ರಿಲಯನ್ಸ್ ಜಿಯೋ ಮತ್ತು ಏರ್ಟೆಲ್‌ಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ವೋಡಾಫೋನ್-ಐಡಿಯಾ ಕಂಪನಿ ಇದೀಗ ‘ವಿಐ’ (Vi) ಆಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆದುಕೊಳ್ಳಲು ಕಂಪನಿ ಹಲವು ಆಫರ್‌ಗಳನ್ನು ಆಗಾಗ ಘೋಷಣೆ ಮಾಡುತ್ತದೆ.

ರಿಯಲ್‌ಮಿ 8 ಪ್ರೋ ಸ್ಮಾರ್ಟ್‌ಫೋನ್‌ ಮಾ.25ಕ್ಕೆ ಬಿಡುಗಡೆ?

ಈಗ ವಿಐ ಹೊಸ ನಾಲ್ಕು ಪ್ರಿಪೇಡ್ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿದೆ. ಈ ಪ್ಲ್ಯಾನ್‌ಗಳು 401 ರೂ. ಮತ್ತು 801 ರೂ. ನಡುವೆ ಇರಲಿವೆ. ಈ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ಡಿಸ್ನಿ-ಹಾಟ್‌ಸ್ಟಾರ್ ಉಚಿತವಾಗಿ ಸಿಗಲಿದೆ.  ಇತ್ತೀಚಿನ ಕೆಲವು ದಿನಗಳಲ್ಲಿ ಕಂಪನಿ ಪ್ರೀಪೇಡ್ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡುತ್ತಾ ಬಂದಿದೆ. ರಾತ್ರಿ ವೇಳೆ ಹೈಸ್ಪೀಡ್ ಇಂಟರ್ನೆಟ್, ವಿಕೇಂಡ್ ರೋಲ್ಓವರ್ ಡೇಟಾ ಬೆನಿಫಿಟ್ಸ್, ಡಬಲ್ ಡೇಟಾ ಆಫರ್‌ ಇತ್ಯಾದಿ ಪ್ಲ್ಯಾನ್‌ಗಳನ್ನು ಪ್ರಿಪೇಡ್ ಗ್ರಾಹಕರಿಗೆ ಪರಿಚಯಿಸಿದೆ.

ಇದೀಗ ಕಂಪನಿ 401 ರೂ. 501 ರೂ. 601 ಮತ್ತು 801 ರೂ. ಮೌಲ್ಯದ ನಾಲ್ಕು ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಈ ಪ್ಲ್ಯಾನ್‌ಗಳನ್ನು ಆಯ್ದುಕೊಳ್ಳುವ ಪ್ರಿಪೇಡ್ ಗ್ರಾಹಕರಿಗೆ ಡಿಸ್ನಿ ಹಾಟ್‌ಸ್ಟಾರ್‌ಗೆ ಉಚಿತ ಪ್ರವೇಶ ಸಿಗಲಿದೆ.

ಈ ಹೊಸ ಪ್ಲ್ಯಾನ್‌ಗಳ ಜೊತೆಗೆ ವಿಐ ಪೋಸ್ಟ್‌ಪೇಡ್ ಪ್ಲ್ಯಾನ್‌ಗಳನ್ನು ಕಂಪನಿ ಪರಿಷ್ಕರಿಸಿದೆ. 499 ರೂ. ಮೇಲಿನ ಪ್ಲ್ಯಾನ್‌ ಆಯ್ದುಕೊಳ್ಳುವ ಗ್ರಾಹಕರಿಗೆ ಸ್ಟ್ರೀಮಿಂಗ್ ಲಾಭಗಳು ಸಿಗಲಿವೆ.

