ಆ್ಯಪ್ಸ್ ಸಹಾಯದಿಂದ ಹೋಮ್‌ವರ್ಕ್, ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಮಾಹಿತಿ!
ಕೋವಿಡ್ ಬಂದಾಗಿನಿಂದ ಶೈಕ್ಷಣಿಕ ಚಟುವಟಿಕೆಗಳು ಉಲ್ಪಾ ಪಲ್ಟಾ ಆಗಿವೆ. ಕೊರೋನಾ ಬರೋದಕ್ಕೂ ಮುಂಚೆ ಶಾಲಾ ವಿದ್ಯಾರ್ಥಿಗಳ ಕೈಗೆ ಮೊಬೈಲ್ ಕೊಡಬೇಡಿ, ಇಂಟರ್‌ನೆಟ್ ಬಳಸದಂತೆ ನೋಡಿಕೊಳ್ಳಿ, ಮಕ್ಕಳ ಕಣ್ಣು ಹಾಳಾಗುತ್ತೆ.. ಮೊಬೈಲ್‌ಗೆ ಅಡಿಕ್ಟ್ ಆಗ್ತಾರೆ, ಓದಿನ ಕಡೆ ಗಮನ ಇರಲ್ಲ ಎನ್ನುತ್ತಿದ್ದರು. ಆದರೆ, ಕೊರೋನಾ ಬಳಿಕ ಇದೇ ಮೊಬೈಲ್‌ಗಳು, ಆಪ್‌ಗಳೇ ಮಕ್ಕಳ ಕಲಿಕೆ ಆಸರೆಯಾಗಿವೆ.
ಕೊರೋನಾ ಸಾಂಕ್ರಾಮಿಕ ಮುಂಚೆ ಸ್ಮಾರ್ಟ್ ಫೋನ್, ಇಂಟರ್‌ನೆಟ್ ಅನ್ನು ದೂರುತ್ತಾ ಮಕ್ಕಳ ಕೈಗೆ ಸಿಗದಂತೆ ನಿರ್ಬಂಧ ಹೇರಿದ್ದೇವು. ಆದ್ರೀಗ ಕಳೆದೊಂದು ವರ್ಷದಿಂದ ಎಲ್ಲಾ ಅದಲು ಬದಲಾಗಿದೆ. ಕಲಿಯುತ್ತಿರೋ ವಿದ್ಯಾರ್ಥಿಗಳಿಗೆ ಮೊಬೈಲೇ ಟೀಚರ್ ಆಗ್ಬಿಟ್ಟಿದೆ. ಮೊಬೈಲ್‌ನಲ್ಲೇ ಮಕ್ಕಳ ಆಟ-ಪಾಠ ಎಂಬಂತಾಗಿದೆ.
ಸಣ್ಣ ಮಕ್ಕಳಿಗೆ ಮೊಬೈಲ್ ಹೊಸದಾಗಿ ಕಂಡು, ಕಲಿಕೆಯ ವಿಧಾನವೂ ಹೊಸತಾಗಿದೆ. ಆದ್ರೆ ದೊಡ್ಡ ಮಕ್ಕಳಿಗೆ ಅರ್ಥಾತ್ ಹೈಸ್ಕೂಲ್, ಕಾಲೇಜಿನ ವಿದ್ಯಾರ್ಥಿಗಳಿಗೆ ಮೊಬೈಲ್ ಜಾನ ಭಂಡಾರವಾಗಿ ಹೋಗಿದೆ. ಅಷ್ಟರ ಮಟ್ಟಿದೆ ಕೋವಿಡ್೧೯ ಮಕ್ಕಳ ಅಧ್ಯಯನ ಶೈಲಿಯನ್ನೇ ಬದಲಿಸಿಬಿಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಅಪ್ಲಿಕೇಶನ್‌ಗಳ ಬಳಕೆ ತೀವ್ರವಾಗಿ ಹೆಚ್ಚಾಗಿದೆ. ಶೇ.77 ರಷ್ಟು ಭಾರತೀಯ ವಿದ್ಯಾರ್ಥಿಗಳಿಗೆ ರಜಾ ದಿನಗಳಲ್ಲಿ ಹೋಮ್ ವರ್ಕ್ ಮಾಡಲು ಶೈಕ್ಷಣಿಕ ಅಪ್ಲಿಕೇಶನ್‌ಗಳು ಸಹಾಯ ಮಾಡುತ್ತವೆ ಎಂದು ಸಮೀಕ್ಷೆಯೊಂದು ಹೇಳಿದೆ. ಅಸ್ತಿತ್ವದಲ್ಲಿರುವ ಮತ್ತು ಉದಯೋನ್ಮುಖ ಶಿಕ್ಷಣ ಪ್ರವೃತ್ತಿಗಳನ್ನು ಮ್ಯಾಪ್ ಮಾಡುವ ಮೂಲಕ ದೇಶಾದ್ಯಂತ ಯುವ ವಿದ್ಯಾರ್ಥಿಗಳಲ್ಲಿ ಆನ್‌ಲೈನ್ ಕಲಿಕಾ ವೇದಿಕೆಗಳ ಜನಪ್ರಿಯತೆ ಬಗ್ಗೆ ಬ್ರೈನ್ಲಿ ಎಂಬ ಶೈಕ್ಷಣಿಕ ಕಂಪನಿಯ ಸಮೀಕ್ಷೆಯಲ್ಲಿ ಈ ವಿಷಯ ತಿಳಿಸಲಾಗಿದೆ.
