ಸಾಲು ಸಾಲು ರಜೆ, ಹೊಸ ವರ್ಷ ಸಂಭ್ರಮ ಹೀಗೆ ವಿವಿಧ ದೇಶಗಳಿಗೆ ಪ್ರಯಾಣ ಬೆಳೆಸುವ ಗ್ರಾಹಕರಿಗೆ ವಿಐ ಭರ್ಜರಿ ಪ್ಲಾನ್ ಜಾರಿ ಮಾಡಿದೆ. 100ಕ್ಕೂ ಹೆಚ್ಚು ದೇಶಗಳಲ್ಲಿ ಉಚಿತ ಇನ್‌ಕಮಿಂಗ್ ಹಾಗೂ ರೋಮಿಂಗ್ ಅಭಿಯಾನದ ಪ್ಲಾನ್ ಜಾರಿ ಮಾಡಿದೆ.

ನವದೆಹಲಿ(ಡಿ.25) ಸಾಲು ಸಾಲು ರಜೆಯ ಜೊತೆಗೆ ಹೊಸ ವರ್ಷ ಆಚರಣೆಗೆ ಹಲವರು ವಿದೇಶ ಪ್ರಯಾಣ ಮಾಡುವುದು ಸಹಜ. ಅಂತಾರಾಷ್ಟ್ರೀಯ ಪ್ರಯಾಣಧ ವೇಳೆ ಇನ್‌ಕಮಿಂಗ್ ಕಾಲ್ ಹಾಗೂ ಇಂಟರ್‌ನ್ಯಾಶನಲ್ ರೋಮಿಂಗ್ ಕಾಲ್ ಅತೀ ದೊಡ್ಡ ಸಮಸ್ಯೆ. ಇದೀಗ ಅಂತರರಾಷ್ಟ್ರೀಯ ಪ್ರಯಾಣವನ್ನು ಕೈಗೆಟುಕುವಂತೆ ಹಾಗೂ ಗ್ರಾಹಕರು ರಜೆಯ ಸವಿ ಅನುಭವಿಸಲು ವಿಐ ಹೊಸ ಪ್ಲಾನ್ ಜಾರಿ ಮಾಡಿದೆ. ವಿದೇಶಕ್ಕೆ ಪ್ರಯಾಣಿಸುವರಿಗೆ ಅನಿಯಮಿತ ಉಚಿತ ಇನ್‌ಕಮಿಂಗ್ ಕಾಲ್ ಕೊಡುಗೆಯನ್ನು ನೀಡುತ್ತಿದೆ. ಅನ್‌ಲಿಮಿಟೆಡ್ ಉಚಿತ ಇನ್‌ಕಮಿಂಗ್‌ ಜೊತೆಗೆ, ವಿ ಕಂಪನಿಯ ಟ್ರೂಲಿ ಅನ್‌ಲಿಮಿಟೆಡ್ ಇಂಟರ್ನ್ಯಾಷನಲ್ ರೋಮಿಂಗ್ ಸೌಲಭ್ಯ ಕೂಡ ನೀಡುತ್ತಿದೆ. ಇದಕ್ಕಾಗಿ ಪ್ರತಿ ದಿನ 133 ರೂಪಾಯಿ ಪ್ಲಾನ್ ಜಾರಿ ಮಾಡಿದೆ.

ವಿದೇಶಕ್ಕೆ ಪ್ರಯಾಣಿಸುವ ವಿ ಬಳಕೆದಾರರಿಗೆ ಅನಿಯಮಿತ ಡೇಟಾ ಮತ್ತು ವಾಯ್ಸ್ ಕಾಲ್ (ಔಟ್‌ಗೋಯಿಂಗ್) ಕೂಡ ಯೋಜನೆಯಲ್ಲಿ ಲಭ್ಯವಿದೆ. ಬಜೆಟ್ ಸ್ನೇಹಿ ಪ್ಯಾಕ್ ಗಳೊಂದಿಗೆ ಗ್ರಾಹಕ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳುತ್ತಿರುವ ವಿ, ಅಂತರರಾಷ್ಟ್ರೀಯ ರೋಮಿಂಗ್ ಯೋಜನೆಗಳ ಚಂದಾದಾರಿಕೆಯನ್ನು ಕೈಗೆಟಕುವ ದರದಲ್ಲಿ ನೀಡುತ್ತಿದೆ. ವಿ ಕಂಪನಿಯ ಇತ್ತೀಚಿನ ಕೊಡುಗೆ / ಯೋಜನೆಯು ಪ್ರಾರಂಭದ ಹಂತದಲ್ಲಿ ದಿನಕ್ಕೆ ಕೇವಲ 133 ರೂ.ಗಳ ವೆಚ್ಚದ 100ಕ್ಕೂ ಹೆಚ್ಚು ದೇಶಗಳಲ್ಲಿ ಉಚಿತ ಇನ್‌ಕಮಿಂಗ್ ಕರೆಗಳನ್ನು ನೀಡುತ್ತದೆ. ಈ ಬೆಲೆಯು 3999/- ರೂ.ಗಳ ಇಂಟರ್‌ನ್ಯಾಷನಲ್ ರೋಮಿಂಗ್ ಅನ್‌ಲಿಮಿಟೆಡ್ ಪ್ಯಾಕ್ ನಲ್ಲಿ ಮಾನ್ಯವಾಗಿರುತ್ತದೆ.

