ಸ್ಕ್ರೀನ್‌ಶಾಟ್ ಬೇಡ, ಟ್ವೀಟ್ ಅಥವಾ ಲಿಂಕ್ ಷೇರ್ ಮಾಡ್ಕೊಳ್ಳಿ ಅಂತಿದೆ ಟ್ವಿಟರ್!

* ಸ್ಕ್ರೀನ್‌ಶಾಟ್ ಬಳಸದಂತೆ ಬಳಕೆದಾರರಿಗೆ ನೋಟಿಫಿಕೇಷನ್ ಕಳುಹಿಸುತ್ತಿರುವ ಟ್ವಿಟರ್
* ಪ್ಲಿಕೇಶನ್ ಸಂಶೋಧಕ ಜೇನ್ ಮಂಚುನ್ ವಾಂಗ್ ಈ ಬೆಳವಣಿಗೆಯನ್ನು ಗುರುತಿಸಿದ್ದಾರೆ
* ಎಡಿಟ್ ಬಟನ್ ಸಕ್ರಿಯಗೊಳಿಸಿದ ಟ್ವಿಟರ್, ಮೊದಲಿಗೆ ಬ್ಲೂ ಟಿಕ್ ಬಳಕೆದಾರರಿಗೆ ಮಾತ್ರ ಲಭ್ಯ

Twitter is asking to share tweet and link instead of screen shot

ಟ್ವಿಟರ್ (Twitter)ನಲ್ಲಿರುವ ಮಾಹಿತಿಯನ್ನು  ಬಳಕೆದಾರರು ಸ್ಕ್ರೀನ್ಶಾಟ್ ತೆಗೆದುಕೊಂಡು ಷೇರ್ ಮಾಡುತ್ತಿರುವುದನ್ನು ಗಮನಿಸಿರುವ ಟ್ವಿಟರ್, ಇದಕ್ಕೆ ವಿಭಿನ್ನವಾದ ಮನವಿಯನ್ನು ಮಾಡಿಕೊಂಡಿದೆ. ಈ ಸಂಬಂಧ ಮೈಕ್ರೋ ಬ್ಲಾಗಿಂಗ್ ಆಗಿರುವ ಟ್ವಿಟರ್ ಈ ಸಂಬಂಧ ಅನೇಕ ನೋಟಿಫಿಕೇಷನ್ಗಳನ್ನು ಕಳುಹಿಸಲು ಶುರುಮಾಡಿದೆ. ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಬದಲು ಟ್ವೀಟ್ಗಳನ್ನು ಹಂಚಿಕೊಳ್ಳುವಂತೆ ಇಲ್ಲವೇ ಲಿಂಕ್ ಷೇರ್ ಮಾಡಿಕೊಳ್ಳುವಂತೆ ವಿನಂತಿಸಿಕೊಂಡಿದೆ. ಅಪ್ಲಿಕೇಶನ್ ಸಂಶೋಧಕ ಜೇನ್ ಮಂಚುನ್ ವಾಂಗ್ (Jane Manchun Wong) ಅವರು ಮೊದಲು ಈ ಬೆಳವಣಿಗೆಯನ್ನು ಗುರುತಿಸಿದ್ದಾರೆ. ಟ್ವಿಟರ್ ಕೆಲವು ಬಳಕೆದಾರರು ಸ್ಕ್ರೀನ್ಶಾಟ್ ತೆಗೆದುಕೊಂಡಾಗ ಅವರಿಗೆ ಪಾಪ್-ಅಪ್ ಅಧಿಸೂಚನೆಗಳನ್ನು ಕಳುಹಿಸಲು ಟ್ವಿಟರ್ ಆರಂಭಿಸಿದೆ. "ಟ್ವೀಟ್‌ನ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಬದಲು ಟ್ವೀಟ್ ಅನ್ನು ಹಂಚಿಕೊಳ್ಳಲು ಅಥವಾ ಲಿಂಕ್ ಅನ್ನು ನಕಲಿಸಲು ಟ್ವಿಟರ್ ನನ್ನನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದೆ" ಎಂದು ಅವರು ಬರೆದಿದ್ದಾರೆ. ಸಾಮಾಜಿಕ ಮಾಧ್ಯಮ ತಂತ್ರಜ್ಞರಾದ ಮ್ಯಾಟ್ ನವರ್ರಾ (Matt Navarra) ಅವರು ಹೊಸ ಕಾರ್ಯವನ್ನು ಆಯ್ದ ಬಳಕೆದಾರರಿಗೆ ಹಸ್ತಾಂತರಿಸುವುದನ್ನು ಸಹ ನೋಡಿದ್ದಾರೆ.

