ಇನ್ಸ್‌ಟಾಗ್ರಾಮ್‌ನಲ್ಲಿ ಮೂವೀ ನೋಡಲು ‘ವಾಚ್ ಟುಗೆದರ್’ ಫೀಚರ್!
ಭಾರತದಲ್ಲಿ ಅಪಾರ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಒಡೆತನದ ಇನ್ಸ್‌ಟಾಗ್ರಾಮ್ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ವಾಚ್ ಟುಗೆದರ್, ಸೆಲ್ಪಿ ಸ್ಟಿಕರ್ಸ್, ಚಾಟ್ ಥೀಮ್ಸ್‌ನಂಥ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.
ಯುವ ಜನ ಹಾಗೂ ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಜಾಲತಾಣ ಎನಿಸಿಕೊಂಡಿರುವ ಇನ್ಸ್‌ಟಾಗ್ರಾಮ್ ಅನೇಕ ಹೊಸ ಹೊಸ ಫೀಚರ್‌ಗಳ ಮೂಲಕ ಆಕರ್ಷಕವಾಗುತ್ತಿದೆ. ಬಳಕೆದಾರಸ್ನೇಹಿ ಫೀಚರ್‌ಗಳ ಮೂಲಕ ಮತ್ತಷ್ಟು ಜನರನ್ನು ಸೆಳೆಯುತ್ತಿದೆ.
ಇತ್ತೀಚೆಗಷ್ಟೇ ಇನ್ಸ್‌ಗ್ರಾಮ್ ತನ್ನ ಸಂದೇಶಗಳನ್ನು ಫೇಸ್‌ಬುಕ್ ಮೆಸೆಂಜರ್ ಜೊತೆ ಸಂಯೋಚಿಸಿತ್ತು ಮತ್ತು ಬಳಕೆದಾರರಿಗೆ ಎರಡೂ ಅಪ್ಲಿಕೇಷನ್ ಬಳಸಲು ಅನುಕೂಲವಾಗುವಂತೆ ಇನ್ಸ್‌ಟಾಗ್ರಾಮ್ ಮತ್ತು ಮೆಸೆಂಜರ್ ಮೂಲಕ ಸಂದೇಶ ಕಳುಹಿಸಲು ಅವಕಾಶ ಕಲ್ಪಿಸಿತ್ತು. ಇದೀಗ ಜಾಗತಿಕವಾಗಿ ತನ್ನ ಬಳಕೆದಾರರಿಗೆ ಹೊಸ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದ್ದು, ಚಾಟ್ ಥೀಮ್ಸ್, ವಾಚ್ ಟುಗೆದರ್, ಸೆಲ್ಫಿ ಸ್ಟಿಕರ್ಸ್ ಸೇರಿದಂತೆ ಇತರ ಮೆಸೆಂಜರ್ ಫೀಚರ್ ವೈಶಿಷ್ಟ್ಯಗಳನ್ನು ಆಪ್‌ಗೆ ಸೇರ್ಪಡೆ ಮಾಡಲಾಗಿದೆ. ಈ ವೈಶಿಷ್ಟ್ಯಗಳು ಹೆಚ್ಚು ಗಮನ ಸೆಳೆಯುತ್ತಿವೆ.
ಆಕರ್ಷಕ ವಿನ್ಯಾಸದ ರೆಡ್‌ಮಿ ಕೆ40 ಇಮೇಜ್ ಸೋರಿಕೆ
ಒಮ್ಮೆ ನೀವು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ಇನ್ಸ್‌ಟಾಗ್ರಾಮ್ ಅಪ್‌ಡೇಟ್ ಮಾಡಿದರೆ ಸಾಕು. ವಾಚ್ ಟುಗೆದರ್ ಫೀಚರ್ ನಿಮಗೆ ನೀವು ಟಿವಿ ಶೋಗಳನ್ನು, ಸಿನಿಮಾಗಳನ್ನು, ಟ್ರೆಂಡಿಂಗ್ ವಿಡಿಯೋಗಳನ್ನು ರಿಯಲ್ ಟೈಮ್‌ನಲ್ಲಿ ನಿಮ್ಮ ಸ್ನೇಹಿತರ ಜತೆಗೂಡಿ ಚಾಟಿಂಗ್ ಮಾಡುತ್ತಲೇ ನೋಡಲು ಅವಕಾಶ ಕಲ್ಪಿಸಿಕೊಡುತ್ತದೆ.
ವಾಚ್ ಟುಗೆದರ್ ಫೀಚರ್ ಸಕ್ರಿಯಗೊಳಿಸಲು ನೀವು ಇನ್ಸ್‌ಟಾಗ್ರಾಮ್ ಅಥವಾ ಮೆಸೆಂಜರ್‌ನಲ್ಲಿ ವಿಡಿಯೋ ಚಾಟ್ ಆರಂಭಿಸಿ ಅಥವಾ ಮೆಸೆಂಜರ್ ರೂಮ್ ಕ್ರಿಯೇಟ್ ಮಾಡಿ. ಬಳಿಕ ಸ್ಕ್ರೀನ್ ಕೆಳಗಡೆಯ ಬಲಭಾಗದಲ್ಲಿರುವ ಮೀಡಿಯಾ ಬಟನ್ ಮೇಲೆ ಟ್ಯಾಪ್ ಮಾಡಿ, ನಿಮ್ಮ ಸ್ನೇಹಿತರ ಜೊತೆ ಸಿನಿಮಾ, ಶೋ ನೋಡಲು ಟಿವಿ ಆಂಡ್ ಮೂವೀಸ್ ಟ್ಯಾಬ್ ಸೆಲೆಕ್ಟ್ ಮಾಡಿ. ಆಗ ನೀವ ನಿಮ್ಮ ಸ್ನೇಹಿತರ ಜತೆಗೂಡಿ ರಿಯಲ್ ಟೈಮ್‌ನಲ್ಲಿ ಚಾಟಿಂಗ್ ಮಾಡುತ್ತಲೇ ಸಿನಿಮಾ ನೋಡಬಹುದು.
