ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯಾಗಿರುವ ವಿಐ(ವೋಡಾಫೋನ್ ಐಡಿಯಾ) ಹೊಸ ಗ್ರಾಹಕರನ್ನು ಸೆಳೆಯಲು ಹೊಸ ಪ್ಲ್ಯಾನ್‌ಗಳನ್ನು ಪರಿಯಸುತ್ತಲೇ ಇದೆ. ಇದೀಗ ಕಂಪನಿ 399 ರೂಪಾಯಿ ಡಿಜಿಟಲ್ ಎಕ್ಸ್‌ಕ್ಲೂಸಿವ್ ಎಂಬ ಹೊಸ ಪ್ಲ್ಯಾನ್ ಜಾರಿಗೆ ತಂದಿದೆ.

ಈ ಬಗ್ಗೆ ಅನೇಕ ವೆಬ್‌ಸೈಟ್‌ಗಳ ವರದಿ ಮಾಡಿದ್ದು, ಹೊಸ ಪ್ಲ್ಯಾನ್ ಪ್ರಕಾರ ತನ್ನ ವಿಐ ವೆಬ್‌ಸೈಟ್ ಮೂಲಕ ಯಾರು ಹೊಸ ಸಿಮ್‌ ಖರೀದಿಸುತ್ತಾರೆ ಅವರಿಗೆ ಈ 399 ರೂ. ಅನ್ವಯವಾಗುತ್ತದೆ. ಈ ಪ್ಲ್ಯಾನ್ ಪೋಸ್ಟ್‌ಪೇಡ್ ಮತ್ತು ಪ್ರೀಪೇಡ್ ಎರಡಕ್ಕೂ ಅನ್ವಯವಾಗುತ್ತದೆ.

55 ಇಂಚಿನ Mi QLED TV 4K ಟಿವಿ ಬಿಡುಗಡೆ, ಬೆಲೆ ಇಷ್ಟು

ಪ್ರೀಪೇಡ್ ಪ್ಲ್ಯಾನ್‌ನಲ್ಲಿ ನಿಮಗೆ ಡೇಟಾ ಜೊತೆಗೆ ಎಸ್ಎಂಎಸ್ ‌ಸೇವೆಯೂ ದೊರೆಯಲಿದ್ದು, 297 ರೂ. ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ ವಿಐ ಮೂವೀಸ್ ಮತ್ತು ಟಿವಿ ಅಕ್ಸೆಸ್ ಬೆನೆಫಿಟ್ ಕೂಡ ಇದೆ. ಪೋಸ್ಟ್‌ಪೇಡ್ 399 ರೂ. ಡಿಜಿಟಲ್ ಎಕ್ಸ್‌ಕ್ಲೂಸಿವ್ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಎಕ್ಸಟ್ರಾ 150 ಜಿಬಿ ಡೇಟಾ ಜೊತೆಗೆ ಎಸ್‌ಎಂಎಸ್ ಬೆನೆಫಿಟ್ಸ್ ಸಿಗುತ್ತದೆ.

ವೆಬ್‌ಸೈಟ್ ಮೂಲಕ ಗ್ರಾಹಕರು ಸಿಮ್ ಖರೀದಿಸುವಾಗ 399 ರೂ. ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಪ್ರೀಪೇಡ್ 399 ರೂ. ಪ್ಲ್ಯಾನ್‌ ಆಯ್ಕೆ ಮಾಡಿಕೊಂಡರೆ ಗ್ರಾಹಕರಿಗೆ ನಿತ್ಯ 1.5ಜಿಬಿ ಡೇಟಾ ಮತ್ತು ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ಸಿಗಲಿವೆ. ಇದು 56 ದಿನಗಳವರೆಗೂ ವ್ಯಾಲಿಡಿಟಿ ಹೊಂದಿದ್ದು ವಿಐ ಮೂವೀಸ್ ಮತ್ತು ಟಿವಿ ಅಕ್ಸೆಸ್ ಕೂಡ ಪಡೆದುಕೊಳ್ಳಬಹುದು

ಇನ್ಸ್‌ಟಾಗ್ರಾಮ್‌ನಲ್ಲಿ ಮೂವೀ ನೋಡಲು ‘ವಾಚ್‌ ಟುಗೆದರ್’ ಫೀಚರ್!

ಪೋಸ್ಟ್‌ಪೇಡ್ 399 ರೂ. ಡಿಜಿಟಲ್ ಎಕ್ಸ್‌ಕ್ಲೂಸಿವ್ ಪ್ಲ್ಯಾನ್‌ನಲ್ಲಿ ಗ್ರಾಹಕರು ತಿಂಗಳಿಗೆ 40 ಜಿಬಿ ಡೇಟಾ ಮತ್ತು 100 ಎಸ್ಎಂಎಸ್ ಉಚಿತವಾಗಿ ಪಡೆದುಕೊಳ್ಳಬಹುದು. ಇದಕ್ಕೆ ಹೆಚ್ಚುವರಿಯಾಗಿ 6 ತಿಂಗಳಿಗೆ 150 ಜಿಬಿ ಡೇಟಾ ಕೂಡ ಲಭ್ಯವಿದೆ. ಇಷ್ಟು ಮಾತ್ರವಲ್ಲದೇ ವಿಐ ಮೂವೀಸ್ ಮತ್ತು ಟಿವಿ ಸಬ್ಸಕ್ರಿಪ್ಷನ್ ಪಡೆದುಕೊಳ್ಳಬಹುದು.

ಆಕರ್ಷಕ ವಿನ್ಯಾಸದ ರೆಡ್‌ಮಿ ಕೆ40 ಇಮೇಜ್ ಸೋರಿಕೆ

ಇತ್ತೀಚೆಗಷ್ಟೇ ವಿಐ ವೈ ಫೈ ಕಾಲಿಂಗ್ ಸೇವೆಯನ್ನು ಭಾರತದ ಕೆಲವು ನಿರ್ದಿಷ್ಟ ವೃತ್ತಗಳಲ್ಲಿ ಆರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವೃತ್ತಗಳ(ಸರ್ಕಲ್) ಆಯ್ಕೆ ಸಂಬಂಧ ಕಂಪನಿ ಹೊಸ 59 ಮತ್ತು 65 ರೂ. ಪ್ರೀಪೇಡ್ ರಿಚಾರ್ಜ್ ಪ್ಲ್ಯಾನ್‌ಗಳನ್ನೂ ಜಾರಿಗೆ ತಂದಿದೆ ಎನ್ನಲಾಗಿದೆ.