"ಟ್ವಿಟರ್ ಇನ್ನು ಮುಂದೆ ಟ್ವೀಟ್ಗಳ ಸ್ಕ್ರೀನ್ಶಾಟ್ಗಳನ್ನು ಅನುಮತಿಸುವುದಿಲ್ಲ. ಇದು ಸ್ಪರ್ಧಾತ್ಮಕ ಸೇವೆಗಳ ಸ್ಕ್ರೀನ್ಶಾಟ್ಗಳಿಗಿಂತ ಹೆಚ್ಚಾಗಿ ಟ್ವೀಟ್ಗಳನ್ನು ವೀಕ್ಷಿಸುವ ವೇದಿಕೆಯಲ್ಲಿ ಸಕ್ರಿಯ ಬಳಕೆದಾರರಿಗೆ ಆದ್ಯತೆ ನೀಡುತ್ತದೆ, ”ಎಂದು ಅವರು ತಿಳಿಸಿದ್ದಾರೆ. ಹೊಸ ವೈಶಿಷ್ಟ್ಯವು ಕೇವಲ ಫಾರ್ವರ್ಡ್ ಮಾಡಿದ ಸ್ಕ್ರೀನ್ಶಾಟ್ಗಳನ್ನು ಓದುವುದಕ್ಕಿಂತ ಹೆಚ್ಚಿನ ಬಳಕೆದಾರರನ್ನು ತನ್ನ ಪ್ಲಾಟ್ಫಾರ್ಮ್ಗಳಿಗೆ ಕರೆತರಲು ಟ್ವಿಟರ್ನ ಪ್ರಯತ್ನವಾಗಿದೆ.

ಏತನ್ಮಧ್ಯೆ, ಟ್ವಿಟರ್ ಅಮೆರಿಕದಲ್ಲಿ ಬ್ಲೂ ಚಂದಾದಾರರಿಗೆ 'ಎಡಿಟ್ ಬಟನ್' ಸಕ್ರಿಯಗೊಳಿಸಲು ಆರಂಭಿಸಿದೆ. ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿರುವ ಬ್ಲೂ ಚಂದಾದಾರರಿಗೆ 'ಎಡಿಟ್ ಬಟನ್' ಅನ್ನು ಈಗಾಗಲೇ ಲಭ್ಯವಾಗುವಂತೆ ಮಾಡಲಾಗಿದೆ. ಆದಾಗ್ಯೂ, ಭಾರತೀಯ ಪ್ರೇಕ್ಷಕರಿಗೆ ವೈಶಿಷ್ಟ್ಯದ ಲಭ್ಯತೆಯನ್ನು ಈ ಬಗ್ಗೆ ಮಾಹಿತಿಯನ್ನು ನೀಡಿಲ್ಲ.

5G in India : ಹೇಗಿರಲಿದೆ 5ಜಿ ದುನಿಯಾ? ಕಾರ್ಯನಿರ್ವಹಣೆ ಹೇಗೆ?

ಇಷ್ಟಾಗಿಯೂ ಹೊಸ ಟ್ವೀಟ್ ಎಡಿಟಿಂಗ್ ಕಾರ್ಯವು ಹಲವಾರು ಮಿತಿಗಳನ್ನು ಹೊಂದಿದೆ. ಉದಾಹರಣೆಗೆ, ಬಳಕೆದಾರರು ಟ್ವೀಟ್‌ಗಳನ್ನು ಪ್ರಕಟಿಸಿದ 30 ನಿಮಿಷಗಳ ನಂತರ ಎಡಿಟ್ ಮಾಡಲು ಸಾಧ್ಯವಿಲ್ಲ. ಟ್ವಿಟರ್ ಕಂಪನಿ ತನ್ನ ಬ್ಲೂ ಚಂದಾದಾರಿಕೆಗಳಿಗೆ ಮಾಸಿಕ ಶುಲ್ಕ ವಿಧಿಸುತ್ತಿದೆ. ಪ್ರಸ್ತುತ 4.99 ಡಾಲರ್ ಶುಲ್ಕವಿದೆ. ಆದರೆ, ಇದು  ಭೌಗೋಳಿಕವಾಗಿ ಬೆಲೆಯನ್ನು ನಿಗದಿಪಡಿಸಲಾಗಿದೆ.

