ಏ.2ಕ್ಕೆ Samsung Galaxy M33 5G ಲಾಂಚ್, ಕ್ಯಾಮೆರಾ ಹೇಗಿದೆ? ಫೀಚರ್‌ಗಳೇನು?

*ಸ್ಯಾಮ್ಸಂಗ್‌ನ ಈ ಹೊಸ ಫೋನು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ
*ಅಮೆಜಾನ್ ಮೈಕ್ರೋಸೈಟ್ ಮೂಲಕ ಬಿಡುಗಡೆ ದಿನಾಂಕ ಖಚಿತಪಡಿಸಿದ ಸ್ಯಾಮ್ಸಂಗ್
*ಈ ಗ್ಯಾಲಕ್ಸಿ ಎಂ335  ಸ್ಮಾರ್ಟ್‌ಫೋನಿನಲ್ಲಿ ನಾಲ್ಕುಕ್ಯಾಮೆರಾ ಸೆಟ್ ಅಪ್ ಇದೆ.

Samsung Galaxy M33 5G smartphone will launch on 2022 April 2nd smartphone specifications

ಭಾರತೀಯ ಮಾರುಕಟ್ಟೆಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ (Samsung Galaxy M333 5G) ಸ್ಮಾರ್ಟ್‌ ಫೋನ್ ಲಾಂಚ್ ಆಗುವ ಬಗ್ಗೆ ಕೆಲವಾರು ದಿನಗಳಿಂದ ಸುದ್ದಿ ಇತ್ತು. ಅದೀಗ ಖಚಿತವಾಗಿದೆ. ಏಪ್ರಿಲ್ 2ರಂದು ಈ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಸ್ಮಾರ್ಟ್‌ಫೋನ್ ತಯಾರಿಕೆಯ ಜಗತ್ತಿನ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾ (South Korea)ದ ಟೆಕ್ ದೈತ್ಯ ಸ್ಯಾಮ್ಸಂಗ್ ತನ್ನ ಪ್ರೀಮಿಯಂ ಮತ್ತು ಬಜೆಟ್ ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರ ಪಾಲನ್ನು ಹೊಂದಿದೆ. ವಿಶಾಲವಾದ  ಗ್ರಾಹಕ ವಲಯವನ್ನು ಒಳಗೊಂಡಿದೆ. ಈಗ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ (Samsung Galaxy M33 5G) ಸ್ಮಾರ್ಟ್‌ಫೋನ್ ಲಾಂಚ್ ಆಗುತ್ತಿರುವುದು ಸ್ಯಾಮ್ಸಂಗ್ ಪ್ರಿಯರಲ್ಲಿ ಖುಷಿಯಾಗಿರುತ್ತದೆ. ಅಂದ ಹಾಗೆ, ಆನ್ ಲೈನ್ ಕಾಮರ್ಸ್ ತಾಣವಾಗಿರುವ ಅಮೆಜಾನ್ ಮೈಕ್ರೋಸೈಟ್‌ನ ಡೆಡಿಕೆಟೆಡ್ ಪೇಜ್ ಮೂಲಕ ಕಂಪನಿಯು ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ಏಪ್ರಿಲ್ 2ರಂದು ಲಾಂಚ್ ಖಚಿತಪಡಿಸಿದೆ. 

OnePlus Tablet: OLED ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್ ಸೇರಿ ಸೂಪರ್ಬ್ ಫೀಚರ್ಸ್

