ದರ ಸಮರದ ಮೂಲಕವೇ ಟೆಲಿಕಾಂ ವಲಯದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಂಡಿರುವ ರಿಲಯನ್ಸ್ ಜಿಯೋ ಇದೀಗ ಅಗ್ಗದ ಲ್ಯಾಪ್‌ಟ್ಯಾಪ್‌ ಜಿಯೋಬುಕ್‌ಗಳನ್ನು ತಯಾರಿಸಲಿದೆ. ಈ ಜಿಯೋಬುಕ್ 4ಜಿ ಎಲ್‌ಟಿಇಗೆ ಸಪೋರ್ಟ್ ಮಾಡಲಿದೆ ಎಂದು ವರದಿಯೊಂದು ತಿಳಿಸಿದೆ.

ಜಿಯೋ ಈಗಾಗಲೇ ಅಗ್ಗದ ಸ್ಮಾರ್ಟ್‌ಫೋನ್‌ಗಳನ್ನು ಬಿಡಗುಡೆ ಮಾಡಿದೆ. ಜೊತೆಗೆ, ಅಗ್ಗದ ಡೇಟಾ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಅಗ್ಗದ ಲ್ಯಾಪ್‌ಟ್ಯಾಪ್‌ಗಳನ್ನು ತಯಾರಿಸುವ ಮೂಲಕ ಮತ್ತೊಂದು ವರ್ಗವನ್ನು ತನ್ನತ್ತ ಸೆಳೆಯಲು ಯೋಜನೆ ರೂಪಿಸಿಕೊಂಡಂತಿದೆ.

LGಯಿಂದ ಹೊಸ ಟಿವಿ ಮಾರುಕಟ್ಟೆಗೆ: ವೀಕ್ಷಣೆ ಜೊತೆ ಗೇಮಿಂಗ್ ಮಜಾ

ಕೊರೊನಾ ಹಿನ್ನೆಲೆಯಲ್ಲಿ ವರ್ಕ್ ಫ್ರಂ ಹೋಮ್ ಮತ್ತು ಆನ್‌ಲೈನ್ ಕ್ಲಾಸ್‌ಗಳು ಹೆಚ್ಚಿವೆ. ಡೇಟಾ ಮತ್ತು ಲ್ಯಾಪ್‌ಟ್ಯಾಪ್‌ಗಳ ಬಳಕೆಯೂ ಹೆಚ್ಚಾಗಿದೆ. ಹಾಗಾಗಿ, ಅಗ್ಗದ ಲ್ಯಾಪ್‌ಟ್ಯಾಪ್‌ಗಳನ್ನು ಒದಗಿಸುವ ಮೂಲಕ ಮತ್ತೊಂದು ಹಂತವನ್ನು ತಲುಪುವ ಉದ್ದೇಶ ಇದ್ದಂತಿದೆ.

ಜಿಯೋ ಅಗ್ಗದ ಲ್ಯಾಪ್‌ಟ್ಯಾಪ್ ಉತ್ಪಾದಿಸುತ್ತಿರುವ  ಬಗ್ಗೆ  ಎಕ್ಸ್‌ಡಿ ಡೆವಲಪರ್ಸ್ ರಿಪೋರ್ಟ್ ಮಾಡಿದ್ದು, ಜಿಯೋ ಕಂಪನಿಯು ಚೀನಾದ ಬ್ಲೂಬ್ಯಾಂಕ್ ಕಮ್ಯುನಿಕೇಷನ್ ಟೆಕ್ನಾಲಜಿ ಕಂಪನಿಯ ಜತೆಗೂಡಿ ಅಗ್ಗದ ಜಿಯೋಬುಕ್ ಲ್ಯಾಪ್‌ಟ್ಯಾಪ್‌ಗಳನ್ನು ತಯಾರಿಸುತ್ತಿದೆ ಎಂದು ಹೇಳಿದೆ. ಇದೇ ಕಂಪನಿಯಲ್ಲಿ ಜಿಯೋ ತನ್ನ ಅಗ್ಗದ ಜಿಯೋ ಫೋನ್‌ಗಳನ್ನೂ ಉತ್ಪಾದಿಸಿದೆ.