ಕೇರಳದ 5ನೇ ತರಗತಿ ಬಾಲಕಿಯ ಪತ್ರಕ್ಕೆ ಮಾರು ಹೋದ ಸಿಜೆಐ!
ಈ ಆನ್‌ಲೈನ್ ಸಮೀಕ್ಷೆಯಲ್ಲಿ ಒಟ್ಟು 1,758 ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ್ದು, ಮನೆಗಳಲ್ಲಿರುವ ಹಲವಾರು ವಿದ್ಯಾರ್ಥಿಗಳ ಆಸಕ್ತಿದಾಯಕ ಪ್ರವೃತ್ತಿಗಳನ್ನು ಗುರುತಿಸಲಾಗಿದೆ.
ಆನ್‌ಲೈನ್ ಸಂಪನ್ಮೂಲಗಳ ಮೇಲೆ ವಿದ್ಯಾರ್ಥಿಗಳ ಹೆಚ್ಚು ಅವಲಂಬನೆಯಾಗುತ್ತಿದೆ. ಯಾವ ವಿಷಯಗಳಿಗೆ ಹೆಚ್ಚು ಸಹಾಯ ಬೇಕು ಎಂದು ಕೇಳಿದಾಗ ಮೂರನೇ ಒಂದು ಭಾಗದಷ್ಟು (33%) ವಿದ್ಯಾರ್ಥಿಗಳು ಗಣಿತವನ್ನು ಆರಿಸಿಕೊಂಡರು. ನಂತರ ಶೇ.೧೭ರಂದು ಇಂಗ್ಲಿಷ್ ಮತ್ತು ಶೇ.15ರಷ್ಟು ವಿಜ್ಞಾನ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಶೇ.77 ರಷ್ಟು ವಿದ್ಯಾರ್ಥಿಗಳು ತಮ್ಮ ರಜಾದಿನದ ಹೋಮ್ ವರ್ಕ್‌ಗೆ ಸಂಬಂಧಿಸಿದ ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನು ಪರಿಹರಿಸಿಕೊಳ್ಳಲು ಶಿಕ್ಷಣದ ಅಪ್ಲಿಕೇಶನ್‌ಗಳು ಸಹಾಯಕವಾಗಿವೆ ಎಂದು ಹೇಳಿದ್ದಾರೆ.
ಪೋಷಕರ ಸಹಾಯಕ್ಕಿಂತ ಗೆಳೆಯರೊಂದಿಗೆ ಬುದ್ದಿಮತ್ತೆ ಪರೀಕ್ಷೆಯೇ ಹೆಚ್ಚು. ಶೇ.67 ರಷ್ಟು ವಿದ್ಯಾರ್ಥಿಗಳು ತಮ್ಮ ರಜಾದಿನದ ಹೋಮ್ ವರ್ಕ್ ಮಾಡಲು ಗೆಳೆಯರ ಸಹಾಯ ತೆಗೆದುಕೊಳ್ಳಲು ಒಪ್ಪಿಕೊಂಡರೆ, ಅವರಲ್ಲಿ ಶೇ.58 ರಷ್ಟು ಜನರು ತಮ್ಮ ಪೋಷಕರ ನೆರವು ಪಡೆದುಕೊಂಡಿದ್ದಾರೆ. ತಮ್ಮ ಸಹಪಾಠಿಗಳೊಂದಿಗೆ ಚರ್ಚಿಸಲು ಆನ್‌ಲೈನ್ ಬಳಕೆಗೆ ಆದ್ಯತೆ ನೀಡುತ್ತಿರುವುದು, ಕಲಿಕೆಯ ವಿಷಯದಲ್ಲಿ ಯುವ ಮನಸ್ಸುಗಳಲ್ಲಿ ಹೆಚ್ಚುತ್ತಿರುವ ಸ್ವಾವಲಂಬನೆ ಮತ್ತು ವಿಶ್ವಾಸವನ್ನು ಸೂಚಿಸುತ್ತದೆ.