ಹೇಗಿರಲಿದೆ ಈ ಗ್ಯಾಲಕ್ಸಿ ಎಂ33 5ಜಿ ಫೋನ್?
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ವಿಶೇಷತೆಗಳ ಬಗ್ಗೆ ಈಗಾಗಲೇ ಆನ್‌ಲೈನ್ ಒಂದಿಷ್ಟು ಮಾಹಿತಿ ಸೋರಿಕೆಯಾಗಿವೆ. ಹಲವು ಟಿಪ್ಸಟರ್‌ಗಳು ಈ ಬಗ್ಗೆ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಅಮೆಜಾನ್ ಮೈಕ್ರೊಸೈಟ್‌ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ, ಎಂ33 5ಜಿ ಸ್ಮಾರ್ಟ್‌ಫೋನ್ ಗ್ರಾಹಕರಿಗೆ 6 GB + 128 GB ಮತ್ತು 8 GB + 128 GB ಎರಡು ಮಾದರಿಯ RAM ಮತ್ತು ಸ್ಟೋರೇಜ್‌ಗಳಲ್ಲಿ ಸಿಗಲಿದೆ. ಈ ಫೋನ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000 mAh ಬ್ಯಾಟರಿಯನ್ನು ಹೊಂದಿದೆ. 

ಎಲ್‌ಸಿಡಿ ಡಿಸ್‌ಪ್ಲೇ?
ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ Samsung Galaxy M33 5G ಯ ಭಾರತೀಯ ಮಾದರಿಯು Android 12 ಆಧಾರಿತ One UI 4.1 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. 120Hz ರಿಫ್ರೆಶ್ ರೇಟ್‌ನೊಂದಿಗೆ 6.6-ಇಂಚಿನ ಪೂರ್ಣ-HD+ (1,080x2,408 ಪಿಕ್ಸೆಲ್‌ಗಳು) LCD ಡಿಸ್‌ಪ್ಲೇ ಹೊಂದಿರಲು ಎಂದು ಹೇಳಲಾಗುತ್ತಿದೆ.

ಕ್ವಾಡ್ ರಿಯರ್ ಕ್ಯಾಮೆರಾ
ಅಮೆಜಾನ್ ಮೈಕ್ರೋಸೈಟ್‌ನಲ್ಲಿ ತಿಳಿಸಿರುವಂತೆ, Galaxy M33 5G ಫೋನ್ ಹಿಂಬದಿಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಸೆಟ್‌ಅಪ್‌ನಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದ್ದರೆ, 5 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು ಎರಡು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಸ್ಮಾರ್ಟ್‌ಫೋನ್ 8-ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಸಹ ಹೊಂದಿರ ಬಹುದು ಎಂದು ಹ ಳಲಾಗುತ್ತಿದೆ. ಈ ಫೋನ್ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಒಳಗೊಂಡಿರುವ ನಿರೀಕ್ಷೆಯಿದೆ.

Realme GT 2 Pro ಏಪ್ರಿಲ್ 7ಕ್ಕೆ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ಬಗ್ಗೆ ಈವರೆಗೂ ಸಂಪೂರ್ಣವಾಗಿರುವ ಮಾಹಿತಿಗಳಿಲ್ಲ. ಅಮೆಜಾನ್ ಮೈಕ್ರೋಸೈಟ್ ಡೆಡಿಕೆಟೆಡ್ ಪುಟದಲ್ಲೂ ಸ್ವಲ್ಪ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ, ಎರಡು ವೆರಿಯೆಂಟ್‌ಗಳಲ್ಲಿ ದೊರೆಯಲಿರುವ ಈ ಫೋನ್ ಬೆಲೆ ಎಷ್ಟು ಎಂಬುದು ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಬ್ಯಾಟರಿ ಮತ್ತು ಕ್ಯಾಮೆರಾಗಳನ್ನು ಪರಿಗಣಿಸಿದರೆ ಇದು ಪ್ರೀಮಿಯಂ ಫೋನ್ ಆಗಿರಬಹದು ಎಂಬ ನಿರೀಕ್ಷೆ ಹಲವರದು. ಎಂ33 5ಜಿ ಸ್ಮಾರ್ಟ್‌ಫೋನ್ ಬಗೆಗಿನ ಎಲ್ಲ ಪ್ರಶ್ನೆಗಳಿಗೆ ಏಪ್ರಿಲ್ 2ರಂದು ಉತ್ತರ ಸಿಗಲಿದೆ.

Latest Videos
Follow Us:
Download App:
  • android
  • ios