ಈಗಾಗಲೇ ಅಸ್ತಿತ್ವದಲ್ಲಿರುವ 499 ರೂ. ಮೇಲ್ಪಟ್ಟ ಪ್ಲ್ಯಾನ್‌ನಲ್ಲಿ ಪೋಸ್ಟ್‌ಪೇಡ್ ಗ್ರಾಹಕರಿಗೆ ಕಂಪನಿ ಡಿಸ್ನಿ-ಹಾಟ್‌ಸ್ಟಾರ್ ಪ್ರಯೋಜನಗಳನ್ನು ನಿಡುತ್ತಿದೆ. ವಿಐ ಆಪ್, ವಿಐ ವೆಬ್‌ಸೈಟ್ ಅಥವಾ ವಿಐ ಮೂವೀಸ್ ಮತ್ತು ಟಿವಿ ಆಪ್ ಮೂಲಕ ಪೋಸ್ಟ್‌ಪೇಡ್ ಗ್ರಾಹಕರು ಡಿಸ್ನಿ ಪ್ಲಸ್  ಹಾಟ್‌ಸ್ಟಾರ್ ವಿಐಪಿ ಸಬ್ಸ್‌ಕ್ರಿಪ್ಷನ್ ಪಡೆದುಕೊಳ್ಳಬಹುದು. ಇಷ್ಟು ಮಾತ್ರವಲ್ಲದೇ ಇನ್ನೂ ಹಲವು ಆಫರ್‌ಗಳನ್ನು ಕಂಪನಿ ಪೋಸ್ಟ್‌ಪೇಡ್ ಗ್ರಾಹಕರಿಗೆ ನೀಡುತ್ತಿದೆ.

BoAt Flash Watch ಬಿಡುಗಡೆ: 6,990 ರೂ. ಬೆಲೆ ವಾಚ್ 2,499 ರೂ.ಗೆ ಮಾರಾಟ!

ನೀವು 401 ರೂ. ಮೌಲ್ಯದ ಪ್ರೀಪೇಡ್ ಪ್ಲ್ಯಾನ್ ಆಯ್ದುಕೊಂಡರೆ ನಿಮಗೆ ನಿತ್ಯ 3 ಜಿಬಿ ಡೇಟಾ 28 ದಿನಗಳವರೆಗೆ ಸಿಗಲಿದೆ. ನಿತ್ಯ 100 ಎಸ್ಸೆಮ್ಮೆಸ್ ಕೂಡ ಸಿಗಲಿವೆ. ಹೆಚ್ಚುವರಿಯಾಗಿ 16 ಜಿಬಿ ಡೇಟಾ ಸಿಗುವುದು ಮಾತ್ರವಲ್ಲದೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಒಂದು ವರ್ಷದ ವಿಐಪಿ ಸಬ್ಸ್‌ಕ್ರಿಪ್ಷನ್ ಕೂಡ ದೊರೆಯಲಿದೆ. ರಾತ್ರಿ ವೇಳೆ ಹೈಸ್ಪೀಡ್ ಇಂಟರ್ನೆಟ್, ವಿಕೇಂಡ್ ರೋಲ್ ಓವರ್ ಡೇಟಾ ಬಳಕೆ ಮತ್ತು ವಿಐ ಮೋವಿಸ್ ಮತ್ತು ಟಿವಿ ಪ್ರವೇಶ ದೊರೆಯಲಿದೆ. ಇನ್ನು 501 ರೂ. ಮೌಲ್ಯದ ಪ್ರಿಪೇಡ್ ಪ್ಲ್ಯಾನ್ ಆಯ್ಕೆ ಮಾಡಿಕೊಂಡರೆ,  56 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ 75 ಜಿಬಿ ಡೇಟಾ ಸಿಗಲಿದೆ ಮತ್ತು ಜೊತೆಗೆ ಒಂದು ವರ್ಷದವರೆಗೆ ಡಿಸ್ನಿ-ಹಾಟ್‌ಸ್ಟಾರ್ ಸಬ್ಸ್‌ಕ್ರಿಪ್ಷನ್ ಕೂಡ ಇರಲಿದೆ. ವಿಐ ಮೂವೀಸ್ ಮತ್ತು ಟಿವಿ ಆಪ್‌ಗೆ ಅಕ್ಸೆಸ್ ಕೂಡ ದೊರೆಯಲಿದೆ.
 
