24 ರೂಪಾಯಿಯಲ್ಲಿ ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಪರಿಚಯಿಸಿದ ವಿಐ!
ಮೊಬೈಲ್ ಡೇಟಾ ಇದೀಗ ಅನಿವಾರ್ಯ. ಆದರೆ ಕೆಲಸ, ವೈಯುಕ್ತಿಕ ಸೇರಿ ಹಲವು ಕಾರಣಗಳಿಂದ ಪ್ರತಿ ದಿನದ ಡೇಟಾ ಬಳಕೆ ಹೆಚ್ಚಾಗಲಿದೆ. ಹೆಚ್ಚುವರಿ ಡೇಟಗಾಗಿ ಗ್ರಾಹಕರು ದುಬಾರಿ ಹಣ ನೀಡಬೇಕಾಗುತ್ತಿದೆ. ಇದೀಗ ವೋಡಾಫೋನ್ ಐಡಿಯಾ ಕೇವಲ 24 ರೂಪಾಯಿಯಲ್ಲಿ ಅನ್‌ಲಿಮೆಟೆಡ್ ಡೇಟಾ ಪ್ಯಾಕ್ ಪರಿಚಯಿಸಿದೆ.
ನವದೆಹಲಿ(ಜು.05) ಹೆಚ್ಚುವರಿ 1 ಜೆಬಿ, 2 ಜಿಬಿ ಸೇರಿದಂತೆ ಡೇಟಾಗಳಿಗೆ ಹೆಚ್ಚುವರಿ ಹಣ ನೀಡಬೇಕು. ಇದು ದುಬಾರಿ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ವೋಡೋಫೋನ್ ಐಡಿಯಾ ಇದೀಗ ಹೊಸ ಡೇಟಾ ಪ್ಯಾಕ್ ಪರಿಚಯಿಸಿದೆ. ಒಂದು ಗಂಟೆ ಪ್ಯಾಕ್ ಹಾಗೂ ಒಂದು ದಿನ ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಪರಿಚಯಿಸಿದೆ. 24 ರೂಪಾಯಿ ಹಾಗೂ 49 ರೂಪಾಯಿಯ ನೂತನ ಪ್ಯಾಕ್ ಗ್ರಾಹಕರ ಸಮಸ್ಯೆಗೆ ಪರಿಹಾರ ನೀಡಲಿದೆ.
ಪ್ರತಿಯೊಬ್ಬರ ಡೇಟಾ ಬಳಕೆಯ ಅಗತ್ಯಗಳು ದಿನೇ ದಿನೇ ನಿರಂತರವಾಗಿ ಹೆಚ್ಚುತ್ತಲೇ ಇವೆ. ಕೆಲಸ – ಕಾರ್ಯಗಳಿಗೆ ಅಥವಾ ವೈಯಕ್ತಿಕ ಬಳಕೆಗೆ ಡೇಟಾ ಅಗತ್ಯವಾಗಿದೆ. ಮೊಬೈಲ್ ಬಳಕೆದಾರರು ಈಗ ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಾಗಿ ಡೇಟಾದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ, ಇದು ಕಾಲೇಜ್ ಪ್ರಾಜೆಕ್ಟ್ ಅಥವಾ ಆನ್‌ಲೈನ್ ಅಸೈನ್‌ಮೆಂಟ್, ಮನರಂಜಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಅತಿಯಾಗಿ ವೀಕ್ಷಿಸುವುದು, ಆಟ ಆಡುವುದು ಅಥವಾ ಕ್ರೀಡೆಗಳನ್ನು ವೀಕ್ಷಿಸುವುದು ಮುಂತಾದ ಚಟುವಟಿಕೆಗಳಿಗೆ ಕೆಲವೊಮ್ಮೆ ಹೆಚ್ಚಿನ ಅಥವಾ ಅನಿಯಂತ್ರಿತ ಪ್ರಮಾಣದ ಡೇಟಾ ಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಪ್ರಿಪೇಯ್ಡ್ ಗ್ರಾಹಕರು ತಮ್ಮ ದೈನಂದಿನ ಡೇಟಾ ಕೋಟಾದ ಕಾರಣಕ್ಕೆ ತಮ್ಮೆಲ್ಲಾ ಆನ್‌ಲೈನ್ ಚಟುವಟಿಕೆಗಳನ್ನು ಸೀಮಿತಗೊಳಿಸಬೇಕಾಗುತ್ತದೆ. ದೈನಂದಿನ ಡೇಟಾ ಮುಕ್ತಾಯಗೊಂಡ ಸಂದರ್ಭಗಳಲ್ಲಿ ದುಬಾರಿ ಹೆಚ್ಚುವರಿ ಡೇಟಾ ಪ್ಯಾಕ್‌ಗಳನ್ನು ಅವಲಂಬಿಸುತ್ತಾರೆ. ಈ ಬಗೆಯ ಮಹತ್ವದ ಡೇಟಾ ಬೇಡಿಕೆ ಪೂರೈಸಲು, ದೇಶದ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಯಾಗಿರುವ ವಿಐ (Vi), ಎರಡು ವಿಶೇಷ ಸ್ಯಾಚೆಟ್ ಡೇಟಾ ಪ್ಯಾಕ್‌ಗಳಾದ – 'ಸೂಪರ್ ಅವರ್’ ಮತ್ತು ’ಸೂಪರ್ ಡೇ' ಪರಿಚಯಿಸಿದೆ. ಈ ಪ್ಯಾಕ್‌ಗಳು ’ವಿಐ’ ಪ್ರಿಪೇಯ್ಡ್ ಬಳಕೆದಾರರಿಗೆ ಯಾವುದೇ ಅಡೆತಡೆಯಿಲ್ಲದೆ ಡೇಟಾವನ್ನು ಮುಕ್ತವಾಗಿ ಬಳಸುವುದಕ್ಕೆ ಅನುವು ಮಾಡಿಕೊಡಲಿವೆ.