24 ರೂಪಾಯಿಯಲ್ಲಿ ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಪರಿಚಯಿಸಿದ ವಿಐ!

ಜನಪ್ರಿಯ ತಾಣಗಳಲ್ಲಿ ನಿಜವಾಗಿಯೂ ಅನಿಯಮಿತ ಡೇಟಾ ಮತ್ತು ಕರೆಗಳನ್ನು ನೀಡುವ ಪ್ರಯತ್ನದೊಂದಿಗೆ, ವಿ ಹೊಸ ತಾಣವಾಗಿ ಮಾಲ್ಡೀವ್ಸ್ ಅನ್ನು ಸೇರಿಸಿದೆ. ಆ ದೇಶಕ್ಕೆ ಭೇಟಿ ನೀಡುವ ಭಾರತೀಯ ಜನಸಂಖ್ಯೆಗೆ ನೆರವಾಗುವ ಉದ್ದೇಶ ಇದರ ಹಿಂದಿದೆ. ಇದರೊಂದಿಗೆ ವಿ ಬಳಕೆದಾರರು ಈಗ ಯುಎಸ್ಎ, ಯುಕೆ, ಆಸ್ಟ್ರೇಲಿಯಾ, ಇಟಲಿ, ಮಲೇಷ್ಯಾ, ಜರ್ಮನಿ, ಸಿಂಗಾಪುರ್, ಬ್ರೆಜಿಲ್, ಮಾಲ್ಡೀವ್ಸ್ ಮತ್ತು ಇತ್ಯಾದಿ 105 ದೇಶಗಳಲ್ಲಿ ಜನಪ್ರಿಯ ಜಾಗತಿಕ ತಾಣಗಳನ್ನು ಅನ್ವೇಷಿಸುವಾಗ ತಡೆರಹಿತ ವಾಯ್ಸ್‌ ಕಾಲ್‌ಗಳು ಮತ್ತು ಡೇಟಾವನ್ನು ಆನಂದಿಸಬಹುದು.

ಮಾಲ್ಡೀವ್ಸ್ ಪ್ಯಾಕ್ ವಿವರಗಳು: ಪ್ಯಾಕ್ ಎಂಆರ್‌ಪಿ - ರೂ.2999 - ಪ್ರಯೋಜನ - 100 ನಿಮಿಷ (ಔಟ್‌ಗೋಯಿಂಗ್‌ + ಇನ್‌ಕಮಿಂಗ್‌), 5 ಜಿಬಿ ಡೇಟಾ, 10 ಔಟ್‌ಗೋಯಿಂಗ್‌ ಎಸ್ಎಂಎಸ್, ಉಚಿತ ಇನ್‌ಕಮಿಂಗ್‌ ಎಸ್ಎಂಎಸ್, ವ್ಯಾಲಿಡಿಟಿ - 10 ದಿನಗಳು. ನಿಗದಿತ ಲಭ್ಯತೆ ಮುಗಿದ ಬಳಿಕ ಔಟ್‌ಗೋಯಿಂಗ್‌ ನಿಮಿಷಗಳು ಮತ್ತು ಇನ್‌ಕಮಿಂಗ್‌ ನಿಮಿಷಗಳ ಕೋಟಾಕ್ಕೆ ನಿಮಿಷಕ್ಕೆ 3ರೂ., ಪ್ರಪಂಚದ ಉಳಿದ ಭಾಗಗಳ ಕರೆಗೆ ನಿಮಿಷಕ್ಕೆ 35 ರೂ., ಡೇಟಾಗೆ ಪ್ರತೀ ಎಂಬಿಗೆ 1 ರೂ., ಪ್ರತೀ ಎಸ್ಎಂಎಸ್‌ಗೆ 1 ರೂ. ಬೆಲೆ ಇದೆ.

ಒಂದೇ ವರ್ಷದಲ್ಲಿ ಅಂದಾಜು 40 ಕೋಟಿ ಗಳಿಸಿದ ಉದ್ಯಮಿ, ಮಾಡ್ತಿರೋ ಬಿಸಿನೆಸ್‌ ಏನು?