ವ್ಯಾಟ್ಸ್ಆ್ಯಪ್‌ನಲ್ಲಿ ಮಹತ್ವದ ಬದಲಾವಣೆ, ಸುರಕ್ಷತೆಗಾಗಿ ಸ್ಕ್ರೀನ್‌ಶಾಟ್ ನಿರ್ಬಂಧ ಫೀಚರ್!

ವ್ಯಾಟ್ಸ್ಆ್ಯಪ್ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಹಲವು ಹೊಸ ಫೀಚರ್ಸ್ ಪರಿಚಯಿಸಿದೆ. ಸುರಕ್ಷತೆಗಾಗಿ ಹಲವು ಫೀಚರ್ಸ್‌ಗಳನ್ನು ತೆಗದುಹಾಕಿ, ಹೊಸತನ್ನು ಅಳವಡಿಸಿಕೊಂಡಿದೆ. ಇದೀಗ ವ್ಯಾಟ್ಸ್ಆ್ಯಪ್ ಸ್ಕ್ರೀನ್‌ಶಾಟ್ ನಿರ್ಬಂಧ ಫೀಚರ್ ಜಾರಿಗೊಳಿಸುತ್ತಿದೆ.

WhatsApp introduce 3 new features it prevent users to take screenshots of view once images and videos ckm

ನವದೆಹಲಿ(ಆ.19):  ಡಿಜಿಟಲ್ ಸುರಕ್ಷತೆ ಈಗಿನ ಕಾಲದಲ್ಲಿ ಅತ್ಯಂತ ಪ್ರಮುಖ ಹಾಗೂ ಅತೀ ಅಗತ್ಯದ ವಿಚಾರವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣ, ಆ್ಯಪ್‌ಗಳಲ್ಲಿ ಸುರಕ್ಷಾ ಫೀಚರ್ಸ್ ಸೇರಿಸಿಕೊಳ್ಳಲಾಗುತ್ತದೆ. ಇದೀಗ ಅತೀ ಜನಪ್ರಿಯ ಚಾಟಿಂಗ್ ಆ್ಯಪ್ ವ್ಯಾಟ್ಸ್ಆ್ಯಪ್ ಇದೀಗ ಸ್ಕ್ರೀನ್‌ಶಾಟ್ ನಿರ್ಬಂಧಿಸುವ ಫೀಚರ್ಸ್ ಜಾರಿಗೊಳಿಸುತ್ತಿದೆ. ನೂತನ ಫೀಚರ್ ವ್ಯಾಟ್ಸ್ಆ್ಯಪ್ ಬೆಟಾ ವರ್ಶನ್‌ನಲ್ಲಿ ಈಗಾಗಲೇ ಜಾರಿಗೊಳಿಸಲಾಗಿದೆ. ಆ್ಯಂಡ್ರಾಯ್ಡ್ ಬಳಕೆದಾರರು ಇನ್ಮುಂದೆ ವ್ಯಾಟ್ಸ್ಆ್ಯಪ್ ಚಾಟ್ ಸ್ಕ್ರೀನ್‌ಶಾಟ್ ತೆಗೆಯಲು ಸಾಧ್ಯವಿಲ್ಲ. ಇದನ್ನು ವ್ಯಾಟ್ಸ್ಆ್ಯಪ್ ನಿರ್ಬಂಧಿಸುತ್ತಿದೆ. ವೀವ್ ಔನ್ಸ್ ಫೀಚರ್ಸ್‌ನಲ್ಲಿ ವ್ಯಾಟ್ಸ್ಆ್ಯಪ್ ಈಗಾಗಲೆ ಕೆಲ ಫೀಚರ್ಸ್ ನೀಡಿದೆ. ಆದರೆ ಸ್ಕ್ರೀನ್‌ಶಾಟ್‌ಗೆ ಅವಕಾಶ ನೀಡಿತ್ತು. ಇದೀಗ ವ್ಯಾಟ್ಸ್ಆ್ಯಪ್ ಸ್ಕ್ರೀನ್‌ಶಾಟ್ ಅವಕಾಶವನ್ನು ತೆಗೆದಿದೆ. ಐಒಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್‌ನಲ್ಲಿರುವ ವೀವ್ ಔನ್ಸ್ ಫೀಚರ್ಸ್‌ ಆಕ್ಟೀವ್ ಮಾಡಿಕೊಂಡರೆ, ನೀವು ಕಳುಹಿಸುವ ಫೋಟೋ ಅಥವಾ ವಿಡಿಯೋ ವನ್ನು ಸ್ವೀಕೃತ ಬಳಕೆದಾರ ಕೇವಲ ನೋಡುಲು ಮಾತ್ರ ಸಾಧ್ಯವಿದೆ. ಈ ಸ್ವೀಕೃತ ಬಳಕೆದಾರ ನೋಡಿದ ಬಳಿಕ ಎಲ್ಲಿಯೂ ಸೇವ್ ಆಗುವುದಿಲ್ಲ. ಆದರೆ ಫೋಟೋ, ವಿಡಿಯೋ   ಸ್ಕ್ರೀನ್ ಶಾಟ್ ತೆಗೆಯುವ ಅವಕಾಶ ನೀಡಿತ್ತು. ಇದೀಗ ಈ ಫೀಚರ್‌ಗೆ ನಿರ್ಬಂಧ ವಿಧಿಸಿದೆ.

