Whatsapp Voice Message: 6 ಹೊಸ ಫೀಚರ್ ಲಾಂಚ್ ಮಾಡಿದ ವಾಟ್ಸಾಪ್

*ಈ ಹೊಸ ವಾಟ್ಸಾಪ್‌ ಫೀಚರ್‌ಗಳಿಂದಾಗಿ ವಾಯ್ಸ್ ಮೆಸೆಜ್‌ ಇನ್ನಷ್ಟು ಸರಳ, ಅತ್ಯಾಧುನಿಕ
*ನೀವೀಗ ವಾಯ್ಸ್ ಮೆಸೆಜ್‌ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು
* ಮತ್ತೊಂದು ಫೀಚರ್ ಮೂಲಕ 2 GBಯಷ್ಟು ಮೀಡಿಯಾ ಫೈಲ್ ಕಳುಹಿಸಬಹುದು

Whatsapp launches six new features for its voice message and check details

ವಾಟ್ಸಾಪ್‌ ಈಗ ಹೆಚ್ಚು ಬಳಕೆಯಲ್ಲಿರುವ ಕಿರು ಸಂದೇಶ ವಾಹಕ ಆಪ್ ಆಗಿದೆ. ಪ್ರಪಂಚಾದ್ಯಂತ ಕೋಟ್ಯಂತರ ಜನರು ತಮ್ಮ ವೈಯಕ್ತಿಕ ಹಾಗೂ ಬಿಸಿನೆಸ್ ಉದ್ದೇಶಕ್ಕಾಗಿ ಈ ವಾಟ್ಸಾಪ್ ಬಳಸುತ್ತಿದ್ದಾರೆ. ಜತೆಗೆ, ವಾಟ್ಸಾಪ್ ಕೂಡ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ತನ್ನ ಫೀಚರ್‌ಗಳನ್ನು ರೂಪಿಸುತ್ತಿದೆ. ಆ ಮೂಲಕ ಬಳಕೆದಾರರಿಗೆ ಅತ್ಯಾಧುನಿಕ ಸೇವೆಯನ್ನು ಒದಗಿಸುತ್ತದೆ. ಮೆಟಾ ಒಡೆತನದ ವಾಟ್ಸಾಪ್ ಇದೀಗ ಮತ್ತೊಂದಿಷ್ಟು ಹೊಸ ಫೀಚರ್‌ಗಳನ್ನು ಸೇರಿಸಿದೆ. WhatsApp ಗುರುವಾರವಷ್ಟೇ ತನ್ನ ಬಳಕೆದಾರರಿಗೆ ಧ್ವನಿ ಸಂದೇಶ (Voice Message) ಫೀಚರ್‌ಗಳನ್ನು ಅಪ್‌ಡೇಟ್ ಮಾಡಿತ್ತು. ಹಾಗಾಗಿ, ಈಗ ಬಳಕೆದಾರರು ವಾಯ್ಸ್ ಮೆಸೆಜ್‌ಗಳನ್ನ್ ವಿಭಿನ್ನ ವೇಗದಲ್ಲಿ ಪ್ಲೇ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ, ಸಂದೇಶ ಕಳುಹಿಸುವ ವೇದಿಕೆಯು ಬಳಕೆದಾರರಿಗೆ ತಮ್ಮ ವಾಯ್ಸ್ ಮೆಸೆಜ್‌ಗಳನ್ನು ಕಳುಹಿಸುವ ಮೊದಲು ಪೂರ್ವವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ. ಧ್ವನಿ ಸಂದೇಶಗಳು ಜನರಿಗೆ ಹೆಚ್ಚು ಅಭಿವ್ಯಕ್ತಿಶೀಲ ಸಂಭಾಷಣೆಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿಸಿದೆ. ಧ್ವನಿಯ ಮೂಲಕ ಭಾವನೆ ಅಥವಾ ಉತ್ಸಾಹವನ್ನು ತೋರಿಸುವುದು ಪಠ್ಯಕ್ಕಿಂತ ಹೆಚ್ಚು ನೈಸರ್ಗಿಕವಾಗಿದೆ ಮತ್ತು ಅನೇಕ ಸಂದರ್ಭಗಳಲ್ಲಿ, ಧ್ವನಿ ಸಂದೇಶಗಳು ಸಂವಹನದ ಆದ್ಯತೆಯ ರೂಪವಾಗಿದೆ ಎಂದು ವಾಟ್ಸಾಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹೊಸ ಫೀಚರ್‌ಗಳು ಹೀಗಿವೆ ನೋಡಿ...