ಎಡಿಟ್ ಬಟನ್ ಒದಗಿಸುವ ಬಗ್ಗೆ ಮೊದಲಿನಿಂದಲೂ ಚರ್ಚೆಯಲ್ಲಿತ್ತು. ಮೈಕ್ರೋ ಬ್ಲಾಗಿಂಗ್ ‌ತಾಣಗಳ ಪೈಕಿ ಅತ್ಯಂತ ಪರಿಣಾಮಕಾರಿಯೂ ಹಾಗೂ ಜನಪ್ರಿಯಯೂ ಆಗಿರುವ ಟ್ವಿಟರ್‌ನಲ್ಲಿ ಎಡಿಟ್ ಬಟನ್ ಬೇಕು ಎಂದು ಬಳಕೆದಾರರು ಆಗ್ರಹಿಸುತ್ತಿದ್ದರು. ಆದರೆ ಮೊದಮೊದಲಿಗೆ ಈ ಬಗ್ಗೆ ಟ್ವಿಟರ್ ಅಂತ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಮನವಿ ಹೆಚ್ಚಾಗುತ್ತಿದ್ದಂತೆ ಎಡಿಟ್ ಬಟನ್ ಒದಗಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಟ್ವಿಟರ್ ಈ ಹಿಂದೆಯೇ ಘೋಷಿಸಿತ್ತು. ಇದೀಗ ಅದು ನಿಜವಾಗುತ್ತಿದೆ. ಸದ್ಯದ ಮಟ್ಟಿಗೆ ಈ ಎಡಿಟ್ ಎಲ್ಲ ಬಳಕೆದಾರರಿಗೆ ಲಭ್ಯವಿಲ್ಲ. ಚಂದಾದಾರ ಬಳಕೆದಾರರಿಗೆ ಮಾತ್ರವೇ ದೊರೆಯುತ್ತಿದೆ.

ಶಿಯೋಮಿ 12ಟಿ, 12ಟಿ ಪ್ರೋ ಅನಾವರಣ, ವಿಶೇಷತೆಗಳೇನು?

ಏತನ್ಮಧ್ಯೆ,  ಎಲಾನ್ ಮಸ್ಕ್ ಮಂಗಳವಾರ ಟ್ವಿಟರ್ ಅನ್ನು ತನ್ನ ಸ್ವಾಧೀನಪಡಿಸಿಕೊಳ್ಳಲು ಮೂಲ ಒಪ್ಪಿಗೆಯ ಬೆಲೆಗೆ ಪೂರ್ಣಗೊಳಿಸಲು ಪ್ರಸ್ತಾಪಿಸಿದ್ದಾರೆ. ಟ್ವಿಟರ್ ಖರೀದಿಸುವ ಒಪ್ಪಂದದಿಂದ ಹಿಂದೆ ಹರಿಯುವ ಸಂಬಂಧ ಕೇಸ್ ಈಗ ಇನ್ನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಸ್ಕ್ ಮಾಡಿರುವ ಪ್ರಸ್ತಾಪವು ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದಕ್ಕೂ ತಾನು ಕೇಳಿದ ಮಾಹಿತಿಯನ್ನು ಟ್ವಿಟರ್ ನೀಡುತ್ತಿಲ್ಲ ಎಂದು ಆರೋಪಿಸಿ ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಯ ಒಪ್ಪಂದಿಂದ ಹಿಂದೆ ಸರಿದಿತ್ತು. ಈ ಪ್ರಕರಣವು ಇದೀಗ ನ್ಯಾಯಾಲಯದಲ್ಲಿದೆ.

Latest Videos
Follow Us:
Download App:
  • android
  • ios