ತಮಿಳುನಾಡು, ಕೇರಳದಲ್ಲಿ ಉಚಿತವಾಗಿ 4ಜಿ ಸಿಮ್ ನೀಡುತ್ತಿದೆ BSNL!

ಈ ಸೋರಿಕೆಯ ವರದಿಯ ಪ್ರಕಾರ, ಕಳೆದ ಸೆಪ್ಟೆಂಬರ್‌ನಲ್ಲೇ ಜಿಯೋಬುಕ್ ಲ್ಯಾಪ್‌ಟ್ಯಾಪ್ ಉತ್ಪಾದನೆ ಆರಂಭವಾಗಿದ್ದು, ಆ ಪ್ರಕ್ರಿಯೆ 2021ರ ಮೊದಲಾರ್ಧವರೆಗೂ ಮುಂದುವರಿಯಲಿದೆ. ಮುಂದಿನ ತಿಂಗಳ ವೇಳೆಕೆ ಪ್ರಾಡಕ್ಟ್ ವ್ಯಾಲಿಡೇಷನ್ ಟೆಸ್ಟ್ ಹಂತಕ್ಕೆ  ಜಿಯೋಬುಕ್  ತಲುಪಲಿದೆ ಎಂದು ತಿಳಿಸಲಾಗಿದೆ.  ಈಗ ಸೋರಿಕೆಯಾಗಿರುವ ಚಿತ್ರದಲ್ಲಿ , ಲ್ಯಾಪ್‌ಟ್ಯಾಪ್ ವಿಂಡೋಸ್ ಕೀಗಳಿರುವುದನ್ನ ಕಾಣಬಹುದು.

ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ಪ್ರೊಟೋಟೈಮ್ ಲ್ಯಾಪ್‌ಟ್ಯಾಪ್ 1,366x768 pixels resolution ಡಿಸ್‌ಪ್ಲೇ ಮತ್ತು ಸ್ನ್ಯಾಪ್‌ಡ್ರಾಗನ್ ಎಕ್ಸ್12 4ಜಿ ಮೊಡೆಮ್‌ ಜೊತೆಗೆ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಇರಲಿದೆ. ಈ ಲ್ಯಾಪ್‌ಟ್ಯಾಪ್ ಅನ್ನು ಅನೇಕ ರೀತಿಯಲ್ಲಿ ಪರೀಕ್ಷಿಸಲಾಗಿದೆ. ಈ ಲ್ಯಾಪ್‌ ಟ್ಯಾಪ್ 2 ಜಿಬಿ LPDDR4x ರ್ಯಾಮ್ ಮತ್ತು 32 ಜಿಬಿ eMMC ಸ್ಟೋರೇಜ್ ಮಾಡೆಲ್‌ ಹೊಂದಿದೆ. ಇಷ್ಟು ಮಾತ್ರವಲ್ಲದೇ 4 ಜಿಬಿ LPDDR4x ರ್ಯಾಮ್ 64ಜಿಬಿ eMMC 5.1 ಸ್ಟೋರೇಜ್ ಎಂಬುದು ಜಿಯೋ ಬುಕ್‌ನ ಮತ್ತೊಂದು ಮಾಡೆಲ್ ಆಗಿದೆ.