Out of Chat Playback: ಚಾಟ್ ಹೊರಗಡೆ ವಾಯ್ಸ್ ಮೆಸೆಜ್ ಹೊರಗೆ ಕೇಳಬಹುದು. ಇದರಿಂದಾಗಿ ನೀವು ಮಲ್ಟಿ ಟಾಸ್ಕ್ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ, ಇತರ ಮೆಸೆಜ್‌ಗಳಿಗೂ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತದೆ. 

Pause/Resume Recording: ವಾಟ್ಸಾಪ್‌ನಲ್ಲಿ ನೀವು ವಾಯ್ಸ್ ಮೆಸೆಜ್‌ ದಾಖಲಿಸುವಾಗ ನೀವೀಗ ಪಾಸ್ (Pause) ಮಾಡಬಹುದು. ಹಾಗೆಯೇ ನೀವು ಮತ್ತೆ ರೆಡಿಯಾದಾಗ ಮತ್ತೆ ವಾಯ್ಸ್ ಮೆಸೆಜ್ ರೆಕಾರ್ಡಿಂಗ್ ಶುರು (Resume) ಮಾಡಬಹುದು.  

ಏ.2ಕ್ಕೆ Samsung Galaxy M33 5G ಲಾಂಚ್, ಕ್ಯಾಮೆರಾ ಹೇಗಿದೆ? ಫೀಚರ್‌ಗಳೇನು?

Waveform Visualization: ರೆಕಾರ್ಡಿಂಗ್ ಅನ್ನು ಅನುಸರಿಸಲು ಸಹಾಯ ಮಾಡಲು ಧ್ವನಿ ಸಂದೇಶದಲ್ಲಿ ಧ್ವನಿಯ ದೃಶ್ಯ ಪ್ರಾತಿನಿಧ್ಯವನ್ನು ತೋರಿಸುತ್ತದೆ.

Draft Preview: ವಾಯ್ಸ್ ಮೆಸೆಜ್‌ಗಳನ್ನು ನೀವು ನಿಮ್ಮ ಸ್ನೇಹಿತರಿಗೆ ಕಳುಹಿಸುವ ಮುನ್ನವೇ ಅದು ಸರಿಯಾಗಿದೆಯೇ ಎಂಬುದನ್ನು ಕೇಳಿಸಿಕೊಂಡು ಕಳುಹಿಸಲು ಈ ಫೀಚರ್ ನೆರವು ನೀಡುತ್ತದೆ. 

Remember Playback: ನಿಮಗೆ ಬಂದಿರುವ ಯಾವುದೇ ವಾಯ್ಸ್ ಮೆಸೆಜ್‌ ಅನ್ನು ಕೇಳುವಾಗ ಪಾಸ್ ಮಾಡುತ್ತೀರಿ ಮತ್ತು ಇನ್ನಾವುದೇ ಕೆಲಸದಲ್ಲಿ ನಿರತರಾಗುತ್ತೀರಿ ಎಂದಿಟ್ಟುಕೊಳ್ಳಿ. ಆ ಕೆಲಸ ಮುಗಿದ ಬಳಿಕ ಮತ್ತೆ ನೀವು ವಾಪಸ್ ಬಂದು ಆ ಮೆಸೆಜ್ ಅನ್ನು ಎಲ್ಲಿಗೆ ನಿಲ್ಲಿಸಿದ್ದರಲ್ಲ ಅಲ್ಲಿಂದ ಪುನಃ ಕೇಳಿಸಿಕೊಳ್ಳಬಹುದು ಈ ಫೀಚರ್ ‌ ನೆರವಿನಿಂದ.