ನೀಟ್ ಪರೀಕ್ಷೆಯನ್ನೂ ರದ್ದು ಮಾಡಲು ತಮಿಳುನಾಡು ಒತ್ತಾಯ
ಲಾಕ್‌ಡೌನ್ ವೇಳೆ ಗೆಳೆಯರೊಂದಿಗೆ ಡಿಜಿಟಲ್ ಸಂಪರ್ಕ. ಲಾಕ್‌ಡೌನ್ ವೇಳೆ ಒಂಟಿತನವನ್ನ ಹೋಗಲಾಡಿಸಲು ಭಾರತೀಯ ವಿದ್ಯಾರ್ಥಿಗಳು ತಮ್ಮ ಗೆಳೆಯರೊಂದಿಗೆ ಡಿಜಿಟಲ್ ಸಂಪರ್ಕ ಹೊಂದಲು ಬಯಸುತ್ತಾರೆ.
ಲಾಕ್‌ಡೌನ್ ಸಮಯದಲ್ಲಿ ಶೇ.70ರಷ್ಟು ಯುವ ವಿದ್ಯಾರ್ಥಿಗಳು ತಮ್ಮ ರಜಾದಿನಗಳಲ್ಲಿ ಹೋಮ್ ವರ್ಕ್ ಒತ್ತಡವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದ್ದರಲ್ಲಿ ಆಶ್ಚರ್ಯವಿಲ್ಲ. ಸಾಂಕ್ರಾಮಿಕ-ಪ್ರೇರಿತ ಪ್ರತ್ಯೇಕತೆ ಮತ್ತು ಯಾತನೆಯ ಜೊತೆಗೆ ದೈಹಿಕ ನೆಲೆಯಲ್ಲಿ ತಮ್ಮ ಗೆಳೆಯರು ಮತ್ತು ಸಹಪಾಠಿಗಳೊಂದಿಗೆ ಬೆರೆಯಲು ಅವಕಾಶಗಳ ಕೊರತೆಯೇ ಒಂದು ಕಾರಣ ಎಂದು ಹೇಳಬಹುದು.
ಈ ಅಂಶವು ಸಹವರ್ತಿ ವಿದ್ಯಾರ್ಥಿಗಳ ಸಮಾನ ಮನಸ್ಕ ಸಮುದಾಯದೊಂದಿಗೆ ತಮ್ಮ ಸಮಸ್ಯೆಗಳನ್ನ ನಿವಾರಿಸಿಕೊಳ್ಳಲು ಡಿಜಿಟಲ್ ಸಂಪರ್ಕ ಸಾಧಿಸುವ ಆದ್ಯತೆಗೆ ಕಾರಣವಾಗಬಹುದು.
ಮನುಷ್ಯ ಮುಖದ ಭಾವನೆ ಅಭಿವ್ಯಕ್ತಿಸುವ ಎಐ ಆಧರಿತ ರೊಬೋಟ್ ಅಭಿವೃದ್ಧಿ
ಈ ಪ್ರವೃತ್ತಿಗಳು ವಿದ್ಯಾರ್ಥಿಗಳು, ಪೋಷಕರು ಮತ್ತು ತಜ್ಞರ ನಡುವೆ ಜ್ಞಾನ ಹಂಚಿಕೆಯ ಆಧಾರದ ಮೇಲೆ ತರಗತಿಯ ಹೊರಗೆ ಸಾಂಪ್ರದಾಯಿಕ ಶಿಕ್ಷಣವನ್ನು ಪೂರೈಸುವ ವಿಧಾನದತ್ತ ಹೆಚ್ಚು ಹೊಂದಿಕೊಳ್ಳುವ ಸಾಧ್ಯತೆಯನ್ನು ಸೂಚಿಸುತ್ತದೆ ಅಂತಾರೆ ಬ್ರೈನ್ಲಿಯ ಚೀಫ್ ಪ್ರಾಡಕ್ಟ್ ಆಫೀಸರ್ ರಾಜೇಶ್ ಬಿಸಾನಿ,