ಪವರ್‌ಫುಲ್ ಬ್ಯಾಟರಿಯ ಜಿಯೋನಿ ಮ್ಯಾಕ್ಸ್ ಪ್ರೋ ಫೋನ್ ಬಿಡುಗಡೆ

ಎಚ್‌ಡಿಎಂಐ ಕನೆಕ್ಟರ್, ಡ್ಯುಯಲ್ ಬ್ಯಾಂಡ್ ವೈ ಪೈ, ಬ್ಲೂಟೂಥ್ ಕನೆಕ್ಟಿವಿ ಫೀಚರ್‌ಗಳನ್ನು ಒಳಗೊಂಡಿದೆ. ಇಷ್ಟು ಮಾತ್ರವಲ್ಲದೇ ಕ್ವಾಲಂಕಾಮ್ ಆಡಿಯೋ ಚಿಪ್ ಮತ್ತು ಥ್ರಿ ಆಕ್ಸಿಲ್ ಅಕ್ಸೆಲರ್‌ಮೀಟರ್ ಕೂಡ ಈ ಜಿಯೋಬುಕ್ ಲ್ಯಾಪ್‌ಟ್ಯಾಪ್ ಒಳಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಷ್ಟಾಗಿಯೂ ಈ ಜಿಯೋ ಬುಕ್ ಲ್ಯಾಪ್‌ಟ್ಯಾಪ್ ಪರಿಪೂರ್ಣವಾದ ಮಾಹಿತಿಯನ್ನು ಕಂಪನಿ ಇನ್ನೂ ಬಿಟ್ಟುಕೊಟ್ಟಿಲ್ಲ. ಈಗ ನಾವು ನಿಮಗೆ ಕೊಡುತ್ತಿರುವುದು ಸೋರಿಕೆಯಾದ ಮಾಹಿತಿ ಮಾತ್ರ. ಈ ಬಗ್ಗೆ ಕಂಪನಿಯೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.ಹಾಗಾಗಿ, ಈ ಜಿಯೋಬುಕ್‌  ಬೆಲೆ ಎಷ್ಟಿರಲಿದೆ ಹಾಗೂ ಯಾವಾಗ ಮಾರುಕ್ಟಟೆಗೆ ಬರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಅಗ್ಗದ ಲ್ಯಾಪ್‌ಟ್ಯಾಪ್ ಆಗಿರುವ ಸಾಧ್ಯತೆಗಳು ಹೆಚ್ಚಾಗಿವೆ.

ಅಗ್ಗದ ಜಿಯೋ ಬುಕ್ ಲ್ಯಾಪ್‌ಟ್ಯಾಪ್‌ನಲ್ಲಿ ಕಂಪನಿಯು ಜಿಯೋ ಸ್ಟೋರ್, ಜಿಯೋ ಮೀಟ್, ಜಿಯೋ ಪೇಜಸ್‌ ಆಪ್‌ಗಳು ಪ್ರಿಇನ್ಸಾಟಲ್ಡ್ ಆಗಿ ಬರಲಿವೆ ಎನ್ನಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ಮೈಕ್ರೋಸಾಫ್ಟ್ ಟೀಮ್ಸ್, ಮೈಕ್ರೋಸಾಫ್ಟ್ ಮತ್ತು ಆಫೀಸ್‌ನಂಥ ಮೈಕ್ರೋಸಾಫ್ಟ್ ಆಪ್ಸ್ ಕೂಡ ಇದರಲ್ಲಿ ಎರಲಿವೆ ಎಂದು ವರದಿಯಾಗಿದೆ. ಇದೆಲ್ಲವೂ ಸೋರಿಕೆ ಮಾಹಿತಿಯಾಗಿದೆ. ಈ ಬಗ್ಗೆ ಕಂಪನಿ ಯಾವುದೇ ಮಾಹಿತಿ ಕೊಟ್ಟಿಲ್ಲ.

ಈಗಾಗಲೇ ಅತಿ ಹೆಚ್ಚು ಜಿಯೋ ಟೆಲಿಕಾಂ ಸೇವಾ ಬಳಕೆದಾರರನ್ನು ಹೊಂದಿರುವ ಕಂಪನಿ ಅಗ್ಗದ ಸ್ಮಾರ್ಟ್‌ಫೋನ್ ಹಾಗೂ ಅಗ್ಗದ ಲ್ಯಾಪ್‌ಟ್ಯಾಪ್ ಮೂಲಕ ತನ್ನ ಮಾರುಕಟ್ಟೆಯ ಗಾತ್ರವನ್ನು ಹಿಗ್ಗಿಸಿಕೊಳ್ಳುವ ಸಾಧ್ಯತೆ ಇದೆ.