 

 

Fast Playback on Forwarded Messages: ಸಾಮಾನ್ಯ ಮತ್ತು ಫಾರ್ವರ್ಡ್ ಮಾಡಿದ ಸಂದೇಶಗಳಲ್ಲಿ ಸಂದೇಶಗಳನ್ನು ವೇಗವಾಗಿ ಕೇಳಲು 1.5x ಅಥವಾ 2x ವೇಗದಲ್ಲಿ ಧ್ವನಿ ಸಂದೇಶಗಳನ್ನು ಪ್ಲೇ ಮಾಡಲು ಈ ಫೀಚರ್ ನೆರವು ನೀಡುತ್ತದೆ.

2 GBಯಷ್ಟು ದೊಡ್ಡದಾದ ಮೀಡಿಯಾ ಫೈಲ್ ಕಳುಹಿಸಬಹುದು...
ಮೆಟಾ ಒಡೆತನದ ಮೇಸೆಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ (Whatsapp) ಕಳೆದ ಕೆಲವು ದಿನಗಳಿಂದ ತನ್ನ ಬಳಕೆದಾರರಿಗೆ ನಿರಂತರವಾಗಿ ಹೊಸ ಅಪ್ಡೇಟ್‌ಗಳನ್ನು ನೀಡುತ್ತಿದೆ. ಇತ್ತೀಚೆಗೆ ವಾಟ್ಸಾಪ್‌ ತನ್ನ ಮಲ್ಟಿ ಡಿವೈಸ್‌ ಸಪೋರ್ಟ್‌ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತ್ತು. ಈಗ ವಾಟ್ಸಾಪ್‌ ಮತ್ತೊಂದು ಹೊಸ ಅಪ್ಡೇಟ್‌ ಮೇಲೆ ಕೆಲಸ ಮಾಡುತ್ತಿದ್ದು, ಇದು ಜಾಗತಿಕವಾಗಿ ಬಿಡುಗಡೆಯಾದರೆ ವಾಟ್ಸಾಪ್‌ ಬಳಕೆದಾರರಿಗೆ ಬಂಪರ್‌ ಆಫರ್‌ ಸಿಕ್ಕಂತಾಗಲಿದೆ. ವಾಟ್ಸಾಪ್‌ ಹೊಸ ಅಪ್ಡೇಟ್‌ನಲ್ಲಿ 2GBಯಷ್ಟು ದೊಡ್ಡ ಮೀಡಿಯಾ ಫೈಲ್‌ಗಳನ್ನು ಕಳುಹಿಸಲು ಅನುಮತಿ ನೀಡಲಿದೆ ಎಂದು ವರದಿಗಳು ತಿಳಿಸಿವೆ. 

ಭಾರತದಲ್ಲಿ Nokia C01 Plus 32GB ಫೋನ್ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳೇನು?

ಪ್ರಸ್ತುತ ಟೆಲಿಗ್ರಾಮ್‌ನಲ್ಲಿ 1.5GB ಗಾತ್ರದ ದೊಡ್ಡ ಫೈಲ್‌ಗಳನ್ನು ಸುರಕ್ಷಿತ ಮತ್ತು ಉಚಿತವಾಗಿ ಹಂಚಿಕೊಳ್ಳಬಹುದು. ಆದರೆ ವಾಟ್ಸಾಪ್ ಬಳಕೆದಾರರು 100MB ಗಾತ್ರದವರೆಗಿನ ಫೈಲ್‌ಗಳನ್ನು ಮಾತ್ರ ಕಳುಹಿಸಬಹುದು. ‌ವಾಟ್ಸಾಪ್ ತನ್ನ ಎಲ್ಲಾ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಪ್ರಾರಂಭಿಸಲು ನಿರ್ಧರಿಸಿದರೆ, ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಲಿದೆ. ಈ ಮೂಲಕ ವಾಟ್ಸಾಪ್‌ ಟೆಲಿಗ್ರಾಂಗೆ ಸೆಡ್ಡು ಹೊಡೆಯಲಿದೆ. 

Latest Videos
Follow Us:
Download App:
  • android
  • ios