ರೆಡ್‌ಮಿ ಕೆ30 ಸ್ಮಾರ್ಟ್‌ಫೋನ್ ಮೂಲಕ ಕಮಾಲ್ ಮಾಡಿದ್ದ ಕಂಪನಿ ಇದೀಗ ರೆಡ್‌ಮಿ ಕೆ40 ಫೋನ್ ಸಿದ್ಧಪಡಿಸುತ್ತಿದೆ. ಈ ಫೋನ್ ಲೈವ್ ಇಮೇಜ್ ಸೋರಿಕೆಯಾಗಿದ್ದು, ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಸೋರಿಕೆಯಾದ ಇಮೇಜ್ ಪ್ರಕಾರ, ಈ ಫೋನ್ ವಿಶಿಷ್ಟ ವಿನ್ಯಾಸ ಹೊಂದಿರುವ ದನ್ನು ದೃಢಪಡಿಸುತ್ತದೆ.
ರೆಡ್‌ಮಿ ಕೆ40 ಸ್ಮಾರ್ಟ್‌ಫೋನ್ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಫೋನ್ ಎಂಬುದು ಗೊತ್ತಿರುವ ಸಂಗತಿ. ಈ ಫೋನಿನ ಲೈವ್ ಇಮೇಜ್ ಇದೀಗ ಚೀನಾದಿಂದಲೇ ಸೋರಿಕೆಯಾಗಿದ್ದು, ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಚೀನಾ ಮೂಲದ ಶಿಯೊಮಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿದೆ. ಕಡಿಮೆ ಬೆಲೆಗೆ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರ ವಿಶ್ವಾಸಗಳಿಸಿದೆ. ಅದರದ್ದೇ ರೆಡ್‌ಮಿ ಇದೀಗ ಕೆ40 ಸ್ಮಾರ್ಟ್‌ಫೋನ್ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
ಜನವರಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S21 ಸೀರಿಸ್ ಫೋನ್ ಬಿಡುಗಡೆ
ಈಗ ಸೋರಿಕೆಯಾಗಿರುವ ರೆಡ್‌ಮಿ ಕೆ40 ಸಂಪೂರ್ಣವಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಕೆ30 ಸ್ಮಾರ್ಟ್‌ಫೋನ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇದೇ ವೇಳೆ, ಶಿಯೋಮಿ ಎಂಐ 11 ಜೊತೆಗೆ ಈ ಫೋನ್ ಕೂಡ ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸುದ್ದಿ ಇದೆ. ಆದರೆ, ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಎಂಐ 11 ಫೋನ್‌ಗಳ ರೀತಿಯಲ್ಲೇ ರೆಡ್‌ಮಿ ಕೆ40 ಕೂಡ ಸ್ನ್ಯಾಪ್‌ಡ್ರಾಗನ್ 888 5ಜಿ ಪ್ರೊಸೆಸರ್, ಎಎಂಒಎಲ್ಇಡಿ ಡಿಸ್‌ಪ್ಲೇ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಒಳಗೊಳ್ಳಲಿದೆ. ಈಗಿನ ಲೈವ್ ಇಮೇಜ್ ಪ್ರಕಾರ, ಈ ಪೋನ್‌ನ ಸ್ಕ್ರೀನ್ ಮೇಲೆ ಸಿಂಗಲ್ ಪಂಚ್‌ಹೋಲ್ ಇರಲಿದ್ದು, ಹಾಗಾಗಿ ಹೆಚ್ಚಿನ ಸ್ಕ್ರೀನ್ ಬಳಕೆದಾರರಿಗೆ ಸಿಗಲಿದೆ.
