ, ಕಂಪನಿಯು ಎಡಿಟೆಡ್ ಹೊಸ ಫೀಚರ್ ಅನ್ನು ಬಳಕೆದಾರರಿಗೆ ನೀಡುತ್ತಿದೆ. ಸದ್ಯ ಬೀಟಾ ವರ್ಷನ್‌ನಲ್ಲಿರುವ ಈ ಫೀಚರ್ ಶೀಘ್ರವೇ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.
ಸಂದೇಶ ಕಳುಹಿಸುವ ಅಪ್ಲಿಕೇಶನ್ ನವೀಕರಣಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ WABetaInfo ಪ್ರಕಾರ, ಬಳಕೆದಾರರು ತಾವು ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡಲು 15 ನಿಮಿಷಗಳನ್ನು ಹೊಂದಿರುತ್ತಾರೆ. ಹದಿನೈದು ನಿಮಿಷದ ಬಳಿಕ ನೀವು ಸಂದೇಶವನ್ನ್ ಎಡಿಟ್ ಮಾಡಲು ಈ ಹೊಸ ಫೀಚರ್ ಅನುಮತಿಸುವುದಿಲ್ಲ ಎಂಬುದು ಗಮನದಲ್ಲಿರಲಿ. ಒಂದೊಮ್ಮೆ ನೀವು ಕಳುಹಿಸಿದ ಸಂದೇಶವು ತಪ್ಪಾಗಿದ್ದರೆ ಹದಿನೈದು ನಿಮಿಷದಲ್ಲಿ ಎಡಿಟ್ ಮಾಡಿ ಮತ್ತೆ ಕಳುಹಿಸಲು ಅವಕಾಶವಿರುತ್ತದೆ. ಇದು ಈ ಹೊಸ ಫೀಚರ್‌ನ ಮಿತಿ. WhatsApp Android 2.22.22.14 ಬೀಟಾ ಬಳಕೆದಾರರು ಈಗಾಗಲೇ ಈ ಹೊಸ ಫೀಚರ್ ಬಳಸುತ್ತಿದ್ದಾರೆ. ಆದರೆ, ಇದು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಶೀಘ್ರವೇ ಎಲ್ಲ ಬಳಕೆದಾರರಿಗೂ ಲಭ್ಯವಾಗಬಹುದು.
ಸ್ಕ್ರೀನ್‌ಶಾಟ್ ಬೇಡ, ಟ್ವೀಟ್ ಅಥವಾ ಲಿಂಕ್ ಷೇರ್ ಮಾಡ್ಕೊಳ್ಳಿ ಅಂತಿದೆ ಟ್ವಿಟರ್!
ಒಂದೊಮ್ಮೆ ನೀವು ಕಳುಹಿಸಿದ ಸಂದೇಶವನ್ನು ಬಳಕೆದಾರರು ಓದಿದ ನಂತರ ಅದನ್ನು ಎಡಿಟ್ ಮಾಡಲು ಸಾಧ್ಯವೇ ಎಂಬುದನ್ನು ವಾಟ್ಸಾಪ್ ಇನ್ನೂ ಖಚಿತಪಡಿಸಿಲ್ಲ. ಇದಲ್ಲದೆ, ಸ್ವೀಕರಿಸುವವರ ಫೋನ್ ಆಫ್ ಆಗಿರುವಾಗ ಕಳುಹಿಸಿದ ಸಂದೇಶವನ್ನು ಸಂಪಾದಿಸಲು ಎಷ್ಟು ಸಮಯವನ್ನು ವ್ಯಯಿಸಲಾಗುತ್ತದೆ ಎಂಬುದು ತಿಳಿದಿಲ್ಲ. ಈ ವೈಶಿಷ್ಟ್ಯವು ಪ್ರಸ್ತುತ ಅಭಿವೃದ್ಧಿಯಲ್ಲಿದೆ. ಈ ಹೊಸ ಫೀಚರ್ ಯಾವಾಗ ಪರಿಪೂರ್ಣವಾಗಿ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ.
ವಾಟ್ಸಾಪ್‌ಗೆ ಸೇರಿಸಲು ನಿರೀಕ್ಷಿಸಲಾದ ಮತ್ತೊಂದು ಹೊಸ ವೈಶಿಷ್ಟ್ಯವೆಂದರೆ ವೀಕ್ಷಿಸಿ ಒಮ್ಮೆ ಸಕ್ರಿಯಗೊಳಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದನ್ನು ನಿರ್ಬಂಧಿಸುವುದು. ವರದಿಯ ಪ್ರಕಾರ ಈ ಸಂದೇಶಗಳ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಸಹ ನಿರ್ಬಂಧಿಸಲಾಗುತ್ತಿದೆ. ಕಂಪನಿಯು ಈಗಾಗಲೇ ಕೆಲವು ಬೀಟಾ ಪರೀಕ್ಷಕರಿಗೆ ಈ ವೈಶಿಷ್ಟ್ಯವನ್ನು ಲಭ್ಯವಾಗುವಂತೆ ಮಾಡಿದೆ.
ಶಿಯೋಮಿ 12ಟಿ, 12ಟಿ ಪ್ರೋ ಅನಾವರಣ, ವಿಶೇಷತೆಗಳೇನು?
ವಾಟ್ಸಾಪ್ ಬಳಕೆದಾರರಿಗೆ ಸಮೀಕ್ಷೆ (Survey) ಗಳನ್ನು ರಚಿಸಲು ಅವಕಾಶ ನೀಡುವ ವೈಶಿಷ್ಟ್ಯವು ಶೀಘ್ರದಲ್ಲೇ ಲಭ್ಯವಾಗಲಿದೆ. ಕೆಲವು WhatsApp ಬೀಟಾ ಬಳಕೆದಾರರು ಈಗಾಗಲೇ ಸಮೀಕ್ಷೆಗಳನ್ನು ರಚಿಸುವ ಹೊಸ ಫೀಚರ್ ಅನ್ನು ಬಳಸುತ್ತಿದ್ದಾರೆ. ಶೀಘ್ರವೇ ಎಲ್ಲ ಬಳಕೆದಾರರಿಗೂ ಸಿಗಬಹುದು. Android ಆವೃತ್ತಿ 2.22.1.16 ವಾಟ್ಸಾಪ್‌ನ ಈ ಹೊಸ ಫೀಚರ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ, ಈ ಕಾರ್ಯವು ಕೇವಲ ಗ್ರೂಪ್ ಅಡ್ಮಿನ್‌ಗಳಿಗೆ ಮಾತ್ರವೇ ಇರುವುದಿಲ್ಲ. ಬದಲಿಗೆ ಎಲ್ಲರೂ ಬಳಸಬಹುದು. ವಾಟ್ಸಾಪ್ ಮುಂದಿನ ದಿನಗಳಲ್ಲಿ ಎಲ್ಲರಿಗೂ ಸ್ಥಿರವಾದ ಆವೃತ್ತಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.