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಸ್ಕ್ರೀನ್‌ಶಾಟ್ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದು ವೈಯುಕ್ತಿಕವಾಗಿ ಕಳುಹಿಸಿದ, ಅಥವಾ ಗ್ರೂಪ್‌ಗೆ ಕಳುಹಿಸಿದ ಯಾವುದೇ ಅಂಶಗಳ ಸ್ಕ್ರೀನ್‌ಶಾಟ್‌ಗಳು ಹರಿದಾಡುವುದು ಸಾಮಾನ್ಯವಾಗಿತ್ತು. ವೀವ್ ಔನ್ಸ್ ಫೀಚರ್ಸ್ ಅಡಿಯಲ್ಲಿ ಫೋಟೋ ಅಥವಾ ವಿಡಿಯೋ ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಿಲ್ಲ. ಆದರೆ ಇನ್ನೊಂದು ಫೋನ್ ಕ್ಯಾಮಾರ ಮೂಲಕ ಫೋಟೋ ತೆಗೆಯಬಹುದು. 

WhatsApp ನಲ್ಲಿ ಜಾಬ್‌ ಆಫರ್‌ ಸಿಕ್ಕಿದೆಯೇ..? ನೀವು ರಿಪ್ಲೈ ಮಾಡುವ ಮೊದಲು ಚೆನ್ನಾಗಿ ಯೋಚಿಸಿ..!

ಇದರ ಜೊತೆಗೆ ವ್ಯಾಟ್ಯ್ಆ್ಯಪ್ ಮತ್ತೊಂದು ಫೀಚರ್ ಸುಧಾರಿಸಿದೆ. ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡುವ ಅವಕಾಶವನ್ನು ನೀಡಿದೆ. ಡಿಲೀಟ್ ಫಾರ್ ಎವರಿವನ್ ಆಯ್ಕೆಯಡಿಯಲ್ಲಿ ಕಳುಹಿಸದ ಸಂದೇಶವನ್ನು ಡಿಲೀಟ್ ಮಾಡಬುಹುದು. ಇದು ಹೊಸ ಫೀಚರ್ ಅಲ್ಲ. ಆದರೆ ಇದೀಗ ಡಿಲೀಟ್ ಫಾರ್ ಎವರಿವನ್ ಆಯ್ಕೆಯ ಸಮಯವನ್ನು ಹೆಚ್ಚಿಸಲಾಗಿದೆ. 1 ಗಂಟೆ 16 ಸೆಕೆಂಡ್ ಅವಧಿಯಿಂದ ಎರಡು ದಿನಕ್ಕೆ ವಿಸ್ತರಿಸಲಾಗುತ್ತಿದೆ. 

ಇದರ ಜೊತೆಗೆ ಆನ್ ಲೈನ್ ಹಾಗೂ ಆಫ್ ಲೈನ್ ಆಯ್ಕೆಯನ್ನು ಬಳಕೆದಾರರೇ ನಿರ್ಧರಿಸುವ ಆಯ್ಕೆಯನ್ನು ನೀಡಿದೆ. ಆನ್‌ಲೈನ್‌ನಲ್ಲಿರುವಾಗ ಆಫ್ ಲೈನ್‌ನ ಮೂಡ್‌ನಲ್ಲಿರುವಂತ ಆಯ್ಕೆಯನ್ನೂ ನೀಡಲಾಗುತ್ತಿದೆ. ಇತ್ತ ಗ್ರೂಪ್‌ನಿಂದ ಎಕ್ಸಿಟ್ ಆಗುವ ಫೀಚರ್‌ನಲ್ಲಿ ಕೆಲ ಬದಲಾವಣೆ ತರಲಾಗಿದೆ. ಯಾರಿಗೂ ತಿಳಿಯದಂತೆ ಎಕ್ಸಿಟ್ ಆಗುವ ಆಯ್ಕೆಯನ್ನು ನೀಡಿದೆ.

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್:‌ ಡಿಲೀಟ್‌ ಮಾಡಿದ ಮೇಸೆಜ್‌ ಮತ್ತೆ ಪಡೆಯುವ ಫೀಚರ್‌ ಶೀಘ್ರದಲ್ಲೇ ಬಿಡುಗಡೆ
 

Latest Videos
Follow Us:
Download App:
  • android
  • ios