ರೆಡ್ಮಿ ಕೆ40 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಮೇನ್ ಕ್ಯಾಮರಾ ಸೆಟ್‌ಅಪ್ ಹೆಚ್ಚು ವಿಶಾಲವಾದ ಆವರಣವನ್ನು ಹೊಂದಿದೆ ಎಂಬುದ ಸೋರಿಕೆಯಾಗಿರುವ ಲೈವ್ ಇಮೇಜ್‌ನಿಂದ ಗೊತ್ತಾಗುತ್ತದೆ. ಈ ಫೋನ್‌ನಲ್ಲಿ ಐದು ಕ್ಯಾಮರಾಗಳಿರಬಹುದು ಮತ್ತು ಜೊತೆಗೆ ಫ್ಲ್ಯಾಶ್ ಕೂಡ ಇದೆ. ಇದೊಂದು ಪ್ರೀಮಿಯಂ ಕ್ಯಾಮರಾ ಎಂಬುದನ್ನು ಸೂಚ್ಯವಾಗಿ ತೋರಿಸಲಾಗಿದೆ. ಫ್ಲ್ಯಾಶ್ ಪಕ್ಕದಲ್ಲಿ ಅಲ್ಟ್ರಾ ಪ್ರಿಮೀಯಂ ಎಂದೂ ಬರೆಯಲಾಗಿದೆ. ಹೀಗಾಗಿ ಈ ರೆಡ್‌ಮಿ 40ಕೆ ಹೆಚ್ಚು ಗಮನ ಸೆಳೆಯುತ್ತಿದೆ.
ಜಾಗತಿಕ ಬಿಡುಗಡೆ ಸಿದ್ಧವಾದ Mi Watch Lite: ಇದು ಬಜೆಟ್ ಫ್ರೆಂಡ್ಲೀ
ಫೋನ್‌ನ ಮೇಲ್ಭಾಗದ ಎಡಮೂಲೆಯಲ್ಲಿ ಪಂಚ್ ಹೋಲ್ ಇದ್ದು ಅದರಲ್ಲೇ ಸೆಲ್ಫಿ ಕ್ಯಾಮರಾವನ್ನು ಕೆ40 ಸ್ಮಾರ್ಟ್‌ಫೋನ್ ಹೊಂದಿರಲಿದೆ ಎಂದು ಈ ಹಿಂದೆಯೂ ಹೇಳಲಾಗಿತ್ತು. ಈ ಹಿಂದೆ ಸೋರಿಕೆಯಾಗಿದ್ದ ಮಾಹಿತಿಯ ಪ್ರಕಾರ, 3.7ಎಂಎಂ ಗಾತ್ರದ ಸ್ಲಿಮ್ ಪಂಚ್ ಹೋಲ್‌ನ ಜೊತೆಗೆ ಒಎಲ್‌ಇಡಿ ಪ್ಯಾನೆಲ್ ಕೂಡ ಇರಲಿದೆ.
ಇಷ್ಟು ಮಾತ್ರವಲ್ಲದೇ, ಸ್ನ್ಯಾಪ್‌ಡ್ರಾಗನ್ 888 5ಜಿ ಚಿಪ್‌ಸೆಟ್ ಕೂಡ ಈ ಫೋನಿನಲ್ಲಿ ಇರಲಿದೆ. ಈ ಹಿಂದಿನ ಫೋನ್‌ಗಳಿಗಿಂತಲೂ ಹೆಚ್ಚು ವೇಗವಾಗಿ ಚಾರ್ಜ್ ಮಾಡುವುದಕ್ಕೆ ಈ ಪೋನ್ ಸಪೋರ್ಟ್ ಮಾಡಲಿದೆ. 45000 ಎಂಎಂಚ್ ಸಾಮರ್ಥ್ಯದ ಬ್ಯಾಟರಿ ಕೂಡ ಇರಬಹುದು ಎಂದು ವರದಿ ಹೇಳುತ್ತಿವೆ. ಆದರೆ, ಈ ಯಾವುದೇ ಮಾಹಿತಿಯನ್ನು ಕಂಪನಿ ಇನ್ನೂ ಖಚಿತಪಡಿಸಿಲ್ಲ. ಈಗ ಸೋರಿಕೆಯಾಗಿರುವ ಕೆಲವು ಮಾಹಿತಿಗಳನ್ನು ಇಟ್ಟುಕೊಂಡು ಲೆಕ್ಕಾಚಾರ ಹಾಕಲಾಗುತ್ತಿದೆ. ಒಟ್ಟಿನಲ್ಲಿ ಶೀಘ್ರವೇ ರೆಡ್‌ಮಿ ಕೆ40 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮುಂದಿನ ವರ್ಷದ ಆರಂಭದಲ್ಲಿ ಸಿಗಬಹುದು ಎಂದು ಹೇಳಲಾಗುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 16, 2020, 5:15 PM IST