ನಾವು ನಮ್ಮ ನೀತಿ ಅನುಸರಿಸುತ್ತೇವೆ; ಸಂಸದೀಯ ಸಮಿತಿ ಮುಂದೆ ಟ್ವಿಟರ್ ವಾದ!
- ಮೊಂಡುವಾದ ಮುಂದುವರಿಸಿದ ಟ್ವಿಟರ್ ಇಂಡಿಯಾ
- ಭಾರತದ ಕಾನೂನು ಪಾಲಿಸುತ್ತೀರಾ ಪ್ರಶ್ನೆಗೆ ವ್ಯತಿರಿಕ್ತ ಉತ್ತರ ನೀಡಿದ ಟ್ವಿಟರ್
- ನಮ್ಮ ನೀತಿ ಅನುಸರಿಸುತ್ತೇವೆ ಎಂದ ಟ್ವಿಟರ್
ನವದೆಹಲಿ(ಜೂ.18): ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ಇಂಡಿಯಾ ನಡುವಿನ ಜಟಾಪಟಿ ಮುಂದುವರಿದಿದೆ. ಟ್ವಿಟರ್ ಮತ್ತೆ ತನ್ನ ಮೊಂಡು ವಾದ ಮುಂದುವರಿಸಿದ್ದು, ಸಮರ್ಪಕ ಉತ್ತರ ನೀಡಲು ಹಿಂದೇಟು ಹಾಕಿದೆ. ಸಾಮಾಜಿಕ ಮಾಧ್ಯಮ ವೇದಿಕೆ ದುರುಪಯೋಗ ಹಾಗೂ ನಾಗರೀಕ ಹಕ್ಕುಗಳ ಸಂರಕ್ಷಣೆ ಕುರಿತು ನೀಡಲಾಗಿದ್ದ ನೋಟಿಸ್‌ಗೆ ಉತ್ತರ ನೀಡಲು ಟ್ವಿಟರ್ ಇಂಡಿಯಾದ ಇಬ್ಬರು ಪ್ರತಿನಿಧಿಗಳು ಇಂದು ಸಂಸದೀಯ ಸಮಿತಿ ಮುಂದೆ ಹಾಜರಾಗಿ, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!
ಕಾಂಗ್ರೆಸ್ ನಾಯಕ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿ ಮುಂದೆ ಹಾಜರಾದ ಟ್ವಿಟರ್ ಮುಂದೆ ಖಡಕ್ ಪ್ರಶ್ನೆ ಕೇಳಲಾಗಿದೆ. ಟ್ವಿಟರ್ ಇಂಡಿಯಾ ಈ ನೆಲ ಹಾಗೂ ಭಾರತೀಯ ಕಾನೂನು ಅನುಸರಿಸುತ್ತೀರಾ ಎಂದು ಪ್ರಶ್ನಿಸಿದೆ. ಇದಕ್ಕೆ ಸ್ಪಷ್ಟ ಉತ್ತರ ನೀಡಿದ ಟ್ವಿಟರ್ ಅಧಿಕಾರಿಗಳು ನಾವು ನಮ್ಮ ನೀತಿ ಪಾಲಿಸುವುದಾಗಿ ಹೇಳಿದ್ದಾರೆ.
ಭಾರತದ ಕಾನೂನು ಗೌರವಿಸುವ ಹಾಗೂ ಪಾಲಿಸುವ ಕುರಿತು ನಿಖರ ಉತ್ತರ ನೀಡಿದ ಟ್ವಿಟರ್, ತಮ್ಮ ನೀತಿ ನಿಯಮಗಳ ಕುರಿತು ವಿವರಣೆ ನೀಡಲು ಪ್ರಯತ್ನಿಸಿದೆ. ಆದರೆ ಸಂಸದೀಯ ಸಮತಿ ಟ್ವಿಟರ್ ಉತ್ತರಕ್ಕೆ ತೃಪ್ತಿ ಪಟ್ಟಿಲ್ಲ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ.
ಐಟಿ ನಿಯಮ ಪಾಲಿಸದೆ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್!...
ನೂತನ ಐಟಿ ನಿಯಮ ಪಾಲಿಸಲು ಹಿಂದೇಟು ಹಾಕಿರುವ ಟ್ವಿಟರ್ ಭಾರತ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ. ಇತ್ತ ಗಾಝಿಯಾಬಾದ್ ಮುಸ್ಲಿಂ ವ್ಯಕ್ತಿ ಮೇಲಿನ ಹಲ್ಲೆ ಕುರಿತು ವಿಡಿಯೋ ಕುರಿತು ಸಂಸದೀಯ ಸಮತಿ ಪ್ರಶ್ನಿಸಿದೆ ಎಂದು ಮೂಲಗಳು ಹೇಳಿವೆ.