ಆಪ್‌ನಲ್ಲಿ ಥೀಮ್ ಬದಲಿಸಿಕೊಂಡು ನೀವು ಸಂದೇಶಗಳನ್ನು ಅಥವಾ ವಿಡಿಯೋ ಚಾಟ್‌ಗಳನ್ನು ಇನ್ಸ್‌ಟಾಗ್ರಾಮ್ ಮತ್ತು ಮೆಸೆಂಜರ್‌ಗಳಲ್ಲೂ ಕಳುಹಿಸಬಹುದು. ಈಗ ಟಿನಿಟ್ಯಾನ್ ಎಂಬ ಹೊಸ ಚಾಟ್ ಥೀಮ್‌ವೊಂದನ್ನು ಬಿಡುಗಡೆ ಮಾಡಲಾಗಿದೆ. ಥೀಮ್ ಮೇಲ್ ಟ್ಯಾಪ್ ಮಾಡಿ ಮತ್ತು ಟಿನಿಟ್ಯಾನ್ ಸೆಲೆಕ್ಟ್ ಮಾಡುವುದರ ಮೂಲಕ ಸಕ್ರಿಯಗೊಳಿಸಬಹುದು. ಆ ಬಳಿಕ ಸಂದೇಶಗಳನ್ನು ಅಥವಾ ವಿಡಿಯೋ ಚಾಟ್‌ಗಳನ್ನು ಮೆಸೆಂಜರ್ ಮತ್ತು ಇನ್ಸ್‌ಟಾಗ್ರಾಮ್ ಮೂಲಕ ಕಳುಹಿಸಬಹುದಾಗಿದೆ.
ಜನವರಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S21 ಸೀರಿಸ್ ಫೋನ್ ಬಿಡುಗಡೆ
ಸೆಲ್ಫಿ ಸ್ಟಿಕರ್ಸ್ ಫೀಚರ್ ಕೂಡ ಹೆಚ್ಚು ಗಮನ ಸೆಳೆಯುತ್ತಿದೆ. ಹೊಸ ಅಪ್‌ಡೇಟ್ ಬಳಕೆದಾರರು ಸೆಲ್ಫಿ ಸ್ಟಿಕರ್ಸ್, ಕಸ್ಟಮ್ ಎಮೋಜಿ ಪ್ರಕ್ರಿಯೆಗಳು, ಆನಿಮೆಟೆಡ್ ಮೆಸೆಜ್ ಎಫೆಕ್ಟ್ಸ್ ಮತ್ತು ಮೆಸೆಜ್ ಕಂಟ್ರೋಲ್‌ಗಳನ್ನು ಪಡೆದುಕೊಳ್ಳಬಹುದು. ಇನ್ಸ್‌ಟಾಗ್ರಾಮ್‌ನಲ್ಲಿ ಮೆಸೆಂಜರ್‌ನ ಹೊಸ ಅನುಭವವನ್ನು ಪಡೆಯಲು ಇಚ್ಛಿಸುವ ಪ್ರತಿಯೊಬ್ಬರಿಗೆ ಅಂದರೆ ಆಪ್ ಅಪ್‌ಡೇಟ್ ಮಾಡುವ ಪ್ರತಿಯೊಬ್ಬರಿಗೆ ದೊರೆಯಲಿವೆ.
ಫೇಸ್‌ಬುಕ್ ಒಡೆತನದ ಇನ್ಸ್‌ಟಾಗ್ರಾಮ್ ಭಾರತದಲ್ಲಿ ಅಪಾರ ಪ್ರಮಾಣದ ಬಳಕೆದಾರರನ್ನು ಹೊಂದಿದೆ. ಟಿಕ್‌ಟಾಕ್ ನಿಷೇಧದ ಬಳಿಕವಂತೂ ಇನ್ಸ್‌ಟಾಗ್ರಾಮ್ ಬೇಡಿಕೆ ಇನ್ನಷ್ಟು ಹೆಚ್ಚಿದೆ ಎಂದು ಹೇಳಬಹುದು. ಭಾರತದಲ್ಲಿ ಅಂದಾಜು 12 ಕೋಟಿ ಜನರು ಇನ್ಸ್‌ಟಾಗ್ರಾಮ್ ಆಪ್ ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇನ್ಸ್‌ಟಾಗ್ರಾಮ್ ರೀಲ್ ಫೀಚರ್ ಇನ್ನೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ.
ಜಾಗತಿಕ ಬಿಡುಗಡೆ ಸಿದ್ಧವಾದ Mi Watch Lite: ಇದು ಬಜೆಟ್ ಫ್ರೆಂಡ್ಲೀ