ಕೇವಲ 17 ರೂಪಾಯಿಗೆ ರಾತ್ರಿಯಿಡಿ ಅನ್‌ಲಿಮಿಟೆಡ್ ಡೇಟಾ ಪ್ಯಾಕ್, ವಿಐ ಗ್ರಾಹಕರಿಗೆ ಬಂಪರ್ ಆಫರ್!
ಸೂಪರ್ ಅವರ್ ಪ್ಯಾಕ್(ಅನ್‌ಲಿಮಿಟೆಡ್)
1 ಗಂಟೆ: 24 ರೂಪಾಯಿ
ಸೂಪರ್ ಡೇ ಪ್ಯಾಕ್(6 ಜಿಬಿ)
24 ಗಂಟೆ: 49 ರೂಪಾಯಿ
ಎರಡೂ ಡೇಟಾ ಪ್ಯಾಕ್‌ಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ವಿಐ 'ಸೂಪರ್ ಅವರ್' 60 ನಿಮಿಷಗಳವರೆಗೆ ಅನಿಯಮಿತ ಡೇಟಾವನ್ನು 24 ರೂಪಾಯಿಗೆ ಹಾಗೂ ಮತ್ತು ‘ವಿಐ’ 'ಸೂಪರ್ ಡೇ' 24 ಗಂಟೆಗಳ ಕಾಲ 6ಜಿಬಿ ಡೇಟಾವನ್ನು ಕೇವಲ 49 ರೂಪಾಯಿಗೆ ನೀಡುತ್ತಿದೆ.
ಅನ್‌ಲಿಮಿಟೆಡ್ ಕಾಲ್ ಜೊತೆ ಸನ್ NXT, ಸೋನಿ ಲಿವ್ ಸಬ್‌ಸ್ಕ್ರಿಪ್ಶನ್ ಉಚಿತ, ವಿ ಹೊಸ ಆಫರ್!
ಗರಿಷ್ಠ ಪ್ರಮಾಣದ ಡೇಟಾ ಅವಶ್ಯಕತೆ ಇರುವ ವಿಶೇಷವಾಗಿ ಯುವಕರು ಮತ್ತು ಯುವ ವಯಸ್ಕರಿಗೆಂದೇ ಈ ಸ್ಯಾಚೆಟ್ ಪ್ಯಾಕ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ, ‘ವಿಐ’ ಪ್ರಿಪೇಯ್ಡ್ ಬಳಕೆದಾರರು ಡೇಟಾ ಖಾಲಿಯಾಗುವ ಬಗ್ಗೆ ಚಿಂತಿಸದೆ ಚಲನಚಿತ್ರಗಳ ವೀಕ್ಷಣೆ, ವಿಡಿಯೊಗಳ ಸ್ಟ್ರೀಮಿಂಗ್, ಸಂಗೀತ ಆಲಿಸುವಿಕೆ, ಆಟಗಳನ್ನು ಆಡುವುದು, ಸರ್ಫಿಂಗ್, ಚಾಟ್ ಮಾಡುವುದು, ಕೆಲಸ ಮಾಡುವುದು ಅಥವಾ ಅಧ್ಯಯನ ಮಾಡುವುದನ್ನು ಮುಂದುವರೆಸಬಹುದು. ‘ವಿಐ’ ಗ್ರಾಹಕರು ‘ವಿಐ’ ಗೇಮ್‌ಗಳನ್ನು ಆಡಲು, ‘ವಿಐ’ ಮೂವೀಸ್ ಮತ್ತು ಟಿವಿಯಲ್ಲಿ ಹೊಸ ಚಲನಚಿತ್ರಗಳು ಮತ್ತು ವಿಡಿಯೊ ವೀಕ್ಷಿಸುವುದನ್ನು ಆನಂದಿಸಲು ಅಥವಾ ‘ವಿಐ’ ಅಪ್ಲಿಕೇಷನ್ (ಆ್ಯಪ್) ನಲ್ಲಿ ‘ವಿಐ’ ಮ್ಯೂಸಿಕ್’ನಲ್ಲಿ ತಮ್ಮ ನೆಚ್ಚಿನ ಸಂಗೀತ ಕೇಳುವುದಕ್ಕೆ ಈ ಪ್ಯಾಕ್‌ಗಳನ್ನು ಬಳಸಬಹುದು.
ಭಾರತೀಯರು ತಮ್ಮ ಅಗತ್ಯಗಳನ್ನು ಪೂರೈಸುವ ಮತ್ತು ಅಂತ್ಯವಿಲ್ಲದ ಸಾಧ್ಯತೆಗಳನ್ನು ತೆರೆಯುವ ಅರ್ಥಪೂರ್ಣ ಪರಿಹಾರಗಳನ್ನು ವಿನ್ಯಾಸಗೊಳಿಸುವ ಮೂಲಕ ವರ್ತಮಾನ ಮತ್ತು ಭವಿಷ್ಯದಲ್ಲಿ ಅಭಿವೃದ್ಧಿ ಹೊಂದಲು ಸಹಾಯ ಮಾಡುವ ಗುರಿಯನ್ನು ‘ವಿಐ’ ಹೊಂದಿದೆ.