601 ರೂ. ಮೌಲ್ಯ  ಪ್ಲ್ಯಾನ್‌ ಕೂಡ ಹಲವು ಬೆನೆಫಿಟ್ಸ್‌ಗಳನ್ನು ಪ್ರಿಪೇಡ್ ಬಳಕೆದಾರರಿಗೆ ಒದಗಿಸುತ್ತದೆ. ನಿತ್ಯ 56 ದಿನಗಳವರೆಗೆ ಬಳಕೆದಾರರಿಗೆ ಈ ಪ್ಲಾನ್‌ನಡಿ 3 ಜಿಬಿ ಡೇಟಾ ಸಿಗಲಿದೆ. ನಿತ್ಯ 100 ಎಸ್ಸೆಮ್ಮೆಸ್ ಹಾಗೂ 16 ಜಿಬಿ ಹೆಚ್ಚುವರಿ ಡೇಟಾ ದೊರೆಯಲಿದೆ. ಡಿಸ್ನಿ-ಹಾಟ್‌ಸ್ಟಾರ್‌ಗೆ ಒಂದು ವರ್ಷದ ವಿಐಪಿ ಚಂದಾದಾರಿಕೆ ಆಫರ್ ಕೂಡ ಇದೆ. ಇನ್ನು ರಾತ್ರಿ ವೇಳೆ ಹೈಸ್ಪೀಡ್ ಇಂಟರ್ನೆಟ್, ವೀಕೇಂಡ್ ರೋಲ್ ಓವರ್ ಡೇಟಾ ಬಳಕೆ ಹಾಗೂ ವಿಐ ಮತ್ತು ಟಿವಿಗೂ ಅಕ್ಸೆಸ್ ದೊರೆಯಲಿದೆ.

ಪ್ರಿಪೇಡ್ ಗ್ರಾಹಕರೇನಾದರೂ 801 ರೂ. ಮೌಲ್ಯದ ಪ್ಲ್ಯಾನ್‌ ಅನ್ನು ಆಯ್ಕೆ ಮಾಡಿಕೊಂಡರೆ, 84 ದಿನಗಳವರೆಗೆ  ನಿತ್ಯ 3 ಜಿಬಿ ಡೇಟಾ ಹಾಗೂ ನಿತ್ಯ 100 ಎಸ್ಸೆಮ್ಮೆಸ್‌ ಸೇವೆ ದೊರೆಯಲಿದೆ. ಇಷ್ಟು ಮಾತ್ರವಲ್ಲದೇ, ಡಿಸ್ನಿ ಹಾಟ್‌ಸ್ಟಾರ್‌ಗೆ ಒಂದು ವರ್ಷದ ವಿಐಪಿ ಉಚಿತ ಚಂದಾದಾರಿಕೆ ಮತ್ತು ಹೆಚ್ಚುವರಿಯಾಗಿ 16 ಜಿಬಿ ಇಂಟರ್ನೆಟ್ ಬಳಕೆಗೆ ದೊರೆಯಲಿದೆ. ಇದರ ಜೊತೆಗೆ 601 ರೂ. ಮೌಲ್ಯ ಪ್ಲ್ಯಾನ್‌ನಲ್ಲಿ ಸಿಗುವ ಇತರೆ ಎಲ್ಲ  ಬೆನೆಫಿಟ್ಸ್‌ಗಳೂ ಪ್ಲ್ಯಾನ್‌ನಲ್ಲೂ ಇವೆ.

ಜಿಯೋ ಲ್ಯಾಪ್‌ಟ್ಯಾಪ್..! ಇದರ ಬೆಲೆ ಭಾರೀ ಕಮ್ಮಿ